ನಮ್ಮ ದೇಹದ ಬಹಳಷ್ಟು ರೋಗಗಳ ಮೂಲ ನಮ್ಮ ಹೊಟ್ಟೆ ಅಂದರೆ ಪಚನ ವ್ಯವಸ್ಥೆಯಾಗಿದೆ. ಅದು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಬಗೆಬಗೆಯ ರೋಗಗಳು ಅಂದರೆ ಮಲಬದ್ಧತೆ, ಗ್ಯಾಸ್, ಬೊಜ್ಜು, ಮಧುಮೇಹ, ಕೊಲೆಸ್ಟ್ರಾಲ್ ಹೀಗೆ ಅನೇಕ ತೊಂದರೆಗಳು ಉದ್ಭವಿಸಬಹುದು. ಅಂದಹಾಗೆ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ನಮ್ಮ ದೇಹದಲ್ಲಿ ಪಚನ ಕ್ರಿಯೆಯನ್ನು ಚುರುಕುಗೊಳಿಸಿ, ರೋಗ ನಿರೋಧಕ ಸಾಮರ್ಥ್ಯವನ್ನು ಬಲಪಡಿಸಲು ಮತ್ತು ನಮ್ಮನ್ನು ಆರೋಗ್ಯದಿಂದಿಡಲು ಪ್ರಮುಖ ಪಾತ್ರ ವಹಿಸುತ್ತವೆ.
ಹೊಟ್ಟೆಯಲ್ಲಿ ಅನ್ ಹೆಲ್ದೀ ಹಾಗೂ ಹೆಲ್ದೀ ಮೈಕ್ರೋಬ್ಸ್ ಗಳ ಅಸಮತೋಲನದಿಂದ ನಮ್ಮ ಆರೋಗ್ಯ ಹದಗೆಡುತ್ತದೆ. ಹೊಟ್ಟೆಯಲ್ಲಿ ಗುಡ್ ಬ್ಯಾಕ್ಟೀರಿಯಾಗಳ ಅನುಪಾತ ಕಡಿಮೆಯಾದರೆ, ಆರೋಗ್ಯಕರ ಆಹಾರ ಸೇವನೆಯ ಬಳಿಕ ದೇಹಕ್ಕೆ ಪೋಷಕಾಂಶಗಳು ದೊರಕುವುದಿಲ್ಲ.
ಈ ಕುರಿತಂತೆ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಒಂದರ ಡಯೇಟಿಶಿಯನ್ ಹರ್ಷಿತಾ ಹೀಗೆ ಹೇಳುತ್ತಾರೆ, ನಮ್ಮ 70-80% ರೋಗ ನಿರೋಧಕ ಶಕ್ತಿಯು ಪಚನ ವ್ಯವಸ್ಥೆಯಲ್ಲಿ ಕೇಂದ್ರಿಕೃತವಾಗಿದೆ. ಈ ವ್ಯವಸ್ಥೆಯನ್ನು ಆರೋಗ್ಯದಿಂದಿಡಲು ನಮಗೆ ಮೈಕ್ರೊಬಯೋಮ್ ಗಳು ಬೇಕು. ಅದನ್ನು ಮೈಕ್ರೋ ಬಯೋನಿಸಂ ಎಂದು ಕರೆಯಲಾಗುತ್ತದೆ.
ಅದು 2 ರೀತಿಯದ್ದಾಗಿರುತ್ತದೆ. ಮೊದಲನೆಯದು ಗುಡ್ ಬ್ಯಾಕ್ಟೀರಿಯಾ ಅದನ್ನು ನಾವು ಪ್ರೊಬಯೋಟಿಕ್ ಹೆಸರಿನಿಂದ ಕರೆಯುತ್ತೇವೆ. ಪ್ರೊಬಯೋಟಿಕ್ ಲೈವ್ ಬ್ಯಾಕ್ಟೀರಿಯಾ ಆಗಿದ್ದು, ಅವು ನಮ್ಮ ಪಚನಾಂಗಗಳಲ್ಲಿರುತ್ತವೆ. ಅವನ್ನು ನಾವು ನೇರವಾಗಿ ನಮ್ಮ ಡಯೆಟ್ ನಲ್ಲಿ ತೆಗೆದುಕೊಳ್ಳಬಹುದಾಗಿದೆ. ಉದಾಹರಣೆಗೆ ನಾವು ಮೊಸರು ಸೇವಿಸುತ್ತೇವೋ ಅಥವಾ ಯೋಗರ್ಟ್ ತಿನ್ನುತ್ತೇವೋ ಅಥವಾ ಫರ್ಮೆಂಟೆಡ್ ಫುಡ್ ಸೇವಿಸುತ್ತೇವೋ ಅದರಲ್ಲಿ ಪ್ರೊಬಯೋಟಿಕ್ ಗಳಿರುತ್ತವೆ.
ನಮ್ಮ ಕರುಳನ್ನು ಆರೋಗ್ಯದಿಂದಿಟ್ಟುಕೊಳ್ಳಲು ಎರಡನೇ ಉಪಾಯವೆಂದರೆ, ಪ್ರೊಬಯೋಟಿಕ್ ಸೇವಿಸುವುದಾಗಿದೆ. ಅವು ನಾನ್ ಡೈಜೆಸ್ಟಿವ್ ಕಾರ್ಬೋಹೈಡ್ರೇಟ್ ಆಗಿರುತ್ತವೆ. ನಾವು ಯಾವಾಗ ಇವುಗಳ ಸೇವನೆ ಮಾಡುತ್ತೇವೆ, ಆಗ ಗುಡ್ ಎನ್ವಾಯರ್ನ್‌ಮೆಂಟ್ ಉಂಟಾಗುತ್ತದೆ. ಅದರಿಂದ ಗುಡ್ ಬ್ಯಾಕ್ಟೀರಿಯಾ ತಯಾರಾಗುತ್ತವೆ. ಉದಾಹರಣೆಗೆ ಬಾಳೆಹಣ್ಣು, ಈರುಳ್ಳಿ, ಜೇನುತುಪ್ಪ, ಕೆಲವು ಹಸಿರು ಸೊಪ್ಪುಗಳು, ಇವನ್ನು ನಾವು ಪ್ರೊಬಯೋಟಿಕ್ ಹೆಸರಿನಿಂದ ಕರೆಯುತ್ತೇವೆ.
ನಾವು ನಮ್ಮ ಆಹಾರದ ಮೂಲಕ ಇವನ್ನು ಸೇವಿಸಿದಾಗ, ಇವು ಪ್ರೊಬೂಟಿಕ್ ನಿರ್ಮಾಣಗೊಳ್ಳಲು ನೆರವಾಗುತ್ತವೆ.
ನಮ್ಮ ಕರುಳನ್ನು ಆರೋಗ್ಯದಿಂದಿಟ್ಟುಕೊಳ್ಳಲು ಇವನ್ನು ಸೇವಿಸಿ :
ಫರ್ಮೆಂಟೆಡ್ ಡೇರಿ : ಕರುಳನ್ನು ಆರೋಗ್ಯದಿಂದಿಟ್ಟುಕೊಳ್ಳಲು ಫರ್ಮೆಂಟೆಡ್ ಫುಡ್ಸ್, ಅದರಲ್ಲೂ ವಿಶೇಷವಾಗಿ ಹಾಲು ಉತ್ಪನ್ನಗಳು ಅಂದರೆ ಮೊಸರು, ಯೋಗರ್ಟ್ ಬಹಳ ಉಪಯುಕ್ತ. ನೀವು ಇವನ್ನು ದೈನಂದಿನ ಆಹಾರದಲ್ಲಿ ಸೇರ್ಪಡೆ ಮಾಡಿಕೊಂಡರೆ, ನಿಮ್ಮ ಪಚನ ವ್ಯವಸ್ಥೆ ಅತ್ಯುತ್ತಮವಾಗಿರುತ್ತದೆ ಹಾಗೂ ಗುಡ್ ಬ್ಯಾಕ್ಟೀರಿಯಾಗಳು ಬಹುಬೇಗ ಹೆಚ್ಚುತ್ತವೆ.
ಬ್ಲೂಬೆರಿ : ಸಂಶೋಧನೆಗಳಿಂದ ತಿಳಿದು ಬಂದ ಸಂಗತಿಯೆಂದರೆ, ಬ್ಲೂಬೆರಿಯಲ್ಲಿ ಆ್ಯಂಟಿ ಇನ್ ಫ್ಲೆಮೆಟರಿ ಏಜೆಂಟ್ ಇರುತ್ತದೆ. ಅದು ಕರುಳಿನಲ್ಲಿರುವ ಗುಡ್ ಬ್ಯಾಕ್ಟೀರಿಯಾಗಳಿಗೆ ಸಾಕಷ್ಟು ಪೋಷಣೆ ನೀಡುತ್ತದೆ. ಹೀಗಾಗಿ ಇವುಗಳ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಬೀನ್ಸ್ : ಬೀನ್ಸ್ ನಲ್ಲಿ ಕಾರ್ಬೊಹೈಡ್ರೇಟ್, ವಿಟಮಿನ್ ಹಾಗೂ ಪ್ರೋಟೀನ್ ಹೇರಳವಾಗಿರುತ್ತದೆ. ಅದರಲ್ಲಿ ನಾರಿನಂಶ ಕೂಡ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಅದು ಪಚನ ವ್ಯವಸ್ಥೆಯನ್ನು ಸಮರ್ಪಕವಾಗಿಸಲು ನೆರವಾಗುತ್ತದೆ.