ಗರ್ಭಾವಸ್ಥೆ ಮಹಿಳೆಯರಿಗೆ ಎಂತಹ ಒಂದು ಸಮಯವೆಂದರೆ, ಅವರು ಗರ್ಭಸ್ಥ ಶಿಶುವಿನ ಸುರಕ್ಷತೆಗಾಗಿ ತಮ್ಮ ಆಹಾರ ಹಾಗೂ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ. ಗರ್ಭಿಣಿಯರು ಸದಾ ಖುಷಿಯಿಂದಿರಲು ಹಾಗೂ ತಮ್ಮ ಬಗ್ಗೆ ಹೆಚ್ಚಿನ ಗಮನಹರಿಸಲು ಪ್ರಯತ್ನಿಸುತ್ತಾರೆ.
ಕೆಲವು ಮಹಿಳೆಯರಿಗೆ ಗರ್ಭಾವಸ್ಥೆ ಎನ್ನುವುದು ಬಹಳ ತೊಂದರೆದಾಯಕ ಎಂಬಂತೆ ಪರಿಣಮಿಸುತ್ತದೆ. ಅವರಿಗೆ ಮಾರ್ನಿಂಗ್ ಸಿಕ್‌ನೆಸ್, ಕಾಲುಗಳಲ್ಲಿ ಊತ, ವಾಂತಿ, ವಾಕರಿಕೆ ಮುಂತಾದ ತೊಂದರೆಗಳು ಕಾಣಿಸಿಕೊಳ್ಳಬಹುದು. ಆದರೆ ಸಾಮಾನ್ಯವಾಗಿ ಮಹಿಳೆಯರಲ್ಲಿ ಗರ್ಭಾವಸ್ಥೆ ಸಕಾರಾತ್ಮಕ ಬದಲಾವಣೆಗಳನ್ನೇ ತೆಗೆದುಕೊಂಡು ಬರುತ್ತದೆ.
ಗರ್ಭಾವಸ್ಥೆಯ ಸಕಾರಾತ್ಮಕ ಪ್ರಭಾವ
ಗರ್ಭಾವಸ್ಥೆಯ ಅರ್ಥ ಕಡಿಮೆ ಮಾಸಿಕ ಋತುಸ್ರಾವ, ಅದರಿಂದ ಈಸ್ಟ್ರೋಜೆನ್ ಹಾಗೂ ಪ್ರೊಜೆಸ್ಟ್ರಾನ್ ಹಾರ್ಮೋನಿನ ಸಂಪರ್ಕ ಸೀಮಿತವಾಗುತ್ತದೆ. ಈ ಹಾರ್ಮೋನುಗಳು ಸ್ತನ ಕ್ಯಾನ್ಸರ್‌ನ ಅಪಾಯ ಹೆಚ್ಚಿಸಲು ಕಾರಣವಾಗುತ್ತವೆ. ಏಕೆಂದರೆ ಇವು ಜೀವಕೋಶಗಳ ಬೆಳವಣಿಗೆಯನ್ನು ಪ್ರೇರೇಪಿಸುತ್ತವೆ ಹಾಗೂ ಮಹಿಳೆಯರ ಸ್ತನ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುತ್ತವೆ. ಗರ್ಭಾವಸ್ಥೆ ಹಾಗೂ ಸ್ತನ್ಯಪಾನದ ಸಂದರ್ಭದಲ್ಲಿ ಸ್ತನಗಳ ಜೀವಕೋಶಗಳಲ್ಲಿ ಯಾವ ರೀತಿಯ ಬದಲಾವಣೆಯಾಗುತ್ತೋ, ಅದು ಅವರನ್ನು ಕ್ಯಾನ್ಸರ್ ಜೀವಕೋಶಗಳನ್ನಾಗಿ ಪರಿವರ್ತನೆ ಮಾಡುವ ಪ್ರಕ್ರಿಯೆಗೆ ಹೆಚ್ಚು ಪ್ರತಿರೋಧಕ ಆಗಿಸುತ್ತದೆ.
ಗರ್ಭಾವಸ್ಥೆಯ ಸಂದರ್ಭದಲ್ಲಿ ಕಿಬ್ಬೊಟ್ಟೆಯ ಭಾಗದಲ್ಲಿ ರಕ್ತ ಸಂಚಾರ ವೇಗ ಪಡೆದುಕೊಳ್ಳುತ್ತದೆ. ಹೆರಿಗೆಯ ಬಳಿಕ ಮಹಿಳೆಯರಲ್ಲಿ ಒಂದು ರೀತಿಯ ವಿಶೇಷ ಶಕ್ತಿಯ ಅನುಭವ ಉಂಟಾಗುತ್ತದೆ.
ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮ
ಮಗು ಆದ ಬಳಿಕ ಆಟೋ ಇಮ್ಯೂನ್ ಡಿಸಾರ್ಡರ್ ಅಂದರೆ ಮಲ್ಟಿಪಲ್ ಸ್ಕಿಲೋರೋಸಿಸ್ ಉಂಟಾಗುವ ಅಪಾಯ ಕಡಿಮೆಯಾಗುತ್ತದೆ.
ಗರ್ಭಾವಸ್ಥೆ ಸಕಾರತ್ಮಕ ವರ್ತನೆಯಲ್ಲಿ ಬದಲಾವಣೆ ತರುತ್ತದೆ. ಹೀಗಾಗಿ ಮಹಿಳೆಯನ್ನು ಗಟ್ಟಿಗೊಳಿಸುತ್ತದೆ. ಈ ಕಾರಣದಿಂದ ಜೀವನದಲ್ಲಿ ಉಂಟಾಗುವ ಬದಲಾಣೆಗಳೊಂದಿಗೆ ಹೋರಾಡಲು ಸುಲಭವಾಗುತ್ತದೆ. ಜೊತೆಗೆ ನಕಾರಾತ್ಮಕ ಯೋಚನೆ ಮತ್ತು ಚಿಂತೆಯಿಂದ ರಕ್ಷಿಸುತ್ತದೆ.
ಹೆರಿಗೆಯ ಬಳಿಕ ಸಕಾರಾತ್ಮಕ ಬದಲಾವಣೆ
ಹೆಚ್ಚಿನ ಮಹಿಳೆಯರು ಕಂಡುಕೊಂಡಿದ್ದೇನೆಂದರೆ, ಮೊದಲ ಮಗುವಿನ ಜನನದ ಬಳಿಕ ಅವರಲ್ಲಿ ಮುಟ್ಟಿಗೆ ಸಂಬಂಧಪಟ್ಟ ತೊಂದರೆಗಳು ಸಾಕಷ್ಟು ಕಡಿಮೆಯಾಗುತ್ತವೆ.
ಹೆರಿಗೆಯ ಬಳಿಕ ಬಹಳಷ್ಟು ಮಹಿಳೆಯರಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಸಕಾರಾತ್ಮಕ ಬದಲಾವಣೆಗಳು ಬರುತ್ತವೆ. ಅವು ಮದ್ಯ, ಧೂಮಪಾನದಂತಹ ಸಾಕಷ್ಟು ದುಶ್ಚಟಗಳಿಂದ ದೂರ ಇಡುತ್ತವೆ.
ತನ್ನ ಆಸುಪಾಸು ಖುಷಿಯ ವಾತಾವರಣ ಕಂಡು ತಾಯಿಯ ಉತ್ಸಾಹ ಹಾಗೂ ಖುಷಿ ಹೆಚ್ಚುತ್ತದೆ. ತಾಯಿ ತನ್ನ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ಹಾಲುಣಿಸುವಾಗ ಆಕ್ಸಿಟೋಸಿನ್ ಎಂಬ ಹಾರ್ಮೋನು ಈ ಗಾಢ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ನೆರವಾಗುತ್ತದೆ. ಆ ಕಾರಣದಿಂದ ಆಕೆ ತನ್ನ ಹಲವು ದಿನಗಳ ಚಿಂತೆಯನ್ನು ಮರೆಯುತ್ತಾಳೆ.
ಮಗುವಿನ ಜನನದ ಬಳಿಕ ತ್ವಚೆ ಹೊಳಪು ಪಡೆದುಕೊಳ್ಳುತ್ತದೆ. ಜೊತೆಗೆ ಮೊಡವೆ ಬೊಕ್ಕೆಗಳ ಸಮಸ್ಯೆಯಿಂದಲೂ ಮುಕ್ತಿ ಕಂಡುಕೊಳ್ಳುತ್ತಾಳೆ.
- ಕಾಂಚನ ಕುಮಾರಿ