ಪ್ರತಿಯೊಬ್ಬ ಯುವತಿಯೂ ತನ್ನ ಸ್ಕಿನ್‌ ಹೊಳೆ ಹೊಳೆಯುತ್ತಾ ಎಲ್ಲರ ಗಮನ ಸೆಳೆಯುವಂತೆ ಇರಬೇಕೆಂದು ಬಯಸುತ್ತಾಳೆ. ಅವಳು ಗುಂಪಿನಲ್ಲಿ ನಾಲ್ವರ ಮಧ್ಯೆ ಆಕರ್ಷಣೆಯ ಕೇಂದ್ರಬಿಂದು ಆಗಬೇಕು ಎನ್ನುತ್ತಾಳೆ. ಆದರೆ ಇದು ಅಷ್ಟು ಸುಲಭದ ವಿಷಯವಲ್ಲ, ಏಕೆ?

ನಮ್ಮ ಬಿಝಿ ಲೈಫ್‌ಸ್ಟೈಲ್ ಮತ್ತು ಆಹಾರದ ಮಧ್ಯೆ ನಿಗಾ ಇಡದ ಕಾರಣ ನಮ್ಮ ಚರ್ಮ ಡ್ರೈ, ನಿರ್ಜೀವ ಆಗಿಬಿಡುತ್ತದೆ. ಬೇಸಿಗೆಯಲ್ಲಂತೂ ಈ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ಎಷ್ಟೋ ಸಲ ಆ್ಯಕ್ನೆಯಂಥ ಸಮಸ್ಯೆಗಳು ಹೆಚ್ಚುತ್ತವೆ.

ಹೀಗಾದಾಗ ನೀವು ಬಗೆಬಗೆಯ ಹಣ್ಣುಗಳನ್ನು ಸೇವಿಸಬೇಕು. ಏಕೆಂದರೆ ಇವು ವಿಟಮಿನ್ಸ್, ಮಿನರಲ್ಸ್ ಫೈಬರ್‌, ಪೊಟ್ಯಾಶಿಯಂ ಇತ್ಯಾದಿಗಳ ಗಣಿ ಆಗಿದೆ. ಈ ಬೇಸಿಗೆಯಲ್ಲಿ ಯಾವ ಹಣ್ಣಿನ ಸೇವನೆಯಿಂದ ನಿಮ್ಮ ಚರ್ಮ ಹೆಚ್ಚಿನ ಗ್ಲೋಯಿಂಗ್‌ ಹೊಂದುತ್ತದೆ ಎಂಬುದನ್ನು ವಿವರವಾಗಿ ತಿಳಿಯೋಣವೇ?

ಅವಕಾಡೋ

ನಿಮ್ಮ ಚರ್ಮ ಹೆಲ್ದಿಯಾಗಿ ಕಾಣಿಸುತ್ತಿದೆ ಎಂದರೆ, ಅದು ನಿಮ್ಮ ಪರ್ಸನಾಲಿಟಿಗೆ ಹೆಚ್ಚಿನ ಕಳೆ ತಂದುಕೊಡುವುದಲ್ಲದೆ, ನಿಮ್ಮ ಫಿಟ್‌ನೆಸ್‌ನ್ನು ಸೂಚಿಸುತ್ತದೆ. ಎಲ್ಲಿಯವರೆಗೂ ನೀವು ಒಳಗಿನಿಂದ ಫಿಟ್‌ ಅಲ್ಲವೋ, ಯಾವ ಬ್ಯೂಟಿ ಟ್ರಿಕ್‌ ಸಹ ಕೆಲಸ ಮಾಡದು. ಹೀಗಾಗಿ ಅವಕಾಡೋದಿಂದ ನಿಮ್ಮ ಚರ್ಮಕ್ಕೆ ಪೋಷಣೆ, ಹೊಳಪು ನೀಡಿ.

ಒಂದು ರಿಸರ್ಚ್‌ ಪ್ರಕಾರ, ನೀವು ಅವಕಾಡೋವನ್ನು ಟೊಮೇಟೊ ಪೇಸ್ಟ್, ತುರಿದ ಕ್ಯಾರೆಟ್‌ ಜೊತೆ ಸೇವಿಸಿದರೆ, ಪ್ರೋ  ವಿಟಮಿನ್‌ ಆಗಿ ಬದಲಾಗುತ್ತದೆ. ಇದು ಇಮ್ಯೂನ್‌ ಫಂಕ್ಷನ್‌ನ್ನು ಸುಧಾರಿಸಲು, ಕಂಗಳ ದೃಷ್ಟಿ ಚುರುಕಾಗಿಸಲು, ಸ್ಕಿನ್‌ ಹೆಲ್ದಿ ಆಗಲು ಸಂಪೂರ್ಣ ಸಹಕರಿಸುತ್ತದೆ. ಇದು ಫೈಬರ್‌, ವಿಟಮಿನ್‌, ಉತ್ತಮ ಪೋಷಕಾಂಶಗಳ ಸ್ರೋತವಾಗಿದೆ. ಆದ್ದರಿಂದ ಇದನ್ನು ದಿನಾ ಬೆಳಗ್ಗೆ ಬ್ರೇಕ್‌ಫಾಸ್ಟ್ ಜೊತೆ ಸೇವಿಸಿ.

ಮುಖಕ್ಕೆ ಅಪ್ಲೈ ಮಾಡುವುದು ಹೇಗೆ?

ಅವಕಾಡೋ ಹಣ್ಣನ್ನು ಚೆನ್ನಾಗಿ ಮ್ಯಾಶ್‌ ಮಾಡಿ ಮುಖಕ್ಕೆ ನೀಟಾಗಿ ಹಚ್ಚುವುದರಿಂದ ನ್ಯಾಚುರಲ್ ಗ್ಲೋ ಮೂಡುತ್ತದೆ.

ಅವಕಾಡೋ ಮ್ಯಾಶ್‌ ಮಾಡಿ. ಇದಕ್ಕೆ ಪಚ್ಚ ಕರ್ಪೂರ, ಗುಲಾಬಿಜಲ ಬೆರೆಸಿ ನೀಟಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಬೇಕು.

ಮಾಗಿದ ಅವಕಾಡೋ ಮ್ಯಾಶ್‌ ಮಾಡಿ ಕ್ರೀಮಿ ಪೇಸ್ಟ್ ಮಾಡಿಡಿ. ಆಮೇಲೆ ಇದಕ್ಕೆ 2 ಚಮಚ  ಹಸಿ ಹಾಲು, 1 ಚಮಚ ಜೇನುತುಪ್ಪ, ತುಸು ಚಂದನಪುಡಿ ಬೆರೆಸಿಕೊಂಡು ಮುಖ, ಕುತ್ತಿಗೆಯ ಭಾಗಕ್ಕೆ ಸವರಬೇಕು. 30 ನಿಮಿಷ ಹಾಗೇ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಹೀಗೆ ವಾರಕ್ಕೆ 4-5 ಸಲ ಮಾಡುವುದರಿಂದ ಗ್ಲೋ ತಾನಾಗಿ ಬರುತ್ತದೆ.

2 ಅವಕಾಡೋ, 1 ಕಿವೀ ಫ್ರೂಟ್‌ನ ತಿರುಳು ತೆಗೆದು ಚೆನ್ನಾಗಿ ಮ್ಯಾಶ್‌ ಮಾಡಿ. ಈ ಕ್ರೀಮಿ ಪೇಸ್ಟ್ ಗೆ ತುಸು ಜೇನು ಬೆರೆಸಿಡಿ. ಆಮೇಲೆ ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿರಿ. ಅರ್ಧ ಗಂಟೆ ಬಿಟ್ಟು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಸ್ಕಿನ್‌ ಗ್ಲೋ ಆಗುತ್ತದೆ.

ಪರಂಗಿ ಹಣ್ಣು

ಈ ಹಣ್ಣು ಹೊಟ್ಟೆಯ ಬೊಜ್ಜು ತಗ್ಗಿಸಲು ಖ್ಯಾತಿ ಪಡೆದಿದೆ. ಇದರಲ್ಲಿ ವಿಟಮಿನ್‌, ಮಿನರಲ್ಸ್ ಇತ್ಯಾದಿ ತುಂಬಿದ್ದು ಸ್ಕಿನ್‌ ಡ್ಯಾಮೇಜ್‌ ಆಗುವುದನ್ನು ತಪ್ಪಿಸುತ್ತದೆ. ಇದರ ಆ್ಯಂಟಿಬ್ಯಾಕ್ಟೀರಿಯಲ್, ಆ್ಯಂಟಿಫಂಗಲ್‌ನಂಥ ಗುಣಗಳು ಚರ್ಮಕ್ಕೆ ವರದಾನವಾಗಿದೆ.

ಒಂದು ರಿಸರ್ಚ್‌ನಿಂದ ತಿಳಿದ ವಿಷಯ, ಪರಂಗಿಹಣ್ಣಿನ ನೆರವಿನಿಂದ ಸ್ಕಿನ್‌ ಅಲ್ಸರ್‌ನಿಂದಲೂ ಮುಕ್ತಿ ಸಿಗಲಿದೆ. ಆದ್ದರಿಂದ ಇದನ್ನು ನಿಮ್ಮ ಡಯೆಟ್‌ನಲ್ಲಿ ಬೆರೆಸಲು ಮರೆಯದಿರಿ.

ಕಳೆದ ಹೊಳಪನ್ನು ಮರಳಿ ಪಡೆಯಿರಿ

ತುಸು ಪರಂಗಿಹಣ್ಣಿನ ಪೇಸ್ಟ್, ಕೆಲವು ಹನಿ ಕಿತ್ತಳೆ ರಸ ಬೆರೆಸಿ ಮುಖಕ್ಕೆ ಹಚ್ಚಿರಿ. 10 ನಿಮಿಷ  ಬಿಟ್ಟು ಮುಖ ತೊಳೆಯಿರಿ. ಚರ್ಮದಲ್ಲಾಗುವ ವ್ಯತ್ಯಾಸ ನೀವೇ ಗಮನಿಸುವಿರಿ.

ಡಾರ್ಕ್‌ ಟ್ಯಾನ್‌ ಏರಿಯಾ ರಿಮೂವ್‌ ಮಾಡಲು ಪರಂಗಿಹಣ್ಣಿನ ಮ್ಯಾಶ್‌ಗೆ ತುಸು ನಿಂಬೆ ರಸ, ಅರಿಶಿನ, ಚಂದನ ಬೆರೆಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಡಿ. ನಂತರ ಮುಖ ತೊಳೆಯಿರಿ. ಹೀಗೆ ವಾರಕ್ಕೆ 4 ಸಲ ಮಾಡಿ. ಟ್ಯಾನ್‌ ಏರಿಯಾ ತಂತಾನೇ ಸರಿಹೋಗುತ್ತದೆ.

ಡ್ರೈನೆಸ್‌ ದೂರ ಮಾಡಲು ಮ್ಯಾಶ್ಡ್ ಪರಂಗಿ ಹಣ್ಣಿಗೆ ಅರ್ಧ ಸಣ್ಣ ಚಮಚ ಬಾದಾಮಿ ಎಣ್ಣೆ ಬೆರೆಸಿ, ಮಿಶ್ರಣ ಮುಖಕ್ಕೆ ಸವರಬೇಕು. 15 ನಿಮಿಷ ಬಿಟ್ಟು ಮುಖ ತೊಳೆಯಿರಿ. ಹೀಗೆ ವಾರಕ್ಕೆ 2-3 ಸಲ ಮಾಡುವುದರಿಂದ, ಡ್ರೈನೆಸ್‌ ತಂತಾನೇ ದೂರವಾಗುತ್ತದೆ.

ಕಿತ್ತಳೆ ಹಣ್ಣು

ಆರೆಂಜ್‌ ಪೋಷಕಾಂಶಗಳ ಗಣಿಯಾಗಿದೆ. ಇದರಿಂದ ಚರ್ಮ ಕ್ಲಿಯರ್‌  ಹೆಲ್ದಿ ಆಗಿರುತ್ತದೆ. ಇದರಲ್ಲಿ ಧಾರಾಳ ವಿಟಮಿನ್‌, ನೈಸೀನ್‌, ಮೆಗ್ನಿಶಿಯಂ, ಕಾಪರ್‌ ಇತ್ಯಾದಿಗಳಿಂದಾಗಿ ಇದು ಖ್ಯಾತಿ ಹೊಂದಿದೆ. ಇದರಲ್ಲಿ ವಿಟಮಿನ್‌ ಸಿಯ ಲಭ್ಯತೆ, ಸೂರ್ಯನ ತೀಕ್ಷ್ಣ ಕಿರಣಗಳು ಹಾಗೂ ಮಾಲಿನ್ಯದಿಂದ ಸ್ಕಿನ್‌ನ್ನು ಕಾಪಾಡುವಲ್ಲಿ ಎತ್ತಿದ ಕೈ. ಇದು ಸುಕ್ಕುಗಳನ್ನು ನಿವಾರಿಸಿ,  ಓವರ್‌ಆಲ್ ಸ್ಕಿನ್‌ ಟೆಕ್ಸ್ ಚರ್‌ನ್ನು ಇಂಪ್ರೂವ್ ಮಾಡುತ್ತದೆ. ಆದ್ದರಿಂದ ಇದನ್ನು ನೇರವಾಗಿ ಅಥವಾ ಜೂಸ್‌ ರೂಪದಲ್ಲಿ ಆಗಾಗ ಸೇವಿಸುತ್ತಿರಿ.

ಹೀಗೆ ಬಳಸಿಕೊಳ್ಳಿ

3 ಚಮಚ ಕಿತ್ತಳೆ ರಸಕ್ಕೆ 1 ಚಮಚ ನಿಂಬೆರಸ, 1 ಚಮಚ ಹಾಲು, 1/2 ಸಣ್ಣ ಚಮಚ ಅರಿಶಿನ ಸೇರಿಸಿ ಬೆರೆಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಮುಖದಲ್ಲಿನ ಡ್ರೈನೆಸ್‌ ದೂರ ಆಗುವುದರ ಜೊತೆ ಸ್ಕಿನ್‌ ಆಕರ್ಷಕವಾಗುತ್ತದೆ.

3 ಚಮಚ ಕಿತ್ತಳೆ ರಸಕ್ಕೆ 1 ಚಮಚ ನಿಂಬೆರಸ, 2 ಚಮಚ ಕಡಲೆಹಿಟ್ಟು, 2 ಚಿಟಕಿ ಅರಿಶಿನ ಬೆರೆಸಿಕೊಂಡು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯುವುದರಿಂದ ಹೆಚ್ಚಿನ ಲಾಭವಿದೆ.

ಪಿಗ್ಮೆಂಟೇಶನ್‌ ಇರುವ ಕಡೆ, ವಾರವಿಡೀ ಪ್ರತಿದಿನ ಕಿತ್ತಳೆ ರಸಕ್ಕೆ ಚಂದನ ಬೆರೆಸಿ ಹಚ್ಚುವುದರಿಂದ ಹೆಚ್ಚಿನ ಸುಧಾರಣೆ ಕಾಣಬಹುದು.

ಕಲ್ಲಂಗಡಿ ಹಣ್ಣು

ಈ ಹಣ್ಣಿನಲ್ಲಿ ಕ್ಯಾಲ್ಶಿಯಂ, ಮೆಗ್ನಿಶಿಯಂ, ಫೈಬರ್‌, ಪ್ರೋಟೀನ್‌, ಪೊಟ್ಯಾಶಿಯಂ ಇತ್ಯಾದಿಗಳು ತುಂಬಿದ್ದು ಇದು ಬಲು ಹೆಲ್ದಿ ಮತ್ತು ಚರ್ಮಕ್ಕೆ ಹೆಚ್ಚು ಪೂರಕ ಎನಿಸಿದೆ. ಆ್ಯಕ್ನೆ, ಮೊಡವೆ ಸಮಸ್ಯೆಗಳಿಂದಲೂ ಇದು ಮುಕ್ತಿ ಕೊಡಿಸುತ್ತದೆ. ಇದನ್ನು ನೈಸರ್ಗಿಕ ಟೋನರ್‌ ಎಂದರೆ ಉತ್ರ್ಪೇಕ್ಷೆಯಲ್ಲ.

ಕಲ್ಲಂಗಡಿ ಹಣ್ಣಿನಿಂದ ಗ್ಲೋಯಿಂಗ್‌ ಸ್ಕಿನ್‌

ಒಂದಿಷ್ಟು ಹಣ್ಣಿನ ಹೋಳುಗಳನ್ನು (ಬೀಜರಹಿತ ಮಾಡಿ) ಮ್ಯಾಶ್‌ ಮಾಡಿ. ಇದಕ್ಕೆ ಮೊಸರು ಬೆರೆಸಿ, ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿರಿ. 10-15 ನಿಮಿಷ ಬಿಟ್ಟು ಒಣಗಿದ ಮೇಲೆ, ಬೆಚ್ಚಗಿನ ನೀರು ಬಳಸಿ ಮುಖ ತೊಳೆಯಿರಿ. ಹೀಗೆ ವಾರಕ್ಕೆ 4 ಸಲ ಮಾಡಿ, ಮುಖಕ್ಕೆ ಒಳ್ಳೆ ಗ್ಲೋ ಬರುತ್ತದೆ.

2-3 ಚಮಚ ಹಣ್ಣಿನ ರಸಕ್ಕೆ, 1 ಚಮಚ ಮ್ಯಾಶ್‌ಗೊಳಿಸಲಾದ ಅವಕಾಡೋ ಬೆರೆಸಿ ಮುಖಕ್ಕೆ ಹಚ್ಚಿರಿ. 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಹೀಗೆ ವಾರಕ್ಕೆ 3 ಸಲ ಮಾಡುವುದರಿಂದ ನಿಮ್ಮ ಚರ್ಮಕ್ಕೆ ಹೊಸ ಶೈನ್‌ ಬರುತ್ತದೆ.

2 ಚಮಚ ಈ ಹಣ್ಣಿನ ರಸಕ್ಕೆ 1 ಚಮಚ ಮಾಗಿದ ಬಾಳೆಹಣ್ಣನ್ನು ಕಿವುಚಿ ಹಾಕಿ. ಇದಕ್ಕೆ ತುಸು ಚಂದನದ ಪುಡಿ ಬೆರೆಸಿ. ಆ ಪೇಸ್ಟ್ ನ್ನು ಮುಖಕ್ಕೆ ಹಚ್ಚಿ, ಅರ್ಧ ಗಂಟೆ ಬಿಟ್ಟು ಬಿಸಿ ನೀರಿನಿಂದ ತೊಳೆಯಿರಿ. ಹೀಗೆ ವಾರಕ್ಕೆ 2 ಸಲ ಮಾಡುವುದರಿಂದ ಮುಖದಲ್ಲಿ ಕಾಂತಿ ತೇಲುತ್ತದೆ.

ದಾಳಿಂಬೆ

ದಾಳಿಂಬೆಯ ಸೇವನೆಯಿಂದ ಡೆಡ್‌ ಸೆಲ್ಸ್ ರಿಮೂವ್‌ ಆಗುತ್ತವೆ. ಇದರಿಂದ ಚರ್ಮಕ್ಕೆ ನ್ಯಾಚುರಲ್ ಗ್ಲೋ ಬರುತ್ತದೆ. ಇದರಲ್ಲಿರುವ ಆ್ಯಂಟಿಬಯೋಟಿಕ್ಸ್ ಆ್ಯಂಟಿ ಆಕ್ಸಿಡೆಂಟ್ಸ್, ಕೇವಲ ಫ್ರೀ ರಾಡಿಕಲ್ಸ್ ನ್ನು ನಾಶ ಮಾಡುವುದು ಮಾತ್ರವಲ್ಲದೆ, ಜೊತೆಗೆ ಆ್ಯಂಟಿ ಏಜಿಂಗ್‌ ಗುಣಗಳಿಂದಾಗಿ ಸುಕ್ಕು, ಫೈನ್ ಲೈನ್ಸ್ ಇಲ್ಲದಂತೆ ಚರ್ಮವನ್ನು ಯಂಗ್‌ ಆಗಿಡುತ್ತದೆ. ಇದರಲ್ಲಿ ವಿಟಮಿನ್ಸ್, ಮಿನರಲ್ಸ್ ಅಡಗಿವೆ. ಹೀಗಾಗಿ ಹೊಸ, ಹೊಸ ಜೀವಕೋಶಗಳನ್ನು ಹುಟ್ಟುಹಾಕಲು ನೆರವಾಗುತ್ತದೆ. ಆದ್ದರಿಂದ ಮಾಗಿದ ದಾಳಿಂಬೆ ಸೇವಿಸಲು ಮರೆಯದಿರಿ.

ಸದಾ ಫ್ರೆಶ್‌ ಫ್ರೆಶ್‌ ಆಗಿರಲು

ತುಸು ದಾಳಿಂಬೆ ರಸಕ್ಕೆ ಕೆಲವು ಹನಿ ನಿಂಬೆ ರಸ, ಚಿಟಕಿ ಅರಿಶಿನ, ತುಸು ಚಂದನ ಬೆರೆಸಿ. ಹತ್ತಿಯ ಉಂಡೆಯನ್ನು ಇದರಲ್ಲಿ ಅದ್ದಿ ಮುಖ ಪೂರ್ತಿ ಅಪ್ಲೈ ಮಾಡಿ. 30 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ಟ್ಯಾನಿಂಗ್‌ ದೂರವಾಗಿ ಮುಖ ಫ್ರೆಶ್‌ ಫ್ರೆಶ್‌ ಆಗಿ ಹೊಳೆಯುತ್ತದೆ.

ತುಸು ದಾಳಿಂಬೆ ರಸಕ್ಕೆ 1 ಚಮಚ ಗ್ರೀನ್‌ ಟೀ, 2 ಚಮಚ ಮೊಸರು, ಅರ್ಧ ಚಮಚ ಜೇನು ಬೆರೆಸಿ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಬಿಸಿ ನೀರಿನಿಂದ ತೊಳೆಯಿರಿ. ಈ ಮಿಶ್ರಣ ಸ್ಕಿನ್‌ ಟೋನ್‌ ಸುಧಾರಿಸುತ್ತದೆ ಹಾಗೂ ಮುಖದಲ್ಲಿ ಹೊಸ ಕಾಂತಿ ಬರಿಸುತ್ತದೆ.

ಸೌತೆಕಾಯಿ

ವಾಟರ್‌ ಮೆಲನ್‌ ತರಹ ಕುಕುಂಬರ್‌ ಸಹ ನೀರಿನಂಶ ಹೆಚ್ಚಾಗಿರುವ ಆಹಾರ ಮೂಲ. ಹೀಗಾಗಿ ಅದು ದೇಹಕ್ಕೆ ತಂಪು ಒದಗಿಸುವ ಕೆಲಸ ಮಾಡುತ್ತದೆ. ಇದರಲ್ಲಿ  ವಿಟಮಿನ್ಸ್, ಡಯೆಟರಿ ಫೈಬರ್‌, ಇತ್ಯಾದಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಒಂದು ರಿಸರ್ಚ್‌ ಪ್ರಕಾರ, ಕುಕುಂಬರ್‌ ಸ್ಕಿನ್‌ ಟೋನ್‌ನ್ನು ಸುಧಾರಿಸುವ ಜೊತೆ ಸುಕ್ಕುಗಳನ್ನು ನಿವಾರಿಸುವಲ್ಲಿಯೂ ಸಹಾಯಕ.  ಹೀಗಾಗಿ ನೀವು ಇದನ್ನು ಸಲಾಡ್‌, ಕೋಸಂಬರಿ, ರಾಯ್ತಾ ರೂಪದಲ್ಲಿ ಆಗಾಗ ಸೇವಿಸುತ್ತಿರಿ.

ಮುಖಕ್ಕೆ ಹೀಗೆ ಬಳಸಿರಿ

ಆ್ಯಕ್ನೆ ಕಾರಣ ಮುಖದಲ್ಲಿ ಹೆಚ್ಚಿರುವ ಉರಿ ನಿವಾರಿಸಲು, ಅರ್ಧ ಕಪ್‌ ತುರಿದ ಸೌತೆಗೆ, 1 ಚಮಚ ಕಡಲೆಹಿಟ್ಟು, 1 ಚಮಚ ಗುಲಾಬಿಜಲ ಬೆರೆಸಿ. ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಒಣಗಲು ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಇದರಿಂದ ಆ್ಯಕ್ನೆ ಸಮಸ್ಯೆಯಿಂದ ಮುಕ್ತಿ ಸಿಗುವುದಲ್ಲದೆ ಸ್ಕಿನ್‌ ಗ್ಲೋ ಆಗತೊಡಗುತ್ತದೆ.

4-5 ಚಮಚ ಸೌತೆರಸಕ್ಕೆ ಅರ್ಧ ಪ್ರಮಾಣ ನಿಂಬೆರಸ, ಉಳಿದರ್ಧ ಆ್ಯಲೋವೆರಾ ಜೂಸ್‌, ತುಸು ಚಂದನದ ಪುಡಿ ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿರಿ. ಅರ್ಧ ಗಂಟೆ ಒಣಗಿದ ನಂತರ ಬಿಸಿ ನೀರಿನಿಂದ ತೊಳೆಯಿರಿ. ಇದನ್ನು ವಾರಕ್ಕೆ 2-3 ಸಲ ಮಾಡಿದರೆ ಟ್ಯಾನಿಂಗ್‌ ದೂರವಾಗಿ, ಮುಖಕ್ಕೆ ಹೆಚ್ಚಿನ ಶೈನಿಂಗ್‌ ಬರುತ್ತದೆ.

ಏಪ್ರಿಕಾಟ್

ಉತ್ತಮ ಶೈನಿಂಗ್‌ ಸ್ಕಿನ್‌ಗಾಗಿ ವಿಟಮಿನ್ಸ್ ಹಾಗೂ ಫೈಟ್ರೋಮ್ಯಾಟ್ರಿಯೆಂಟ್ಸ್ ಅತ್ಯಗತ್ಯ. ಈ ಪರ್ಫೆಕ್ಟ್ ಕಾಂಬಿನೇಶನ್‌ ಹೊಂದಿದ, ಆ್ಯಂಟಿ ಆಕ್ಸಿಡೆಂಟ್ಸ್ ನಿಂದ ತುಂಬಿರುವ ಏಪ್ರಿಕಾಟ್‌ ಏಜಿಂಗ್‌ ಪ್ರೋಸೆಸ್‌ ತಡೆಯುವಲ್ಲಿ ನಂ.1! ಜೊತೆಗೆ ಇದರಲ್ಲಿನ ವಿಟಮಿನ್ಸ್ ನಿಂದಾಗಿ ಚರ್ಮ ಎಷ್ಟೋ ಸಾಫ್ಟ್ ಆಗುತ್ತದೆ. ಹೀಗಾಗಿ ನೀವು ಬ್ಯೂಟಿಫುಲ್ ಆಗಬಯಸಿದರೆ, ಅಗತ್ಯವಾಗಿ ಆಗಾಗ ಏಪ್ರಿಕಾಟ್‌ ಸೇವಿಸುತ್ತಿರಿ.

ಮುಖಕ್ಕೆ ಹೀಗೆ ಬಳಸಿರಿ

ಅರ್ಧ ಕಪ್‌ ಏಪ್ರಿಕಾಟ್‌ ಪೌಡರ್‌, 1 ಚಮಚ ಹಾಲಿನ ಪುಡಿ, 1 ಚಮಚ ಜೇನುತುಪ್ಪ, ತುಸು ಅರಿಶಿನ. ಚಂದನಕ್ಕೆ ಕೆಲವು ಹನಿ ಬೆಚ್ಚಗಿನ ನೀರು ಬೆರೆಸಿ ಮಿಶ್ರಣ ತಯಾರಿಸಿ. ಇದನ್ನು ಚೆನ್ನಾಗಿ ಬ್ಲೆಂಡ್‌ ಮಾಡಿ ಮುಖಕ್ಕೆ ಹಚ್ಚಿರಿ. ಅರ್ಧ ಗಂಟೆ ನಂತರ ಬಿಸಿ ನೀರಿನಿಂದ ಮುಖ ತೊಳೆಯಿರಿ. ಈ ರೀತಿ ವಾರಕ್ಕೆ 3 ಸಲ ಮಾಡುವುದರಿಂದ ಮುಖ ತೆಳ್ಳಗೆಬೆಳ್ಳಗೆ ಲಕಲಕ ಹೊಳೆಯುತ್ತದೆ.

ಕಿವೀ ಫ್ರೂಟ್

ಇದರಲ್ಲಿ ವಿಟಮಿನ್ಸ್ ಹಾಗೂ ಅಮೀನೋ ಆ್ಯಸಿಡ್ಸ್ ಧಾರಾಳ ಬೆರೆತಿವೆ. ಹೀಗಾಗಿ ಇದು ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುತ್ತದೆ. ಜೊತೆಗೆ ವಿಟಮಿನ್‌ ಕಾರಣ ಹೊಸ ಹೊಸ ಜೀವಕೋಶಗಳ ನಿರ್ಮಾಣದಲ್ಲಿ ತೊಡಗಿ, ಮುಖ ಸದಾ ಯಂಗ್‌ ಆಗಿರುವಂತೆ ರಕ್ಷಿಸುತ್ತದೆ. ಇದರಲ್ಲಿ ಆ್ಯಂಟಿ ಇನ್‌ಫ್ಲಮೇಟರಿ ಗುಣಗಳು ತುಂಬಿದ್ದು, ಮುಖದ ಆ್ಯಕ್ನೆ ನಿವಾರಣೆಗೂ ಸಹಾಯಕ.

ಮುಖಕ್ಕೆ ಹೀಗೆ ಬಳಸಿರಿ

ಇದರ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ, ಅರ್ಧ ಗಂಟೆ ನಂತರ ತೊಳೆಯಿರಿ. ಮುಖ ಸಹಜ ಕಾಂತಿಯಿಂದ ಹೊಳೆಯತೊಡಗುತ್ತದೆ.

ಕಿವೀ ಪೇಸ್ಟ್ ಗೆ ಹಾಲಲ್ಲಿ ನೆನೆಸಿ ರುಬ್ಬಿದ ಬಾದಾಮಿ, ತುಸು ಅರಿಶಿನ ಬೆರೆಸಿ ಮುಖಕ್ಕೆ ಹಚ್ಚಿ, ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಇದರಲ್ಲಿನ  ವಿಟಮಿನ್‌ ್ಯ, ಕಾರಣ ಚರ್ಮ ಹೆಚ್ಚು ಯಂಗ್‌ ಫ್ರೆಶ್‌ ಆಗಿ ಹೊಳೆಯುತ್ತದೆ.

ಕಿವೀ ಪೇಸ್ಟ್ ಗೆ ತುಸು ಮೊಸರು, ಚಂದನ ಬೆರೆಸಿ ಮುಖಕ್ಕೆ ಹಚ್ಚಿ, ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಇದರಿಂದ ಚರ್ಮಕ್ಕೆ ಎಕ್ಸ್ ಟ್ರಾ ಗ್ಲೋ ಸಿಗುತ್ತದೆ.

ಹಣ್ಣುಗಳಿಂದ ಧಾರಾಳ ಆರೋಗ್ಯ ಲಾಭ ಬಯಸಿದರೆ, ಜೂಸ್‌ಗಿಂತ ಹೆಚ್ಚಾಗಿ ಹಣ್ಣನ್ನು ಇಡಿಯಾಗಿ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ. ನಿಮ್ಮ ಆರೋಗ್ಯ ಸೌಂದರ್ಯ ನಳನಳಿಸುವಂತೆ ಮಾಡುವಲ್ಲಿ ಹಣ್ಣುಗಳ ಪಾತ್ರ ಹಿರಿದು. ಹೀಗಾಗಿ ಪ್ರತಿದಿನ ಆಯಾ ಋತುವಿನಲ್ಲಿ ಲಭ್ಯವಿರುವ ತಾಜಾ ಹಣ್ಣುಗಳನ್ನು ತಪ್ಪದೆ ಸೇವಿಸಿ, ಸೌಂದರ್ಯ ಸಂವರ್ಧನೆಗೂ ಬಳಸಿಕೊಳ್ಳಿ. ಆಗ ಬ್ಯೂಟಿ ಪಾರ್ಲರ್‌ನ ಖರ್ಚೂ ಉಳಿಯುತ್ತದೆ!

– ಪರಿಮಳಾ ಭಟ್‌

Tags:
COMMENT