ಸೌಂದರ್ಯ ತಜ್ಞೆಯರು ಈ ಕುರಿತಾಗಿ ಅನೇಕ ಸಲಹೆಗಳನ್ನು ನೀಡುತ್ತಾರೆ. ಬೇಸಿಗೆ ಅಥವಾ ಮಳೆಗಾಲವಿರಲಿ, ಹೊರಗೆ ಹೋದಾಗ ಬಿಸಿಲಿನ ತಾಪ ಕಾಡದೆ ಇರದು. ಹಾಗಾಗಿ ಸೂರ್ಯನ ಯುವಿ ಕಿರಣಗಳ ಬಾಧೆಯಿಂದ ತಪ್ಪಿಸಿಕೊಳ್ಳಲು ಪ್ರತಿದಿನ ಹೊರಗೆ ಹೊರಡುವಾಗ ಹಾಗೂ ಮನೆಯಲ್ಲಿ ಇರುವಾಗಲೂ ಸಹ 40+ನ SPF ಯುಕ್ತ ಸನ್‌ಸ್ಕ್ರೀನ್ ಲೋಶನ್ ಹಚ್ಚಿರಿ. ಆಗ ಸೂರ್ಯನ ಯುವಿ ಕಿರಣಗಳು ನಿಮ್ಮ ಚರ್ಮಕ್ಕೆ ಯಾವ ಹಾನಿಯನ್ನೂ ಮಾಡುವುದಿಲ್ಲ. ಹೊರಗಿನ ಓಡಾಟದ ಮಧ್ಯೆ ಅವಕಾಶ ಸಿಕ್ಕಿದಾಗ ನೀವು 2 ಅಥವಾ 3 ಸಲ ಫೇಸ್‌ವಾಶ್ ಬಳಸಿ ಮುಖ ತೊಳೆಯಿರಿ. ನಂತರ ಸನ್‌ಸ್ಕ್ಕೀನ್ ಹಚ್ಚಿರಿ.
ಮೃದು ಕೋಮಲ ತುಟಿಗಳನ್ನು ಬಿಸಿಲಿನಿಂದ ರಕ್ಷಿಸಲು ಪ್ರತಿದಿನ ಅದರ ಮೇಲೆ ಲಿಪ್ ಬಾಮ್ ಹಚ್ಚಿರಿ. ಇಂಥ ತೀವ್ರ ಬಿಸಿಲಲ್ಲಿ ಚರ್ಮದ ಆರ್ದ್ರತೆ ಕಡಿಮೆ ಆಗುವುದರಿಂದ ಅದು ಶುಷ್ಕ ಮತ್ತು ನಿರ್ಜೀವ ಆಗುತ್ತದೆ. ಹೀಗಾದಾಗ ಚರ್ಮವನ್ನು ಹೈಡ್ರೇಟ್‌ಗೊಳಿಸಲು ಧಾರಾಳವಾಗಿ ನೀರು ಕುಡಿಯಿರಿ. ಇದರಿಂದ ಚರ್ಮ ಆರ್ದ್ರತೆ ಗಳಿಸಿ, ಕೋಮಲವಾಗುತ್ತದೆ.
ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೂ ಬಿಸಿಲು ತೀವ್ರ ತೆರನಾಗಿರುತ್ತದೆ. ಆದ್ದರಿಂದ ಸಾಧ್ಯವಿದ್ದಷ್ಟೂ ಈ ಹೊತ್ತಿನಲ್ಲಿ ಹೊರಗೆ ಓಡಾಡಬೇಡಿ. ಬೇಸಿಗೆಯಲ್ಲಿ ಯಂಗ್ ಫ್ರೆಶ್ ಸ್ಕಿನ್‌ಗಾಗಿ ಡಯೆಟ್ ಲೈಟ್ ಆಗಿರಲಿ.
- ನಿಧಿ