ಏಂಜಲೀನಾ ಜಾಲಿ ಮತ್ತು ಕಿಮ್ ಕರ್ದಾಸಿನ್‌ ಪಡೆದಿರುವ ಅಂದವಾದ ತುಂಬು ತುಟಿಯ ನ್ಯಾಚುರಲ್ ಗಿಫ್ಟ್ ಪ್ರತಿಯೊಬ್ಬ ಯುವತಿಯ ಕನಸು. ನಿಮಗೂ ಇಂತಹ ಚೆಂದದ ತುಟಿಗಳನ್ನು ಹೊಂದುವ ಆಸೆ ಇದೆಯೇ? ಅದಕ್ಕಾಗಿ ಲಿಪ್‌ ಫಿಲರ್ಸ್ ಬಳಸಲು ನಿಮಗೆ ಇಷ್ಟವಿಲ್ಲದಿದ್ದರೆ ಕೆಲವು ಮೇಕಪ್‌ ಟ್ರಿಕ್ಸ್ ಮೂಲಕ ತುಟಿಗಳು ಪೌಟಿ ಆಗಿ ಆಗಿ ಕಾಣುವಂತೆ ಮಾಡಬಹುದು.

ಪೌಟ್‌ ಮಾಡಲು ಟಿಪ್ಸ್

ಇದಕ್ಕಾಗಿ ತುಟಿಗಳನ್ನು ಕನ್ಸೀಲ್ ಮಾಡಿ. ಕೆಳ ತುಟಿಯ ಕೆಳಭಾಗದಲ್ಲಿ ಕನ್ಸೀಲರ್‌ ಹಚ್ಚಿ. ಇದರಿಂದ ನಿಮ್ಮ ತುಟಿಯು ತುಂಬಿದಂತೆ ಕಾಣುತ್ತದೆ.

ಮೇಕಪ್‌ನಿಂದ ನಿಮ್ಮ ತುಟಿಗಳನ್ನು ಪೌಟಿ ಆಗಿ ಕಾಣಿಸಲು ಬಯಸುವಿರಾದರೆ, ಲಿಪ್‌ಲೈನರ್‌ ಬಳಸಬೇಕಾಗುತ್ತದೆ. ಇದಕ್ಕಾಗಿ ನಿಮಗಿಷ್ಟವಾದ ಲಿಪ್‌ ಲೈನರ್‌ ಶೇಡ್‌ನ ಲೈನರ್‌ನಿಂದ ತುಟಿಗಳ ಹೊರಭಾಗದಲ್ಲಿ ಲೈನ್‌ ಎಳೆಯಿರಿ. ಲೈನಿಂಗ್‌ ನಂತರ ತುಟಿಗಳನ್ನು ಲಿಪ್‌ಸ್ಟಿಕ್‌ನಿಂದ ಫಿಲ್‌ ಮಾಡಿ.  ಹೀಗೆ ಮಾಡುವಾಗ ತುಟಿಗಳ ಮೇಲೆ ಒಂದೇ ಬಣ್ಣದ ಪ್ರಾಡಕ್ಟ್ ಬಳಸಬೇಕೆಂಬುದನ್ನು ನೆನಪಿಡಿ.

ಗಾಢ ಬಣ್ಣ ಮತ್ತು ಫ್ರಾಸ್ಟಿ ಫಿನಿಶ್‌ನ ಲಿಪ್‌ಸ್ಟಿಕ್‌ನಿಂದ ನಿಮ್ಮ ತುಟಿಗಳು ತೆಳುವಾಗಿ ಗೋಚರಿಸುತ್ತವೆ ಮತ್ತು ಪೌಟಿ ಲುಕ್‌ ಇರುವುದಿಲ್ಲ.

ಆದ್ದರಿಂದ ಚಂದದ ಲಿಪ್ಸ್ ಗಾಗಿ ಸ್ಯಾಟಿನ್‌ ಫಿನಿಶ್‌ನ ಲಿಪ್‌ಸ್ಟಿಕ್‌ ಹಚ್ಚಿ. ತುಟಿಗಳ ಮೇಲಿನ ಹೊಳಪು ಸಹ ತುಟಿಗಳಿಗೆ ಪೌಟಿ ಲುಕ್‌ ಒದಗಿಸುತ್ತದೆ. ಇದಕ್ಕಾಗಿ ಕೆಳತುಟಿಯ ಮಧ್ಯಭಾಗಕ್ಕೆ ಕೊಂಚ ಗ್ಲಾಸ್‌ ಹಚ್ಚಿ. ಆಗ ಹೈಲೈಟಿಂಗ್‌ ಎಫೆಕ್ಟ್ ದೊರೆಯುತ್ತದೆ.

ಕೊಂಚ ಹೈಲೈಟರ್‌ ಹಚ್ಚಿ ಫಿನಿಶಿಂಗ್‌ ಟಚ್‌ ನೀಡಿ. ಇದಕ್ಕಾಗಿ ಒಳ್ಳೆಯ ರಿಫ್ಲೆಕ್ಟಿಂಗ್‌ ಹೈಲೈಟರ್‌ ಬಳಸಿ. ಇದರಿಂದ ತುಟಿಗಳಿಗೆ ಡೆಪ್ತ್ ದೊರೆತು ಪೌಟಿ ಲುಕ್‌ ಇರುತ್ತದೆ. ನಿಮಗೆ ಲಿಪ್‌ ಮೇಕಪ್‌ ಮಾಡಲು ಇಷ್ಟವಿಲ್ಲದಿದ್ದರೆ, ಈ ಕೆಳಗಿನ ನೈಸರ್ಗಿಕ ವಿಧಾನಗಳಿಂದಲೂ ಪೌಟಿ ಲುಕ್‌ ಪಡೆಯಬಹುದು.

– ಅರ್ಧ ಚಮಚ ಕೊಬ್ಬರಿ ಎಣ್ಣೆಗೆ 2 ಹನಿ ಪೆಪ್ಪರ್‌ಮೆಂಟ್‌ ಆಯಿಲ್ ಸೇರಿಸಿ ತುಟಿಯ ಮೇಲೆ ಚೆನ್ನಾಗಿ ರಬ್‌ ಮಾಡಿ. ಈ ಮಿಶ್ರಣದಿಂದ ಇರಿಟೇಶನ್‌ ಆಗುವುದುಂಟು. ಮೊದಲು ಸ್ವಲ್ಪ ಹಚ್ಚಿ ನೋಡಿ. ಇರಿಟೇಶನ್‌ ಹೆಚ್ಚಾಗಿದ್ದರೆ ಬಿಟ್ಟುಬಿಡಿ.

– ಟೂತ್‌ಬ್ರಶ್‌ ಮೇಲೆ ಕೊಂಚ ದಾಲ್ಚಿನ್ನಿ ಪುಡಿಯನ್ನು ಇರಿಸಿ ತುಟಿಗಳು ಅಂದವಾಗಿ ತೋರುವವರೆಗೂ ಮೃದುವಾಗಿ ಸ್ಕ್ರಬ್‌ ಮಾಡುತ್ತಿರಿ. ಈ ವಿಧಾನದಿಂದ ಕೆಲವರಿಗೆ ಇರಿಟೇಶನ್‌ ಆಗಬಹುದು. ಆದ್ದರಿಂದ ಮೊದಲು ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ತುಟಿಯ ತುದಿಗೆ ಹಚ್ಚಿ ಟೆಸ್ಟ್ ಮಾಡಿ. ಇರಿಟೇಶನ್‌ ಹೆಚ್ಚಾಗಿ ಆದರೆ ಈ ಟ್ರಿಕ್‌ ನಿಮಗೆ ಸರಿಹೊಂದುವುದಿಲ್ಲ ಎಂದರ್ಥ.

ಲೇಟೆಸ್ಟ್ ಪೌಟ್‌ ಮೇಕಪ್‌ ಟ್ರೆಂಡ್‌

ತುಟಿಗಳಿಗೆ ಡಿಫರೆಂಟ್‌ ಲುಕ್‌ ಒದಗಿಸಲು ಡಿಫರೆಂಟ್‌ ಕಲರ್ಸ್ ಟ್ರೈ ಮಾಡಿ. ಅಪ್ಪರ್‌ ಲಿಪ್‌ಗೆ ಚೆರ್ರಿ ಲಿಪ್‌ ಕಲರ್‌ ಮತ್ತು ಲೋಯರ್‌ ಲಿಪ್‌ಗೆ ಮೆಜೆಂತಾ. ಇದರಿಂದ ಸೆಕ್ಸೀ ಪೌಟ್‌ ಲುಕ್‌ ದೊರೆಯುತ್ತದೆ. ಇಂದಿನ ದಿನಗಳಲ್ಲಿ ಸೆಲೆಬ್ರಿಟೀಸ್‌ ಕೆಂಪು ಲಿಪ್‌ಸ್ಟಿಕ್‌ನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಪೌಟಿ ಲುಕ್‌ಗಾಗಿ ರೆಡ್‌ ಲಿಪ್‌ಸ್ಟಿಕ್‌ನ ವಿಭಿನ್ನ ಶೇಡ್‌ಗಳನ್ನು ಬಳಸಬಹುದು. ಪೌಟಿ ಲಿಪ್ಸ್ ಗಾಗಿ ಆಂಬ್ರೆ ಲಿಪ್‌ ಶೇಡ್‌ ಇಂದು ಪ್ರಚಲಿತವಾಗಿದೆ. ಇದರಲ್ಲಿ ಡಾರ್ಕ್‌ ಕಲರ್‌ ಔಟ್‌ಲೈನ್‌ ಮಾಡಿ ಬೋಲ್ಡ್ ಲುಕ್‌ ಪಡೆಯಬಹುದು. ಇದು ನಿಮ್ಮ ತುಟಿಗಳಲ್ಲಿ ಡೈಮೆನ್ಶನ್‌ ಮೂಡಿಸಿ ಚಂದವಾಗಿಸುತ್ತದೆ. ಪೆಟ್‌ ಪಿಂಕ್‌ನೊಂದಿಗೆ ಮೆಜೆಂತಾ ಅಥವಾ ಟ್ಯಾಂಜರೀನ್‌ನೊಂದಿಗೆ ಡೀಪ್‌ ಆರೆಂಜ್‌ ಲಿಪ್‌ ಕಲರ್‌ ಆರಿಸಿಕೊಳ್ಳಿ.

ಪರ್ಫೆಕ್ಟ್ ಪೌಟಿ ಲುಕ್‌ ಪಡೆಯಲು ಮೇಲ್ತುಟಿ ಮತ್ತು ಕೆಳತುಟಿಯ ಮೇಲೆ 2 ಮಿಕ್ಸ್ ಕಲರ್‌ ಹಚ್ಚಿ. ಮೊದಲು ತುಟಿಗಳಿಗೆ ಬೇಸ್‌ ಕಲರ್‌ ಹಚ್ಚಿ. ನಂತರ ಡೈಮೆನ್ಶನ್‌ ಫಿನಿಶ್‌ಗಾಗಿ ಮೇಲಿನ ಮತ್ತು ಕೆಳ ತುಟಿಯ ಮಧ್ಯೆ ಇನ್ನೊಂದು ಕಲರ್‌ ಹಚ್ಚಿ. ಓಹೋ! ಈಗ ನೀವಾಗಿರುವಿರಿ ಸಮ್ಮರ್‌ ಸೀಸನ್‌ನ ಪೌಟಿಂಗ್‌ ಕ್ವೀನ್‌.

– ಅಶ್ವಿನಿ ಎಂ.

Tags:
COMMENT