ಹಬ್ಬದ ದಿನಗಳು ಶುರುವಾಗಲಿವೆ. ಹೀಗಾಗಿ ನಾವು ನಿಮಗೆ ಎಂತಹ ಕೆಲವು ಟಿಪ್ಸ್ ಬಗ್ಗೆ ಹೇಳಿಕೊಡುತ್ತಿದ್ದೇವೆಂದರೆ, ಅವುಗಳಿಂದ ನೀವು ಸಕ್ಕರೆಯುಕ್ತ ಪೇಯಗಳು ಹಾಗೂ ಹೆಚ್ಚು ಕ್ಯಾಲೋರಿಯುಕ್ತ  ಸಿಹಿತಿಂಡಿಗಳ ಸೇವನೆ ಕಡಿಮೆಗೊಳಿಸಬಹುದು.

ನಿಮ್ಮ ಡಯೆಟ್‌ ಪ್ಲ್ಯಾನ್‌ ಪಾಲಿಸಿ ಹೊಟ್ಟೆ ತುಂಬಾ ಬೆಳಗಿನ ಉಪಾಹಾರ ಮಾಡಿ. ಅದರಿಂದ ಹೆಚ್ಚಿನ ಹೊತ್ತಿನ ತನಕ ನಿಮ್ಮ ಹೊಟ್ಟೆ ತುಂಬಿರುತ್ತದೆ. ಅದು ಪೋಷಕಾಂಶ ಹಾಗೂ ನಾರಿನಂಶದಿಂದ ಭರ್ತಿಯಾಗಿರುತ್ತದೆ. ಮಧ್ಯಾಹ್ನಕ್ಕೆ ಆಹಾರದಲ್ಲಿ  ಪ್ರೋಟೀನ್‌ ಪ್ರಮಾಣ ಅಧಿಕವಾಗಿರಲಿ. ಅದು ಬಹಳ ಹೊತ್ತಿನ ತನಕ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಆ ಕಾರಣದಿಂದ  ನೀವು ಸಿಹಿ ಪದಾರ್ಥ ಹಾಗೂ ಪಾನೀಯಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವಿರಿ. ನಿಮ್ಮ ಫ್ರಿಜ್‌ನಲ್ಲಿ ಆರೋಗ್ಯಕರ ಸ್ನ್ಯಾಕ್ಸ್ ಹಾಗೂ ಹಸಿರು ಸೊಪ್ಪು ಹಾಗೂ ಹಣ್ಣುಗಳನ್ನು ಸಂಗ್ರಹಿಸಿಡಿ.

ಯೋಚಿಸಿ ತಿನ್ನಿ ನೀವು ಏನನ್ನು ಸೇವಿಸುತ್ತೀರೊ, ಅದರ ಪ್ರಮಾಣದ ಮೇಲೆ ಗಮನವಿಡಿ. ನೀವು ಸಿಹಿ ತಿಂಡಿ ಅಥವಾ ಬೇರೆ ಕ್ಯಾಲೋರಿ ಯುಕ್ತ ಪದಾರ್ಥಗಳನ್ನು ಸೇವಿಸಿದರೆ, ನಿಮ್ಮ ಕ್ಯಾಲೋರಿ ಇನ್‌ಟೇಕ್‌ ಹೆಚ್ಚುವುದಿಲ್ಲ. ನೀವು ಏನೇ ತಿನ್ನಿ, ಚಿಕ್ಕ ಪ್ಲೇಟ್‌ನಲ್ಲಿ ತುಸು ಮಾತ್ರ ಬಳಸಿ.

ಸಾಕಷ್ಟು ನೀರು ಕುಡಿಯಿರಿ

ದಿನ ಸಾಕಷ್ಟು ನೀರು ಕುಡಿಯಿರಿ. ನಿಮ್ಮ ದಿನದ ಆರಂಭ ನೀರು ಕುಡಿಯುವುದರಿಂದ ಆಗಬೇಕು. ಮುಂಜಾನೆ ಖಾಲಿ ಹೊಟ್ಟೆಯಲ್ಲಿ 2-3 ಗ್ಲಾಸ್‌ ನೀರು ಕುಡಿಯಿರಿ. ಇದರಿಂದ ನಿಮ್ಮ ಪಚನಶಕ್ತಿ ಚೆನ್ನಾಗಿರುತ್ತದೆ.  ದೇಹದಲ್ಲಿ ನೀರಿನ ಮಟ್ಟ ಕಾಯ್ದುಕೊಂಡು ಹೋಗುತ್ತದೆ ಹಾಗೂ ರಕ್ತದಿಂದ ವಿಷಕಾರಿ ಘಟಕಗಳು ಕೂಡ ನಿವಾರಣೆಯಾಗಲು ಸಹಾಯವಾಗುತ್ತದೆ. ಒಂದು ದಿನಕ್ಕೆ ಕನಿಷ್ಠ 3 ಲೀ. ನೀರು ಅತ್ಯವಶ್ಯ ಕುಡಿಯಿರಿ. ನಿಯಮಿತವಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ದೇಹದಿಂದ ವಿಷಕಾರಿ ಘಟಕಗಳು ಹೊರಹೋಗಲು ಸಹಾಯವಾಗುತ್ತದೆ.

ಆರೋಗ್ಯಕರ ಪರ್ಯಾಯ ಹುಡುಕಿ

ನೀವು ಯಾವಾಗಲೂ ಆರೋಗ್ಯಕರ ಹಾಗೂ ಪೋಷಕಾಂಶಗಳುಳ್ಳ ಆಹಾರ ಪದಾರ್ಥಗಳನ್ನೇ ಆಯ್ದುಕೊಳ್ಳಿ. ಓವರ್‌ ಈಟಿಂಗ್‌ ಆಗದಿರಲಿ. ಸಿಹಿ ತಿಂಡಿಗಳ ಬದಲು ಡ್ರೈಫ್ರೂಟ್ಸ್, ಹಣ್ಣು, ಫ್ಲೇವರ್ಡ್‌ ಮೊಸರನ್ನು ಸೇವಿಸಬಹುದು.

ಖರೀದಿಗಾಗಿ ಹೊರಡಿ

ಹಬ್ಬದ ಸಂದರ್ಭದಲ್ಲಿ ಯಾರಿಗೆ ಆಗಲಿ, ಖರೀದಿ ಮಾಡುವುದೆಂದರೆ ಖುಷಿ ಎನಿಸುತ್ತದೆ. ಇಲ್ಲಿ ನಾವು ಖರೀದಿ ಮಾಡಲು ಹೋಗುವುದು ಏಕೆ ಸೂಕ್ತ ಎಂದು ಹೇಳುತ್ತಿದ್ದೇವೆಂದರೆ, ನೀವು ಶಾಪಿಂಗ್‌ಗೆ ಹೋಗುವಾಗ ಕಾಲ್ನಡಿಗೆಯಲ್ಲಿ ಹೋಗುವಂತಾಗಬೇಕು. ಅದಕ್ಕಾಗಿ ನೀವು ದ್ವಿಚಕ್ರ ವಾಹನ ಅಥವಾ ಕಾರು ಹೊರಗೆ ತೆಗೆಯಲೇಬಾರದು. ನೀವು ಮಾರ್ಕೆಟ್‌ನಲ್ಲಿ ಸುತ್ತಾಡಿದರೆ ಅಥವಾ ಮಾಲ್‌ನಲ್ಲಿ ಸಾಕಷ್ಟು ಹೊತ್ತು ಓಡಾಡಿದರೆ ನೀವು ಹೆಚ್ಚು ಕ್ಯಾಲೋರಿ ಬರ್ನ್‌ ಮಾಡಬಹುದು.

ಡೀಟಾಕ್ಸಿಫಿಕೇಶನ್‌ ಉಪಾಯ

ನಮ್ಮ ದೇಹದ ರಚನೆ ಹೇಗಿದೆ ಎಂದರೆ, ದೇಹದ ಹಾನಿಕಾರಕ ಘಟಕಗಳು ತಂತಾನೇ ಹೊರ ಹೋಗುವಂತಿವೆ. ಆದರೂ ಹಬ್ಬದ ಸಂದರ್ಭದಲ್ಲಿ ದೇಹದಲ್ಲಿ ವಿಷಕಾರಕ ಘಟಕಗಳ ಸೇವನೆಯ ಪ್ರಮಾಣ ಹೆಚ್ಚುತ್ತದೆ. ಹೀಗಾಗಿ ಅವನ್ನು ಹೊರಹಾಕಲು ಪ್ರಯತ್ನಿಸಬೇಕು. ಚಹಾ ಅಥವಾ ಕಾಫಿಯ ಬದಲು ಗ್ರೀನ್‌ ಟೀ ಸೇವಿಸಿ. ನಿಮ್ಮ ದಿನದ ಆರಂಭವನ್ನು 1 ಗ್ಲಾಸ್‌ ಬಿಸಿ ನೀರಿನಿಂದ ಆರಂಭಿಸಿ. ಅದರಲ್ಲಿ ಒಂದಿಷ್ಟು ಹನಿ ನಿಂಬೆರಸ ಕೂಡ ಬೆರೆಸಿ.

ನೀವು ಕ್ಯಾಲೋರಿಯ ಪ್ರಮಾಣ ಹೆಚ್ಚಿಗೆ ಸೇವಿಸಿದ್ದಲ್ಲಿ ಮರುದಿನದ ವರ್ಕ್‌ಔಟ್‌ ಅಥವಾ ವಾಕಿಂಗ್‌ ಸಮಯವನ್ನು 10 ನಿಮಿಷಗಳಷ್ಟು ಹೆಚ್ಚಿಸಿ. ಹಬ್ಬದ ಸಂದರ್ಭದಲ್ಲೂ ನಿಮ್ಮ ವ್ಯಾಯಾಮದ ರುಟೀನ್‌ನ್ನು ಮುಂದುವರಿಸಿ.

– ಜಿ. ನಿಧಿ ಭಟ್‌

Tags:
COMMENT