ಚಳಿಗಾಲ ಬರುತ್ತಲೇ ಮಹಿಳೆಯರ ಸಾಮಾನ್ಯ ಸಮಸ್ಯೆ ಕಾಂತಿಹೀನ ಮತ್ತು ಶುಷ್ಕ ತ್ವಚೆ. ಅದಕ್ಕೆ ವಿಶೇಷ ಕಾರಣ ಒಣ ಹವೆ. ಅಂದರೆ ನಿಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಆರ್ದ್ರತೆಯ ಕೊರತೆ. ಒಣ ಹವೆ ನಿಮ್ಮ ತ್ವಚೆಯಿಂದ ತೇವ ಹೀರಿಕೊಂಡು ಅದನ್ನು ಕಾಂತಿಹೀನ ಮತ್ತು ಶುಷ್ಕಗೊಳಿಸುತ್ತದೆ.

ಈ ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ರಕ್ಷಿಸಲು ಹಾಗೂ ಅದಕ್ಕೆ ಆರ್ದ್ರತೆ ಮತ್ತು ಕಾಂತಿ ತಂದುಕೊಡಲು ಇಲ್ಲಿ ಕೆಲವು ಸರಳ ಉಪಾಯಗಳನ್ನು ಕೊಟ್ಟಿದೆ.

  1. ದಿನ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಟವೆಲ್‌ನಿಂದ ತ್ವಚೆಯನ್ನು ಉಜ್ಜದೆ ಒತ್ತಿ ಒತ್ತಿ ಒರೆಸಿ.
  2. ಸ್ನಾನವಾದ ಕೂಡಲೇ ತ್ವಚೆ ತೇವವಿರುವಾಗ ಕ್ರೀಮ್ ಬೇಸ್ಡ್ ಮಾಯಿಶ್ಚರೈಸರ್‌ನ್ನು ಇಡೀ ಶರೀರಕ್ಕೆ ಹಚ್ಚಿ. ಹೆಚ್ಚುವರಿ ಸುರಕ್ಷತೆಗೆ ಬಟರ್‌ ಅಥವಾ ಕೋಕೋಯುಕ್ತ ಮಾಯಿಶ್ಚರೈಸರ್‌ ಆಯ್ದುಕೊಳ್ಳಿ.
  3. ನಿಮ್ಮ ತ್ವಚೆಯನ್ನು ತೇವದೊಂದಿಗೆ ಕೋಮಲವಾಗಿಡಲು ಸ್ನಾನದ ನೀರಿನಲ್ಲಿ ಆಲಿವ್ ಆಯಿಲ್ ‌ಅಥವಾ ಕೊಬ್ಬರಿ ಎಣ್ಣೆಯ ಕೆಲವು ಹನಿಗಳನ್ನು ಹಾಕಿ.
  4. ಕೋಮಲವಾದ ಶವರ್‌ ಜೆಲ್ ‌ಉಪಯೋಗಿಸಿ. ಕಠೋರ ಹಾಗೂ ಅತ್ಯಧಿಕ ಸುಗಂಧದ ಸಾಬೂನನ್ನು ಉಪಯೋಗಿಸಬೇಡಿ.
  5. ತ್ವಚೆಯಿಂದ ಮೃತಕೋಶಗಳನ್ನು ತೆಗೆಯಲು ಹಲವು ವಾರಗಳಿಗೊಮ್ಮೆ ನಿಮ್ಮ ತ್ವಚೆಯನ್ನು ಉಜ್ಜಬೇಕಾಗಬಹುದು.
  6. ತುಟಿಗಳು ಒಡೆಯದಂತಿರಲು ಅವುಗಳ ಮೇಲೆ ನಿಯಮಿತವಾಗಿ ಲಿಪ್‌ ಬಾಮ್ ಹಚ್ಚುತ್ತಿರಿ. ತುಟಿಗಳನ್ನು ನಿಮ್ಮ ನಾಲಿಗೆಯಿಂದ ಒದ್ದೆ ಮಾಡಬೇಡಿ. ಇಲ್ಲದಿದ್ದರೆ ಅವು ಇನ್ನಷ್ಟು ಹಾಳಾಗುತ್ತವೆ. ಒಂದು ಹಳೆಯ ಮನೆ ಮದ್ದು ಸಹ ಇದೆ. ಜೇನುತುಪ್ಪದಲ್ಲಿ ಕೆಲವು ಹನಿ ಆಲಿವ್ ಆಯಿಲ್ ‌ಬೆರೆಸಿ ತುಟಿಗಳಿಗೆ ಹಚ್ಚಿ ಅವನ್ನು ಆರ್ದ್ರತೆಯಿಂದಿರುವಂತೆ ಮಾಡಿ.
  7. ಮನೆ ಕೆಲಸ ಮಾಡುವಾಗ ಕೈಗಸುಗಳನ್ನು ಅಗತ್ಯವಾಗಿ ಧರಿಸಿ. ವಿಶೇಷವಾಗಿ ನೀವು ಡಿಟರ್ಜೆಂಟ್‌ ಉಪಯೋಗಿಸುವಾಗ. ಹೀಗೆ ಮಾಡುವುದರಿಂದ ನಿಮ್ಮ ಕೈಗಳು ಒರಟಾಗುವುದಿಲ್ಲ. ಮನೆಗೆಲಸ ಮುಗಿದ ನಂತರ ದಿನಕ್ಕೆ 2-3 ಬಾರಿ ನಿಮ್ಮ ಕೈಗಳಿಗೆ ಒಳ್ಳೆಯ ಹ್ಯಾಂಡ್‌ ಕ್ರೀಮ್ ಹಚ್ಚಿ.
  8. ಚಳಿಗಾಲದಲ್ಲಿ ಹಿಮ್ಮಡಿಗಳು ಒಡೆಯುತ್ತವೆ. ಮೃತ ತ್ವಚೆಯನ್ನು ತೆಗೆಯಲು ಆಗಾಗ್ಗೆ ಎಕ್ಸ್ ಪೋಲಿಯೇಟ್‌ ಮಾಡಿಸಿ. ನಂತರ ಯೂರಿಯಾ ಅಥವಾ ಲ್ಯಾಕ್ಟಿಕ್‌ ಆ್ಯಸಿಡ್‌ ಇರುವಂತಹ ಪೆಟ್ರೋಲಿಯಂ ಜೆಲ್ಲಿ ಅಥವಾ ಗ್ಲಿಸರೀನ್‌ ಬೇಸ್ಡ್ ಕ್ರೀಮ್ ಹಚ್ಚಿ. ನೀವು ಪ್ರತಿ ರಾತ್ರಿಯೂ ಫುಟ್ ಕ್ರೀವ್‌ ಹಚ್ಚಬಹುದು. ಜೊತೆಗೆ ಕಾಟನ್‌ ಕಾಲು ಚೀಲ ಧರಿಸಿ.
  9. ನಿಮ್ಮ ಕೂದಲು ಹಾಗೂ ದೇಹವನ್ನು ವಾರಕ್ಕೊಮ್ಮೆ ಬೆಚ್ಚಗಿನ ಎಣ್ಣೆಯಿಂದ ಮಸಾಜ್‌ ಮಾಡಿ. ಅದಕ್ಕೆ ಆಲಿವ್ ‌ಆಯಿಲ್ ‌ಅಥವಾ ಕೊಬ್ಬರಿ ಎಣ್ಣೆ ಉಪಯೋಗಿಸಿ.
  10. ಬಿಸಿಲಿನಲ್ಲಿ ಹೊರಡುವ ಅರ್ಧ ಗಂಟೆ ಮುಂಚೆ ನಿಮ್ಮ ಮುಖಕ್ಕೆ ಹಾಗೂ ಕೈಗಳಿಗೆ ಸನ್‌ಸ್ಕ್ರೀನ್‌ ಹಚ್ಚಿ. ಒಂದು ವೇಳೆ ನೀವು ಹೆಚ್ಚು ಹೊತ್ತು ಹೊರಗೆ ಇರಬೇಕಾದರೆ 3-4 ಗಂಟೆಗಳ ನಂತರ ಸನ್‌ಸ್ಕ್ರೀನ್‌ ಹಚ್ಚಿ.
  11. ಚಳಿಗಾಲದಲ್ಲೂ ನೀರು ಚೆನ್ನಾಗಿ ಕುಡಿಯಿರಿ.
  12. ಕಠೋರವಾದ ಪೀಲ್ಸ್, ಮಾಸ್ಕ್, ಟೋನರ್‌, ಆ್ಯಸ್ಟ್ರಿಂಜೆಂಟ್‌ ಅಥವಾ ಇತರ ತ್ವಚೆ ಹಾಗೂ ಹೇರ್‌ ಸ್ಟೈಲಿಂಗ್‌ ಉತ್ಪನ್ನವನ್ನು ಉಪಯೋಗಿಸಬೇಡಿ. ಏಕೆಂದರೆ ಅದರಲ್ಲಿ ಆಲ್ಕೋಹಾಲಿಕ್‌ ಕಂಟೆಂಟ್‌ ಹೆಚ್ಚಾಗಿ ಇರುತ್ತದೆ. ಆಲ್ಕೋಹಾಲ್ ಆವಿಯಾಗುವಾಗ ತ್ವಚೆಯ ಆರ್ದ್ರತೆಯನ್ನು ಆವಿಯಾಗಿಸುತ್ತದೆ.
  13. ಚಳಿಗಾಲದಲ್ಲಿ ನೀವು ಮನೆಯಲ್ಲೇ ತಯಾರಿಸಿದ ಇನ್ನೊಂದು ವಸ್ತುವನ್ನು ಉಪಯೋಗಿಸಬಹುದು. ಆ್ಯವಕ್ಯಾಡೋವನ್ನು ಕೆಲವು ಹನಿ ಆಲಿವ್ ‌ಆಯಿಲ್ ಅಥವಾ ಮೊಸರಿಗೆ ಸೇರಿಸಿ ರುಬ್ಬಿದ ಬಾದಾಮಿ ಸೇರಿಸಿ. ಈ ಮಿಶ್ರಣವನ್ನು ಸ್ನಾನಕ್ಕೆ ಮೊದಲು ನಿಮ್ಮ ಮೈಪೂರ್ತಿ ಲೇಪಿಸಿ. 20 ನಿಮಿಷಗಳ ನಂತರ ಅದನ್ನು ತೊಳೆದು ನಂತರ ಸ್ನಾನ ಮಾಡಿ.
  14. ಅಗ್ಗದ ಉತ್ಪನ್ನ ದುಬಾರಿ ಉತ್ಪನ್ನದಂತೆಯೇ ಒಳ್ಳೆಯ ಕೆಲಸ ಮಾಡುತ್ತದೆ. ನಿಮ್ಮ ತ್ವಚೆ ಆ ಉತ್ಪನ್ನಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ, ನಿಮಗೆ ಅದರೊಂದಿಗೆ ಯಾವ ರೀತಿಯ ಅನುಭವವಾಯಿತು ಎಂಬುದು ಮುಖ್ಯ. ನೀವು ಎಷ್ಟು ಹಣ ಖರ್ಚು ಮಾಡಿದ್ದೀರಿ ಎಂಬುದು ಮುಖ್ಯವಲ್ಲ.
  15. ಕನಿಷ್ಠ ಒಮ್ಮೆಯಾದರೂ ತ್ವಚೆಯ ತಜ್ಞರ ಬಳಿ ಹೋಗುವುದು ಒಳ್ಳೆಯ ವಿಧಾನ. ತಜ್ಞರು ನಿಮ್ಮ ತ್ವಚೆಯ ಸ್ವರೂಪವನ್ನು ವಿಶ್ಲೇಷಿಸಿ ತ್ವಚೆಯ ರಕ್ಷಣೆಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ದೋಷಗಳನ್ನು ದೂರ ಮಾಡುತ್ತಾರೆ ಮತ್ತು ನಿಮ್ಮ ತ್ವಚೆಗಾಗಿ ಯಾವ ರೀತಿಯ ಉತ್ಪನ್ನಗಳನ್ನು ಉಪಯೋಗಿಸಬೇಕೆಂದು ತಿಳಿಸುತ್ತಾರೆ.

- ಪಿ. ಶೋಭಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ