ನೀರು ಜೀವನದ ಆಧಾರವಷ್ಟೇ ಅಲ್ಲ, ಸಂಜೀವಿನಿಯೂ ಆಗಿದೆ. ನೀರಿನ ಬಳಕೆಯ ಹಲವಾರು ವಿಧಾನಗಳನ್ನು ನಾವು ಬಾಲ್ಯದಿಂದಲೇ ತಿಳಿದಿದ್ದೇವೆ. ಕುಡಿಯಲು, ಸ್ನಾನಕ್ಕೆ, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ನೀರು ಬೇಕು. ಹಾಗೆಯೇ ವ್ಯವಸಾಯಕ್ಕೆ ಅಡುಗೆಗೆ, ಫ್ಯಾಕ್ಟರಿ ಬಳಕೆ ಇತ್ಯಾದಿಗಳಿಗೆ ನೀರಿನ ಅಗತ್ಯವಿದೆ.

ನೀರಿನ ವಿಶೇಷ ಉಪಯೋಗವನ್ನು ನಾವಿಲ್ಲಿ ಹೇಳುತ್ತಿದ್ದೇವೆ. ಅದಕ್ಕೆ `ಹೈಡ್ರೋಥೆರಪಿ' ಎನ್ನುತ್ತಾರೆ. ನೀರಿನಿಂದ ರೋಗಗಳಿಗೆ ಚಿಕಿತ್ಸೆ ಮಾಡುವ ವಿಧಾನ ಇದು.

ಹೈಡ್ರೋಥೆರಪಿಯ ಇತಿಹಾಸ ನೂರಾರು ವರ್ಷ ಹಳೆಯದು. ಗ್ರೀಕ್‌ ಮತ್ತು ರೋಮನ್ನರ ಸಂಸ್ಕೃತಿಯೊಂದಿಗೆ ನಮ್ಮ ಆಯುರ್ವೇದ ಶಾಸ್ತ್ರದಲ್ಲೂ ಇದರ ಉಲ್ಲೇಖವಿದೆ.

spa

ವಿಧಾನ

ಹೈಡ್ರೋಥೆರಪಿ ಪ್ರಕಾರ ಬಿಸಿನೀರು ಶರೀರಕ್ಕೆ ತಂಪು ನೀಡುತ್ತದೆ. ಆಯಾಸ ಮತ್ತು ಮಾನಸಿಕ ಒತ್ತಡಗಳು ದೂರವಾಗುತ್ತವೆ. ನಮ್ಮ ಶರೀರವನ್ನು ನೀರಿನಲ್ಲಿ ಮುಳುಗಿಸಿದಾಗ ನಮಗೆ ಭಾರರಹಿತ ಸ್ಥಿತಿ ದೊರೆಯುತ್ತದೆ. ನಮ್ಮ ಶರೀರಕ್ಕೆ ಅದರ ಅಗತ್ಯವಿದೆ. ಸ್ವಿಮ್ಮಿಂಗ್‌ ಪೂಲ್‌, ಬಾವಿ, ನದಿಯ ನೀರು ನಮ್ಮ ಶರೀರಕ್ಕೆ ಹೊಡೆದಾಗ ನಮಗೆ ಮಸಾಜ್‌ ಮಾಡಿದಂತಹ ಅನುಭವವಾಗುತ್ತದೆ. ಅದರಿಂದ ನಮ್ಮ ತ್ವಚೆ ಉತ್ತೇಜಿತವಾಗುತ್ತದೆ ಮತ್ತು ರಕ್ತ ಸಂಚಾರ ಹೆಚ್ಚುತ್ತದೆ.

ಹೈಡ್ರೋಥೆರಪಿ ಅನೇಕ ರೀತಿಯಲ್ಲಿದೆ.

ಸ್ನಾನ ಮಾಡುವುದು

ನೀರಿನಲ್ಲಿ ಕೂಡುವುದು

ಕಾಲುಗಳಿಗೆ ಸ್ನಾನ

ಹ್ಯಾಂಡ್‌ ಗ್ಲೌವ್ಸ್ ನಿಂದಾಗುವ ಘರ್ಷಣೆ

ಶರೀರಕ್ಕೆ ಉಗಿಸ್ನಾನ

ಬಿಸಿ ನೀರನ್ನು ಸಿಂಪಡಿಸುವುದು

ತಣ್ಣೀರನ್ನು ಸಿಂಪಡಿಸುವುದು

Vichy_Shower

ಚಿಕಿತ್ಸೆ

ಒಂದು ವೇಳೆ ಎದೆಯಲ್ಲಿ ಕಫ ತುಂಬಿದ್ದರೆ ಅಥವಾ ಕೆಮ್ಮು ಬಂದರೆ, ಎದೆಗೆ, ಕಾಲಿನ ಗಂಟುಗಳಿಗೆ, ಮೊಣಕೈ ಅಥವಾ ಬೆರಳುಗಳಿಗೆ ಏಟು ಬಿದ್ದು ಊತ ಬಂದಿದ್ದರೆ ಏಟು ಬಿದ್ದ ಜಾಗದಲ್ಲಿ ಬಿಸಿ ನೀರಿನಲ್ಲಿ ಅದ್ದಿದ ಬಟ್ಟೆಯನ್ನು ಒತ್ತಿ.ಒಂದು ವೇಳೆ ತಸೆನೋವು ಅಥವಾ ಹಲ್ಲುನೋವು ಉಂಟಾಗಿದ್ದರೆ ಅಥವಾ ಕೈ ಕಾಲುಗಳಲ್ಲಿ ಎಳೆತ ಉಂಟಾಗಿದ್ದರೆ ಆ ಜಾಗಗಳಲ್ಲಿ ತಣ್ಣೀರು ಸಿಂಪಡಿಸಿ.

ಹೈಡ್ರೋಥೆರಪಿಯಿಂದ ಮೂಲವ್ಯಾಧಿ, ಪ್ರಾಸ್ಟೇಟ್‌ ಗ್ರಂಥಿಗಳಲ್ಲಿ ಊತ, ಮೂತ್ರಾಶಯ ಮತ್ತು ಯೋನಿ ಮಾರ್ಗಗಳಲ್ಲಿನ ರೋಗಗಳು ದೂರವಾಗುತ್ತವೆ. ಮೊಣಕಾಲು ಗಂಟು ಇತ್ಯಾದಿಗಳ ನೋವು ಸಹ ದೂರವಾಗುತ್ತದೆ. ಆದರೆ ಇದಕ್ಕೆ ಸರಿಯಾದ ರೀತಿಯಿಂದ ಚಿಕಿತ್ಸೆ ಮಾಡಿಸುವ ಅಗತ್ಯವಿದೆ.

ದಿನಕ್ಕೆ ಸುಮಾರು 3 ಲೀಟರ್‌ನೀರು ಕುಡಿಯಬೇಕು. ಏಕೆಂದರೆ ಶರೀರದ ಎಲ್ಲ ಅವಯವಗಳಿಗೆ ನೀರಿನ ಅಗತ್ಯವಿದೆ. ತ್ವಚೆಯ ಆರ್ದ್ರತೆ ನೀರಿನಿಂದ ಸಿಗುತ್ತದೆ. ಅಷ್ಟೇ ಅಲ್ಲ, ನೀರು ಒತ್ತಡವನ್ನು ಕಡಿಮೆ ಮಾಡಿ ಶರೀರದ ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅವಯವಗಳ ಕ್ರಿಯಾಶೀಲತೆ, ರಕ್ತಸಂಚಾರ ಹೆಚ್ಚುತ್ತದೆ. ಪಿಂಪಲ್ಸ್ ಕಡಿಮೆಯಾಗುತ್ತವೆ. ವಾತರೋಗ, ತಲೆನೋವು ಕಡಿಮೆಯಾಗಿ ನಿದ್ರೆ ಚೆನ್ನಾಗಿ ಬರುತ್ತದೆ.

ಗಂಟಲು ಒಣಗುವಿಕೆ, ಕಡಿಮೆ ಮೂತ್ರ ವಿಸರ್ಜನೆ, ನವೆ ಇತ್ಯಾದಿ ಲಕ್ಷಣಗಳು ನೀರಿನ ಕೊರತೆಯಿಂದ ಉಂಟಾಗುತ್ತವೆ. ಆಟಗಾರರು ನೀರು ಕುಡಿಯುವ ಬಗ್ಗೆ ವಿಶೇಷ ಗಮನ ಕೊಡಬೇಕು. ಏಕೆಂದರೆ ಶೇ.2ರಷ್ಟು ನೀರಿನ ಕೊರತೆ ಶೇ.25ರಷ್ಟು ಆಟದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

hydrotherepy

ಬೇಸಿಗೆಯಲ್ಲಿ ಈ ವಿಷಯಗಳ ಬಗ್ಗೆ ಗಮನಿಸಿ.

ಯಾವಾಗಲೂ ತಣ್ಣೀರಿನಿಂದಲೇ ಸ್ನಾನ ಮಾಡಿ.

ಬಿಸಿಲಿನಿಂದ ಮನೆಗೆ ಬಂದನಂತರ ಚೆನ್ನಾಗಿ ನೀರು ಕುಡಿಯಿರಿ.

ಬಟ್ಟೆಯಲ್ಲಿ ಮಂಜಿನಗಡ್ಡೆ ಇಟ್ಟು ಮುಖಕ್ಕೆ ಚೆನ್ನಾಗಿ ಉಜ್ಜಿ.

ಕಣ್ಣುಗಳ ಮೇಲೆ ಗುಲಾಬಿ ಜಲದ ಪಟ್ಟಿ ಇಟ್ಟುಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ