ಮನೆಯಲ್ಲೇ ನೀವು ಸ್ವಚ್ಛ ಶುಭ್ರ ವಿಧಾನ ಅನುಸರಿಸಿ ಅನಗತ್ಯ ಕೂದಲಿನಿಂದ ಮುಕ್ತಿ ಪಡೆಯಬಹುದು. ಕೊರೋನಾ ಹೆಮ್ಮಾರಿಯ ಕಾಟದ ಮಧ್ಯೆ ಇದು ನಿಮಗೆ ಅಗತ್ಯ ತಿಳಿದಿರಲಿ.......!

ಹೈಜೀನ್‌ ಹೆಸರು ಕೇಳಿದೊಡನೆ ನಮಗೆ ಎಲ್ಲೆಲ್ಲೂ ಕ್ಲೀನ್‌, ಶುಚಿತ್ವ, ಶುಭ್ರತೆಯ ವಾತಾವರಣದ ನೆನಪಾಗುತ್ತದೆ. ಅದೇ ತರಹ ನಮ್ಮನ್ನು ನಾವು ಶುಚಿಯಾಗಿ, ನೀಟಾಗಿ ಇಟ್ಟುಕೊಳ್ಳುವ ಅಗತ್ಯವಿದೆ. ನಮ್ಮನ್ನು ನಾವು ಶುಭ್ರವಾಗಿಟ್ಟುಕೊಂಡಾಗ ಮಾತ್ರ ರೋಗಗಳಿಂದ ದೂರವಿರಲು ಸಾಧ್ಯ. ಸ್ವಚ್ಛತೆ ಶುಭ್ರತೆ ಎಂದೊಡನೆ ಅದು ಕೇವಲ ದೇಹದ ಹೊರಭಾಗಗಳತ್ತ ಗಮನಕೊಡತಕ್ಕದ್ದು ಎಂದುಕೊಳ್ಳಬಾರದು. ಇದರಲ್ಲಿ ಅನಗತ್ಯ ಕೂದಲ ನಿವಾರಣೆ ಪ್ರಧಾನ ಪಾತ್ರ ವಹಿಸುತ್ತದೆ, ಏಕೆಂದರೆ ಅದು ಚರ್ಮದ ಅವಿಚಿನ್ನ ಭಾಗ.

ಆದರೆ ಈಗ ಜನ ಕೊರೋನಾ ಮಹಾಮಾರಿಯ ಕಾಟದಿಂದಾಗಿ ಪಾರ್ಲರ್‌ ಗೆ ಹೋಗಿ ನೀಟ್‌ ಆಗದೆ, ಹೇಗೋ ಇದ್ದರಾಯಿತು ಎಂದುಕೊಳ್ಳುತ್ತಾರೆ. ಹೇಗೂ ಆಫೀಸಿಗೆ, ಹೊರಗೆ ಹೋಗುವ ಗೋಜಿಲ್ಲ. ಮನೆಯಲ್ಲೇ ತಾನೇ ಇರುವುದು? ಹೇಗಿದ್ದರೇನು? ಎನಿಸುತ್ತದೆ. ಮುಂದೆ ಅನುಕೂಲ ಆದಾಗ ಪಾರ್ಲರ್‌ ಗೆ ಹೋಗಿ ಒಂದೇ ಸಲ ಎಲ್ಲಾ ಮಾಡಿಸಿಕೊಂಡರಾಯಿತು ಅಂತಾರೆ. ಆದರೆ ಖಂಡಿತಾ ಹೀಗೆ ಭಾವಿಸಬೇಡಿ. ಆದರೆ ಎಲ್ಲವನ್ನೂ ಪಾರ್ಲರ್‌ ವಶಕ್ಕೇ ಬಿಟ್ಟುಬಿಡುವುದು ಸರಿಯಲ್ಲ. ಆದ್ದರಿಂದ ನೀವು ಮನೆಯಲ್ಲೇ ಅನಗತ್ಯ ಕೂದಲನ್ನು ತೆಗೆದುಹಾಕಿ, ಸ್ಕಿನ್‌ ಹೈಜೀನ್‌ ಕಡೆ ಹೆಚ್ಚಿನ ಗಮನ ಕೊಡಬೇಕಿದೆ.

ಮನೆಯಲ್ಲೇ ಹೇರ್ರಿಮೂವಲ್

ಪಾರ್ಲರ್‌ ನಂತೆ ಮನೆಯಲ್ಲೇ ನಾವು ಹೇರ್‌ ರಿಮೂವ್ ‌ಮಾಡಲು ಸಾಧ್ಯವೇ ಎಂದು ಅಂದುಕೊಂಡಿರಾ? ಪಾರ್ಲರ್‌ ಗೆ ಹೋಗುವುದರಿಂದ ಬಾಡಿ ಕ್ಲೀನ್‌ ಆಗುವುದು ಮಾತ್ರವಲ್ಲದೆ ರಿಲ್ಯಾಕ್ಸ್ ಆಗಲು ಸಮಯಾವಕಾಶ ದೊರಕುತ್ತದೆ, ಅಂಥದ್ದು ಮನೆಯಲ್ಲಿ ಹೇಗೆ ಸಾಧ್ಯ? ಹಾಗೇನೂ ಇಲ್ಲ. ಮನೆಯಲ್ಲಿ ನೀವು ತುಸು ಹೆಚ್ಚು ಕಷ್ಟ ಪಡಬೇಕಾದೀತು, ಖರ್ಚಂತೂ ಬಹಳ ಉಳಿಯಿತಲ್ಲವೇ? ಮನೆಯಲ್ಲಿ  ಈ ಆಪ್ಶನ್‌ ನಿರ್ಧರಿಸಿದಾಗ, ನಿಮಗೆ ಬೇಕಾದ ಬೆಸ್ಟ್ ಕ್ವಾಲಿಟಿ ಪ್ರಾಡಕ್ಟ್ಸ್ ಬಳಸಿಕೊಳ್ಳಬಹುದು. ಇದರಿಂದ ನೀವು ಸಕಾಲದಲ್ಲಿ ಸ್ಕಿನ್‌ ಹೈಜೀನ್‌ ಕುರಿತು ಎಚ್ಚರಿಕೆ ಕ್ರಮ ತೆಗೆದುಕೊಳ್ಳಬಹುದು. ಜೊತೆಗೆ ನೀವೇ ಮಾಡಿಕೊಳ್ಳುವುದರಿಂದ ಸ್ಕಿನ್‌ ಅಲರ್ಜಿಯ ಪ್ರಶ್ನೆಯೇ ಏಳುವುದಿಲ್ಲ. ಆದರೆ ಪಾರ್ಲರ್‌ ನಲ್ಲಿ ಈ ಸದವಕಾಶವಿಲ್ಲ. ನಿಮ್ಮಿಂದ ಚೆನ್ನಾಗಿ ಹಣ ವಸೂಲಿ ಮಾಡುತ್ತಾರೆ. ಆದರೆ ಬ್ರಾಂಡೆಡ್‌ ಪ್ರಾಡಕ್ಟ್ ಬಳಸುತ್ತಾರೋ ಇಲ್ಲವೋ ಯಾವ ಗ್ಯಾರಂಟಿಯೂ ಇಲ್ಲ.

Vitamin-C

ಹೇರ್ರಿಮೂವಲ್ ಕ್ರೀಂ

ಹೇರ್‌ ರಿಮೂವ್ ‌ಕ್ರೀಂ ಹಚ್ಚುವುದರಿಂದ ಅದು ಆಳವಾಗಿ ಬೇರೂರಿದ ಕೂದಲನ್ನು ತೆಗೆಯಬಾರದು, ಮೇಲಷ್ಟೇ ಕ್ಲೀನ್‌ ಮಾಡುತ್ತದೆ ಎಂದು ಭಾವಿಸಿದ್ದರೆ ಅದು ತಪ್ಪು. ಆದರೆ ಈಗ ಮಾರುಕಟ್ಟೆಯಲ್ಲಿ ಎಂಥ ಪವರ್‌ ಫುಲ್ ಹೇರ್‌ ರಿಮೂವ್ ‌ಕ್ರೀಂ ಬಂದಿದೆ ಎಂದರೆ, ಅದು ಬುಡದಲ್ಲಿನ ಕೂದಲನ್ನೂ ಇನ್ನಿಲ್ಲವಾಗಿಸುತ್ತದೆ. ಸುದೀರ್ಘ ಕಾಲ ಆ ಭಾಗದಲ್ಲಿ ಮತ್ತೆ ಕೂದಲು ಕಾಣಿಸುವುದಿಲ್ಲ. ಇಂಥ ಕ್ರೀಂ ವಿಟಮಿನ್‌, ಆ್ಯಲೋವೇರಾ, ಶಿಯಾ ಬಟರ್‌ ನಂಥ ಗುಣಗಳಿಂದ ಸಮೃದ್ಧವಾಗಿರುತ್ತದೆ, ಇದರಿಂದ ನಿಮ್ಮ ಚರ್ಮಕ್ಕೆ ಹೆಚ್ಚಿನ ಲಾಭವಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ