ಮಳೆಗಾಲದ ಸಮಯದಲ್ಲೂ ನೀವು ಮತ್ತು ನಿಮ್ಮ ಕುಟುಂಬ ಖಂಡಿತಾ ಸ್ಟ್ರಾಂಗ್ಆಗಿರಬಲ್ಲಿರಿ. ಇದಕ್ಕಾಗಿ ಇಮ್ಯೂನಿಟಿ ಹೆಚ್ಚಿಸಿಕೊಳ್ಳುವುದು ಹೇಗೆ.....?

ಮಳೆಗಾಲ ಬಂತೆಂದ ಮೇಲೆ ಉರಿ ಬಿಸಿಲಿನ ಬೇಗೆ ಎಷ್ಟೋ ತಗ್ಗುತ್ತದೆ. ಈ ಥಂಡಿ, ತುಂತುರು ಹನಿಗಳ ನಡುವೆ ಫ್ರೆಂಡ್ಸ್ ಜೊತೆ ಜಾಲಿ ಮಾಡುತ್ತಾ ಇದ್ದುಬಿಡೋಣ ಎನಿಸುತ್ತದೆ. ಈ ಸೀಸನ್ನಿನ ಆಹಾರ ಕ್ರಮ ಮಜವಾಗಿರುತ್ತದೆ. ಈ ಸೀಸನ್‌ ನಮ್ಮ ಮನಸ್ಸಿಗೆ ಬಹಳ ಖುಷಿ ನೀಡುವಂತೆ, ಈ ಸೀಸನ್‌ ನಲ್ಲಿ ನಮ್ಮ ಇಮ್ಯೂನಿಟಿಯನ್ನು ಬೂಸ್ಟ್ ಗೊಳಿಸುವ ಅಗತ್ಯವಿದೆ. ಏಕೆಂದರೆ ಮಳೆಗಾಲದಲ್ಲಿ ಸೋಂಕು, ಫ್ರೂ, ವೈರಲ್, ಫೀವರ್‌ ಓಡೋಡಿ ಬರುತ್ತವೆ.

ಹೀಗಾಗಿ ಸ್ಟ್ರಾಂಗ್‌ ಇಮ್ಯೂನಿಟಿಯುಳ್ಳ ವ್ಯಕ್ತಿ ಮಾತ್ರವೇ ಹೆಲ್ದಿ ಲೈಫ್‌ ನಡೆಸಲು ಸಾಧ್ಯ, ಆಗ ಮಾತ್ರ ಇಂಥ ರೋಗಗಳಿಂದ ತಪ್ಪಿಸಿಕೊಳ್ಳಬಹುದು.

ಇಮ್ಯೂನಿಟಿ

ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿ ಒದಗಿಸಿ ಕೊಡುವುದೇ ಇಮ್ಯೂನಿಟಿ. ಇದು ದೇಹದ ಆಂತರಿಕ ಸುರಕ್ಷತಾ ಕ್ರಮ ಎಂದರೂ ಸರಿ. ಇದು ಹೊರಗಿನ ಅಂಶಗಳು ನಿಮ್ಮ ದೇಹಕ್ಕೆ ರೋಗ ತರದಂತೆ ಅಡ್ಡಿಪಡಿಸುತ್ತದೆ, ನಮ್ಮ ದೇಹದೊಳಗಿನ ಸೈನಿಕರಂತೆ ನಮ್ಮನ್ನು ಕಾಪಾಡುತ್ತದೆ. ಯಾವುದೇ ವೈರಸ್‌, ಬ್ಯಾಕ್ಟೀರಿಯಾ ನಮ್ಮ ದೇಹವನ್ನು ಆಕ್ರಮಿಸಿದಾಗ, ಈ ಸಿಸ್ಟಂ ಅದರ ವಿರುದ್ಧ ಹೋರಾಡಿ ಹಿಮ್ಮೆಟ್ಟಿಸುತ್ತದೆ. ಈ ಹೋರಾಟ ಸುಲಭವಲ್ಲ, ಏಕೆಂದರೆ ಇದರಲ್ಲಿ ಅನೇಕ ಬಗೆಯ ಜೀವಕೋಶಗಳು ಸಕ್ರಿಯವಾಗಿ ಕಾರ್ಯ ನಿರತ ಆಗಬೇಕು, ಹಾಗಾದಾಗ ಮಾತ್ರ ನಮ್ಮ ಆರೋಗ್ಯ ಉಳಿಯುತ್ತದೆ.ಇಮ್ಯೂನಿಟಿಯಲ್ಲೂ ಹಲವು ಬಗೆಗಳಿವೆ.... ಆ್ಯಕ್ಟಿವ್ ಇಮ್ಯೂನಿಟಿ ಇದರಲ್ಲಿ ಪ್ರಮುಖ. ನಾವು ಬ್ಯಾಕ್ಟೀರಿಯಾ, ವೈರಸ್‌ಗಳ ಸಂಪರ್ಕಕ್ಕೆ ಬಂದ ತಕ್ಷಣ ಇದು ನಮ್ಮ ದೇಹದಲ್ಲಿ ಸಕ್ರಿಯಗೊಳ್ಳುತ್ತದೆ. ಹೀಗಾಗಿ ನಮಗೆ ಮೊದಲೇ ದೊರೆತ ಆ್ಯಂಟಿಬಾಡೀಸ್‌ಇಮ್ಯೂನ್‌ ಸೆಲ್ಸ್, ಈ ಹೊರಗಿನ ಕೀಟಾಣುಗಳನ್ನು ನಾಶ ಮಾಡುತ್ತವೆ.

ಇದರ ಇನ್ನೊಂದು ಬಗೆ ಎಂದರೆ ಪ್ಯಾಸಿವ್ ‌ಇಮ್ಯೂನಿಟಿ. ಇಲ್ಲಿ ವೈರಸ್‌ ಇತ್ಯಾದಿಗಳಿಂದ ನಮ್ಮನ್ನು ಸುರಕ್ಷಿತಗೊಳಿಸಲು ಹೊರಗಿನ ಸಹಾಯದಿಂದ ಆ್ಯಂಟಿಬಾಡೀಸ್‌ಒದಗಿಸುತ್ತವೆ. ಆದರೆ ನಮ್ಮ ದೇಹ ಹೊರಗಿನ ಅಂಶಗಳೊಂದಿಗೆ ಹೋರಾಡಬೇಕೆಂದರೆ ಈ ಆಂತರಿಕ ಭಾಗ ಗಟ್ಟಿ ಇರಬೇಕು. ಇದಕ್ಕಾಗಿ ನಾವು ಸದಾ ಪೌಷ್ಟಿಕ ಆಹಾರ, ಆರೋಗ್ಯಕರ ಅಭ್ಯಾಸಗಳಾದ ವ್ಯಾಯಾಮ, ಯೋಗ, ಜಾಗಿಂಗ್‌, ಜಿಮ್ ಪ್ರಾಕ್ಟೀಸ್‌ ಇತ್ಯಾದಿ ಅಳವಡಿಸಿಕೊಂಡಿರಬೇಕು. ಅದರಲ್ಲೂ ಈ ಮಳೆಗಾಲಕ್ಕೆ ಇದು ಅತ್ಯಗತ್ಯ!

ಈಟ್ರೈಟ್ಫುಡ್

ದೇಹದ ಹಸಿವು ತಗ್ಗಿಸಲು ಎಲ್ಲರೂ ಹೊತ್ತು ಹೊತ್ತಿಗೆ ಊಟತಿಂಡಿ ಮಾಡುತ್ತಿರುತ್ತಾರೆ. ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದರಿಂದ ನಮ್ಮ ದೇಹದ ಇಮ್ಯೂನಿಟಿ ಸಿಸ್ಟಂ ಬೂಸ್ಟ್ ಆಗಲಾರದು! ಹೀಗಾಗಿ ಸೂಕ್ತ ಪೌಷ್ಟಿಕ ಆಹಾರ ಮಾತ್ರ ಸೇವಿಸಬೇಕು. ಆಗ ಮಾತ್ರ ದೇಹಕ್ಕೆ ಅತ್ಯಗತ್ಯವಾದ ನ್ಯೂಟ್ರಿಶನ್ನಿಗೆ ಸಂಬಂಧಿಸಿದ ಆಹಾರ ನಮ್ಮ ರಕ್ತದಲ್ಲಿ ವಿಲೀನಗೊಂಡು, ಇಂಥ ಇಮ್ಯೂನಿಟಿ ಸಿಸ್ಟಂ ಚುರುಕಾಗಲು ಸಾಧ್ಯ. ಹೀಗಾಗಿ ಈ ಕೆಳಗಿನ ಅಂಶಗಳನ್ನು ನಿಮ್ಮ ಆಹಾರದಲ್ಲಿ ಅಗತ್ಯ ಅಳವಡಿಸಿಕೊಂಡು ಈ ಮಳೆಗಾಲದಲ್ಲಿ ನಿಮ್ಮ ಇಮ್ಯೂನಿಟಿ ಹೆಚ್ಚಿಸಿಕೊಳ್ಳಿ. ಇದು ನಿಮ್ಮನ್ನು ಆರೋಗ್ಯಕರವಾಗಿರಿಸಿ, ಇಡೀ ದಿನ ಚಟುವಟಿಕೆಯಿಂದ, ಲವಲವಿಕೆ ಗಳಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ