ಪ್ರಕೃತಿ ಮಾನವರಿಗೆ ನೈಕಸರ್ಗಿಕವಾಗಿ ಒದಗಿಸಿರುವ ಕೊಡುಗೆಯೇ ಸೆಕ್ಸ್. ನಿಮ್ಮ ಪಾರ್ಟನರ್ಏನಾದರೂ ಮೂಲಕ ನಿಮಗೆ ದೊಡ್ಡ ಫೇವರ್ನೀಡುತ್ತಿರುವಂತೆ ಭಾವಿಸಿದರೆ, ಅಂಥವರಿಗೆ ಹೀಗೆ ತಿಳಿಯ ಹೇಳಿ......!

ಫಿಝಿಕಲ್ ರಿಲೇಶನ್‌ ನಿಂದ ಫಿಝಿಕಲಿ ಕನೆಕ್ಷನ್‌ ಸಿಗುತ್ತದೆ ಎನ್ನುತ್ತದೆ ಆಧುನಿಕ ಮನೋವಿಜ್ಞಾನ. ಸೆಕ್ಸ್ ಯಾವುದೇ ರಿಲೇಶನ್‌ ಶಿಪ್‌ ಗೆ ಅತ್ಯಗತ್ಯ, ಏಕೆಂದರೆ ಇದರಿಂದ ಸಂಗಾತಿಗಳು ಪರಸ್ಪರ ಅತಿ ನಿಕಟರಾಗುತ್ತಾರೆ. ಹಾಗಾಗಿ ಅನಾದಿ ಕಾಲದಿಂದಲೂ ಇದೊಂದು ಬ್ಯೂಟಿಫುಲ್ ಸಂಬಂಧವಾಗಿ ಉಳಿದುಕೊಂಡಿದೆ.

ಪ್ರಕೃತಿಯ ಕೊಡುಗೆ

ಪ್ರೀತಿ ಮತ್ತು ಅಂಕುಶ್‌ ಕಳೆದ 1 ವರ್ಷದಿಂದ ಲಿವ್ ಇನ್‌ ರಿಲೇಶನ್‌ ನಲ್ಲಿದ್ದಾರೆ. ಇಬ್ಬರಿಗೂ ಉತ್ತಮ ಕಂಪನಿಗಳಲ್ಲಿ ಕೆಲಸವಿದೆ. ತಮ್ಮ ಈ ಸಂಬಂಧದ ಕುರಿತಾಗಿ ಇಬ್ಬರೂ ಹೇಳುವುದೆಂದರೆ, ಆಕರ್ಷಣೆಗೆ ಒಳಗಾಗಿ ತಾವಿಬ್ಬರೂ ಈ ದೈಹಿಕ ಸಂಬಂಧ ಬೆಳೆಸಿದಾಗಿನಿಂದ, ಅವರಿಬ್ಬರ ನಡುವಿನ ಸಂಬಂಧ ಗಟ್ಟಿಗೊಂಡಿದೆಯಂತೆ.

ಪ್ರೀತಿ ಹೇಳುತ್ತಾಳೆ, ಇದಕ್ಕಾಗಿ ಅಂಕುಶ್‌ ಮೇಲೇನೂ ಅಧಿಕಾರ, ಜೋರು ಜಬರ್ದಸ್ತು ಮಾಡಲಿಲ್ಲ, ತಾವಾಗಿಯೇ ಇಬ್ಬರೂ ಪ್ರೀತಿಯಿಂದ ಒಪ್ಪಿ ಮುಂದುವರಿದದ್ದು ಎಂದು ತೃಪ್ತಿ ಪಡುತ್ತಾಳೆ.

ಮಾನರ ಪಾಲಿಗೆ ಸೆಕ್ಸ್ ಎಲ್ಲಕ್ಕಿಂತ ಹೆಚ್ಚಿನ ಸುಖ ನೀಡುವ ಸಾಧನ, ಪ್ರೇಮಕಾಮಗಳ ರಸಾನುಭೂತಿಯ ಪರಾಕಾಷ್ಠೆ. ಗಂಡುಹೆಣ್ಣು ಇಬ್ಬರಿಗೂ ಇದರ ಅನುಭವ, ಅಭಿಪ್ರಾಯ ಬೇರೆಯೇ ಇರುತ್ತದೆ. ಇಬ್ಬರೂ ಇದರಿಂದ ಸಮಾನ ಸುಖಿಗಳು ಎಂಬುದಂತೂ ಗ್ಯಾರಂಟಿ, ಆದರೆ ಈ ಕುರಿತಾಗಿ ಅವರ ವಿಚಾರಧಾರೆ ಭಿನ್ನ ಆಗಿರಬಹುದು. ಗಂಡಿಗೆ ಇದು ಒತ್ತಡ ನಿವಾರಿಸುವ ಸಾಧನವಾದರೆ, ಹೆಣ್ಣಿಗೆ ಇದು ಪ್ರೀತಿ ಪ್ರೇಮದ ಸುಖಾನುಭೂತಿ.

45 ವರ್ಷದ ಮನೋಜ್‌ ಹೇಳುತ್ತಾನೆ, ಹಿರಿಮಗನಾಗಿ ಮನೆಯ ಜವಾಬ್ದಾರಿ ನಿಭಾಯಿಸುತ್ತಾ, ನಿಭಾಯಿಸುತ್ತಾ ಯಾವಾಗ ತನಗೆ ಮದುವೆ ವಯಸ್ಸು ಮೀರಿಹೋಯ್ತು ಎಂದು ತಿಳಿಯಲೇ ಇಲ್ಲ. ಅಂತೂ ಆರ್ಥಿಕವಾಗಿ ತಾನು ಸದೃಢನಾದೆ ಎಂದು ಖಾತ್ರಿಯಾದಾಗ, ಇದೀಗ ಖಾಸಗಿ ಬದುಕಿನ ಬಗ್ಗೆ ವಿಚಾರ ಮೂಡಿತು. ಆತ ಹೇಳುವುದೆಂದರೆ, ತನ್ನದೇ ಆಫೀಸಿನ 35ರ ಸಿಂಗಲ್ ಸುಜಾತಾಳೊಂದಿಗೆ ಕಳೆದ 1 ವರ್ಷದಿಂದ ಲಿವ್ ಇನ್‌ ನಲ್ಲಿದ್ದಾನೆ. ``ನಾನು ಸುಜಿಯ ಪ್ರತಿ ಅವಶ್ಯಕತೆಯನ್ನೂ ಗಮನವಿಟ್ಟು ಪೂರೈಸುತ್ತೇನೆ, ಹಾಗೇ ಅವಳೂ ನನ್ನನ್ನು ನೋಡಿಕೊಳ್ಳುತ್ತಾಳೆ. ನಮ್ಮ ನಡುವೆ ಈಗ ದೈಹಿಕ ಸಂಬಂಧ ಮಾಮೂಲಿ ಆಗಿದೆ, ಅದು ನಮ್ಮಿಬ್ಬರ ಸಂಪೂರ್ಣ ಸಹಮತಿಯಿಂದ ಮಾತ್ರ. ಪರಸ್ಪರರ ಅಗತ್ಯ ಪೂರೈಸುವುದರಿಂದ ಇದು ನಮ್ಮ ಫೇವರ್‌ ಎಂದು ನಾವಿಬ್ಬರೂ ಭಾವಿಸುವುದಿಲ್ಲ. ನಾವು ಸದಾ ಪರಸ್ಪರರ ಸಾಂಗತ್ಯ ಬಯಸುತ್ತೇವೆ!''

42-26019549

ದಿನೇದಿನೇ ಹೆಚ್ಚು ಪ್ರೀತಿ ಪ್ರೇಮ

ಇಂಥ ಲಿವ್ ಇನ್‌ ನಲ್ಲಿ ಸೆಕ್ಸ್ ಇದ್ದರೆ ಅದು ಕೇವಲ ಲೈಂಗಿಕ ಸಂತೃಪ್ತಿಗೆ ಮಾತ್ರ ಸೀಮಿತ ಎಂದು ಭಾವಿಸಬಾರದು. ಬದಲಿಗೆ ಸಂಗಾತಿಯ ಜೊತೆ ಒಂದು ಸದೃಢ ಸಂಬಂಧ ಖಾಯಂ ಆಗಲು ಹಾಗೂ ಪ್ರೀತಿಪ್ರೇಮ ಹೆಚ್ಚಿಸುವ ಒಂದು ಸಾಧನವಾಗಿದೆ. ಒಂದು ರಿಸರ್ಚ್‌ ಪ್ರಕಾರ, ಇಂಥ ಲಿವ್ ‌ಇನ್‌ ನಲ್ಲಿ ಸೆಕ್ಸ್ ಇರುವುದರಿಂದ, ಈ ಜೋಡಿ ಮಧ್ಯೆ ಒಂದು ಆರೋಗ್ಯಕರ ಸಂಬಂಧ ಖಾಯಂ ಆಗುತ್ತದೆ. ಇದರಿಂದ ಈ ಸಂಬಂಧ ಮುಂದೆ ಮುರಿದು ಬೀಳುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ