ಗ್ಲೋಬಲ್ ಹೈಜೀನ್‌ ಕೌನ್ಸಿಲ್ ‌ಪ್ರಕಾರ ಕೈಗಳ ಸ್ವಚ್ಛತೆ ಮುಕ್ಕಾಲು ಭಾಗ ಭಾರತೀಯರ ಮೊದಲ ಆದ್ಯತೆಯಾಗಿಲ್ಲ. ಹೆಚ್ಚಿನ ರೋಗಾಣುಗಳು ನಮ್ಮ  ಕೈಗಳ ಮೂಲಕವೇ ಶರೀರದಲ್ಲಿ ಹರಡುತ್ತವೆ. ಆದ್ದರಿಂದ ನಾವು ಕಾಯಿಲೆಗಳಿಂದ ದೂರವಾಗಿ ಹೆಲ್ದಿ ಲೈಫ್‌ನ ಮೋಜು ಪಡೆಯಲು ಕೈಗಳ ಸ್ವಚ್ಛತೆಯ ಬಗ್ಗೆ ಗಮನಿಸಬೇಕು.

ಕೈಗಳನ್ನು ಯಾವಾಗ ತೊಳೆಯಬೇಕು?

ಅಡುಗೆ ತಯಾರಿಸು ಮೊದಲು ಹಾಗೂ ನಂತರ.

ಊಟ ಮಾಡುವ ಮೊದಲು.

ಟಾಯ್ಲೆಟ್‌ನಿಂದ ಬಂದ ನಂತರ.

ಸೀನಿದಾಗ, ಕೆಮ್ಮಿದಾಗ ಮತ್ತು ಮೂಗನ್ನು ಕೆರೆದುಕೊಂಡಾಗ.

ಕಾಂಟ್ಯಾಕ್ಟ್ ಲೆನ್ಸ್ ಧರಿಸುವ ಮೊದಲು ಹಾಗೂ ನಂತರ.

ಚಿಕ್ಕ ಮಕ್ಕಳೊಂದಿಗೆ ಆಡುವ ಮೊದಲು.

ಮಕ್ಕಳ ನ್ಯಾಪ್‌ಕಿನ್‌ ಬದಲಿಸಿದ ನಂತರ.

ಕಾಯಿಲೆ ಪೀಡಿತರನ್ನು ಭೇಟಿಯಾದ ನಂತರ.

ಗಾಯಕ್ಕೆ ಔಷಧಿ ಹಚ್ಚುವ ಮೊದಲು ಮತ್ತು ಹಚ್ಚಿದ ನಂತರ.

ತೋಟದಲ್ಲಿ ಕೆಲಸ ಮಾಡಿದ ನಂತರ.

ಸಾಕು ಪ್ರಾಣಿಗಳೊಡನೆ ಆಡಿದ ನಂತರ.

ಎಟಿಎಂ ಮೆಷಿನ್‌ನಿಂದ ಹಣ ತೆಗೆದ ನಂತರ.

ಪಬ್ಲಿಕ್‌ ಫೋಸ್‌ನಿಂದ ಮನೆಗೆ ಬಂದಾಗ.

ಕೈಗಳನ್ನು ತೊಳೆಯುವುದು ಹೇಗೆ?

ಕೈಗಳನ್ನು ನೀರಿನಿಂದ ಚೆನ್ನಾಗಿ ಒದ್ದೆ ಮಾಡಿದ ನಂತರ ಅದಕ್ಕೆ ಲಿಕ್ವಿಡ್‌ ಹ್ಯಾಂಡ್‌ ವಾಶ್‌ ಅಥವಾ ಸಾಬೂನು ಹಚ್ಚಿ 15-20 ಸೆಕೆಂಡುಗಳ ಕಾಲ ಚೆನ್ನಾಗಿ ಉಜ್ಜಿ.

ಅತ್ಯಂತ ಹೆಚ್ಚಿನ ರೋಗಾಣುಗಳು ಉಗುರುಗಳ ಒಳಗೆ ಮತ್ತು ಬೆರಳುಗಳ ಮಧ್ಯೆ ಇರುತ್ತವೆ. ಆದ್ದರಿಂದ ಉಗುರುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಉಂಗುರನ್ನು ತೆಗೆದೇ ಕೈಗಳನ್ನು ಸ್ವಚ್ಛಗೊಳಿಸಬೇಕು. ನಂತರ ಚೆನ್ನಾಗಿ ಒಣಗಿದ ನಂತರವೇ ಉಂಗುರನ್ನು ಧರಿಸಿ.

ಈ ವಿಷಯಗಳನ್ನೂ ಗಮನಿಸಿ

ಕೈಗಳನ್ನು ತೊಳೆದುಕೊಳ್ಳಲು ಎಂದೂ ಬೂದಿ ಅಥವಾ ಮಣ್ಣನ್ನು ಉಪಯೋಗಿಸಬೇಡಿ.

ಒದ್ದೆ ಬಟ್ಟೆಯಿಂದ ಎಂದೂ ನಿಮ್ಮ ಕೈಗಳನ್ನು ಒರೆಸಿಕೊಳ್ಳಬೇಡಿ.

ಇನ್ನೊಬ್ಬ ವ್ಯಕ್ತಿಯ ಟವೆಲ್‌ನ್ನು ಉಪಯೋಗಿಸದೆ ನಿಮ್ಮದೇ ಬೇರೆ ಟವೆಲ್ ‌ಇಟ್ಟುಕೊಳ್ಳಿ.

ಕರ್ಚೀಫ್‌ನ್ನು ದಿನ ಬದಲಿಸಿ.

ಕೈಗಳ ಬಗ್ಗೆ ಕಾಳಜಿ ಇರಲಿ

ಕೈಗಳನ್ನು ರೋಗಾಣು ಮುಕ್ತವಾಗಿಡಲು ಸ್ಯಾನಿಟೈಸರ್‌ ಉಪಯೋಗಿಸಿ.

ನೀರಿನಲ್ಲಿ ಹೆಚ್ಚು  ಹೊತ್ತು ಕೆಲಸ ಮಾಡಬೇಕಾದಲ್ಲಿ ಹ್ಯಾಂಡ್‌ಗ್ಲವ್ಸ್ ಉಪಯೋಗಿಸಿ.

ಕೈಗಳನ್ನು ತೊಳೆದ ನಂತರ 3 ನಿಮಿಷಗಳರೆಗೆ ಮಾಯಿಶ್ಚರೈಸರ್‌ ಹಚ್ಚಿ ಕೈಗಳನ್ನು ಮಸಾಜ್‌ ಮಾಡಿ.

ನಿಮ್ಮ ಬಳಿ ಸದಾ ಟಿಶ್ಶು ಪೇಪರ್‌ ಇಟ್ಟುಕೊಳ್ಳಿ. ಕೈಗಳಲ್ಲಿ ಬೆವರು ಬಂದಾಗ ಟಿಶ್ಶು ಪೇಪರ್‌ನಿಂದ ಒರೆಸಿ ಒಣಗಿಸಿ.

ಮಕ್ಕಳಿಗೆ ಹೆಲ್ದಿ ಹ್ಯಾಬಿಟ್ಸ್ ಕಲಿಸಿ

hath-dhoye-2

ಮಕ್ಕಳ ತ್ವಚೆ ಬಹಳ ಕೋಮಲವಾಗಿರುತ್ತದೆ. ಸ್ವಚ್ಛತೆಗೆ ಗಮನಕೊಡದಿದ್ದರೆ ಮಕ್ಕಳಿಗೆ ಅನೇಕ ರೀತಿಯ ಇನ್ಛೆಕ್ಷನ್‌ಉಂಟಾಗಬಹುದು. ಅದರಿಂದ ಸ್ಕಿನ್‌ ರಾಷಸ್‌ ಮತ್ತು ಕಜ್ಜಿಯಾಗುವುದಲ್ಲದೆ, ಸಣ್ಣ ಸಣ್ಣ ಗುಳ್ಳೆಗಳೇಳುತ್ತವೆ.

ಮಕ್ಕಳಂತೂ ದೊಡ್ಡವರನ್ನು ನೋಡಿಯೇ ಕಲಿಯುತ್ತಾರೆ. ಆದ್ದರಿಂದ ನಿಮ್ಮ ಜೊತೆ ಜೊತೆಗೆ ಮಕ್ಕಳಿಗೂ ಕೈಗಳನ್ನು ತೊಳೆಯಲು ಅಭ್ಯಾಸ ಮಾಡಿಸಿ. ಅದರಿಂದ ಕಾಯಿಲೆಗಳು ಅವರ ಬಳಿ ಸುಳಿಯುವುದಿಲ್ಲ. ಊಟಕ್ಕೆ ಮೊದಲು ಮತ್ತು ನಂತರ ಮತ್ತು ಬಾಥ್ ರೂಮಿನಿಂದ ಬಂದಾಗ ಮತ್ತು ಕೊಳೆ ಪದಾರ್ಥಗಳನ್ನು ಮುಟ್ಟಿದ ನಂತರ ಏಕೆ ಕೈಗಳನ್ನು ತೊಳೆಯಬೇಕೆಂದು ಅವರಿಗೆ ತಿಳಿಸಿ ಹೇಳಿ.

– ಸುನೀತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ