ಮಳೆಗಾಲ ಬಂದಾಗ ಎಲ್ಲಾ ಕಡೆ ಹರುಷದ ವಾತಾವರಣ ಹರಡುವಂತೆ, ಜೊತೆಗೆ ಕೆಲವು ರೋಗಗಳೂ ಬರುತ್ತವೆ. ಹಲವು ಬಗೆಯ ರೋಗಗಳ ಜೊತೆ ಜೊತೆಗೆ ಕಂಗಳನ್ನು ಕಾಡುವ ರೋಗ ತುಂಬಾ ಕಷ್ಟ ಕೊಡುತ್ತದೆ. ಆದರೆ ಕಂಗಳನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳುವುದರಿಂದ ಈ ಋತುವಿನ ಆನಂದ ಅನುಭವಿಸಬಹುದು.ಈ ಕುರಿತಾಗಿ ನೇತ್ರ ತಜ್ಞರು ನೀಡಿರುವ ಸಲಹೆಗಳನ್ನು ಗಮನಿಸೋಣವೇ?

ಹೊರಗಿನಿಂದ ಮನೆಗೆ ಬಂದ ಮೇಲೆ ಮುಖ, ಕೈಕಾಲು ತೊಳೆಯಲು ಮರೆಯದಿರಿ. ಸಾಧ್ಯವಾದರೆ ತುಸು ಉಗುರು ಬೆಚ್ಚಗಿನ  ನೀರಿನಿಂದ ಸ್ನಾನ ಮಾಡಿ.

ನೀವು ಯಾವುದೇ ಕೆಲಸ ಮುಗಿಸಿದಾಗಲೂ, ಅಗತ್ಯ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ. ಕಂಗಳನ್ನು ಶುದ್ಧ ನೀರಿನಿಂದ ತೊಳೆಯಿರಿ.

ಸದಾ ಮುಖ ಮತ್ತು ಕಂಗಳನ್ನು ಒರೆಸುವುದಕ್ಕಾಗಿ ಟಿಶ್ಶು ಪೇಪರ್‌ ಅಥವಾ ಫೇಸ್‌ ಟವೆಲ್‌ ಇರಿಸಿಕೊಳ್ಳಿ. ದೇಹವನ್ನು ಶುಚಿಗೊಳಿಸುವ ಟಿಶ್ಶು ಅಥವಾ ಟವೆಲ್‌ನಿಂದ ಕಂಗಳನ್ನು ಎಂದೂ ಒರೆಸಬಾರದು, ಇಲ್ಲದ್ದಿದರೆ ಕಂಗಳಿಗೆ ಸೋಂಕು ತಗುಲುವ ಸಂಭವಿದೆ.

ಮಳೆಯಲ್ಲಿ ಅನಿವಾರ್ಯವಾಗಿ ಹೊರಗೆ ಹೊರಡಬೇಕಾದಾಗ ನಿಮ್ಮ ಕನ್ನಡಕವನ್ನು ನೀಟಾಗಿ ಒರೆಸಿಟ್ಟುಕೊಳ್ಳಿ. ನೀವು ಕಾಂಟ್ಯಾಕ್ಟ್ ಲೆನ್ಸ್ ಧರಿಸುವಿರಾದರೆ, ಮಳೆ ಹನಿ ಕಣ್ಣಿಗೆ ತಾಕದ ಹಾಗೆ ಎಚ್ಚರಿಕೆ ವಹಿಸಿ. ವೇಗವಾಗಿ ಬೀಸುವ ಗಾಳಿ ಜೊತೆ ಮಳೆಹನಿ ತಗುಲಿದರೆ ನಿಮ್ಮ ದೃಷ್ಟಿ ಮಂಜಾಗುತ್ತದೆ. ಹೀಗಾಗಿ ಒಂದು ಜೊತೆ ಕಾಂಟ್ಯಾಕ್ಟ್ ಲೆನ್ಸ್, ಲೆನ್ಸ್ ಕೇಸ್‌ ಮತ್ತು ಲೆನ್ಸ್ ಲೋಶನ್‌ನಿಮ್ಮ ಬಳಿ ಹೆಚ್ಚಿಗೆ ಇಟ್ಟುಕೊಂಡಿರಿ.

ಯಾರು ಹೆಚ್ಚಿನ ನಂಬರಿನ ಕನ್ನಡಕ ಧರಿಸುತ್ತಾರೋ ಅವರೂ ಸಹ ಒಂದು ಸೆಟ್‌ ಕನ್ನಡಕ ಹೆಚ್ಚಿಗೆ ಇರಿಸಿಕೊಂಡಿರಬೇಕು.

ಮುಖದ ಮೇಲೆ ಮಳೆಹನಿ ಬೀಳಲಿ ಎಂದು ಆಸೆ ಪಡುವವರು ನೇರವಾಗಿ ಕಂಗಳಿಗೆ ಮಳೆ ನೀರು ಬೀಳಿಸಿಕೊಳ್ಳಬಾರದು. ಅದು ವಾಯುಮಂಡಲದ ಪರಿಸರ ಮಾಲಿನ್ಯದ ಅಂಶಗಳಿಂದ ಪ್ರಭಾವಿತಗೊಂಡೇ ಬೀಳುತ್ತದೆ.  ಮಳೆ ನೀರು ಕಂಗಳ `ಟಿಯರ್‌ ಫಿಲ್ಮ್'ನ್ನು ಹಾಳು ಮಾಡುತ್ತವೆ. ಇದು ನಮ್ಮ ಕಂಗಳ ನೈಸರ್ಗಿಕ ರಕ್ಷಾಕವಚ.

ಮಕ್ಕಳಿಗೆ ಸದಾ ಮಳೆ ನೀರಿನ ರಾಡಿಯಲ್ಲಿ ಕಾಲನ್ನು ಫಟಫಟನೆ ಬಡಿದು ನೀರೆರಚುವ ಅಭ್ಯಾಸವಿರುತ್ತದೆ. ಇದು ಅಪಾಯಕಾರಿ. ಇಂಥ ರಾಡಿ ನೀರಿನ ಕಾರಣ ಬ್ಯಾಕ್ಟೀರಿಯ ಕಂಗಳನ್ನು ಪ್ರವೇಶಿಸಿ ಕಂಜಕ್ಟಿವೇಟಿಸ್‌ನಂಥ ಸೋಂಕನ್ನು ಉಂಟು ಮಾಡುತ್ತದೆ. ಮಕ್ಕಳಿಗೆ ಈ ಕುರಿತು ತಿಳಿಯಪಡಿಸಿ, ರಾಡಿ ನೀರಿನ ಬಳಿ ಹೋಗದಂತೆ ತಡೆಯಿರಿ.

ಒಂದು ವಿಧದಲ್ಲಿ ಮಳೆ ನೀರು ಶುದ್ಧವಾಗಿರುತ್ತದೆ, ಸರಿ. ಆದರೆ ಇದು ಮರ, ಕಟ್ಟಡಗಳ ಛಾವಣಿಯಿಂದ ಕೆಳಗಿಳಿಯುವ ನೀರಾದರೆ, ದೊಡ್ಡ ಸಂಖ್ಯೆಯಲ್ಲಿ ಕೀಟಾಣುಗಳಿಂದ ಕೂಡಿರುತ್ತದೆ. ಆದ್ದರಿಂದ ನೀವು ಈ ಜಾಗಗಳ ಹಾದಿಯಾಗಿ ಹೊರಟರೆ, ಅಲ್ಲಿನ ನೀರು ಕಣ್ಣಿಗೆ ತಗುಲದಂತೆ ಎಚ್ಚರವಹಿಸಿ. ಆಕಸ್ಮಿಕವಾಗಿ ಆ ನೀರು ಕಣ್ಣಿಗೆ ತಗುಲಿದರೆ ತಕ್ಷಣ ವಾಟರ್‌ ಬಾಟಲ್ ಅಥವಾ ಬೇರಾವುದೇ ಶುದ್ಧ ನೀರಿನಿಂದ ಕಂಗಳನ್ನು ತೊಳೆಯಿರಿ. ಆ ರೀತಿ ಮಾಡುವುದರಿಂದ ಸೋಂಕು ತಗುಲಿದ ನಂತರ ಮಾಡುವ ಚಿಕಿತ್ಸೆಗಿಂತ ಮೊದಲೇ ತಗುಲದಂತೆ ಕಟ್ಟೆಚ್ಚರ ವಹಿಸುವುದೇ ಒಳ್ಳೆಯದು.

ಕಂಗಳಿಗೆ ಯಾವುದೇ ಔಷಧಿ ಹಾಕುವುದಕ್ಕೆ ಮೊದಲು ಅಗತ್ಯವಾಗಿ ವೈದ್ಯರ ಸಲಹೆ ಪಡೆಯಿರಿ. ನೀವಾಗಿ ಸ್ವಯಂ ವೈದ್ಯ ಅಥವಾ ಕೆಮಿಸ್ಟ್ ಸಲಹೆಯಂತೆ ಐಡ್ರಾಪ್ಸ್ ಹಾಕಿಕೊಳ್ಳುವ ಕೆಲಸ ಮಾಡಲೇಬೇಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ