ಚಳಿಗಾಲದಲ್ಲಿ ಕೀಲುಗಳ ನೋವು ಬಹಳಷ್ಟು ತೊಂದರೆಯನ್ನುಂಟು ಮಾಡುತ್ತದೆ. ಇದು ಕೇವಲ ವಯಸ್ಸಾದವರಿಗಷ್ಟೇ ಅಲ್ಲ, ಯಾವುದೇ ವಯಸ್ಸಿನ ವ್ಯಕ್ತಿಗಾದರೂ ಸಮಸ್ಯೆಯನ್ನುಂಟು ಮಾಡಬಹುದು. ಹೆಚ್ಚುತ್ತಿರುವ ಚಳಿಯ ಜೊತೆಗೆ ಕೀಲುಗಳ ನೋವು ಕೂಡ ಹೆಚ್ಚುತ್ತದೆ. ಆ ಕಾರಣದಿಂದ ನಡೆದಾಡಲು ಕೂಡ ಹಿಂಸೆ ಎನಿಸುತ್ತದೆ. ಅಂದಹಾಗೆ ಚಳಿಗಾಲದಲ್ಲಿ ಕೀಲುಗಳ ನೋವು ಏಕೆ ಹೆಚ್ಚಾಗುತ್ತದೆ ಮತ್ತು ಅದರಿಂದ ಮುಕ್ತಿ ಕಂಡುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಡಾ. ಶಂಕರ್‌ ಭಗತ್‌ ವಿವರಿಸಿದ್ದಾರೆ :

ಕೀಲು ನೋವಿಗೆ ಕಾರಣವೇನು?

ವಯಸ್ಸು ಹೆಚ್ಚುತ್ತಾ ಹೋದಂತೆ ಮೂಳೆಗಳಲ್ಲಿನ ಕ್ಯಾಲ್ಶಿಯಂ ಹಾಗೂ ಇತರೆ ಖನಿಜ ಪದಾರ್ಥಗಳು ಕ್ಷೀಣವಾಗುತ್ತ ಹೋಗುತ್ತವೆ. ಯಾವುದೇ ಕೀಲು ಇರುವ ಭಾಗದ ಮೂಳೆಗಳು ಪರಸ್ಪರ ಸಂಪರ್ಕಕ್ಕೆ ಬರುವುದಿಲ್ಲ. ಕೀಲುಗಳ ಮಧ್ಯದಲ್ಲಿ ಕಾರ್ಟಿವೇಜ್‌ನ ಒಂದು ಪದರ ಇರುತ್ತದೆ. ವಯಸ್ಸು ಏರುತ್ತಾ ಹೋದಂತೆ ಆ ಪದರವನ್ನು ಬಳಕುವಂತೆ ಮಾಡಲು ಮತ್ತು ಅಲ್ಲಿನ ಸ್ನಿಗ್ಧತೆ ಕಾಯ್ದುಕೊಂಡು ಹೋಗುವ ಲೂಬ್ರಿಕೆಂಟ್‌ನ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಲಿಗಮೆಂಟ್ಸ್ ನ ಉದ್ದ ಹಾಗೂ ಬಳಕುವಿಕೆ ಕಡಿಮೆಯಾಗುತ್ತದೆ. ಈ ಕಾರಣದಿಂದ ಕೀಲುಗಳು ಪರಸ್ಪರ, ಘರ್ಷಣೆಗೊಳಗಾಗುತ್ತವೆ.

ಚಳಿಗಾಲದಲ್ಲಿ ಕೀಲುಗಳ ನೋವು ಏಕೆ ಹೆಚ್ಚುತ್ತದೆ ಎಂದರೆ, ಚಳಿಗಾಲದಲ್ಲಿ ದೇಹದ ತಾಪಮಾನ ಕಡಿಮೆಯಾಗುತ್ತಾ ಹೋಗುತ್ತದೆ. ದೇಹದಲ್ಲಿ ತಾಪಮಾನದ ಕೊರತೆಯ ಕಾರಣದಿಂದ ಕೀಲುಗಳ ರಕ್ತನಾಳಗಳು ಕುಗ್ಗಲಾರಂಭಿಸುತ್ತವೆ. ಆ ಕಾರಣದಿಂದ ಕೀಲುಗಳು ಹಿಡಿದುಕೊಂಡಂತೆ ಆಗುವುದರ ಜೊತೆಗೆ ನೋವು ಕೂಡ ಶುರುವಾಗುತ್ತದೆ.

ನೋವಿನಿಂದ ಪರಿಹಾರ ಹೇಗೆ?

Screen-shot-2020-01-14-at-3.39.18-PM

ವೈದ್ಯರ ಪ್ರಕಾರ, ಕೀಲುಗಳ ನೋವಿನಿಂದ ಪಾರಾಗಲು ಅರಿಶಿನ, ಮಂಗರವಳ್ಳಿ ಮತ್ತು ಮುರಂಗಾದ (ನುಗ್ಗೆ ಸೊಪ್ಪು) ಬಳಕೆ ಹೆಚ್ಚು ಉಪಯುಕ್ತ ಎಂದು ಸಾಬೀತಾಗಿದೆ. ಇದು ಕೀಲುಗಳ ನೋವಿನಿಂದ ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿದೆ. ಕೆಲವು ಮನೆ ಉಪಾಯಗಳನ್ನು ಅನುಸರಿಸುವುದರ ಮೂಲಕ ನೋವಿನಿಂದ ಮುಕ್ತಿ ಪಡೆದುಕೊಳ್ಳಬಹುದು.

ಅರಿಶಿನದ ಉಪಯೋಗ : ಸಾಮಾನ್ಯವಾಗಿ ಅರಿಶಿನವನ್ನು ಪಚನಕ್ರಿಯೆ ಸುಧಾರಣೆ ಮಾಡಲು, ಊತವನ್ನು ಕಡಿಮೆಗೊಳಿಸಲು ನೋವಿನಿಂದ ನಿರಾಳತೆ ಪಡೆದುಕೊಳ್ಳಲು ಬಳಸಿಕೊಳ್ಳಲಾಗುತ್ತದೆ. ಅರಿಶಿನದಲ್ಲಿರುವ `ಕರ್ಕ್ಯೂಮಿನ್‌' ಎಂಬ ಅಂಶ ದೀರ್ಘಾವಧಿ ನೋವಿನಿಂದ ಮುಕ್ತಿ ದೊರಕಿಸಿಕೊಳ್ಳಲು ಸಹಾಯಕವಾಗಿದೆ. ಅದರಿಂದ ಕೀಲುಗಳು ಮತ್ತು ಮಾಂಸಖಂಡಗಳಲ್ಲಿ ಫ್ಲೆಕ್ಸಿಬಿಲಿಟಿ ಬರುತ್ತದೆ. ಹಾಗಾಗಿ ಕೀಲುಗಳ ನೋವು ಕಡಿಮೆಯಾಗುತ್ತದೆ. ಅರಿಶಿನ ನೋವಿನಿಂದ ಉಂಟಾಗುವ ಊತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅದು ನೈಸರ್ಗಿಕ ಜೀವಕೋಶಗಳನ್ನು ಕೊನೆಗೊಳಿಸುವ ಫ್ರೀ ರಾಡಿಕಲ್ಸ್ ನ್ನು ನಿವಾರಿಸುವ ಕೆಲಸ ಮಾಡಿ ಕೀಲುನೋವಿನಿಂದ ಮುಕ್ತಿ ದೊರಕಿಸಿಕೊಡುತ್ತದೆ. ರಾತ್ರಿ ಮಲಗುವ ಮುನ್ನ ಹಸಿ ಅರಿಶಿನವನ್ನು ಹಾಲಿನಲ್ಲಿ ಮಿಶ್ರಣಗೊಳಿಸಿ ಕುದಿಸಿಕೊಳ್ಳಿ. ಸಾಧಾರಣ ತಂಪಾದ ಬಳಿಕ ಸೇವಿಸಿ.

ಮಂಗರವಳ್ಳಿ : ಇದೊಂದು ಆರ್ಯುವೇದ ಔಷಧಿ ಎಂದು ಹೇಳಲಾಗುತ್ತದೆ. ಇದರ ಸಸಿಯಲ್ಲಿ ಕೆಂಪು ವರ್ಣದ ಬಟಾಣಿ ಕಾಳಿನಂತಹ ಹಣ್ಣುಗಳು ಉತ್ಪತ್ತಿಯಾಗುತ್ತವೆ. ಈ ಸಸಿಯ ಬಳ್ಳಿ 6 ಮೀ.ಗಿಂತಲೂ ಉದ್ದವಾಗಿರುತ್ತದೆ.

ಈ ಸಸಿಯ ವಿಶೇಷತೆ ಏನೆಂದರೆ, ಇದು ಮೂಳೆ ಜೋಡಿಸುವುದರ ಜೊತೆಜೊತೆಗೆ ಊತ ಕಡಿಮೆಗೊಳಿಸುತ್ತದೆ. ಕೀಲುಗಳ ನೋವು ದೂರವಾಗುತ್ತದೆ, ಮೂಳೆಗಳು ಬಲವಾಗುತ್ತವೆ. ಮಂಗರವಳ್ಳಿ ಬಳ್ಳಿಯಲ್ಲಿ ಸೋಡಿಯಂ, ಪೊಟ್ಯಾಶಿಯಂ ಹಾಗೂ ಕಾರ್ಬೋನೆಟ್‌ ಹೇರಳ ಪ್ರಮಾಣದಲ್ಲಿರುತ್ತದೆ. ಇದರಲ್ಲಿರುವ ಕ್ಯಾಲ್ಶಿಯಂ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಹಲವು ಗುಣಗಳಿಂದ ತುಂಬಿತುಳುಕುವ ಈ ಬಳ್ಳಿಯನ್ನು ಸುಲಭವಾಗಿ ಬೆಳೆಯಬಹುದಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ