ತಡ ಮಾಡಿದರೆ ಲೈಂಗಿಕ ರೋಗದ ಚಿಕಿತ್ಸೆ ದುಬಾರಿಯೂ ಆಗಬಹುದು ಕಷ್ಟಕರವಾಗಿಯೂ ಪರಿಣಮಿಸಬಹುದು.

ಮದುವೆಯಾದ ಕೆಲವು ತಿಂಗಳುಗಳಲ್ಲಿ  ರೇಖಾಳ ಗುಪ್ತಾಂಗದಿಂದ ಆಗಾಗ ದ್ರವ ಪದಾರ್ಥ ಹೊರಸೂಸತೊಡಗಿತು. ಆದರೆ ಆಕೆ ಈ ಬಗ್ಗೆ ಗಮನ ಕೊಡಲಿಲ್ಲ. ಆದರೆ ಕೆಲವು ದಿನಗಳ ಬಳಿಕ ಆ ದ್ರವ ಪದಾರ್ಥದಿಂದ ದುರ್ವಾಸನೆ ಬರತೊಡಗಿತು. ಅಕ್ಕಪಕ್ಕದಲ್ಲಿ ತುರಿಕೆಯ ಅನುಭವ ಕೂಡ ಉಂಟಾಯಿತು. ಆಕೆ ತಕ್ಷಣವೇ ವೈದ್ಯರ ಬಳಿ ಹೋದಳು. ವೈದ್ಯರು ಪರೀಕ್ಷಿಸಿ ಇದು ಲೈಂಗಿಕ ರೋಗ ಎಂದು ಹೇಳಿದರಲ್ಲದೆ, ನೀವು ಸಕಾಲಕ್ಕೆ ಬಂದಿದ್ದರಿಂದ ಕಡಿಮೆ ಖರ್ಚಿನಲ್ಲಿ ಇದಕ್ಕೆ ಚಿಕಿತ್ಸೆ ಮಾಡಬಹುದು ಎಂದು ಹೇಳಿದರು.

ಸೀಮಾ ತನ್ನ ಗಂಡನೊಂದಿಗೆ ದೈಹಿಕ ಸಂಬಂಧ ಹೊಂದಿದಾಗೆಲ್ಲ ಆಕೆಗೆ ವಿಪರೀತ ನೋವಾಗುತ್ತದೆ. ಆಕೆ ಈ ಕುರಿತಂತೆ ವೈದ್ಯರ ಮುಂದೆ ಹೇಳಿಕೊಂಡಾಗ, ವೈದ್ಯರು ಆಕೆಗೆ ಲೈಂಗಿಕ ಸೋಂಕು ಉಂಟಾಗಿದೆ ಎಂದರು. ಸಕಾಲಕ್ಕೆ ಚಿಕಿತ್ಸೆ ಕೊಡಿಸಿದ್ದರಿಂದ ಆಕೆಯ ಆ ತೊಂದರೆ ನಿವಾರಣೆಯಾಯಿತು.

ಲೈಂಗಿಕ ರೋಗ ಗಂಡ ಹೆಂಡತಿಯ ಸಂಬಂಧದಲ್ಲಿ ಬಾಧಕವಾಗಿ ಪರಿಣಮಿಸುತ್ತದೆ. ಅದೇ ಕಾರಣದಿಂದ ಸಂಬಂಧ ಬೆಳೆಸಲು ಅವರಿಗೆ ಹೆದರಿಕೆಯಾಗುತ್ತದೆ. ಎಷ್ಟೋ ಸಲ ಲೈಂಗಿಕ ರೋಗದ ಕಾರಣದಿಂದ ಗುಪ್ತಾಂಗದಿಂದ ದುರ್ವಾಸನೆ ಬರುತ್ತದೆ. ಹೀಗಾಗಿ ಗಂಡ ಹೆಂಡತಿ ಲೈಂಗಿಕ ಸಂಬಂಧದ ಬಗ್ಗೆ ನಿರಾಸಕ್ತಿ ತೋರಿಸುತ್ತಾರೆ. ಇದೇ ನೆಪವೊಡ್ಡಿ ಕೆಲವು ಪುರುಷರು ಬಾಹ್ಯ ಸಂಬಂಧ ಬೆಳೆಸುತ್ತಾರೆ.

ಏನಿದು ಲೈಂಗಿಕ ರೋಗ?

ಗುಪ್ತಾಂಗದಲ್ಲಿ ಉಂಟಾಗುವ ರೋಗಗಳನ್ನು ಲೈಂಗಿಕ ರೋಗ ಎಂದು ಹೇಳಲಾಗುತ್ತದೆ. ಇದು ಒಬ್ಬ ಪುರುಷ ಮತ್ತು ಮಹಿಳೆಯ ದೈಹಿಕ ಸಂಪರ್ಕದಿಂದ ಉಂಟಾಗಬಹುದು ಅಥವಾ ಬಹಳಷ್ಟು ಜನರೊಂದಿಗೆ ಸಂಬಂಧ ಇಟ್ಟುಕೊಳ್ಳುವುದರಿಂದಲೂ ಇದು ಆಗಬಹುದು. ಲೈಂಗಿಕ ರೋಗಗ್ರಸ್ತ ತಾಯಿಗೆ ಹುಟ್ಟುವ ಮಗುವಿಗೂ ಅದು ತಗುಲಬಹುದು. ತಾಯಿಗೆ ಯಾವುದಾದರೂ ಲೈಂಗಿಕ ರೋಗವಿದ್ದರೆ, ವೈದ್ಯರ ಸಲಹೆಯ ಮೇರೆಗೆ ಶಸ್ತ್ರಚಿಕಿತ್ಸೆ ಮಾಡಿಸಿಯೇ ಹೆರಿಗೆ ಮಾಡಿಸಬೇಕಾಗುತ್ತದೆ. ಇದರಿಂದ ಮಗು ಯೋನಿಯ ಸಂಪರ್ಕಕ್ಕೆ ಬರದೆ ಲೈಂಗಿಕ ರೋಗದಿಂದ ರಕ್ಷಿಸಲ್ಪಡುತ್ತದೆ.

ಒಮ್ಮೊಮ್ಮೆ ಲೈಂಗಿಕ ರೋಗದ ಲಕ್ಷಣಗಳು ಗೋಚರಿಸುವುದೇ ಇಲ್ಲ. ಆದರೂ ಆ ಬಳಿಕ ಅದರ ಪರಿಣಾಮಗಳು ಮಾತ್ರ ಭೀಕರವಾಗಿರುತ್ತವೆ. ಹೀಗಾಗಿ ಲೈಂಗಿಕ ರೋಗದ ಲಕ್ಷಣಗಳು ಅಷ್ಟೇನೂ ಇಲ್ಲ ಎಂದು ನಿರ್ಲಕ್ಷಿಸದೆ ಅದಕ್ಕೆ ಚಿಕಿತ್ಸೆ ಕೊಡಿಸಿ.

ಲೈಂಗಿಕ ರೋಗ ಸಾಧಾರಣ ಲಕ್ಷಣಗಳನ್ನು ಹೊಂದಿದ್ದರೆ, ಅದು ತಂತಾನೇ ವಾಸಿಯಾಗುತ್ತದೆ. ಆದರೆ ಅದರ ಬ್ಯಾಕ್ಟೀರಿಯಾಗಳು ದೇಹದಲ್ಲಿ ಹಾಗೆಯೇ ಉಳಿದಿರುತ್ತವೆ. ಅವೇ ಒಮ್ಮೊಮ್ಮೆ ಜೋರಾಗಿ ದಾಳಿ ನಡೆಸಬಹುದು.

ಲೈಂಗಿಕ ರೋಗದ ಗಾಯಗಳು ಎಷ್ಟೊಂದು ಸೂಕ್ಷ್ಮವಾಗಿರುತ್ತದೆಂದರೆ, ಅವನ್ನು ಪತ್ತೆಹಚ್ಚಲು ಕೂಡ ಆಗುವುದಿಲ್ಲ. ಲೈಂಗಿಕ ರೋಗದ ಪ್ರಭಾವ 2-20 ವಾರಗಳ ಮಧ್ಯದಲ್ಲಿ ಯಾವಾಗ ಬೇಕಾದರೂ ಪ್ರತ್ಯಕ್ಷವಾಗಬಹುದು. ಇದರ ದುಷ್ಪರಿಣಾಮವೆಂಬಂತೆ ಮಹಿಳೆಯರಿಗೆ ಮುಟ್ಟಿನ ಮಧ್ಯಭಾಗದಲ್ಲಿಯೇ ಬರಬಹುದು. ಲೈಂಗಿಕ ರೋಗಗಳಲ್ಲಿ ಹಲವು ಪ್ರಕಾರಗಳಿವೆ. ಅವುಗಳ ಬಗ್ಗೆ  ಮೊದಲೇ ಗೊತ್ತಿದ್ದರೆ ಚಿಕಿತ್ಸೆ ಸುಲಭವಾಗುತ್ತದೆ.

ಹರ್ಪಿಸ್‌ : ಇದೊಂದು ಸಾಮಾನ್ಯ ಲೈಂಗಿಕ ರೋಗ. ಈ ರೋಗ ಉಂಟಾದಾಗ ಮೂತ್ರ ಮಾಡುವಾಗ ಅತಿ ಉರಿ ಉಂಟಾಗುತ್ತದೆ. ಮೂತ್ರದ ಜೊತೆಗೆ ಒಮ್ಮೊಮ್ಮೆ ಕೀವು ಕೂಡ ಬರುತ್ತದೆ. ಜ್ವರ ಕೂಡ ಬರುತ್ತದೆ. ಹರ್ಪಿಸ್‌ ಉಂಟಾದವರಿಗೆ ಬಾಯಿ ಹಾಗೂ ಯೋನಿ ಭಾಗದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಏಳುತ್ತವೆ. ಆರಂಭದಲ್ಲಿ ಅವು ತಂತಾನೇ ಗುಣವಾಗುತ್ತವೆ. ಮತ್ತೊಮ್ಮೆ ಅವು ಕಾಣಿಸಿಕೊಂಡರೆ ಚಿಕಿತ್ಸೆ ಅತ್ಯವಶ್ಯ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ