ಎಲ್ಲರಿಗೂ ತಿಳಿದ ವಿಷಯವೆಂದರೆ ಕೋವಿಡ್‌ ಮಹಾಮಾರಿ ಜೀವನದಲ್ಲಿ ಮಹಾ ಅಡ್ಡಿಯುಂಟು ಮಾಡಿದೆ ಅಂತ. ಇದರ ಕಾರಣದಿಂದ ನಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳಾಗಿವೆ, ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂದು ಹೇಗಾಗಿದೆ ಎಂದರೆ, ಕೊರೋನಾ ಕಾಟದಿಂದಾಗಿ ಜನ ಹೊರಗೆ ಎಲ್ಲೂ ಹೋಗದೆ ಮನೆಯಲ್ಲೇ ಉಳಿಯುವಂತಾಗಿದೆ, ಮಕ್ಕಳು ಹಿರಿಯರು ಎಲ್ಲರೂ! ಎಂದಿನಂತೆ ಜೀವನ ಮಾಮೂಲಿ ಸ್ಥಿತಿಗೆ ಮರಳುತ್ತಿರುವಾಗ, ನೀವು ಸುತ್ತಮುತ್ತಲಿನ ಜನರನ್ನೂ ಗಮನಿಸಿದರೆ, ಅವರು ಮೊದಲಿಗಿಂತ ದಪ್ಪಗಾಗುತ್ತಿರುವುದು ತಿಳಿಯುತ್ತದೆ. ಇದರ ಅರ್ಥ, ಲಾಕ್‌ಡೌನ್‌ನಲ್ಲಿ ಜನ ಮನೆಯಲ್ಲೇ ಬಂಧಿಗಳಾಗಿರುವುದರಿಂದ ಬೇಕಾದ ಹುರಿದ ಕರಿದ ಪದಾರ್ಥ ತಿಂದು, ವ್ಯಾಯಾಮ ಇಲ್ಲದೆ ಇದ್ದುಬಿಟ್ಟಿದ್ದಾರೆ, ಇದು ಆರೋಗ್ಯಕ್ಕೆ ಹಾನಿಕರ. ನಮ್ಮ ಇಮ್ಯುನಿಟಿ ನಮ್ಮ ಆಹಾರ ಮತ್ತು ಜೀವನಶೈಲಿಯನ್ನೇ ಅವಲಂಬಿಸಿದೆ ಎಂಬುದು ಸಹ ತಿಳಿದ ಸಂಗತಿ. ಹೀಗಾಗಿ ನಮ್ಮ ಆರೋಗ್ಯದ ಮೇಲಾಗುತ್ತಿರುವ ಹಾನಿ ಬಗ್ಗೆ ಎಚ್ಚರವಹಿಸುವ ಸಮಯ ಬಂದಿದೆ. ಅದರಲ್ಲೂ ವಿಶೇಷವಾಗಿ ಇಮ್ಯೂನ್‌ ಸಿಸ್ಟಂಗೆ ಆಗುತ್ತಿರುವ ಹಾನಿ ತಪ್ಪಿಸಲು ತಕ್ಷಣ ಜಾಗೃತವಾಗಬೇಕಾಗಿದೆ.

ಜೀವನ ಶೈಲಿಯಲ್ಲಿ ಆಗುತ್ತಿರುವ ಬದಲಾವಣೆ ಕುರಿತಂತೆ ಪ್ರಯತ್ನಪಟ್ಟು ಸುಧಾರಣೆ ಮಾಡಿಕೊಳ್ಳಬೇಕಾದುದು ಈಗ ಅತ್ಯಗತ್ಯ. ಅದರಿಂದಾಗಿ ನಮ್ಮ ಇಂದು ಮತ್ತು ನಾಳೆ ಸುರಕ್ಷಿತವಾಗಲಿದೆ.

ನಮ್ಮ ಮಕ್ಕಳು ತಮ್ಮ ಜೀವನವನ್ನು ಮನೋರಂಜಕ, ಆಟೋಟ, ಶೈಕ್ಷಣಿಕ ಚಟುವಟಿಕೆಗಳಿಂದ ಚುರುಕಾಗಿಸಿಕೊಳ್ಳಬೇಕಾದವರು ಇಂದು ಅನಿವಾರ್ಯವಾಗಿ ಕೋಣೆಗಳಲ್ಲೇ ಅಡಗಿ ತಮ್ಮನ್ನು ಬಿಝಿ ಆಗಿರಿಸುವ ಸಾಧನ ಹುಡುಕಿಕೊಳ್ಳಬೇಕಿದೆ. ವರ್ಚುವಲ್ ಸ್ಕೂಲಿಂಗ್‌ನ ಕಾರಣ ಇನ್ನಷ್ಟು ಕಂಗೆಡುವಂತಾಗಿದೆ. ಮತ್ತೊಂದು ಗಮನಿಸತಕ್ಕ ವಿಷಯವೆಂದರೆ, ಯಾವ ಮಕ್ಕಳಿಗೆ ಮಹಾಮಾರಿಯ ಸ್ಥಿತಿಗಿಂತ ಮೊದಲು ಸರಿಯಾದ ಪೋಷಣೆ ದೊರಕುತ್ತಿರಲಿಲ್ಲಿವೇ?

ಈಗ ಅವರು ಅಪೌಷ್ಟಿಕತೆಗೆ ಈಡಾಗುತ್ತಿದ್ದಾರೆ. ಯೋಚಿಸತಕ್ಕ ವಿಷಯವೆಂದರೆ, ದಿ ಲ್ಯಾನ್‌ ಸೆಟ್‌ (ಇದು ವಿಶ್ವದ ಅತಿ ಪ್ರಾಚೀನ ಹಾಗೂ ಪ್ರತಿಷ್ಠಿತ ಮೆಡಿಕಲ್ ಜನರಲ್) ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಕೋವಿಡ್‌ ಮಹಾಮಾರಿಯ ಈ ಸಂದರ್ಭದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆಯ ಸಮಸ್ಯೆ ಹೆಚ್ಚುತ್ತಿರುವುದು ಕಂಡು ಬಂದಿದೆ. ಇದರಲ್ಲಿ ಗಂಭೀರ ಸ್ವರೂಪದ ಅಪೌಷ್ಟಿಕತೆ ಹಾಗೂ ಸ್ಟಂಟಿಂಗ್‌ ಅಂದ್ರೆ ಅತಿ ದುರ್ಬಲ ಬೆಳವಣಿಗೆ ಕಂಡುಬರುತ್ತದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ತೂಕ ಹಾಗೂ ಸ್ಥೂಲತೆಯ ಸಮಸ್ಯೆಯಿಂದ ಅವರ ದೇಹದಲ್ಲಿ ಅಗತ್ಯ ಪೌಷ್ಟಿಕಾಂಶಗಳ ಕೊರತೆ ಇರುವುದು ತಿಳಿಯುತ್ತದೆ. ಹಾಗಾಗಿ ಮಹಾಮಾರಿಯ ಈ ಸಂದರ್ಭದಲ್ಲಿ ಸೀಮಿತ ಸೌಲಭ್ಯಗಳೊಂದಿಗೆ ಸ್ವಸ್ಥ ಆಹಾರದ ಸೇವನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸದಾ ಚುರುಕಾಗಿದ್ದು, ಹೆಚ್ಚು ಟೆನ್ಶನ್‌ ಬೆಳೆಸಿಕೊಳ್ಳದ ವಿಧಾನಗಳ ಕುರಿತು ಜಾಗೃತರಾಗಬೇಕು. ಲಾಕ್‌ಡೌನ್‌ ಸಂದರ್ಭದಲ್ಲಿ ಮಕ್ಕಳು ಕೇವಲ (ಅದರಲ್ಲಿ ಕೊಬ್ಬು, ಸಕ್ಕರೆ, ಉಪ್ಪು ಹೆಚ್ಚಾಗಿರುವ) ರುಚಿಗೆ ಮನಸೋತು, ಪೌಷ್ಟಿಕತೆ, ನಿರ್ಲಕ್ಷಿಸಿ ಆಹಾರ ಸೇವಿಸುತ್ತಿದ್ದರು. ಮಕ್ಕಳ ಇಂಥ ಆಹಾರಾಭ್ಯಾಸ ಗಮನಿಸಿದಾಗ ಖಚಿತವಾಗುವ ವಿಷಯ ಎಂದರೆ, ತಾಯಂದಿರು ತಮ್ಮ ಮಕ್ಕಳ ಆಸೆ ಪೂರೈಸಲು ದಿನೇದಿನೇ ಹೊಸ ಹೊಸ ಅಡುಗೆ ಮಾಡುತ್ತಿರಬೇಕು.

ಆದರೆ ಒಂದಿಷ್ಟು ಯೋಚಿಸದೆ ಕೇವಲ ರುಚಿ ಹೆಚ್ಚಿಸುವುದಕ್ಕಾಗಿ ಉಪ್ಪು, ಬೆಣ್ಣೆ ತುಪ್ಪ, ಮಸಾಲೆ ಜಾಸ್ತಿ ಹಾಕುತ್ತಾ ಪೌಷ್ಟಿಕಾಂಶಗಳನ್ನು ತಗ್ಗಿಸಿದರೆ ಅದರಿಂದ ಮಕ್ಕಳಿಗೆ ಉತ್ತಮ ಆರೋಗ್ಯ ಹೇಗೆ ಲಭಿಸುತ್ತದೆ? ಕಾರ್ಬೋಹೈಡ್ರೇಟ್ಸ್, ಕೊಬ್ಬಿನಂಶ ಹೆಚ್ಚಾಗಿ ವಿಟಮಿನ್ಲ್, ಮಿನರಲ್ಸ್ ಕಡಿಮೆ ಆಗಿಹೋದರೆ ಕಷ್ಟ. ಬಹಳ ದಿನ ಮಕ್ಕಳು ಇಂಥದ್ದನ್ನೇ ಸೇವಿಸುತ್ತಿದ್ದರೆ ಅಪೌಷ್ಟಿಕತೆಗೆ ಒಳಗಾಗುತ್ತಾರೆ ಹಾಗೂ ಅದರ ಇಮ್ಯುನಿಟಿ ಸಿಸ್ಟಂ ಬಹಳ ದುಷ್ಪ್ರಭಾವಕ್ಕೆ ಒಳಗಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ