ಶುಷ್ಕತೆ, ಟ್ಯಾನಿಂಗ್‌, ಕಪ್ಪುಗೆರೆಗಳು, ಕಲೆ ಸುಕ್ಕು, ಆ್ಯಕ್ನೆ, ಮೊಡವೆಗಳಂಥ ಸಮಸ್ಯೆಗಳ ನಿವಾರಣೆಗಾಗಿ ಏನು ತಾನೇ ಮಾಡುವುದೆಂದು ಯುವತಿಯರು ಚಿಂತೆಗೊಳಗಾಗುತ್ತಾರೆ. ಇದಕ್ಕಾಗಿ ಹಲವಾರು ವಿಧದ ಮನೆಮದ್ದು ಸಹ ಮಾಡುತ್ತಾರೆ. ಮುಂದೆ ಕ್ಲಿನಿಕ್‌ ಚಿಕಿತ್ಸೆಗಳೂ ನಡೆಯುತ್ತವೆ. ಆದರೆ ಇವೆಲ್ಲವುಗಳಿಂದಲೂ ಲಾಭವಿಲ್ಲದಾಗ ನಿರಾಶೆಗೊಳ್ಳುತ್ತಾರೆ. ಹೀಗಾದಾಗ ಇಲ್ಲಿನ ಅತ್ಯಾಧುನಿಕ ಕ್ಲಿನಿಕ್‌ ಟ್ರೀಟ್‌ಮೆಂಟ್ಸ್ ನಿಮ್ಮದಾಗಿಸಿಕೊಳ್ಳಿ :

ಕೆಮಿಕಲ್ ಪೀಲ್ಸ್ : ಇಲ್ಲಿ ಚರ್ಮದ ಹೊರ ಪದರಕ್ಕೆ ಆಗಿರುವ ಹಾನಿ ತೊಲಗಿಸಿ, ತ್ವಚೆಯ ಟೆಕ್ಸ್ ಚರ್‌ನ್ನು ಸ್ಮೂಥ್‌ಗೊಳಿಸಲು ಒಂದು ಕೆಮಿಕಲ್ ಸಲ್ಯೂಷನ್‌ ಬಳಸುತ್ತಾರೆ. ಈ ಚಿಕಿತ್ಸೆಯಲ್ಲಿನ ಒಂದು ಕೊರತೆ ಎಂದರೆ, ಈ ಪ್ರಕ್ರಿಯೆ ಕಪ್ಪು ತ್ವಚೆಯುಳ್ಳವರಿಗೆ ಪರಿಣಾಮಕಾರಿಯಲ್ಲ. ಇದರ ಜೊತೆ ಸೋಂಕು, ತ್ವಚೆಯ ರೋಗಗಳು, ಕಟ್ಸ್, ಬ್ರೋಕನ್‌ ಸ್ಕಿನ್‌, ಸನ್‌ಬರ್ನ್‌ ಅಥವಾ ಇನ್ನಿತರ ಗಂಭೀರ ತ್ವಚೆಯ ರೋಗಗ್ರಸ್ತ ಮಹಿಳೆಯರಿಗೂ ಈ ಚಿಕಿತ್ಸೆ ಹೊಂದುವುದಿಲ್ಲ. ಈ ಚಿಕಿತ್ಸೆಯನ್ನು ನುರಿತ ತಜ್ಞರಿಂದಲೇ ಮಾಡಿಸಬೇಕು.

ಮೈಕ್ರೋ ಡರ್ಮಾಬ್ರೇಶನ್‌ : ಇದರಲ್ಲಿ ಮೈಕ್ರೋ ಕ್ರಿಸ್ಟಲ್ಸ್ ಬಳಸಿ ತ್ವಚೆಯ ಹೊರ ಪದರನ್ನು ತೊಲಗಿಸಲಾಗುತ್ತದೆ. ಆಗ ಹೊಚ್ಚ ಹೊಸ ತ್ವಚೆ ಮೂಡುತ್ತದೆ. ಈ ಪ್ರಕ್ರಿಯೆಯಲ್ಲಿ ತೆಳು ಗೆರೆಗಳು, ಸುಕ್ಕು, ಬಿಸಿಲಿಗೆ ಬಾಡಿದ ತ್ವಚೆ, ಕಲೆ, ಮೊಡವೆ ಇತ್ಯಾದಿಗಳನ್ನು ನಿವಾರಿಸಬಹುದು.

ಲೇಸರ್‌ ಲೈಟ್‌ ಟ್ರೀಟ್‌ಮೆಂಟ್‌ : ಈ ಟೆಕ್ನಿಕ್‌ನಲ್ಲಿ ಲೈಟ್‌ನ ಅತಿ ಸೂಕ್ಷ್ಮ, ಕಾನ್‌ಸನ್ ಟ್ರೇಟೆಡ್‌ ಬೀಮ್ಸ್ ನ್ನು ಬಳಸಿ, ತ್ವಚೆಯ ಆಳ ತಲುಪಿ, ಚರ್ಮಕ್ಕೆ ಸಂಬಂಧಿಸಿದ ವಿಭಿನ್ನ ಸಮಸ್ಯೆಗಳನ್ನು ನಿವಾರಿಸಬಹುದು. ಇದು ಅದನ್ನು ಬುಡಸಮೇತ ಸರಿಪಡಿಸಬಲ್ಲದು. ಇತರ ಚಿಕಿತ್ಸೆಗಳ ಪರಿಣಾಮ ವಾರದ ನಂತರ ಕಂಡುಬಂದರೆ, ಇತ್ತ ಲೇಸರ್‌ ಲೈಟ್‌ಟ್ರೀಟ್‌ಮೆಂಟ್‌ನ ಪರಿಣಾಮ ತಕ್ಷಣ ಗೋಚರಿಸುತ್ತದೆ.

ಬೊಟಾಕ್ಸ್ ಇಂಜೆಕ್ಷನ್‌ : ಬೊಟಾಕ್ಸ್ ಒಂದು ಇಂಜೆಕ್ಟೆಬಲ್ ಔಷಧಿ. ಇದನ್ನು ಬೊಟುಲಿನಂ ಬ್ಯಾಕ್ಟೀರಿಯಾದಿಂದ ತಯಾರಿಸಲಾಗಿದೆ. ಇದೊಂದು ಟಾಕ್ಸಿನ್‌, ಇದರಿಂದ ಮುಖದಲ್ಲಿ ಸುಕ್ಕುಗಳನ್ನು ಪೂರ್ತಿ ತೊಲಗಿಸಬಹುದು. ಈ ಪ್ರಕ್ರಿಯೆ ತ್ವಚೆಯ ಮೇಲ್ಫಾಗದ ಹಾಗೂ ಆಳದಲ್ಲಿನ ಸುಕ್ಕುಗಳನ್ನು ದೂರಗೊಳಿಸಲು ನೆರವಾಗುತ್ತದೆ. ಇದನ್ನು ನುರಿತ ತಜ್ಞರಿಂದಲೇ ಮಾಡಿಸಬೇಕು.

ಡರ್ಮಾಬ್ರೇಶನ್‌ : ಇದರ ಬಳಕೆ ವಿಶೇಷವಾಗಿ ಮುಖದಲ್ಲಿನ ಕೆಲವು ಬಗೆಯ ಕಲೆಗಳು ಅಥವಾ ವೃದ್ಧ ತ್ವಚೆಗಾಗಿ ಎಂದೇ ರೂಪಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ತ್ವಚೆಯ ಮೇಲ್ಭಾಗದ ಪದರನ್ನು ತೊಲಗಿಸಲು ಲೇಯರ್ಡ್‌ ಬ್ರಶ್‌ ಬಳಸುತ್ತಾರೆ. ಬ್ರಶ್‌ ವೇಗವಾಗಿ ಚಲಿಸುತ್ತದೆ, ಅದರಿಂದಾಗಿ ಮೇಲ್ಪದರ ಸುಲಭವಾಗಿ ಸರಿಯುತ್ತದೆ ಹಾಗೂ ಸಪಾಟಾಗುತ್ತದೆ. ಚಿಕಿತ್ಸೆಗೊಂಡ ಭಾಗ ಸರಿಯಾಗುತ್ತಾ ಹೋದಂತೆ, ಅಲ್ಲಿ ಹೊಸ ಚರ್ಮ ವಿಕಾಸಗೊಳ್ಳುತ್ತದೆ.

ಒಟ್ಟಾರೆ ಈ ಎಲ್ಲಾ ಪ್ರಕ್ರಿಯೆಗಳಿಗೂ ತಮ್ಮದೇ ಆದ ಲಾಭಗಳಿವೆ, ಆದರೆ, ಯಶಸ್ಸಿನ ಅಧಿಕ ಸಾಧ್ಯತೆ ಹಾಗೂ ತಕ್ಷಣ ಪರಿಣಾಮಕ್ಕಾಗಿ ಲೇಸರ್‌ ಲೈಟ್‌ ಟ್ರೀಟ್‌ಮೆಂಟ್‌ ತೆಗೆದುಕೊಳ್ಳಬೇಕೆಂದು ತಜ್ಞರು ಸೂಚಿಸುತ್ತಾರೆ. ಈ ಎಲ್ಲಾ ಚಿಕಿತ್ಸೆಗಳನ್ನೂ ತಜ್ಞರ ಸಲಹಾ ನಂತರವೇ ಮಾಡತಕ್ಕದ್ದು. ಸ್ಕಿನ್‌ ಅನಾಲಿಸಿಸ್‌ ಸೆಶನ್‌ ನಂತರ ಔಷಧಿಯ ಬಳಕೆ, ಕ್ರೀಂ, ಮೆಡಿಕಲ್ ಹಿಸ್ಟರಿಯ ಉಲ್ಲೇಖ ಅಗತ್ಯ ಆಗಬೇಕು. ಉತ್ತಮ ಪರಿಣಾಮಕ್ಕಾಗಿ ಚಿಕಿತ್ಸೆಯ ನಂತರ ತ್ವಚೆಯನ್ನು ಸಾವಧಾನಪೂರ್ವಕವಾಗಿ ಸಂಭಾಳಿಸಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ