ಹಾಲಿಗೆ ಬದಲು ಮೊಸರು ಸೇವಿಸುವುದು ದೇಹಾರೋಗ್ಯಕ್ಕೆ ತುಂಬಾ ಉಪಯುಕ್ತ. ಹಾಲಿನಲ್ಲಿರುವ ಫ್ಯಾಟ್‌ ಮತ್ತು ಸ್ನಿಗ್ಧ ಪದಾರ್ಥ ವಯಸ್ಸಿನ ಒಂದು ಹಂತದ ಬಳಿಕ ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಅದರ ಬದಲಿಗೆ ಮೊಸರಿನಲ್ಲಿರುವ ಫಾಸ್ಛರಸ್‌ ಹಾಗೂ ವಿಟಮಿನ್‌ `ಡಿ' ದೇಹಕ್ಕೆ ತುಂಬಾ ಉಪಯುಕ್ತ.

ಮೊಸರಿನಲ್ಲಿ ಕ್ಯಾಲ್ಶಿಯಂನ್ನು ಆ್ಯಸಿಡ್‌ ರೂಪದಲ್ಲಿ ಸೇರಿಸಿಕೊಳ್ಳುವ ವಿಶೇಷತೆ ಇರುತ್ತದೆ. ಪ್ರತಿದಿನ 300 ಎಂ.ಎಲ್. ಮೊಸರು ಸೇವನೆ ಮಾಡುವುದರಿಂದ ಆಸ್ಟೂಪೊರೊಸಿಸ್‌, ಕ್ಯಾನ್ಸರ್‌ ಹಾಗೂ ಹೊಟ್ಟೆಗೆ ಸಂಬಂಧಪಟ್ಟ ಬೇರೆ ರೋಗಗಳಿಂದ ರಕ್ಷಣೆ ದೊರಕುತ್ತದೆ. ಮೊಸರು ದೇಹದ ಉಷ್ಣತೆ ಕಡಿಮೆ ಮಾಡಿ ತಂಪಿನ ಅನುಭವ ನೀಡುತ್ತದೆ. ಫಂಗಸ್‌ನ್ನು ನಿವಾರಿಸಲು ಕೂಡ ಮೊಸರನ್ನು ಬಳಸಲಾಗುತ್ತದೆ.

ಡಯೇಟಿಶಿಯನ್‌ ತಾರಾ ಹೇಳುವುದು ಹೀಗೆ, ``ದೇಶದ ಬೇರೆ ಬೇರೆ ಭಾಗಗಳಲ್ಲಿ ಮೊಸರನ್ನು ರಾಯ್ತಾ, ಲಸ್ಸಿ ಹಾಗೂ ಶ್ರೀಖಂಡಕ್ಕಾಗಿ ಬಳಸಲಾಗುತ್ತದೆ. ಮೊಸರನ್ನು ಬಳಸಿ ಹಲವು ವ್ಯಂಜನಗಳನ್ನು ತಯಾರಿಸಲಾಗುತ್ತದೆ. ಕೆಲವರು ಮೊಸರಿನಲ್ಲಿ ಸೈಂಧವ ಲವಣ ಹಾಗೂ ಜೀರಿಗೆ ಮಿಶ್ರಣ ಮಾಡಿಕೊಂಡು ತಿನ್ನುತ್ತಾರೆ. ಇದು ಹೊಟ್ಟೆಗೆ ಹಲವು ರೀತಿಯಲ್ಲಿ ಉಪಯುಕ್ತ. ತೂಕ ಕಡಿಮೆ ಮಾಡಿಕೊಳ್ಳಲು ಇಚ್ಛಿಸುವವರಿಗೆ ಮೊಸರು ಬಹಳ ಉಪಯುಕ್ತ ಎನಿಸುತ್ತದೆ.''

ಕಾಯಿಲೆ ಓಡಿಸುವ ಮೊಸರು

ಮೊಸರನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹ ಹಲವು ಬಗೆಯ ರೋಗಗಳಿಂದ ರಕ್ಷಣೆ ಪಡೆಯುತ್ತದೆ. ಇದರಲ್ಲಿರುವ ವಿಟಮಿನ್‌ `ಡಿ' ಕ್ಯಾಲ್ಶಿಯಂನ್ನು ಆ್ಯಸಿಡ್‌ ರೂಪದಲ್ಲಿ ಪರಿವರ್ತಿಸುತ್ತದೆ. ಯಾರು ಬಾಲ್ಯದಿಂದಲೇ ಮೊಸರು ಸೇವಿಸುವುದನ್ನು ರೂಢಿಸಿಕೊಂಡಿರುತ್ತಾರೊ ಅವರು ವೃದ್ಧಾಪ್ಯದಲ್ಲಿ ಆಸ್ಟೂಪೊರೊಸಿಸ್‌ನಂತಹ ರೋಗಗಳ ಅಪಾಯದಿಂದ ದೂರ ಇರುತ್ತಾರೆ.

ಮೊಸರಿನಲ್ಲಿ ದೇಹಕ್ಕೆ ಉಪಯೋಗ ಆಗುವಂತಹ ಉತ್ತಮ ಬ್ಯಾಕ್ಟೀರಿಯಾಗಳು ಕಂಡುಬರುತ್ತವೆ. ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳ ಕೊರತೆ ಉಂಟಾದರೆ ಹಸಿವು ಆಗದೇ ಇರುವಂತ ಹಲವು ಸಮಸ್ಯೆಗಳು ಉಂಟಾಗಬಹುದು. ಇದರ ಹೊರತಾಗಿ ರೋಗ ಅಥವಾ ಆ್ಯಂಟಿಬಯಾಟಿಕ್‌ ಥೆರಪಿಯ ಸಂದರ್ಭದಲ್ಲಿ ಆಹಾರದಲ್ಲಿರುವ ವಿಟಮಿನ್‌ ಮತ್ತು ಖನಿಜಾಂಶಗಳು ಪಚನವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಮೊಸರು ಒಂದು ಔಷಧಿಯಂತೆ ಕೆಲಸ ಮಾಡುತ್ತದೆ. ಅದರಿಂದಾಗಿ ಹೊಟ್ಟೆಯಲ್ಲಿ ಬರುವ ತೊಂದರೆಗಳು ತಂತಾನೇ ನಿವಾರಣೆಯಾಗುತ್ತವೆ.

ಇಂದಿನ ಧಾವಂತದ ಜೀವನದಲ್ಲಿ ಹೊಟ್ಟೆ ರೋಗಗಳ ತೊಂದರೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂಥವರು ತಮ್ಮ ಡಯೆಟ್‌ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೊಸರನ್ನು ಸೇರಿಸಿಕೊಂಡರೆ ಒಳ್ಳೆಯದು. ಇದರಿಂದ ಅಜೀರ್ಣದ ಸಮಸ್ಯೆ ನಿವಾರಣೆಯಾಗುತ್ತದೆ.

ಹಸಿವು ಆಗದೆ ಇರುವ ಸಮಸ್ಯೆ ಎದುರಿಸುವವರು ಮೊಸರು ಸೇವನೆಯಿಂದ ಉತ್ತಮ ಪರಿಣಾಮ ಕಂಡುಕೊಳ್ಳಬಹುದು. ಅದರ ಸೇವನೆಯಿಂದ ದೇಹಕ್ಕೆ ಒಳ್ಳೆಯ ಪೋಷಕಾಂಶ ದೊರೆತು ಚರ್ಮದ ಹೊಳಪು ಹೆಚ್ಚುತ್ತದೆ.

ಸೋಂಕಿನಿಂದ ದೂರ

ಪ್ರತಿದಿನ 300 ಎಂ.ಎಲ್.ನಷ್ಟು ಮೊಸರು ಸೇವನೆಯಿಂದ `ಕ್ಯಾಂಡಿಡಾ ಇನ್‌ಫೆಕ್ಶನ್‌' ಮುಖಾಂತರ ಬಾಯಿಯ ಒಳಭಾಗದಲ್ಲಿ ಉಂಟಾಗುವ ಹುಣ್ಣುಗಳಿಂದಲೂ ಮುಕ್ತಿ ದೊರಕುತ್ತದೆ. ಮಹಿಳೆಯರಲ್ಲಿ ಸಾಮಾನ್ಯವಾಗಿ ಈ ಸಮಸ್ಯೆ ಹೆಚ್ಚು. ಅವರು ಸಾಕಷ್ಟು ಪ್ರಮಾಣದಲ್ಲಿ ಮೊಸರಿನ ಸೇವನೆ ಮಾಡಬೇಕು.

ಬಾಯಿಯ ಹುಣ್ಣುಗಳಿಗೆ ದಿನಕ್ಕೆ 2-3 ಸಲ ಮೊಸರನ್ನು ಸವರಬೇಕು. ರಕ್ತ ಪರಿಚಲನೆಯ ವ್ಯವಸ್ಥೆಯಲ್ಲಿ ಬಿಳಿ ರಕ್ತ ಕಣಗಳಿಗೆ ಸೋಂಕನ್ನು ನಿಯಂತ್ರಿಸುವ ಅದ್ಭುತ ಶಕ್ತಿ ಇರುತ್ತದೆ. ಮೊಸರು ಸೇವನೆಯಿಂದ ಬಿಳಿ ರಕ್ತಕಣಗಳು ಬಲ ಪಡೆದುಕೊಳ್ಳುತ್ತವೆ. ಅದರಿಂದಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ