ಒಮ್ಮೊಮ್ಮೆ ಈ ಕ್ರೀಮುಗಳಲ್ಲಿನ ಕೆಮಿಕಲ್ಸ್ ಕಾರಣ ಅಲರ್ಜಿ ಸಮಸ್ಯೆ ಉಂಟಾಗಿರಬಹುದು ಅಥವಾ ಮೊದಲಿಗಿಂತಲೂ ನಿಮ್ಮ ಚರ್ಮ ಹೀನಾಯ ಸ್ಥಿತಿ ತಲುಪಿರಬಹುದು. ನನ್ನ ಲೈಫ್‌ ಸ್ಟೈಲ್‌ ಊಟ ತಿಂಡಿ ವಿಷಯದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದೇನೆ..... ಆದರೂ ಹೀಗೇಕಾಗುತ್ತಿದೆ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿರುವಿರಾ?

ಅಸಲಿಗೆ ನೀವು ಜಾಹೀರಾತಿನಲ್ಲಿ ಉತ್ಪಾದಕರು ನೀಡಿರುವ ಅತಿಯಾದ ಭರವಸೆಗೆ ಮರುಳಾಗಿ ಇಂಥ ಭಾರಿ ಕ್ರೀಂ ಕೊಂಡಿರಬಹುದು. ಇವುಗಳಲ್ಲಿ ನೈಸರ್ಗಿಕ ಘಟಕಗಳು ಬಹುತೇಕ ಇರುವುದೇ ಇಲ್ಲ! ಇದರಿಂದಾಗಿ ಈ ಫ್ಯಾಷನೆಬಲ್ ಕ್ರೀಂ ಚರ್ಮದ ಮೇಲೆ ಯಾವುದೇ ಪರಿಣಾಮ ಬೀರುವುದೇ ಇಲ್ಲ. ಹೀಗಾದಾಗ ಒಮ್ಮೆ ರೈಸ್‌ ಕ್ರೀಂ ಟ್ರೈ ಮಾಡಿ ನೋಡಿ, ಒಮ್ಮೆ ಬಳಸಿದವರು ಇದರ ಚುರುಕುತನಕ್ಕೆ ಬೆರಗಾಗಿ ಸದಾ ಬಳಸುತ್ತಿರುತ್ತೀರಿ.

ರೈಸ್‌ ಕ್ರೀಂ ರಹಸ್ಯ

ವಿಶ್ವದೆಲ್ಲೆಡೆ ಚರ್ಮಕ್ಕೆ ಸಹಜ ಕಾಂತಿ ಪಡೆಯುವುದಕ್ಕಾಗಿ ಈ ರೈಸ್‌ ಕ್ರೀಂ ಬಳಸುತ್ತಾರೆ. ಅಕ್ಕಿ ಮತ್ತು ಹಾಲಿನ ಪೋಷಕಾಂಶಗಳು ಹದನಾಗಿ ಬೆರೆತಿರುವ ಈ ಕ್ರೀಂ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಇದನ್ನು ಮುಖದಲ್ಲಿ ಎಲ್ಲೆಲ್ಲಿ ಸುಕ್ಕು, ನೆರಿಗೆ, ಕಪ್ಪು ವೃತ್ತಗಳು, ಅನ್‌ ಈವೆನ್‌ ಸ್ಕಿನ್‌ ಟೋನ್‌ ಇತ್ಯಾದಿ ಎಲ್ಲವನ್ನೂ ಕವರ್‌ ಮಾಡುವಂತೆ ನೀಟಾಗಿ ಸವರಿದರೆ ಆಯ್ತು, ಸುಲಭವಾಗಿ ಇವುಗಳೆಲ್ಲದ್ದರಿಂದ ಮುಕ್ತಿ ಪಡೆಯಬಹುದು. ಹ್ಞಾಂ, ಇದರಿಂದ ಯಾವ ಸೈಡ್‌ ಎಫೆಕ್ಟ್ಸ್ ಖಂಡಿತಾ ಇರುವುದಿಲ್ಲ.

ರೈಸ್‌ ಕ್ರೀಂ ತಯಾರಿಕೆ

ರೈಸ್‌ ಕ್ರೀಂ ತಯಾರಿಸಲು ನೀವೇನೂ ಹೆಚ್ಚಿನ ಸಾಮಗ್ರಿ ಕೊಳ್ಳಬೇಕಿಲ್ಲ. ನಿಮ್ಮ ಅಡುಗೆಮನೆಯಲ್ಲೇ ಸುಲಭವಾಗಿ ಲಭ್ಯವಿರುವ ಕೆಲವೇ ವಸ್ತು ಬಳಸಿ, ಮೈಕಾಂತಿ ಹೆಚ್ಚುವಂತೆ ಮಾಡಬಹುದು.

ರೈಸ್‌  ಕ್ರೀಂಗಾಗಿ ವಿಧಾನ : ಅರ್ಧ ಕಪ್‌ ಉತ್ತಮ ಗುಣಮಟ್ಟದ ಅಕ್ಕಿಯನ್ನು (ಬಾಸುಮತಿ ಅಕ್ಕಿಯೇ ಆಗಬೇಕೆಂದೇನಿಲ್ಲ) ಹಿಂದಿನ ರಾತ್ರಿ ಕಾದಾರಿದ ನೀರು ಹಾಲಲ್ಲಿ ನೆನೆಸಿಡಿ.

ಮಾರನೇ ಬೆಳಗ್ಗೆ ಒಂದು ಬಟ್ಟಲಲ್ಲಿ ಇದು ಗಟ್ಟಿ ಗಂಜಿ ಆಗುವಂತೆ ಬೇಯಿಸಿ ಸಿದ್ಧಪಡಿಸಿ. ತೇಲಾಂಶ ಹಿಂಗುವವರೆಗೂ ಕೈಯಾಡಿಸಿ ಕೆಳಗಿಳಿಸಿ. ಚೆನ್ನಾಗಿ ಆರಲು ಬಿಡಿ. ಆದಷ್ಟೂ ತಂಪಾಗಿಸಿ.

ತಣ್ಣಗಾದ ಮೇಲೆ ಇದನ್ನು ಮಿಕ್ಸಿಗೆ ಹಾಕಿ. ಜೊತೆ 2-2 ಚಮಚ ಕಾದಾರಿದ ಕೆನೆಹಾಲು, ಜೇನುತುಪ್ಪ, ಗುಲಾಬಿ ಜಲ, ತುಸು ಚಂದನದ ಪುಡಿ ಹಾಕಿ ಸ್ಮೂತ್‌ ಪೇಸ್ಟ್ ಮಾಡಿ.

ಅರ್ಧ ತಿರುವಿಕೊಂಡಾಗ ಕೆಲವು ಹನಿ ಆ್ಯಲೋವೇರಾ ಜೆಲ್ ‌ಸಹ ಬೆರೆಸಿ. ನಂತರ ತಿರುವಿದರೆ ಉತ್ತಮ ಕ್ರೀಂ ಟೆಕ್ಸ್ ಚರ್‌ಬರುತ್ತದೆ.

ಪೇಸ್ಟ್ ಚೆನ್ನಾಗಿ ಬ್ಲೆಂಡ್‌ ಆಗಿದೆಯಾ ಎಂದು ಖಾತ್ರಿ ಪಡಿಸಿಕೊಂಡು, ಒಂದು ಚಿಕ್ಕ ಏರ್‌ಟೈಟ್‌ ಕಂಟೇನರ್‌ಗೆ ಹಾಕಿ, 10-15 ದಿನ ಫ್ರಿಜ್‌ನಲ್ಲಿ ಇರಿಸಿಬಿಡಿ. ಕ್ರೀಂ ರೆಡಿ!

ಎಲ್ಲಾ ಚರ್ಮಕ್ಕೂ ಬೆಸ್ಟ್

ಇದನ್ನು ಆಯ್ಲಿ, ಡ್ರೈ, ನಾರ್ಮಲ್ ಎಲ್ಲಾ ಬಗೆಯ ಚರ್ಮದವರೂ ಬಳಸಬಹದು, ಕೆಲವರಿಗೆ ಕಾಂಬಿನೇಶನ್‌ ಸ್ಕಿನ್‌ ಇರುತ್ತದೆ. ಅವರಿಗೂ ಅಡ್ಡಿ ಇಲ್ಲ. ಇದನ್ನು ಹಗಲಿನಲ್ಲಿ ಹಚ್ಚಿಕೊಂಡು ನಿಮ್ಮ ಇತರ ಕೆಲಸಗಳಲ್ಲಿ ತೊಡಗಬಹುದು ಅಥವಾ ರಾತ್ರಿ ಹತ್ತಿಕೊಂಡು ಮಲಗಿ ನಿದ್ರಿಸಬಹುದು. ಮಾರನೇ ಬೆಳಗ್ಗೆ ತಣ್ಣೀರಿನಿಂದ ಮುಖ, ಕುತ್ತಿಗೆ ಕೈ ಕಾಲು ತೊಳೆಯಿರಿ. ಹೀಗಿ ಸತತ 1-2 ತಿಂಗಳು ಮಾಡುವುದರಿಂದ, ಕ್ರಮೇಣ ನಿಮ್ಮ ಮೈ ಕಾಂತಿ ಹೆಚ್ಚುತ್ತಿರುವುದನ್ನು ಕಂಡು ಸಂಭ್ರಮಿಸುವಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ