ತೈಲೀಯ ಚರ್ಮವುಳ್ಳ ಹೆಂಗಸರು ಹಲವಾರು ಸಮಸ್ಯೆ ಎದುರಿಸಬೇಕಾಗುತ್ತದೆ. ಚರ್ಮದ ಮೇಲಿನ ಅಧಿಕ ತೈಲಾಂಶ ಮುಖವನ್ನು ಜಿಡ್ಡುಜಿಡ್ಡಾಗಿ ಮಾಡುತ್ತದೆ, ಇದರಿಂದಾಗಿ ಮುಖದ ತುಂಬಾ ಆ್ಯಕ್ನೆ ಮೊಡವೆಗಳು ತುಂಬಿಕೊಳ್ಳುತ್ತವೆ. ಆದರೆ ಈ ಬಗ್ಗೆ ಭಯ ಬೇಡ. ಇಂಥ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಇಲ್ಲಿದೆ ಮನೆಮದ್ದು. ಈ ರೀತಿ ಮನೆಯಲ್ಲೇ ಫೇಸ್‌ ಪ್ಯಾಕ್ ತಯಾರಿಸಿಕೊಂಡು, ಸುಲಭವಾಗಿ ಈ ಸಮಸ್ಯೆಗಳಿಂದ ದೂರಾಗಬಹುದು. ತೈಲೀಯ ಚರ್ಮದಿಂದ ಚಿಂತಿತರಾದ ಬಹುತೇಕ ಮಹಿಳೆಯರು ಬಗೆಬಗೆಯ ಕ್ರೀಂ, ಇತರ ಕಾಸ್ಮೆಟಿಕ್‌ ಟ್ರೀಟ್‌ಮೆಂಟ್ಸ್ ಪಡೆದಿದ್ದರೂ, ಸಮಸ್ಯೆ ಬಗೆಹರಿಯದಿದ್ದಾಗ, ಇಂಥ ಮನೆಮದ್ದಿನ ಫೇಸ್‌ ಪ್ಯಾಕ್‌ಗಳು ಲಾಭಕಾರಿ ಎನಿಸುತ್ತವೆ. ಈ ಕೆಳಗಿನ ವಿಭಿನ್ನ ಆರೈಕೆಗಳನ್ನು ಮನೆಯಲ್ಲೇ ಮಾಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಿರಿ :

ಬನಾನಾ, ಹನಿ, ಲೆಮನ್‌ ಫೇಸ್‌ ಪ್ಯಾಕ್‌

face-pack1

ಬಾಳೆಹಣ್ಣು ಸೇವಿಸುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭವಿದೆ. ಜೊತೆಗೆ ಇದು ಕಾಸ್ಮೆಟಿಕ್‌ ಆರೈಕೆಗೂ ಸೂಕ್ತ. ಇದು ಚರ್ಮದಲ್ಲಿನ ಹೆಚ್ಚುವರಿ ತೈಲಾಂಶ ತೆಗೆಯುವಲ್ಲಿ ಬಹಳ ನೆರವಾಗುತ್ತದೆ. ಬಾಳೆ ಜೊತೆ ಜೇನು, ನಿಂಬೆ ಬೆರೆತು ಅತ್ಯುತ್ತಮ ಕಾಸ್ಮೆಟಿಕ್ಸ್ ಗುಣಗಳು ಕೂಡುತ್ತವೆ. ಈ ಪ್ಯಾಕ್‌ ತಯಾರಿಸಲು ಹೀಗೆ ಮಾಡಿ. ಮಾಗಿದ 1-2 ಬಾಳೆಹಣ್ಣನ್ನು ಮ್ಯಾಶ್‌ ಮಾಡಿ. ಇದಕ್ಕೆ 1-2 ಚಮಚ ಜೇನು, ನಿಂಬೆ ರಸ ಬೆರೆಸಿಕೊಳ್ಳಿ. ಇದನ್ನು ನೀಟಾಗಿ ಮುಖ, ಕುತ್ತಿಗೆ, ಕುತ್ತಿಗೆ ಹಿಂಭಾಗ ಎಲ್ಲಾ ಕಡೆ ಸವರಿಕೊಳ್ಳಿ. ಇದು ಪೂರ್ತಿ ಚೆನ್ನಾಗಿ ಒಣಗುವವರೆಗೂ ಹಾಗೇ ಇರಿ. ನಂತರ ಬಿಸಿ ನೀರಿನಿಂದ ತೊಳೆಯಿರಿ.

ಪರಂಗಿ ನಿಂಬೆ ಫೇಸ್‌ ಪ್ಯಾಕ್‌

ಪರಂಗಿ ಹಣ್ಣು ಸುಲಭವಾಗಿ ಎಲ್ಲಾ ಕಡೆ ಸಿಗುತ್ತದೆ. ಆಯ್ಲಿ ಸ್ಕಿನ್‌ಗೆ ಅದು ಅತ್ಯುತ್ತಮ ಆರೈಕೆ ನೀಡುತ್ತದೆ. ಇದರ ಫೇಸ್‌ ಪ್ಯಾಕ್ ತಯಾರಿಸಲು, ಮಾಗಿದ ಹಣ್ಣನ್ನು ಚೆನ್ನಾಗಿ ಮ್ಯಾಶ್‌ ಮಾಡಿ. ಇದಕ್ಕೆ ನಿಂಬೆ ರಸ ಬೆರೆಸಿ ನೀಟಾಗಿ ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಸವರಿ 40 ನಿಮಿಷ ಹಾಗೇ ಬಿಡಿ. ನಂತರ ಬಿಸಿ ನೀರಿನಲ್ಲಿ ಮುಖ ತೊಳೆಯಿರಿ.

ಮುಲ್ತಾನಿಮಿಟ್ಟಿಗೆ ಗುಲಾಬಿ ಜಲ

ಆಯ್ಲಿ ಸ್ಕಿನ್‌ಗೆ ಮುಲ್ತಾನಿಮಿಟ್ಟಿ ನಿಜಕ್ಕೂ ಬಹಳ ಉಪಕಾರಿ. ಇದೊಂದು ಬಗೆಯ ಔಷಧೀಯ ಮಣ್ಣೇ ಸರಿ. 2 ಚಮಚ ಇದನ್ನು ತೆಗೆದುಕೊಂಡು ಜೊತೆಗೆ 1-2 ಚಮಚ ಗುಲಾಬಿಜಲ ಬೆರೆಸಿಕೊಳ್ಳಿ. ಆ ಪೇಸ್ಟ್ ನ್ನು ನೀಟಾಗಿ ಮುಖಕ್ಕೆ ಸವರಿ, ಸಂಪೂರ್ಣ ಒಣಗಿದ ನಂತರ ಬಿಸಿ ನೀರಿನಿಂದ ತೊಳೆಯಿರಿ. ಚರ್ಮ ಎಷ್ಟೋ ಸಾಫ್ಟ್ ಆಗಿ ಕಾಂತಿಯುತವಾಗುತ್ತದೆ.

ಆ್ಯಲೋವೇರಾ

ಇದು ಆರೋಗ್ಯದ ದೃಷ್ಟಿಯಿಂದ ಹೊಟ್ಟೆಗೆ ಎಷ್ಟು ಉಪಯುಕ್ತವೇ, ಆಯ್ಲಿ ಸ್ಕಿನ್‌ಗೆ ಆರೈಕೆ ಮಾಡಲಿಕ್ಕೂ ಅಷ್ಟೇ ಸಹಾಯಕ. ಆಯ್ಲಿ ಸ್ಕಿನ್‌ನಿಂದ ಮುಕ್ತಿ ಪಡೆಯಲು, ನೀವು ತಾಜಾ ಆ್ಯಲೋವೇರಾ ಗಿಡದಿಂದ ಜೆಲ್ ತೆಗೆದು, ಅದಕ್ಕೆ ನಿಂಬೆ ಜೇನು ಬೆರೆಸಿ ಮುಖಕ್ಕೆ ಹಚ್ಚಿರಿ. ಈ ಫೇಸ್‌ ಪ್ಯಾಕ್‌ ಎಷ್ಟೋ ಗುಣಕಾರಿ ಆಗಿದೆ.

ಮೊಟ್ಟೆ

ಪ್ರೋಟೀನ್‌, ವಿಟಮಿನ್ಸ್, ಮಿನರಲ್ಸ್ ಗಳ ಗಣಿಯಾಗಿದೆ ಮೊಟ್ಟೆ. ಇದು ಚರ್ಮ ಆರೋಗ್ಯಕರವಾಗಿ ಮಿರ ಮಿರ ಮಿಂಚಲು ಸಹಾಯಕ. ಆಯ್ಲಿ ಸ್ಕಿನ್‌ನಿಂದ ಮುಕ್ತಿ ಪಡೆಯಲು ಈ ಫೇಸ್‌ ಪ್ಯಾಕ್‌ ಅಗತ್ಯ ಟ್ರೈ ಮಾಡಿ. ಇದನ್ನು ತಯಾರಿಸುವುದೂ ಸುಲಭ. ಮೊಟ್ಟೆ ಒಡೆದು ಅದರ ಬಿಳಿ ಭಾಗ ಬೇರ್ಪಡಿಸಿ. ಅದಕ್ಕೆ 1 ಚಮಚ ಜೇನು ಬೆರೆಸಿ ಚೆನ್ನಾಗಿ ಗೊಟಾಯಿಸಿ ಮುಖಕ್ಕೆ ಹಚ್ಚಿರಿ. ಅರ್ಧ ಗಂಟೆ ಬಿಟ್ಟು, ಬಿಸಿ ನೀರಿನಿಂದ ಮುಖ ತೊಳೆಯಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ