ನೀರೇ ಜೀವನಾಧಾರ. ಈ ಜೀವನಾಧಾರವನ್ನು ನಮಗೆ ಬಾಲ್ಯದಿಂದಲೇ ಕುಡಿಸಲಾಗುತ್ತಿದೆ. ಆದರೆ, ನೀರಿನ ಇನ್ನೊಂದು ಹೆಸರು ರೋಗಾಣು. ನೀರಿನ ಮೂಲಕ ರೋಗಾಣುಗಳು ನಮ್ಮ ಶರೀರವನ್ನು ಪ್ರವೇಶಿಸಿ ಅನೇಕ ರೀತಿಯ ರೋಗಗಳನ್ನು ಹರಡುತ್ತವೆ. ಕುಡಿಯಲು, ಅಡುಗೆ ಮಾಡಲು, ಸ್ನಾನ, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ಮನೆ ಒರೆಸಲು, ಕೃಷಿ ಮತ್ತು ಕೈಗಾರಿಕೆಗಳಲ್ಲಿ ನೀರಿನ ಬಹಳ ಅಗತ್ಯವಿದೆ. ಆದರೆ ವಿಭಿನ್ನ ಕಾರಣಗಳಿಂದಾಗಿ ಕುಡಿಯುವ ನೀರಿನ ಬಹಳಷ್ಟು ಆಕರಗಳು ದೊಡ್ಡ ಪ್ರಮಾಣದಲ್ಲಿ ದೂಷಿತಾಗಿವೆ. ದೇಶದ ಲಕ್ಷಾಂತರ ಹಳ್ಳಿಗಳಲ್ಲಿ ಕುಡಿಯಲು ಯೋಗ್ಯವಾದ ನೀರಿನ ಮೂಲವಿಲ್ಲ. ಈ ಸಮಸ್ಯೆ ಕೇವಲ ಭಾರತದಲ್ಲಷ್ಟೇ ಅಲ್ಲ, ಇತರ ಅಭಿವೃದ್ಧಿಶೀಲ ದೇಶಗಳಲ್ಲೂ ಇದೆ.
ಅಂಕಿ ಅಂಶಗಳ ಪ್ರಕಾರ ಇಡೀ ವಿಶ್ವದಲ್ಲಿ ಪ್ರತಿವರ್ಷ ಸುಮಾರು 50 ಕೋಟಿ ಜನ ನೀರಿನಿಂದ ಉಂಟಾಗುವ ಕಾಯಿಲೆಗಳಿಂದ ಸಾಯುತ್ತಿದ್ದಾರೆ. ಪ್ರತಿ ವರ್ಷ 50 ಲಕ್ಷ ಮಕ್ಕಳು 5 ವರ್ಷದೊಳಗೇ ಸಾಯುತ್ತಿದ್ದಾರೆ.
ಪ್ರಸಿದ್ಧ ಜನರಲ್ ಫಿಸಿಶಿಯನ್ ಡಾ. ಅಮಿತ್ ಕುಡಿಯಲು ಯೋಗ್ಯವಾದ ನೀರಿನ ಬಗ್ಗೆ ವರ್ಣಿಸುತ್ತಾ, ಕುಡಿಯುವ ನೀರು ರೋಗಾಣುಮುಕ್ತವಾಗಿರುವುದು ಬಹಳ ಅಗತ್ಯ. ಅದರಲ್ಲಿ ಹಾನಿಕಾರಕ ರಾಸಾಯನಿಕಗಳು ಇರಬಾರದು. ಬಣ್ಣವಿಲ್ಲದೆ, ರುಚಿಯಿಲ್ಲದೆ ಇದ್ದರೂ ಇದು ತೃಪ್ತಿದಾಯಕವಾಗಿರಬೇಕು. ಆಗಲೇ ಅದು ಕುಡಿಯಲು ಯೋಗ್ಯ ಎನ್ನುತ್ತಾರೆ.
ನೀರಿನಿಂದ ಉಂಟಾಗುವ ಕಾಯಿಲೆಗಳು
ವಿಭಿನ್ನ ರೀತಿಯ ಬ್ಯಾಕ್ಟೀರಿಯಾ, ವೈರಸ್ ಮತ್ತು ಪ್ರೋಟೋಜೋಲಾಗಳಿಂದ ವಿವಿಧ ಕಾಯಿಲೆಗಳುಂಟಾಗುತ್ತವೆ. ಉದಾ : ವೈರಸ್ ನಿಂದ ಉಂಟಾಗುವ ಕಾಯಿಲೆಗಳಲ್ಲಿ ಅತ್ಯಂತ ಅಪಾಯಕಾರಿಯಾದವು. ಅನೇಕ ರೀತಿಯ ಹೆಪಟೈಟಿಸ್ ಮತ್ತು ಪೋಲಿಯೋ ಮೈಲೈಟಿಸ್ ಬ್ಯಾಕ್ಟೀರಿಯಾದಿಂದ ಕಾಲರಾ, ಟೈಫಾಯಿಡ್, ಪ್ಯಾರಾ ಟೈಫಾಯಿಡ್, ಡೀಸೆಂಟ್ರಿ, ಡಯೇರಿಯಾ ಮತ್ತು ಪ್ರೋಟೋಜೋಲಾದಿಂದ ಎಮಿಬಿಯೋಸಿಸ್, ಜಿಯಾರ್ಡಿಯಾ, ಕೃಮಿ, ಮಲೇರಿಯಾ, ಫೈಲೇರಿಯಾನಂತಹ ಭಯಂಕರ ಕಾಯಿಲೆಗಳಿವೆ. ಇವುಗಳಲ್ಲಿ ಹೆಚ್ಚಿನ ಕಾಯಿಲೆಗಳು ಒಂದು ಹಂತ ತಲುಪಿದ ನಂತರ ಪ್ರಾಣಾಂತಿಕವಾಗುತ್ತವೆ.
ಇದಲ್ಲದೆ, ನೀರಿನ ವಿಭಿನ್ನ ರಾಸಾಯನಿಕ ಅಂಶಗಳ ಮಿಶ್ರಣದಿಂದಲೂ ಪ್ರಾಣಾಂತಿಕ ಕಾಯಿಲೆಗಳುಂಟಾಗುವ ಸಂಭವವಿರುತ್ತದೆ. ಉದಾಹರಣೆಗೆ ನೈಟ್ರೇಟ್ ನಿಂದ ಮಿಥಿಹಿಮೋಗ್ಲೋ ಬಿನಿಮಿಯಾ ಉಂಟಾಗುತ್ತದೆ. ಅದರಿಂದ ರಕ್ತದ ಹಿಮೋಗ್ಲೋಬಿನ್ ಪ್ರಭಾವಿತಾಗುತ್ತದೆ. ವಿಭಿನ್ನ ಬಗೆಯ ಚರ್ಮರೋಗ ಉಂಟು ಮಾಡುವ ಆರ್ಸೆನಿಕ್ ಮತ್ತು ಅನೀಮಿಯಾ ಉಂಟಾಗುವ ಸಂಭಾವ್ಯತೆ ಹೆಚ್ಚುತ್ತದೆ. ಕ್ರೋಮಿಯಂನಿಂದ ಕ್ಯಾನ್ಸರ್ ಮತ್ತು ಚರ್ಮರೋಗ ಉಂಟಾಗುತ್ತದೆ. ಫ್ಲೋರೈಡ್ ನಿಂದ ಹಲ್ಲುಗಳು ಮತ್ತು ಮೂಳೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಕಬ್ಬಿಣದ ಅಂಶ ಅತ್ಯಧಿಕ ಪ್ರಮಾಣದಲ್ಲಿ ಇದ್ದರೆ ಗ್ಯಾಸ್ ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ.
ನೀರಿನ ಶುದ್ಧೀಕರಣದ ವಿಧಾನ
ನೀರಿನ ಶುದ್ಧೀಕರಣ ಅತ್ಯಂತ ಅಗತ್ಯ. ಆದರೆ ನೀರನ್ನು ಶುದ್ಧಿಗೊಳಿಸಲು ಯಾವ ವಿಧಾನ ಸರಿಯಾದುದು ಎಂಬುದನ್ನು ತಿಳಿಯೋಣ ಬನ್ನಿ.
ಕ್ಲೋರಿನೇಶನ್
ಮುನಿಸಿಪಾಲಿಟಿಯ ನೀರು ಕ್ಲೋರಿನೇಟೆಡ್ ಆಗಿರುತ್ತದೆ. ಈ ಪ್ರಕ್ರಿಯೆಯನ್ನು ಕ್ಲೋರಿನೇಶನ್ ಎನ್ನುತ್ತಾರೆ. ಪ್ರಯಾಣದಲ್ಲಿ ಒಮ್ಮೊಮ್ಮೆ ನಾವು ಯಾವುದಾದರೂ ಸ್ಟೇಷನ್ ನಲ್ಲಿ ನೀರು ಕುಡಿಯಬೇಕಾಗುತ್ತದೆ. ಸ್ಟೇಷನ್ನಿನ ಕುಡಿಯುವ ನೀರಿನಲ್ಲಿ ಕ್ಲೋರಿನ್ ವಾಸನೆ ಇರುತ್ತದೆ. ಕ್ಲೋರಿನ್ ಹಾನಿಕಾರಕವಾಗಿದೆ. ಇದರಿಂದ ಲಿವರ್ ಮತ್ತು ಕಿಡ್ನಿ ಹಾಳಾಗುತ್ತವೆ. ವಿಶ್ವ ಆರೋಗ್ಯ ಸಂಸ್ಥೆ 1 ಲೀಟರ್ ನೀರಿನಲ್ಲಿ ಕೇವಲ 2 ಮಿ.ಗ್ರಾಂ ಕ್ಲೋರಿನ್ ಪ್ರಮಾಣ ಇರಬೇಕೆಂದು ಹೇಳುತ್ತದೆ. ಕ್ಲೋರಿನ್ ಸೇರಿಸಿದ ಅರ್ಧ ಗಂಟೆ ಬಿಟ್ಟ ಮೇಲೆಯೇ ನೀರು ಕುಡಿಯಲು ಯೋಗ್ಯವಾಗಿರುತ್ತದೆ, ಎಂದು ಡಾ. ಅಮಿತ್ ಹೇಳುತ್ತಾರೆ.