ಬೆಲೆಯೇರಿಕೆ, ಮಹಿಳೆಯರಿಗೆ ಸಮಯದ ಕೊರತೆ, ಶಾಪಿಂಗ್‌ ಮಾಲ್ ಕಲ್ಚರ್‌ ಇತ್ಯಾದಿ ಪ್ರೀಕಟ್‌ ವೆಜಿಟೆಬಲ್ಸ್ ನ ಉಪಯೋಗವನ್ನು ಹೆಚ್ಚಿಸಿದೆ. ಈಗ ಜನ ವಾರದಲ್ಲಿ 1 ದಿನ ಮಾರುಕಟ್ಟೆಗೆ ಹೋಗಿ ಇಡೀ 1 ವಾರಕ್ಕೆ ತರಕಾರಿಗಳನ್ನು ಕೊಂಡು ಫ್ರಿಜ್‌ನಲ್ಲಿ ಇಟ್ಟುಬಿಡುತ್ತಾರೆ. ಏಕೆಂದರೆ ಪ್ರತಿದಿನ ತರಕಾರಿ ಕೊಳ್ಳಲು ಹೆಚ್ಚು ಸಮಯ ಹಿಡಿಯುತ್ತದೆ. ಈ ತರಕಾರಿಗಳನ್ನು ಹೆಚ್ಚಾಗಿ ಥರ್ಮೋಕೋಲ್ ‌ಟ್ರೇನಲ್ಲಿ ಕತ್ತರಿಸಿ ಪ್ಲಾಸ್ಟಿಕ್‌ ಕವರ್‌ನಲ್ಲಿ ಮುಚ್ಚಿಟ್ಟು `0' ಯಿಂದ 4 ಡಿಗ್ರಿ ಸೆಲ್ಶಿಯಸ್‌ ತಾಪಮಾನದಲ್ಲಿ ಸ್ಟೋರ್ ಮಾಡಲಾಗುತ್ತದೆ.

ಮಾಲ್‌ಗಳಲ್ಲದೆ ಈಗ ಲೋಕಲ್ ತರಕಾರಿ ಮಾರಾಟಗಾರರೂ ಇದೇ ಕಾನ್ಸೆಪ್ಟ್ ಫಾಲೋ ಮಾಡುತ್ತಿದ್ದಾರೆ. ಫ್ರಿಜ್‌ ಇಲ್ಲದಿದ್ದರೂ ಅವರು ತರಕಾರಿಗಳನ್ನು ಕತ್ತರಿಸಿ ಪ್ಲಾಸ್ಟಿಕ್‌ ಕವರ್‌ನಲ್ಲಿ ಇಡುತ್ತಾರೆ. ಇವುಗಳಲ್ಲಿ ಹೆಚ್ಚಾಗಿ ಬೇಬಿಕಾರ್ನ್‌, ಮಶ್ರೂಮ್, ಬ್ರೋಕ್ಲಿ, ಸಿಪ್ಪೆ ತೆಗೆದ ಬೆಳ್ಳುಳ್ಳಿ ಇರುತ್ತವೆ. ಹೀಗಿರುವಾಗ ಈ ತರಕಾರಿಗಳು ನಮ್ಮ ಆರೋಗ್ಯಕ್ಕೆ ಹಾನಿಕರ ಅಲ್ಲವೇ ಎಂದು ತಿಳಿದುಕೊಳ್ಳುವುದು ಬಹಳ ಅಗತ್ಯ. ವರ್ಲ್ಡ್ ಹೆಲ್ತ್ ಡೇ ಸಂದರ್ಭದಲ್ಲಿ ಮಾರುಕಟ್ಟೆಯಿಂದ ಕತ್ತರಿಸಿದ ತರಕಾರಿಗಳನ್ನು ತರುವವರು ಕೇವಲ 10 ರಿಂದ 15 ನಿಮಿಷಕ್ಕಿಂತ ಹೆಚ್ಚು ಖರ್ಚು ಮಾಡದೆ ತಮ್ಮ ಆರೋಗ್ಯದೊಡನೆ ರಾಜಿ ಮಾಡಿಕೊಳ್ಳುತ್ತಾರೆಂದು ತಜ್ಞರು ಹೇಳುತ್ತಾರೆ.

ಆದರೆ ಹಾಗೇನಿಲ್ಲ. ಒಂದು ವೇಳೆ ಸರಿಯಾದ ತಾಪಮಾನದಲ್ಲಿ ತರಕಾರಿ ಮತ್ತು ಮೊಳಕೆ ಬಂದ ಕಾಳುಗಳನ್ನು ಇಟ್ಟರೆ ಅವುಗಳ ರುಚಿ ಹಾಗೂ ಗುಣ ಎರಡೂ ಸುರಕ್ಷಿತವಾಗಿರುತ್ತವೆ. ಮುಂಬೈನ ನ್ಯೂಟ್ರಿಶನಿಸ್ಟ್ ಹಾಗೂ ಡಯಾಬಿಟಾಲಜಿಸ್ಟ್ ಡಾ. ಪ್ರೀತಿ ಹೀಗೆ ಹೇಳುತ್ತಾರೆ. ಇಂದು ಹೆಚ್ಚಿನ ಮಹಿಳೆಯರು ಉದ್ಯೋಗಸ್ಥೆಯರು. ಅವರು ಸ್ಮಾರ್ಟ್‌ ಕುಕಿಂಗ್‌ ಮಾಡಬೇಕಾಗುತ್ತದೆ. ಅದರಲ್ಲಿ ಪ್ರೀಕಟ್‌ ವೆಜಿಟೆಬಲ್ಸ್ ಅವರ ಕೆಲಸವನ್ನು ಸುಲಭ ಮಾಡುತ್ತದೆ. ನೂಡಲ್ಸ್, ಫ್ರೈಡ್‌ರೈಸ್‌ ಇತ್ಯಾದಿಗಳಲ್ಲಿ ಹಲವಾರು ತರಕಾರಿಗಳನ್ನು ಉಪಯೋಗಿಸಲಾಗುತ್ತದೆ. ಆಗ ಪ್ರೀಕಟ್‌ ತರಕಾರಿಗಳು ಇದ್ದರೆ ಸುಲಭವಾಗುತ್ತದೆ.

ವಿಟಮಿನ್‌`ಸಿ' ಮತ್ತು `ಎ' ನ ಕೊರತೆ ಈ ತರಕಾರಿಗಳಲ್ಲಿ ಉಂಟಾಗುತ್ತದೆ. ಒಂದುವೇಳೆ ಅವನ್ನು ಚೆನ್ನಾಗಿ  ಪ್ಯಾಕ್‌ ಮಾಡಿ ಫ್ರಿಜ್‌ನಲ್ಲಿ ಇಟ್ಟರೆ 4 ದಿನಗಳವರೆಗೆ ವಿಶೇಷ ವ್ಯತ್ಯಾಸ ಉಂಟಾಗುವುದಿಲ್ಲ. ತರಕಾರಿ ಕತ್ತರಿಸುವಲ್ಲಿ ದಿನಕ್ಕೆ 10 ನಿಮಿಷ ಉಳಿದರೆ ವಾರಕ್ಕೆ 70 ನಿಮಿಷಗಳು ಉಳಿದಂತಾಗುತ್ತದೆ.

ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾದ ಒಂದು ಅಧ್ಯಯನದಲ್ಲಿ ಕಂಡುಬಂದಿದ್ದೇನೆಂದರೆ ಮೊದಲೇ ಕತ್ತರಿಸಿದ ತರಕಾರಿಗಳನ್ನು ಪ್ಲಾಸ್ಟಿಕ್‌ ಶೀಟ್‌ನಲ್ಲಿ ರಾಪ್‌ ಮಾಡಿ 7 ದಿನಗಳವರೆಗೆ 4 ಡಿಗ್ರಿ ಸೆಂಟಿಗ್ರೇಡ್‌ನಲ್ಲಿಟ್ಟರೆ ಹಸಿರು ಬಟಾಣಿಯಲ್ಲಿ 15%, ಹಸಿರು ಬೀನ್ಸ್ ನಲ್ಲಿ 77%, ಬ್ರೋಕ್ಲಿಯಲ್ಲಿ 0% ವಿಟಮಿನ್‌ `ಸಿ' ಕೊರತೆಯಾಗುತ್ತದೆ. ಆದರೆ ತರಕಾರಿಗಳನ್ನು ತಂದು ಸರಿಯಾದ ಪ್ರಕ್ರಿಯೆಯೊಂದಿಗೆ ಡಬ್ಬಿಗಳಲ್ಲಿ ಮುಚ್ಚಿಟ್ಟರೆ ಅಥವಾ ಕತ್ತರಿಸಿ ಪ್ರಿಸರ್ವ್ ‌ಮಾಡಿದರೆ ಅವುಗಳ ಪೌಷ್ಟಿಕಾಂಶಗಳ ಪ್ರಮಾಣದಲ್ಲಿ ಹೆಚ್ಚಿನ ಕೊರತೆ ಬರುವುದಿಲ್ಲ. ಹಣ್ಣುಗಳು, ತರಕಾರಿಗಳನ್ನು ತಂದು ಬೇಗನೇ ಉಪಯೋಗಿಸಿದರೆ ಅವುಗಳ ಗುಣಮಟ್ಟ ಚೆನ್ನಾಗಿರುತ್ತದೆ. ತರಕಾರಿಗಳನ್ನು ಕತ್ತರಿಸಿದ ನಂತರವೇ ಅವುಗಳ ಸರ್ಫೇಸ್‌ ಆಕ್ಸಿಡೇಶನ್‌ ಶುರುವಾಗುತ್ತದೆ.

ಬೇರೆ ಬೇರೆ ತರಕಾರಿಗಳಿಗೆ ಈ ಪ್ರಮಾಣ ಬೇರೆ ಬೇರೆ ಇರುತ್ತದೆ. ಉದಾಹರಣೆಗೆ ಗಡ್ಡೆಕೋಸು, ಹೂಕೋಸುಗಳಲ್ಲಿ ಕಡಿಮೆ. ಆದರೆ ಆಲೂಗಡ್ಡೆ ಮತ್ತು ಟೊಮೇಟೋಗಳಲ್ಲಿ ಹೆಚ್ಚು ವಿಟಮಿನ್‌ಗಳ ಹಾನಿಯುಂಟಾಗುತ್ತದೆ. ಕತ್ತರಿಸಿದ ನಂತರ ಬೇಗನೆ ಬಣ್ಣ ಬದಲಿಸುವ ತರಕಾರಿಯಲ್ಲಿ ಅದರ ಪೌಷ್ಟಿಕತೆ ಅಷ್ಟೇ ಬೇಗನೇ ಖಾಲಿಯಾಗುತ್ತದೆ. ಆದ್ದರಿಂದ ತರಕಾರಿಗಳನ್ನು ಮನೆಗೆ ತಂದ ನಂತರ ಬೇಗನೇ ಉಪಯೋಗಿಸಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ