ಹೊಟ್ಟೆ ನಮ್ಮ ಆರೋಗ್ಯದ ಕೇಂದ್ರ. ಒಳ್ಳೆಯ ಆರೋಗ್ಯಕ್ಕೆ ಉತ್ತಮ ಪಚನ ವ್ಯವಸ್ಥೆ ಅವಶ್ಯಕ. ಅಷ್ಟೇ ಅಲ್ಲ, ಅನಿವಾರ್ಯ ಕೂಡ. ಯಾವ ಆಹಾರವನ್ನು ನಮ್ಮ ದೇಹ ಪಚನ ಮಾಡುವುದಿಲ್ಲವೇ, ಅದು ನಮ್ಮ ದೇಹಕ್ಕೆ ಉಪಯೋಗ ಮಾಡುವುದರ ಬದಲು ಹಾನಿ ಉಂಟು ಮಾಡುವುದು.

ಹೊಟ್ಟೆಯ ತೊಂದರೆಗಳು ಇತರೆ ವ್ಯವಸ್ಥೆಯ ಮೇಲೆ ತೊಂದರೆಯನ್ನಷ್ಟೇ ಮಾಡುವುದಿಲ್ಲ. ಇತರೆ ಅಂಗಗಳ ಮೇಲೆ ಅದರ ದುಷ್ಪರಿಣಾಮ ಕೂಡ ಉಂಟು ಮಾಡುತ್ತದೆ. ಇದರಲ್ಲಿ ನಮ್ಮ ಹೃದಯ, ಮೆದುಳು, ರೋಗನಿರೋಧಕ ವ್ಯವಸ್ಥೆ, ಚರ್ಮ, ಹಾರ್ಮೋನು ವ್ಯವಸ್ಥೆ ಸೇರಿದೆ. ಹೊಟ್ಟೆಯ ತೊಂದರೆಗಳ ಕಾರಣದಿಂದಾಗಿ ಪೋಷಕಾಂಶಗಳ ಹೀರುವಿಕೆಯ ಮೇಲೆ ಪರಿಣಾಮ ಬೀರುವುದರಿಂದ ಹಿಡಿದು ಕ್ಯಾನ್ಸರ್‌ ಬೆಳವಣಿಗೆ ಆಗುವ ಸಾಧ್ಯತೆಯೂ ಹೆಚ್ಚುತ್ತದೆ.

ಹೊಟ್ಟೆಯ ಪ್ರಮುಖ ರೋಗಗಳು

ನಮ್ಮ ಪಚನ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ, ದೇಹ ತನಗೆ ಬೇಕಾದ ರೂಪದಲ್ಲಿ ಅದನ್ನು ಪರಿವರ್ತಿಸಿಕೊಂಡು  ಗ್ರಹಿಸಿಕೊಳ್ಳಲು ಆಗುವುದಿಲ್ಲ. ದುರ್ಬಲ ಪಚನ ವ್ಯವಸ್ಥೆಯಿಂದ ದೇಹದ ರೋಗ ನಿರೋಧಕ ವ್ಯವಸ್ಥೆ ಕುಂದುತ್ತದೆ. ಅದರಿಂದಾಗಿ ದೇಹದಲ್ಲಿ ವಿಷಕಾರಿ ಘಟಕಗಳ ಪ್ರಮಾಣ ಹೆಚ್ಚುತ್ತದೆ. ಹೀಗಾಗಿ ಅಂಥವರು ಮೇಲಿಂದ ಮೇಲೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ.

ಮಲಬದ್ಧತೆ

ಮಲಬದ್ಧತೆ ಅಂದರೆ ದೊಡ್ಡ ಕರುಳಿನಿಂದ ಮಲ ಹೊರಹೋಗಲು ಕಷ್ಟಕರ ಆಗುವುದು. ಈ ಸಮಸ್ಯೆ ಗಂಭೀರ ರೂಪ ಪಡೆದುಕೊಂಡು ದೊಡ್ಡ ಕರುಳಿಗೆ ಅಡೆತಡೆ ಉಂಟು ಮಾಡಿ ಜೀವನವನ್ನು ನರಕಮಯಗೊಳಿಸುತ್ತದೆ. ಮಲಬದ್ಧತೆ ಒಂದು ಲಕ್ಷಣವಾಗಿದ್ದು, ಚಟ ಅದಕ್ಕೆ ಹಲವು ಕಾರಣಗಳಿರಬಹುದು. ಅವೆಂದರೆ ಆಹಾರ ಸೇವನೆಯ ತಪ್ಪು ಪದ್ಧತಿಗಳು, ಹಾರ್ಮೋನಿಗೆ ಸಂಬಂಧಪಟ್ಟ ತೊಂದರೆಗಳು, ಕೆಲವು ಔಷಧಿಗಳ ಅಡ್ಡ ಪರಿಣಾಮಗಳು ಇತ್ಯಾದಿ.

ಗ್ಯಾಸ್ಟ್ರೊ ಎಂಟ್ರೈಟಿಸ್

ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಹಾಗೂ ವೈರಸ್‌ ನ ಸೋಂಕು ಆಗಿದೆ. ಈ ಕಾರಣದಿಂದ ಹೊಟ್ಟೆಯ ಆಂತರಿಕ ಭಾಗದಲ್ಲಿ ಉರಿ ಮತ್ತು ಊತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸೋಂಕಿಗೆ ತುತ್ತಾದ ವ್ಯಕ್ತಿಗೆ ವಾಂತಿ ಮತ್ತು ಭೇದಿ ಉಂಟಾಗುತ್ತದೆ. ಈ ಸೋಂಕು ಇಕೋಲಿ, ಎಚ್‌. ಪೈವೋರಿ, ನೊರೊ ವೈರಸ್‌, ರೋಟಾ ವೈರಸ್‌ ಮುಂತಾದ ಸೋಂಕಿನಿಂದ ಕೂಡಿದ ಆಹಾರ ಹಾಗೂ ನೀರು ಸೇವನೆಯಿಂದ ಉಂಟಾಗುತ್ತದೆ. ಇದನ್ನು `ಸ್ಟಮಕ್‌ ಪ್ಲ' ಎಂದೂ ಕರೆಯಲಾಗುತ್ತದೆ. ಸಾಮಾನ್ಯ ಆರೋಗ್ಯವಂತ ವ್ಯಕ್ತಿ ಯಾವುದೇ ಜಟಿಲ ಸಮಸ್ಯೆ ಇಲ್ಲದೆ ಇದರಿಂದ ಕೆಲವೇ ದಿನಗಳಲ್ಲಿ ಗುಣಮುಖನಾಗಬಲ್ಲ. ಆದರೆ ಮಕ್ಕಳು, ವೃದ್ಧರು ಹಾಗೂ ರೋಗ ನಿರೋಧಕ ಶಕ್ತಿ ದುರ್ಬಲವಾಗಿದ್ದರಿಗೆ ಗ್ಯಾಸ್ಟ್ರೊ ಎಂಟ್ರೈಟಿಸ್‌ ಅಪಾಯಕಾರಿಯಾಗಿ ಪರಿಣಮಿಸಬಹುದು.

ಹೊಟ್ಟೆ ಉಬ್ಬರ ಗ್ಯಾಸ್‌ ಅಥವಾ ದೊಡ್ಡ ಕರುಳಿನ ಕ್ಯಾನ್ಸರ್‌ ಇಲ್ಲಿ ಹರ್ನಿಯಾದ ಕಾರಣದಿಂದಲೂ ಹೊಟ್ಟೆ ಉಬ್ಬರ ಆಗಬಹುದು. ಹೆಚ್ಚು ಕೊಬ್ಬುಯುಕ್ತ ಆಹಾರ ಸೇವನೆಯಿಂದ ಹೊಟ್ಟೆ ಬಹಳ ತಡವಾಗಿ ಖಾಲಿಯಾಗುತ್ತದೆ. ಅದರಿಂದ ಹೊಟ್ಟೆ ಉಬ್ಬರ ಹಾಗೂ ತಳಮಳ ಉಂಟಾಗುತ್ತದೆ. ಯಾವುದೇ ಒಂದು ಅಂಗ ಅತಿಯಾಗಿ ಬೆಳವಣಿಗೆ ಆಗುವುದರಿಂದ ಹೊಟ್ಟೆ ಉಬ್ಬುತ್ತದೆ.

ಕೊವೈಟಿಸ್‌

ಕೊವೈಟಿಸ್‌ ಸಮಸ್ಯೆ ಇದ್ದಾಗ ದೊಡ್ಡ ಕರುಳಿನಲ್ಲಿ ಗುಳ್ಳೆಗಳು ಉಂಟಾಗುತ್ತವೆ. ಈ ಕಾರಣದಿಂದಾಗಿ ಏನೇ ತಿಂದರೂ ಉರಿ ಆಗುತ್ತದೆ. ಈ ಉರಿಯನ್ನು ಶಾಂತಗೊಳಿಸಲು ಮೇಲಿಂದ ಮೇಲೆ ಆಹಾರ ತಿನ್ನಬೇಕಾಗಿ ಬರುತ್ತದೆ ಇಲ್ಲಿ ನೀರು ಕುಡಿಯಬೇಕಾಗಿ ಬರುತ್ತದೆ. ಒಮ್ಮೊಮ್ಮೆ ಅಲ್ಸರ್‌ ನ ಗುಳ್ಳೆಗಳು ಒಡೆದುಹೋಗುತ್ತವೆ. ಅದರಿಂದಾಗಿ ಮಲದ ಜೊತೆಗೆ ರಕ್ತ ಹೋಗುತ್ತದೆ. ಗುಳ್ಳೆಗಳು ಒಡೆಯುವುದರಿಂದ ಒಮ್ಮೊಮ್ಮೆ ಗರಣೆಗಳು ಜಮೆಗೊಳ್ಳುತ್ತವೆ. ಅದರಿಂದ ಮಲದಲ್ಲಿ ಕೆಟ್ಟ ವಾಸನೆ ಬರುತ್ತದೆ. ಕೊವೈಟಿಸ್‌ ನ ಕಾರಣದಿಂದ ದೊಡ್ಡ ಕರುಳಿನಲ್ಲಿ ಊತ ಕಾಣಿಸಿಕೊಳ್ಳುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ