ತ್ವಚೆಯಲ್ಲಿ ಉಂಟಾಗುವ ತೊಂದರೆಗಳಲ್ಲಿ ಆ್ಯಕ್ನೆ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆ 13 ವರ್ಷದಿಂದ 30-40 ವರ್ಷ ವಯಸ್ಸಿನವರಲ್ಲಿ ಕಾಣಬಹುದು. ಇದು ತ್ವಚೆಯ ತೈಲ ಗ್ರಂಥಿಗಳ ಡಿಸಾರ್ಡರ್, ಅಂದರೆ ಈ ಗ್ರಂಥಿಗಳು ಹೆಚ್ಚು ತೈಲ ಅಥವಾ ಸೀಬಮ್ ಸ್ರವಿಸುವುದರಿಂದ ಹೀಗಾಗುತ್ತದೆ.
ಅದರಿಂದ ತ್ವಚೆಗೆ ತೊಂದರೆ ಉಂಟು ಮಾಡುವ ಬ್ಯಾಕ್ಟೀರಿಯ ತೈಲ ಗ್ರಂಥಿಗಳಲ್ಲಿ ಹೆಚ್ಚುತ್ತಿರುತ್ತವೆ. ಅದರಿಂದ ತ್ವಚೆಯ ಮೇಲೆ ದದ್ದುಗಳು ಹಾಗೂ ಬ್ಲ್ಯಾಕ್‌ಹೆಡ್ಸ್ ಉಂಟಾಗುತ್ತವೆ. ಜೊತೆಗೆ ತ್ವಚೆಯಲ್ಲಿ ಉರಿಯುಂಟಾಗುತ್ತದೆ. ಶರೀರದಲ್ಲಿ ಹಾರ್ಮೋನುಗಳ ಸಮತೋಲನ ಏರುಪೇರಾದಾಗ ಆ್ಯಕ್ನೆ ಅತ್ಯಂತ ಹೆಚ್ಚಾಗುತ್ತದೆ.
ಆ್ಯಕ್ನೆಯ ಕೆಟ್ಟ ಸ್ವರೂಪ ಅಡಲ್ಟ್
ಆ್ಯಕ್ನೆ ಅಂದರೆ ರೊಜೇಸಿಯಾ ಬಹಳ ಕಷ್ಟಕರ ಹಾಗೂ ದುಃಖದಾಯಿಯಾಗಿರುತ್ತದೆ. ಅದು 20-30ರ ವಯಸ್ಸಿನಲ್ಲಿ ಶುರುವಾಗಿ ಮೆನೋಪಾಸ್‌ವರೆಗೆ ಆಗುತ್ತಿರುತ್ತದೆ. ಅಂದಹಾಗೆ ರೊಜೇಸಿಯಾ ತ್ವಚೆಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು ಬಿಳಿ ಚರ್ಮದವರಲ್ಲಿ ಹೆಚ್ಚಾಗಿರುತ್ತದೆ. ರೊಜೇಸಿಯಾವನ್ನು ಸಾಮಾನ್ಯ ರೀತಿಯಲ್ಲಿ ನೋಡಿ ಗುರುತಿಸಲಾಗುವುದಿಲ್ಲ. ಅದನ್ನು ಸಾಮಾನ್ಯ ಆ್ಯಕ್ನೆಯೊಂದಿಗೆ ಬೇರೆ ಮಾಡಲಾಗುವುದಿಲ್ಲ. ಡಾಕ್ಟರ್‌ರಿಂದ ಮಾತ್ರ ಇದನ್ನು ಗುರುತಿಸಲಾಗುತ್ತದೆ. ಇದು ಉಂಟಾಗಲು ಕಾರಣಗಳನ್ನು ಸರಿಯಾಗಿ ಪತ್ತೆ ಮಾಡಲಾಗುವುದಿಲ್ಲ. ಮಹಿಳೆಯರಲ್ಲಿ ಇದು ಹೆಚ್ಚಾಗಿ ಪ್ಯುಬರ್ಟಿ, ಪ್ರೆಗ್ನೆನ್ಸಿ, ಮೆನೋಪಾಸ್‌ಸಮಯದಲ್ಲಿ ಮತ್ತು ಹೆಚ್ಚು ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವುದರಿಂದ ಉಂಟಾಗುತ್ತದೆ.
ರೊಜೇಸಿಯಾ ಮುಖದ ಮಧ್ಯಭಾಗವನ್ನು ಪ್ರಭಾವಿತಗೊಳಿಸುತ್ತದೆ. ಇದರಿಂದ ಮೂಗು, ಹಣೆ, ಗಲ್ಲದ ಭಾಗಗಳು ಕೆಂಪಾಗುತ್ತವೆ. ಕೆಂಪು ಮೊಡವೆಗಳ ದೊಡ್ಡ ದೊಡ್ಡ ದದ್ದುಗಳಾಗುತ್ತವೆ. ಆದರೆ ಇದರಲ್ಲಿ ಸಾಧಾರಣ ಆ್ಯಕ್ನೆಯಂತೆ ಬ್ಲ್ಯಾಕ್‌ಹೆಡ್ಸ್ ಉಂಟಾಗುವುದಿಲ್ಲ. ಸಾಧಾರಣ ಆ್ಯಕ್ನೆಗೆ ಪ್ರತಿಯಾಗಿ ರೊಜೇಸಿಯಾದ ಪಿಂಪಲ್ ದದ್ದುಗಳಿಂದ ಕೀ ಬರುತ್ತಿರುತ್ತದೆ. ಈ ದದ್ದುಗಳು ಬಹಳ ಬೇಗನೇ ದೊಡ್ಡದಾಗುತ್ತವೆ. ಮುಖವಲ್ಲದೆ ಕತ್ತು, ಬೆನ್ನು, ಭುಜ ಮತ್ತು ಹೆಗಲಿನ ಮೇಲೆ ಸಾಧಾರಣ ದದ್ದುಗಳು ಉಂಟಾದರೆ ರೊಜೇಸಿಯಾ ಬರೀ ಮುಖದ ಮಧ್ಯಭಾಗದಲ್ಲಿ ಉಂಟಾಗುತ್ತದೆ. ಇದರ ದದ್ದುಗಳು ಗಾಢ ಕಲೆಯನ್ನು ಉಳಿಸುತ್ತವೆ. ಅವನ್ನು ದೂರ ಮಾಡುವುದು ಸ್ವಲ್ಪ ಕಷ್ಟ. ವಯಸ್ಕರಿಗೆ ಉಂಟಾಗುವ ಈ ಆ್ಯಕ್ನೆ ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಹೆಚ್ಚು ಬರುತ್ತದೆ. ಆದರೆ ಇದರ ಕೆಟ್ಟ ಪರಿಣಾಮ ಪುರುಷರಿಗೆ ಹೆಚ್ಚಾಗುತ್ತದೆ.
ಹೆಸರಾಂತ ಆಸ್ಪತ್ರೆಯೊಂದರ ವೈದ್ಯ ಡಾ. ಕಶ್ಯಪ್ ರೊಜೇಸಿಯಾದ ಲಕ್ಷಣಗಳು, ಚಿಕಿತ್ಸೆ ಹಾಗೂ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಹೀಗೆ ವಿವರಿಸಿದರು.
ಲಕ್ಷಣಗಳು
ಮುಖದ ಮಧ್ಯಭಾಗ ಯಾವಾಗಲೂ ಕೆಂಪಾಗಿರುವುದು. ಈ ಭಾಗದಲ್ಲಿ ಒಮ್ಮೊಮ್ಮೆ ಊತ ಬರುವುದು.
ಮೂಗು ಕೆಂಪಗೆ ಉಬ್ಬಿರುವುದು.
ಬ್ಲ್ಯಾಕ್‌ಹೆಡ್ಸ್ ಅಥವಾ ವೈಟ್‌ಹೆಡ್ಸ್ ಇಲ್ಲದೆ ಕೆಂಪು ದದ್ದುಗಳು ಅಥವಾ ಪಿಂಪಲ್ಸ್ ಬರುವುದು.
ಮುಖದ ತ್ವಚೆಯ ಮೇಲೆ ಮತ್ತು ಕಣ್ಣುಗಳಲ್ಲಿ ಉರಿಯುಂಟಾಗುವುದು.
ಸೆಲ್ಫ್ ಕೇರ್
ಸೂರ್ಯನ ತೀಕ್ಷ್ಣ ಕಿರಣಗಳಿಂದ ದೂರವಿರಿ ಹಾಗೂ ನಾನ್ ಆಯಿಲ್ ಬೇಸ್ಡ್ ಸನ್‌ಸ್ಕ್ರೀನ್ ಹಚ್ಚಿ. ಸಾಧ್ಯವಾದರೆ ಡಾಕ್ಟರ್‌ರನ್ನು ಸನ್‌ಸ್ಕ್ರೀನ್ ಹಚ್ಚುವ ಬಗ್ಗೆ ವಿಚಾರಿಸಿ.
ಬಿಸಿ ಪಾನೀಯಗಳು, ಆಲ್ಕೋಹಾಲ್, ಮಸಾಲೆಭರಿತ ಆಹಾರ ಸೇವನೆ ಹಾಗೂ ಉಷ್ಣ ವಾತಾವರಣದಿಂದ ರಕ್ಷಿಸಿಕೊಳ್ಳಿ.
ತಂಪು ಹವೆಯಾಗಲಿ, ಉಷ್ಣವಾಗಲಿ, ಮುಖವನ್ನು ಸ್ಕಾರ್ಫ್‌ನಿಂದ ಮುಚ್ಚಿಕೊಳ್ಳಿ.
ಕೂಲ್ ಕಂಪ್ರೆಸ್, ಜೆಲ್ ಮಾಸ್ಕ್ ಮತ್ತು ಸೆಂಟ್ರಲ್ ಫೇಸ್ ಮಸಾಜ್ ಲಾಭದಾಯಕ. ಆದರೂ ಅವನ್ನು ಉಪಯೋಗಿಸುವ ಬಗ್ಗೆ ವೈದ್ಯರನ್ನು ವಿಚಾರಿಸಿ.