ಅಂಡಕೋಶದಲ್ಲಿ ಕಾಣಿಸಿಕೊಂಡ ರಂಧ್ರಗಳಿಲ್ಲದ ಚಿಕ್ಕ ಚೀಲದಂತಹ ರಚನೆಯೇ `ಸಿಸ್ಟ್' ಎಂದು ಕರೆಸಿಕೊಳ್ಳುತ್ತದೆ. ಅಂಡಕೋಶದ ಮೇಲ್ಭಾಗದಲ್ಲಿ ಅಥವಾ ಅದರ ಮೇಲೆಯೇ ಪೂರ್ತಿ ತೆಳ್ಳನೆಯ ಅಥವಾ ಅರೆ ತೆಳ್ಳನೆಯ ಪದಾರ್ಥದಿಂದ ಅದು ತುಂಬಿಕೊಂಡಿರಬಹುದು. ಬಹಳಷ್ಟು `ಓವೇರಿಯನ್‌ ಸಿಸ್ಟ್'ಗಳು ತಂತಾನೇ ಸರಿಹೋಗುತ್ತವೆ.

ದ್ರವ ಉತ್ಪನ್ನ ಮಾಡುವ ಜೀವಕೋಶಗಳು ಅಸಾಮಾನ್ಯ ರೂಪದಲ್ಲಿ ಬೆಳೆಯುತ್ತ ಹೋಗುವುದು ಹಾಗೂ ಆ ದ್ರವ ಹೊರಹಾಕಲು ಸೂಕ್ತ ದಾರಿ ದೊರಕದೇ ಇರುವುದು ಸಿಸ್ಟ್ ಆಗಲು ಮುಖ್ಯ ಕಾರಣವಾಗಿದೆ.

ಧೂಮಪಾನ ಮಾಡುವ ಮಹಿಳೆಯರಲ್ಲಿ ಧೂಮಪಾನ ಮಾಡದೇ ಇರುವ ಮಹಿಳೆಯರಿಗಿಂತ ಓವೇರಿಯನ್‌ ಸಿಸ್ಟ್ ಉಂಟಾಗುವ ಸಾಧ್ಯತೆ ಹೆಚ್ಚು.

ಅಸಾಮಾನ್ಯ ಹಾರ್ಮೋನಿಗೆ ಕಾರಣ

ಪಾಲಿಸಿಸ್ಟಿಕ್‌ ಓವರೀಸ್‌ನ ಆರಂಭಿಕ ಲಕ್ಷಣವೆಂದರೆ, ಬೇಡವಾದ ಕೂದಲುಗಳು ಕಾಣಿಸಿಕೊಳ್ಳುವುದು, ನಿರಂತರ ತೂಕ ಹೆಚ್ಚುತ್ತಾ ಹೋಗುವುದು ಹಾಗೂ ಅನಿಯಮಿತ ಋತುಚಕ್ರ. ಇನ್ನು ನಿರ್ಲಕ್ಷಿಸಬೇಡಿ. ಪಿಸಿಓಎಸ್‌ ಎಂಬ ರೋಗದ ಆರಂಭಿಕ ಲಕ್ಷಣಗಳೂ ಇದಕ್ಕೆ ಕಾರಣ ಆಗಿರಬಹುದು. ಇದರಿಂದ ಬಂಜೆತನ ಹಾಗೂ ಕ್ಯಾನ್ಸರಿನ ಅಪಾಯ ಕೂಡ ಉಂಟಾಗಬಹುದು.

ಪಿಸಿಓಎಸ್‌ನ ಸಮಸ್ಯೆಗೆ ತುತ್ತಾದ ಮಹಿಳೆಯರ ಅಂಡಕೋಶದಲ್ಲಿ ಹಾರ್ಮೋನುಗಳು ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಈ ಕಾರಣದಿಂದ ಅಂಡಾಣುಗಳು `ಸಿಸ್ಟ್' ಅಥವಾ ಗುಳ್ಳೆಯ ರೂಪ ತಳೆಯುತ್ತವೆ. ಅವೇ ಎಷ್ಟೋ ಸಲ ಕ್ಯಾನ್ಸರಿನ ರೂಪ ಪಡೆದುಕೊಳ್ಳುತ್ತವೆ.

ಅಂಡಕೋಶದಲ್ಲಿ ಈ ರೀತಿಯ ಸಿಸ್ಟ್ ಗಳು ಆಗಾಗ ಒಂದೆಡೆ ಸೇರುತ್ತಲೇ ಇರುತ್ತವೆ. ಕ್ರಮೇಣ ಇವುಗಳ ಆಕಾರ ಹೆಚ್ಚುತ್ತ ಹೋಗುತ್ತದೆ. ಇದನ್ನು ವೈದ್ಯ ಭಾಷೆಯಲ್ಲಿ `ಪಾಲಿಸಿಸ್ಟಿಕ್‌ ಓವೇರಿಯನ್‌ ಸಿಂಡ್ರೋಮ್' ಎಂದು ಕರೆಯಲಾಗುತ್ತದೆ. ಈ ಸಮಸ್ಯೆ ಎಂತಹ ಕಗ್ಗಂಟಾಗಿ ಪರಿಣಮಿಸುತ್ತದೆಯೆಂದರೆ, ಮಹಿಳೆ ಈ ಕಾರಣದಿಂದಾಗಿಯೇ ಗರ್ಭ ಧರಿಸುವುದಿಲ್ಲ.`

ಓವೇರಿ ಸಿಸ್ಟ್'ನ ಬಗೆಗಳು

ಅಂಡಕೋಶದ ಸಿಸ್ಟ್ ಗಳು ದ್ರವ ಪದಾರ್ಥಗಳಿಂದ ತುಂಬಿದ ಚೀಲಗಳಂತಿರುತ್ತವೆ. ಅವು ಅಂಡಕೋಶದ ಒಳಭಾಗದಲ್ಲಿ ಇರುತ್ತವೆ. ಅಂಡಕೋಶದಲ್ಲಿರುವ ಹೆಚ್ಚಿನ ಸಿಸ್ಟ್ ಗಳು ದೇಹಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಋತುಚಕ್ರದ ಸಂದರ್ಭಲ್ಲಿ ತಂತಾನೇ ಹೊರಟುಹೋಗುತ್ತವೆ. ಒಂದು ವೇಳೆ ನೋವು ಅಧಿಕಗೊಂಡರೆ ವೈದ್ಯರನ್ನು ಕಾಣುವುದು ಅತ್ಯವಶ್ಯಕ.

ಮುಟ್ಟಂತ್ಯದ ಬಳಿಕ ಸಿಸ್ಟ್ ನ ಸಮಸ್ಯೆ ಏನಾದರೂ ಕಂಡುಬಂದರೆ, ಸಿಸ್ಟ್ ನಲ್ಲಿ ಕ್ಯಾನ್ಸರ್‌ನ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಹೀಗಾಗಿ ಮುಟ್ಟು ನಿಂತ ಬಳಿಕ ಪೆಲ್ವಿಕ್‌ ಎಕ್ಸಾಮಿನೇಶನ್‌ ಟೆಸ್ಟ್ ಮತ್ತು ಪೆಲ್ವಿಕ್‌ ಅಲ್ಟ್ರಾಸೌಂಡ್‌ ಮಾಡಿಸಿಕೊಳ್ಳುವುದು ಅತ್ಯವಶ್ಯಕ. ಅದರಿಂದ ಸಿಸ್ಟ್ ಇರುವುದು ಗೊತ್ತಾಗುತ್ತದೆ.

ಲಕ್ಷಣಗಳು

ಸಾಮಾನ್ಯವಾಗಿ ಓವೇರಿಯನ್‌ ಸಿಸ್ಟ್ ನ ಲಕ್ಷಣಗಳು ಬಾಹ್ಯ ಭಾಗದಲ್ಲಿ ಗೋಚರಿಸುವುದಿಲ್ಲ. ಆದರೆ `ಸಿಸ್ಟ್' ಇದ್ದಲ್ಲಿ ಕೆಳಕಂಡ ಲಕ್ಷಣಗಳು ಗೋಚರಿಸಬಹುದು :

ಸ್ತನಗಳಲ್ಲಿ ನಿರಂತರ ನೋವು

ಹೊಟ್ಟೆಯಲ್ಲಿ ಊತ ಉಂಟಾಗುವಿಕೆ

ಮೂತ್ರಕೋಶದ ಮೇಲೆ ಅಥವಾ ಮಲದ್ವಾರದ ಮೇಲೆ ಒತ್ತಡ ಬಿದ್ದು ಮೇಲಿಂದ ಮೇಲೆ ಮಲವಿಸರ್ಜನೆಗೆ ಹೋಗಬೇಕೆನಿಸುತ್ತದೆ.

ಸಮಾಗಮ ಕ್ರಿಯೆ ನಡೆಸಲು ಕಷ್ಟವಾಗುತ್ತದೆ.

ಋತುಚಕ್ರ ಏರುಪೇರಾಗುತ್ತದೆ. ಅದು ಸಾಮಾನ್ಯಕ್ಕಿಂತ ಅಧಿಕ ಅಥವಾ ಆ ಬಳಿಕ ಕಡಿಮೆ ಕೂಡ ಆಗುತ್ತದೆ.

ಒಮ್ಮೊಮ್ಮೆ  ಸಿಸ್ಟ್ ಗಳು ಪರಸ್ಪರ ಘರ್ಷಣೆ ಹೊಂದುವುದರಿಂದ ಹೊಟ್ಟೆಯಲ್ಲಿ ಅತಿಯಾಗಿ ನೋವುಂಟಾಗುತ್ತದೆ. ಅದರಿಂದ ವಾಂತಿ ಬಂದಂತಾಗುತ್ತದೆ ಮತ್ತು ಜ್ವರ ಕೂಡ ಬರಬಹುದು. ಇದರಿಂದ ಒಮ್ಮೊಮ್ಮೆ ಪೆರಿಟೊನೈಟಿಸ್‌ ಆಗುವ ಸಾಧ್ಯತೆ ಕೂಡ ಇರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ