ಸರ್ಕಾರದ ರಿಯಾಯ್ತಿಯಿಂದ ಪ್ರೇರಿತರಾಗಿ ಕೆಲವರು ಮನೆಯಿಂದ ಹೊರಬೀಳುತ್ತಿದ್ದಾರೆ. ಆದಾಗ್ಯೂ ಬಹಳಷ್ಟು ಪ್ರಮಾಣದಲ್ಲಿ ಜನರು ಸೋಂಕಿನ ಭಯದಿಂದ ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಹೊರಗೆ ಹೋದವರಿಗೂ ಕೂಡ ಸೋಂಕು ಯಾವಾಗ ನನಗೆ ತಗುಲಿಬಿಡುತ್ತದೊ ಎಂಬ ಚಿಂತೆ ಕಾಡುತ್ತಿರುತ್ತದೆ.

ಸದ್ಯದ ಅಂಕಿ ಅಂಶಗಳ ಪ್ರಕಾರ, ಜಗತ್ತಿನಲ್ಲಿ 6.9 ಲಕ್ಷ ಜನರ ಸಾವಿನ ಬಳಿಕ, ಈವರೆಗೆ ಜಗತ್ತಿನಾದ್ಯಂತ 18 ಕೋಟಿಗೂ ಹೆಚ್ಚು ಜನರು ಕೊರೋನಾ ಸೋಂಕಿನಿಂದ ಬಾಧಿತರಾಗಿದ್ದಾರೆ. ಭಾರತದಲ್ಲಿ ಈವರೆಗೆ 38,000ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಮಧುಮೇಹ ರೋಗಿಗಳಿಗೆ ಹಾಗೂ ಹೈ ಬಿಪಿಯುಳ್ಳವರಿಗೆ ಇದರ ಅಪಾಯದ ಸಾಧ್ಯತೆ ಹೆಚ್ಚು. ಇದು ದುರ್ಬಲ ರೋಗನಿರೋಧಕ ಶಕ್ತಿ ಹಾಗೂ ಹೆಚ್ಚಿನ ವಯಸ್ಸಿನವರ ಜೊತೆಗೆ ನಿಕಟ ಸಂಬಂಧ ಹೊಂದಿದೆ. 60ಕ್ಕೂ ಹೆಚ್ಚಿನ ವಯಸ್ಸಿನವರಿಗೆ ಇದರ ಅಪಾಯದ ಸಾಧ್ಯತೆ 4 ಪಟ್ಟು, 70 ವರ್ಷ ಮೇಲ್ಪಟ್ಟವರಿಗೆ 9 ಪಟ್ಟು ಹಾಗೂ 90 ವರ್ಷಕ್ಕೂ ಮೇಲ್ಪಟ್ಟ ನಾಗರಿಕರಿಗೆ ಇದರ ಅಪಾಯದ ಸಾಧ್ಯತೆ 15 ಪಟ್ಟು ಹೆಚ್ಚಾಗಿರುತ್ತದೆ.

ಒಂದೆಡೆ ಈ ಸೋಂಕಿನಿಂದ ರಕ್ಷಿಸಿಕೊಳ್ಳುವ ಉಪಾಯವೆಂದರೆ, ಸಾಮಾಜಿಕ ಅಂತರ ಪಾಲನೆ, ಕೈ ತೊಳೆದುಕೊಳ್ಳುವುದು, ಸ್ಯಾನಿಟೈಸೇಶನ್‌ ಮಾಸ್ಕ್ ಹಾಗೂ ಗ್ಲೌಸ್‌ ಧರಿಸುವುದು, ವೈಯಕ್ತಿಕ ಸ್ವಚ್ಛತೆ ಅತ್ಯವಶ್ಯಕ. ಯಾರಿಗೆ ರೋಗನಿರೋಧಕ ಶಕ್ತಿ ಪ್ರಬಲವಾಗಿರುತ್ತದೊ, ಅವರು ಅನಾರೋಗ್ಯಪೀಡಿತರಾಗುವ ಸಾಧ್ಯತೆ ಕಡಿಮೆ. ಒಂದುವೇಳೆ ಅವರು ಅನಾರೋಗ್ಯಪೀಡಿತರಾದರೂ ಬಹುಬೇಗ ಗುಣಮುಖರಾಗುತ್ತಾರೆ.

ಒತ್ತಡವನ್ನು ಕಡಿಮೆಗೊಳಿಸಿಕೊಂಡು ಯೋಗ, ವ್ಯಾಯಾಮ ಹಾಗೂ ಧ್ಯಾನದ ಮುಖಾಂತರ ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ಸೂಕ್ತ ಆಹಾರವನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು.

ರೋಗನಿರೋಧಕ ಶಕ್ತಿಗಾಗಿ ಸೇವನೆ

ಹಸಿರು ಸೊಪ್ಪುಗಳು, ಪಾಲಕ್‌, ಮೆಂತ್ಯ, ಹರಿವೆ ಸೊಪ್ಪುಗಳನ್ನು ಸೇವಿಸಬೇಕು. ಅದರ ಕಬ್ಬಿಣಾಂಶ, ಆ್ಯಂಟಿ ಆಕ್ಸಿಡೆಂಟ್ಸ್, ಫಾಲಿಕ್‌ ಆ್ಯಸಿಡ್‌, ಮೆಗ್ನಿಷಿಯಂ, ಕಾಪರ್‌, ಫಾಸ್ಛೇಟ್‌ ಮುಂತಾದ ಅಂಶಗಳು ಹೇರಳ ಪ್ರಮಾಣದಲ್ಲಿರುತ್ತವೆ. ಈ ಎಲ್ಲ ಸಂಗತಿಗಳು ರೋಗನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ವ್ಯಕ್ತಿಯನ್ನು ಆರೋಗ್ಯದಿಂದಿಡಲು ಸಹಾಯಕವಾಗಿದೆ.

istock_000004415644large

ವಿಟಮಿನ್‌ `ಸಿ' : ಕಿತ್ತಳೆ, ನೆಲ್ಲಿ, ನಿಂಬೆ, ಕಿವೀ, ಬ್ರೋಕ್ಲಿ, ಪಾಲಕ್‌, ಸೀಬೆ ಮುಂತಾದ ವಿಟಮಿನ್‌ `ಸಿ'ಯ ಮುಖ್ಯ ಮೂಲಗಳಾಗಿದ್ದು, ಅದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರ ನೆರವಿನಿಂದ ದೇಹ ವಿಭಿನ್ನ ಬಗೆಯ ರೋಗಗಳೊಂದಿಗೆ ಹೋರಾಡಲು ಸಮರ್ಥವಾಗುತ್ತದೆ.

ವಿಟಮಿನ್‌ `ಎ' : ಕೆಂಪು ವರ್ಣದ ಹಣ್ಣುಗಳು ಮತ್ತು ತರಕಾರಿಗಳು ಅಂದರೆ ಪಪ್ಪಾಯಿ, ಕ್ಯಾರೆಟ್‌, ಬೀಟ್‌ರೂಟ್‌ ಮುಂತಾದವುಗಳಲ್ಲಿ ವಿಟಮಿನ್‌ `ಎ' ಹೇರಳವಾಗಿರುತ್ತದೆ. ಅವುಗಳ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಕ್ಯಾಲ್ಶಿಯಂ : ಇದು ಕೇವಲ ಮೂಳೆಗಳನ್ನಷ್ಟೇ ಗಟ್ಟಿಗೊಳಿಸುವುದಿಲ್ಲ. ದೇಹವನ್ನು ರೋಗಗಳೊಂದಿಗೆ ಹೋರಾಡಲು ಸಮರ್ಥಗೊಳಿಸುತ್ತದೆ. ಹಾಲು, ಮೊಸರು, ಪನೀರ್‌, ತುಪ್ಪ, ಮಜ್ಜಿಗೆ, ಹಸಿರು ತರಕಾರಿಗಳು, ಹಣ್ಣುಗಳಲ್ಲಿ ಕ್ಯಾಲ್ಶಿಯಂ ಸಾಕಷ್ಟು ಪ್ರಮಾಣದಲ್ಲಿರುತ್ತದೆ.

ನಾರಿನಂಶ : ಫೈಬರ್‌ ಯುಕ್ತ ಆಹಾರಗಳ ಸೇವನೆ ಪಚನ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ನಾರಿನಂಶವುಳ್ಳ ತರಕಾರಿಗಳು, ಬ್ರೌನ್‌ ಬ್ರೆಡ್‌, ಗೋದಿಹಿಟ್ಟು, ಒಣಹಣ್ಣುಗಳು, ಓಟ್ಸ್, ಬಟಾಣಿ, ಗೋವಿನ ಜೋಳ ಮುಂತಾದವುಗಳಲ್ಲಿ ನಾರಿನಂಶ ಹೇರಳವಾಗಿರುತ್ತದೆ. ಈ ತೆರನಾದ ಆಹಾರ ಸೇವನೆಯಿಂದ ಕೊರೋನಾದಂತಹ ರೋಗಗಳಿಂದ ರಕ್ಷಿಸಿಕೊಳ್ಳಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ