ಕಳೆದ ಕೆಲವು ವರ್ಷಗಳಿಂದ ಜನರಲ್ಲಿ ಬಾಡಿ ಬೆಳೆಸಿಕೊಳ್ಳಲು ಜಿಮ್ ಗೆ ಹೋಗಬೇಕೆನ್ನುವ ಉಮೇದು ಹೆಚ್ಚಿದೆ. ಅಲ್ಲಿ ಗಂಟೆಗಟ್ಟಲೆ ವರ್ಕ್‌ ಔಟ್‌ ಮಾಡುವ ಪ್ರಕ್ರಿಯೆ ಹೆಚ್ಚುತ್ತಿದೆ. ಜೊತೆಗೆ ಹೆಂಗಸರೂ ಸಹ ಬಳುಕುವ ತೆಳುಕಾಯ ಹೊಂದಲು, ಅನಗತ್ಯ ಕೊಬ್ಬು ಕರಗಿಸಲು ಹೀಗೆ ಯತ್ನಿಸುತ್ತಾರೆ. ಇದರಿಂದಾಗಿ ಜನರ ಮನದಲ್ಲಿ ವ್ಯಾಯಾಮದ ಕುರಿತಾಗಿ ಆಸಕ್ತಿ ಹೆಚ್ಚುವುದರ ಜೊತೆ, ಸ್ಟೆರಾಯ್ಡ್ ಪ್ರೋಟೀನ್‌ ಸಪ್ಲಿಮೆಂಟ್ಸ್ ನಂಥ ಕೃತಕ ಉತ್ಪನ್ನಗಳ ಬಳಕೆಯೂ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಇದನ್ನು ಹೆಚ್ಚು ಹೆಚ್ಚು ಬಳಸುತ್ತಾ ಚಿತ್ರದಲ್ಲಿರುವಂತೆ ಹೀಮ್ಯಾನ್‌ ಆಗಲು ಯತ್ನಿಸುತ್ತಾರೆ.

ಆದರೆ ಹೆಚ್ಚು ಜನರಿಗೆ ಗೊತ್ತಿಲ್ಲದ ವಿಚಾರವೆಂದರೆ ಸುದೀರ್ಘ ಕಾಲ ತೆಗೆದುಕೊಂಡ ಸ್ಟೆರಾಯ್ಡ್ ಔಷಧಿ ಹೃದಯಕ್ಕೆ ಮಾರಕ ಎಂಬುದು ಎಷ್ಟು ಅಪಾಯಕಾರಿ ಎಂದರೆ ಹೃದಯಘಾತ ಅಥವಾ ಆಕಸ್ಮಿಕವಾಗಿ ಕಾರ್ಡಿಯಾಕ್‌ ಅರೆಸ್ಟ್ ಸಹ ಆಗಬಹುದು. ವಿಶೇಷವಾಗಿ ಬಾಡಿ ಬಿಲ್ದರ್ಸ್‌ ಸುದೀರ್ಘ ಕಾಲ ಸ್ಟೆರಾಯ್ಡ್ಸ್ ಪ್ರೋಟೀನ್‌ ಸಪ್ಲಿಮೆಂಟ್ಸ್ ಸೇವಿಸುವುದರಿಂದ, ಅದರಿಂದಾಗಿ ದೇಹದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅಗತ್ಯ ಅರಿತಿರಬೇಕು.

ಬನ್ನಿ, ವಿವರವಾಗಿ ಸ್ಟೆರಾಯಡ್ಸ್ ಪ್ರೋಟೀನ್ಸ್ ಪರಸ್ಪರ ಹೇಗೆ ವಿಭಿನ್ನ ಹಾಗೂ ಆರೋಗ್ಯದ ಮೇಲೆ ಇದರ ಪರಿಣಾಮವೇನು ಎಂದು ತಿಳಿಯೋಣ :

ಅಗತ್ಯ ಸ್ಟೆರಾಯ್ಡ್ ಪ್ರೋಟೀನ್ಸ್ ಮಹತ್ವ

ಸ್ಟೆರಾಯ್ಡ್ ಶಬ್ದ ಸಾಮಾನ್ಯವಾಗಿ ಔಷಧಿಗಳ ಒಂದು ಶ್ರೇಣಿಯಲ್ಲಿ ಬರುತ್ತದೆ. ಇದನ್ನು ಉಲ್ಬಣಗೊಂಡ ವಿಭಿನ್ನ ರೋಗಗಳ ಚಿಕಿತ್ಸೆಗಳಿಗಾಗಿ ಬಳಸುತ್ತಾರೆ. ಉದಾ : ಗಂಡಸರಲ್ಲಿ ಲೈಂಗಿಕ ಹಾರ್ಮೋನ್ಸ್ ಹೆಚ್ಚಿಸಲು, ಸಂತಾನಶಕ್ತಿ ಹೆಚ್ಚಿಸಲು,  ಮೆಟಬಾಲಿಸಂ ವೃದ್ಧಿಸಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ಮಸಲ್ ಮಾಸ್‌, ಬೋನ್‌ ಮಾಸ್‌ ಸದೃಢಗೊಳಿಸಲು ಬಳಸುತ್ತಾರೆ.

ಪ್ರೋಟೀನ್ಪೌಡರ್

ಮುಖ್ಯವಾಗಿ ಸೋಯಾ, ಹಾಲು ಅಥವಾ ಪ್ರಾಣಿಜನ್ಯ ಪ್ರೋಟೀನ್‌ ಮೂಲದ್ದಾಗಿರುತ್ತದೆ. ಗಂಟೆಗಟ್ಟಲೆ ಸತತ ವ್ಯಾಯಾಮ ಮಾಡಿ ಸೋತುಹೋದವರ ಪ್ರೋಟೀನ್‌ ಕೊರತೆ ನೀಗಿಲು ಇದನ್ನು ಸೇವಿಸಲು ಸಲಹೆ ನೀಡುತ್ತಾರೆ.

ಇದರ ಸಪ್ಲಿಮೆಂಟ್ಸ್ ಪ್ರಭಾವ ಬಾಡಿ ಮಾಡಿಕೊಳ್ಳಲು ಅಸಲಿಗೆ ಪ್ರೊಟೀನ್‌ ಬಲು ಪ್ರಯೋಜನಕಾರಿ ಹಾಗೂ ಸುರಕ್ಷಿತ ಪೋಷಣೆಯ ಮೂಲ ಹೌದು, ಏಕೆಂದರೆ ಇದು ರೋಗನಿರೋಧಕ ಶಕ್ತಿಗೆ ಎಂದೂ ಹಾನಿ ಮಾಡದು. ಇನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ಇದು ಎಂದೂ ದೈಹಿಕ ಅನಾರೋಗ್ಯಕ್ಕೆ ಕಾರಣವಾಗದು. ಆದರೆ ಸ್ಟೆರಾಯ್ಡ್ ಗೆ ಇದೇ ಮಾತು 100% ಅನ್ವಯಿಸದು.

ಸ್ಟೆರಾಯ್ಡ್ ಮುಖ್ಯವಾಗಿ ಟೆಸ್ಟೊಸ್ಟೆರಾನ್‌ ನ ಕೃತಕ ಸಂಸ್ಕರಣ ರೂಪ. ಇದು ಕೃತಕವಾಗಿ ಮಾಂಸಖಂಡಗಳ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ. ಹೃದಯ ಸಹ ಮಾಂಸಖಂಡವೇ ಆಗಿದೆ. ಆದರೆ ಸ್ಟೆರಾಯ್ಡ್ ಸೇವನೆಯಿಂದ ಇದರ ಆಕಾರ ಹಿಗ್ಗುವ ಸಾಧ್ಯತೆಗಳಿವೆ. ಹೀಗೆ ಹೃದಯ ಹಿಗ್ಗಿದಂತೆ ಅದರ ಅಕ್ಕಪಕ್ಕದಲ್ಲಿರುವ ರಕ್ತನಾಳ, ನರಗಳ ಮೇಲೂ ಇದರ ದುಷ್ಪರಿಣಾಮ ಆಗುತ್ತದೆ. ಹೀಗಾಗಿ ಇದು ಸರಿಯಾಗಿ ಕೆಲಸ ನಿರ್ವಹಿಸಲಾಗದು. ಆಗ ರಕ್ತ ಸಂಚಾರದಲ್ಲಿ  ಅಡಚಣೆ ಉಂಟಾಗುತ್ತದೆ.

ಹೃದಯದ ಮೇಲೆ ಸ್ಟೆರಾಯ್ಡ್ ಪ್ರಭಾವ

ಸ್ಟೆರಾಯ್ಡ್ ಸೇವನೆ ಮಾಡುವವರ ಹೃದಯ ಅದನ್ನು ಸೇವಿಸದವರ ಹೋಲಿಕೆಯಲ್ಲಿ ಬಲು ದುರ್ಬಲ ಎಂದೇ ಹೇಳಬೇಕು. ಒಂದು ದುರ್ಬಲ ಹೃದಯ ಬಾಡಿ ಬಿಲ್ಡರ್‌ ಅಥವಾ ಕ್ರೀಡಾಪಟುಗಳಂಥ ಅತಿ ಚಟುವಟಿಕೆಯುಳ್ಳವರ ಇಡೀ ದೇಹಕ್ಕೆ ಹೇಗೆ ತಾನೇ ಸರಾಗವಾಗಿ ರಕ್ತ ಪಂಪ್‌ ಮಾಡಬಲ್ಲದು? ಇಂಥ ಇಕ್ಕಟ್ಟಿನ ಸ್ಥಿತಿಯಲ್ಲಿ ಹೃದಯ ತನ್ನ ಕೆಲಸವನ್ನೇ ನಿಲ್ಲಿಸಬಹುದು. ಹೀಗೆ ಹೃದಯ ಏಕ್‌ ದಂ ಕೆಲಸ ನಿಲ್ಲಿಸಿದರೆ ಜೀವ ಹೋದೀತು!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ