ಮಗುವಿನ ಜನನದ ಬಳಿಕ ಅಪೌಷ್ಟಿಕತೆಯ ದುಷ್ಪರಿಣಾಮ ತಾಯಿ ಹಾಗೂ ಮಗು ಇಬ್ಬರ ಮೇಲೂ ಉಂಟಾಗುತ್ತದೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಹಾಗೂ ಆ ಬಳಿಕ ಉಂಟಾಗುವ ಅಪೌಷ್ಟಿಕತೆ ಮಗುವಿಗೆ ಅತ್ಯಂತ ಘಾತಕವಾಗಿ ಪರಿಣಮಿಸಬಹುದು. ಅದನ್ನು ತಡೆಯುವುದು ಅತ್ಯಂತ ಅವಶ್ಯಕ.

ಗರ್ಭಾವಸ್ಥೆಯಲ್ಲಿ ಅಪೌಷ್ಟಿಕತೆಗೆ ಕಾರಣ

ಇದರ ಎಲ್ಲಕ್ಕೂ ಮೊದಲ ಹಾಗೂ ಮುಖ್ಯ ಕಾರಣವೆಂದರೆ ಸ್ತನ್ಯಪಾನ. ಮಗುವಿಗೆ ಹಾಲುಣಿಸುವ ತಾಯಿಗೆ ದಿನಕ್ಕೆ 1000 ಕ್ಯಾಲೋರಿ ಶಕ್ತಿಯ ಅಗತ್ಯವಿರುತ್ತದೆ. ಬಹಳ ಮಹಿಳೆಯರಿಗೆ ಸರಿಯಾದ ಡಯೆಟ್‌ ಚಾರ್ಟ್‌ ಬಗ್ಗೆ ಗೊತ್ತಿರುವುದಿಲ್ಲ ಅಥವಾ ಅದರ ಬಗ್ಗೆ ನಿರ್ಲಕ್ಷ್ಯ ಮಾಡುತ್ತಾರೆ. ಈ ಕಾರಣದಿಂದ ಅವರು ನಿರ್ಜಲೀಕರಣ ವಿಟಮಿನ್‌ ಅಥವಾ ಮಿನರಲ್ ಕೊರತೆ ಅನುಭವಿಸುತ್ತಾರೆ. ಇಲ್ಲಿ ಒಮ್ಮೊಮ್ಮೆ ರಕ್ತಹೀನತೆಯ ಸಮಸ್ಯೆಗೂ ತುತ್ತಾಗುತ್ತಾರೆ. ಇದನ್ನು `ಪೋಸ್ಟ್ ನೇಟ್‌ ಮಾಲ್ ನ್ಯೂಟ್ರಿಷನ್‌' ಅಥವಾ ಹೆರಿಗೆ ಬಳಿಕದ ಅಪೌಷ್ಟಿಕತೆ ಎಂದು ಕರೆಯುತ್ತಾರೆ.

ಮಗುವಿಗೆ ಹಾಲುಣಿಸುವುದರಿಂದ ತಾಯಿಗೆ ಹೆಚ್ಚು ಹಸಿವಾಗುತ್ತದೆ. ಆಕೆ ಸಾಮಾನ್ಯ ಪೋಷಕಾಂಶ ಇರದೇ ಇರುವ ಇಲ್ಲವೇ ಆರೋಗ್ಯಕರ ಆಗಿರದ ಆಹಾರ ಸೇವಿಸುತ್ತಿರಬೇಕು. ಬಾಯಿಗೆ ರುಚಿ ಎನ್ನಿಸುವ ಆಹಾರ ಪದಾರ್ಥದಲ್ಲಿ ವಿಟಮಿನ್‌ ಹಾಗೂ ಮಿನರಲ್ಸ್ ಕೊರತೆ ಇರುತ್ತದೆ. ಅದರಿಂದಾಗಿ ತಾಯಿ ಅಪೌಷ್ಟಿಕತೆಗೆ ತುತ್ತಾಗುತ್ತಾಳೆ.

ಹೆರಿಗೆಗೂ ಮುಂಚೆ ಹಾಗೂ ಆ ಬಳಿಕ ಪ್ರೀನೆಟ್‌ ವಿಟಮಿನ್‌ ಸೇವನೆ ಅತ್ಯಂತ ಅವಶ್ಯ. ಪ್ರೀನೆಟ್‌ ವಿಟಮಿನ್‌ ಅಂದರೆ ಫಾಲಿಕ್ ಆ್ಯಸಿಡ್‌ ನೀರಿನಲ್ಲಿ ವಿಲೀನಗೊಂಡು ದೇಹದಿಂದ ಹೊರಟು ಹೋಗುತ್ತದೆ. ಈ ಕಾರಣದಿಂದ ಮಹಿಳೆಯರು ಹೆರಿಗೆಯ ಬಳಿಕ ರಕ್ತಹೀನತೆಯ ಸಮಸ್ಯೆಗೆ ತುತ್ತಾಗುತ್ತಾರೆ.

ಮಗುವಿನ ಜನನದ ಬಳಿಕ ಅಪೌಷ್ಟಿಕತೆಯ ಕಾರಣದಿಂದ ಮಹಿಳೆಯರು ಪೋಸ್ಟ್ ಪಾರ್ಟಮ್ ಡಿಪ್ರೆಶನ್‌ ಗೆ ತುತ್ತಾಗುತ್ತಾರೆ. ಮಗುವಿನ ಜನನದ ಬಳಿಕ ಅವರಲ್ಲಿ ಭಾವನಾತ್ಮಕ ಬದಲಾವಣೆ ಉಂಟಾಗುತ್ತದೆ. ಆ ಕಾರಣದಿಂದ ಖಿನ್ನತೆಯ ಸಮಸ್ಯೆ ಉಂಟಾಗುತ್ತದೆ. ಈ ಕಾರಣದಿಂದ ಮಹಿಳೆಯರು ಸರಿಯಾಗಿ ಆಹಾರ ಸೇವನೆ ಮಾಡುವುದಿಲ್ಲ ಹಾಗೂ ಅಪೌಷ್ಟಿಕತೆಗೆ ತುತ್ತಾಗುತ್ತಾರೆ.

ಗರ್ಭಾವಸ್ಥೆಯ ಸಂದರ್ಭದಲ್ಲಿ ಬಹುತೇಕ ಎಲ್ಲ ಮಹಿಳೆಯರ ತೂಕ ಹೆಚ್ಚಾಗುತ್ತದೆ. ಆ ತೂಕ ಕಡಿಮೆ ಮಾಡಿಕೊಳ್ಳಲು ಕೆಲವು ಬಗೆಯ ಆಹಾರ ತ್ಯಜಿಸುತ್ತಾರೆ. ಹೀಗಾಗಿ ಅಪೌಷ್ಟಿಕತೆಗೆ ತುತ್ತಾಗುತ್ತಾರೆ. ಗರ್ಭಾವಸ್ಥೆಯ ಬಳಿಕ ತೂಕವನ್ನು ನಿಧಾನವಾಗಿ ಕಡಿಮೆಗೊಳಿಸಲು ಪ್ರಯತ್ನಿಸಿ. ಇಲ್ಲದಿದ್ದರೆ ಅಪೌಷ್ಟಿಕತೆಗೆ ತುತ್ತಾಗುವ ಸ್ಥಿತಿ ಉಂಟಾಗಬಹುದು.

ಹೆರಿಗೆಯ ಬಳಿಕ ಸಾಮಾನ್ಯವಾಗಿ ಮಹಿಳೆಯರು ಸರಿಯಾಗಿ ನಿದ್ರಿಸಲು ಆಗುವುದಿಲ್ಲ. ನಿದ್ರೆ ಪೂರ್ತಿ ಆಗದಿರುವುದಕ್ಕೆ ದೇಹದಲ್ಲಿ ಪೋಷಕಾಂಶಗಳು ಹೀರಲ್ಪಡುವುದಿಲ್ಲ. ಈ ಕಾರಣದಿಂದ ಅವರು ಅಪೌಷ್ಟಿಕತೆಗೆ ತುತ್ತಾಗುತ್ತಾರೆ.

ಮಗುವಿಗೆ ಅಪಾಯಕಾರಿ

ಗರ್ಭಿಣಿಯರಲ್ಲಿ ಅಪೌಷ್ಟಿಕತೆಯ ದುಷ್ಪರಿಣಾಮ ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೆ ಆಗುತ್ತದೆ. ಈ ಕಾರಣದಿಂದ ಮಗುವಿನ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ಹುಟ್ಟುವಾಗ ಅದರ ತೂಕ ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ತಾಯಿಯಲ್ಲಿ ಅಪೌಷ್ಟಿಕತೆ ಐಯುಜಿಆರ್‌ ಅಂದರೆ ಇಂಟ್ರಾಯುಟರಿನ್‌ ಗ್ರೋಥ್‌ ರಿಸ್ಟ್ರಿಕ್ಷನ್‌ ಮತ್ತು ಜನನದ ಸಂದರ್ಭದಲ್ಲಿ ಕಡಿಮೆ ತೂಕದ ದುಷ್ಪರಿಣಾಮ ಬೀರುತ್ತದೆ. ಅದರಿಂದ ಬೇರೆ ಕೆಲವು ದುಷ್ಪರಿಣಾಮಗಳು ಆಗಬಹುದು. ಉದಾಹರಣೆಗೆ ಹುಟ್ಟು ತೊಂದರೆ, ಮೆದುಳಿಗೆ ಹಾನಿ, ಕೆಲವು ಅಂಗಗಳು ಸರಿಯಾಗಿ ಬೆಳವಣಿಗೆ ಆಗದಿರುವುದು, ಕೆಲವು ಮಕ್ಕಳು ಹುಟ್ಟುತ್ತಲೇ ಅಳುವುದಿಲ್ಲ. ಇಂತಹ ಶೇ.50 ಪ್ರಕರಣಗಳಲ್ಲಿ ಐಯುಜಿಆರ್‌ ಕಾರಣವಾಗಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ