ಮುಂಜಾನೆಯನ್ನು ಖುಷಿಯಿಂದ ಆರಂಭಿಸಬೇಕೆಂದಿದ್ದರೆ ಅಥವಾ ಸಂಬಂಧಗಳಲ್ಲಿ ಹೊಸ ಹುರುಪು ತುಂಬಬೇಕಿದ್ದರೆ ಇಲ್ಲಿ ಆಲಸ್ಯತನವನ್ನು ದೂರ ಓಡಿಸಬೇಕೆಂದಿದ್ದರೆ ನಿಮಗೆ ಬೇಕು ಒಂದು ಕಪ್‌ ಬಿಸಿ ಬಿಸಿ ಚಹಾ! ಇದನ್ನು ಕುಡಿದು ನೀವು ಕೇವಲ ತಾಜಾತನವನ್ನಷ್ಟೇ ಪಡೆಯುವುದಿಲ್ಲ, ನಿಮ್ಮ ಸೌಂದರ್ಯಕ್ಕೆ ಮೆರುಗು ಕೂಡ ತಂದುಕೊಳ್ಳಬಹುದು. ಈ ಚಹಾದ ಮಹಿಮೆಯೇ ಅಂಥದು. ನಮ್ಮ ಜನಪ್ರಿಯ ಟಿ.ವಿ. ತಾರೆಯರು ಈ ಕುರಿತಂತೆ ಏನು ಹೇಳುತ್ತಾರೆ ಕೇಳಿ.

ಚಹಾ ನನ್ನನ್ನು ಎನರ್ಜೆಟಿಕ್‌ ಮಾಡುತ್ತದೆ. ಲೈಫ್‌ ಓಕೆ ಚಾನೆಲ್‌ನ ಧಾರಾವಾಹಿ `ನಾದಾನ್‌ ಪರಿಂದೆ'ಯ ಮೆಹರ್‌ ಅಂದರೆ ಗುಲ್ಕಿ ಜೋಶಿ ಹೀಗೆ ಹೇಳುತ್ತಾರೆ, ``ಬೇರೆ ಬೇರೆ ದಿನ ಬೇರೆ ಬೇರೆ ಪಾತ್ರಗಳು, ವಿಭಿನ್ನ ಸವಾಲುಗಳು. ಇದು ಎಂತಹ ಒಂದು ಕ್ಷೇತ್ರವೆಂದರೆ, ಇಲ್ಲಿ ಯಾವುದೂ ಶಾಶ್ವತವಲ್ಲ ಹಾಗೂ ಅದು ಸದಾ ಬದಲಾಗುತ್ತಲೇ ಇರುತ್ತದೆ.

tea-3

``ಆದರೆ ಒಂದು ಸಂಗತಿ ಮಾತ್ರ ಎಂದೂ ಬದಲಾಗುವುದಿಲ್ಲ. ಅದು ನನ್ನ ಚಹಾದ ಕಪ್‌. ನನ್ನ ದಿನದ ಆರಂಭ ಇದರಿಂದಲೇ ಆಗುತ್ತದೆ. ದಿನ ಏರುತ್ತಾ ಹೋದಂತೆ ಒತ್ತಡ ಕೂಡ ಹೆಚ್ಚುತ್ತ ಹೋಗುತ್ತದೆ. ಪರಿಸ್ಥಿತಿ ನಿಯಂತ್ರಣ ತಪ್ಪಲಾರಂಭಿಸುತ್ತದೆ. ದಣಿವು ಹೆಚ್ಚುತ್ತಾ ಹೋಗುತ್ತದೆ.

``ಆದರೆ ನನಗಂತೂ ಮುಂದೆ ಮುಂದೆ ಸಾಗಬೇಕು, ಕೆಲಸ ಪೂರ್ತಿಗೊಳಿಸಬೇಕು. ನಾನೆಷ್ಟು ದಣಿದಿರುವೆ ಅಥವಾ ನನ್ನ ಮೂಡ್ ಹೇಗಿದೆ ಎಂಬುದರ ಬಗ್ಗೆ ನನಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ನನಗೆ ಒಳ್ಳೆಯ ರೀತಿಯಲ್ಲಿ ಶೂಟ್‌ ಮಾಡಬೇಕಾಗಿರುತ್ತದೆ.

tea-2

``ಇಂತಹ ಸ್ಥಿತಿಯಲ್ಲಿ 1 ಕಪ್‌ ಚಹಾ ನನ್ನ ಶಕ್ತಿಯನ್ನು ಮರುಭರ್ತಿ ಮಾಡುತ್ತದೆ. ನನ್ನನ್ನು ರಿಫ್ರೆಶ್‌ ಮಾಡುತ್ತದೆ. ಏಕೆಂದರೆ ನಾನು ಪುನಃ ಹೊಸ ಸವಾಲುಗಳನ್ನು ಎದುರಿಸಲು ಸಾಧ್ಯವಾಗಬೇಕು. ದಿನದ ಆರಂಭ ಮಾಡಬೇಕೆಂದಿದ್ದರೆ ಅಥವಾ ಪೇಪರ್ ಓದಬೇಕೆಂದಿದ್ದರೆ ಚಹಾ ಎಂತಹ ಒಂದು ಒಳ್ಳೆಯ ಸಂಗತಿಯೆಂದರೆ, ಅದು ಪ್ರತಿಯೊಂದು ಪರಿಸ್ಥಿತಿಗೂ ಪರ್ಫೆಕ್ಟ್ ಆಗಿದೆ.

``ದಿನದಲ್ಲಿ ಸಾಕಷ್ಟು ಬದಲಾಗುತ್ತದೆ, ಎಲ್ಲರೂ ಹೊರಟು ಹೋಗುತ್ತಾರೆ. ಆದರೆ ಚಹಾದ ಕಪ್‌ ಮಾತ್ರ ನನ್ನ ಜೊತೆಗೆ ಇರುತ್ತದೆ. ಏಕೆಂದರೆ ನಾನು ಆ್ಯಕ್ಟಿವ್ ‌ಆಗಿರಬೇಕು.''

tea-4

ಚಹಾ ನನ್ನ ಸೌಂದರ್ಯ ಹೆಚ್ಚಿಸುತ್ತದೆ ಲೈಫ್‌ ಓಕೆ ಚಾನೆಲ್‌ನಲ್ಲಿ ಬರುವ `ತುಮ್ಹಾರಿ ಪಾಖಿ'ಯಲ್ಲಿ ಪಾಖಿಯ ಪಾತ್ರ ಮಾಡುತ್ತಿರುವ ಶ್ರದ್ಧಾ ಆರ್ಯ ಹೀಗೆ ಹೇಳುತ್ತಾರೆ, ``ಚಹಾ ನನ್ನ ಸೌಂದರ್ಯ ಕಾಪಾಡಿಕೊಂಡು ಹೋಗಲು ಹಾಗೂ ನಾನು ಸದಾ ಯಂಗ್‌ ಆಗಿರಲು ಪ್ರಮುಖ ಪಾತ್ರ ವಹಿಸುತ್ತದೆ.

``ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಟ್ರೆಸ್‌ ಹಾಗೂ ಡಿಪ್ರೆಶನ್‌ ಎಂತಹ ಸಮಸ್ಯೆಗಳಾಗಿವೆಯೆಂದರೆ, ಅವು ನಮ್ಮ ಮನಸ್ಸಿನ ಶಾಂತಿಯನ್ನು ಭಂಗಗೊಳಿಸುತ್ತವೆ. ಇಂತಹದರಲ್ಲಿ ಗ್ರೀನ್‌ ಟೀ ನಿಮ್ಮನ್ನು ಡಿಪ್ರೆಶನ್‌ನಿಂದ ಹೊರಬರಲು ಸಹಾಯ ಮಾಡುತ್ತದೆ. ಗ್ರೀನ್‌ ಟೀ ನನ್ನನ್ನು ಸೂರ್ಯನ ಅಲ್ಟ್ರಾ ವೈಯ್ಲೆಟ್‌ ಕಿರಣಗಳಿಂದ ರಕ್ಷಿಸಲು ನೈಸರ್ಗಿಕ ಸನ್‌ ಸ್ಕ್ರೀನ್‌ನ ಹಾಗೆ ಕೆಲಸ ಮಾಡುತ್ತದೆ ಮತ್ತು ತ್ವಚೆಯ ಮೇಲೆ ಸುಕ್ಕುಗಳಾಗದಂತೆ ತಡೆಯುತ್ತದೆ.

``ನಾನು ಓದುಗರಿಗೆ ಹೇಳ ಬಯಸುವುದೇನೆಂದರೆ, ನೀವು ನಿಮ್ಮ ಲೈಫ್‌ ಸ್ಟೈಲ್‌ನಲ್ಲಿ ಯಾವುದೇ ಬಗೆಯ ಬದಲಾವಣೆ ಮಾಡಿಕೊಳ್ಳದೆಯೇ ತೂಕ ಕಡಿಮೆ ಮಾಡಿಕೊಳ್ಳಲು ಇಚ್ಛಿಸಿದರೆ, ನೀವು ಗ್ರೀನ್‌ ಟೀ ಬಳಸಬಹುದು. ಗ್ರೀನ್‌ ಟೀಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್ ನೀವು ಶೀತ ನೆಗಡಿಯಿಂದ ಬಹುಬೇಗ ಗುಣಮುಖರಾಗಲು ನೆರವಾಗುತ್ತದೆ ಮತ್ತು ಅದು ಎಲ್ಲ ರೀತಿಯಿಂದಲೂ ನಿಮ್ಮನ್ನು ಸದೃಢಗೊಳಿಸುತ್ತದೆ. ನಾನು ಚಹಾ ಅದರಲ್ಲೂ ಗ್ರೀನ್‌ ಟೀ ಕುಡಿಯುವುದನ್ನು ಎಂದೂ ತಪ್ಪಿಸಿಕೊಳ್ಳುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ