ಇಡೀ ದೇಹದ ಆರೋಗ್ಯ ಸ್ಥಿತಿಯನ್ನು ಪತ್ತೆ ಹಚ್ಚಲು ಥೈರಾಯ್ಡ್ ಒಂದು ಮುಖ್ಯ ಆಧಾರವಾಗಿದೆ. ಒಂದು ಪುಟ್ಟ ಥೈರಾಯ್ಡ್ ಗ್ರಂಥಿ ನಿಮ್ಮ ದೇಹದ ಹೆಚ್ಚಿನ ಚಯಾಪಚಯ ಕ್ರಿಯೆಗಳ ಮೇಲೆ ಹಾನಿಯನ್ನುಂಟು ಮಾಡಬಹುದಾಗಿದೆ. ಥೈರಾಯ್ಡ್ ನಲ್ಲಿ ಉಂಟಾಗುವ ಯಾವುದೇ ಬಗೆಯ ಏರುಪೇರು, ತೂಕದಲ್ಲಿ ಗಣನೀಯ ಹೆಚ್ಚಳ ಹಾಗೂ ಇತರೆ ಕೆಲವು ರೋಗಗಳಿಂದ ಹಿಡಿದು ಥೈರಾಯ್ಡ್ ಕ್ಯಾನ್ಸರ್‌ತನಕದ ಕಾರಣ ಆಗಬಹುದು.

ಥೈರಾಯ್ಡ್ ಗೆ ಸಂಬಂಧಪಟ್ಟ ಎಲ್ಲಕ್ಕೂ ಸಾಮಾನ್ಯ ಸಮಸ್ಯೆ ಎಂದರೆ, ಥೈರಾಯ್ಡ್ ಹಾರ್ಮೋನುಗಳ ಅಸಾಮಾನ್ಯ ಸ್ರಾವವಾಗಿದೆ. ಹಾರ್ಮೋನುಗಳ ಅತಿಯಾದ ಉತ್ಪಾದನೆ ಹೈಪೋ ಥೈರಾಯ್ಡಿಸಂನ ಸ್ಥಿತಿಗೆ ಕಾರಣವಾಗಬಹುದು. ಇದರ ಪ್ರಭಾವ ಅತ್ಯಂತ ಕಷ್ಟದಾಯಕ ಮತ್ತು ಅಸೌಕರ್ಯವಾಗಬಹುದು. ಥೈರಾಯ್ಡ್ ಗೆ ಸಂಬಂಧಪಟ್ಟ ಹೆಚ್ಚಿನ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸಬಹುದಾಗಿದೆ.

ಹೈಪೋ ಥೈರಾಯ್ಡಿಸಂನ ಎಲ್ಲಕ್ಕೂ ದೊಡ್ಡ ಕಾರಣವೆಂದರೆ, ಆಟೋಇಮ್ಯೂನ್‌ ರೋಗಗಳು. ಔಷಧಿಗಳ ತಪ್ಪು ಬಳಕೆ ಹಾಗೂ ಲೀಥಿಯಂನ ಉಪಯೋಗ. ಕುಟುಂಬದಲ್ಲಿ ಯಾರಿಗಾದರೂ ಥೈರಾಯ್ಡ್ ಅಸಮತೋಲನದ ಸಮಸ್ಯೆ ಇದ್ದರೆ, ಅದು ಕೂಡ ಅಪಾಯಕ್ಕೆ ಕಾರಣವಾಗಬಹುದು. ಹೈಪರ್‌ ಥೈರಾಯ್ಡಿಸಂ ಸಮಸ್ಯೆ ಇರುವ ಮಹಿಳೆಗೆ ಲೈಂಗಿಕ ಅಭಿಲಾಷೆ ಕಡಿಮೆಯಾಗುತ್ತದೆ. ಮುಟ್ಟಿನಲ್ಲಿ ಏರುಪೇರು, ಗರ್ಭಧಾರಣೆಯಲ್ಲಿ ತೊಂದರೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾರೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಹೊಟ್ಟೆಯಲ್ಲಿರುವ ಭ್ರೂಣದ ಬೆಳವಣಿಗೆ ತಾಯಿಯ ಥೈರಾಯ್ಡ್ ಹಾರ್ಮೋನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಹೆರಿಗೆಯ ಬಳಿಕ ಬೆಳವಣಿಗೆ ಥೈರಾಯ್ಡ್ ನಿಂದಲೇ ನಿಯಂತ್ರಿಸಲ್ಪಡುತ್ತದೆ.

ಅಯೋಡಿನ್‌ನ ಮಹತ್ವ

ಅಯೋಡಿನ್‌ ಎಂತಹ ಒಂದು ಮೈಕ್ರೊನ್ಯೂಟ್ರಿಯೆಂಟ್ಸ್ ಅಂದರೆ ಥೈರಾಯ್ಡ್ ಹಾರ್ಮೋನು ನಿರ್ಮಾಣಕ್ಕೆ ಅದು ಅತ್ಯವಶ್ಯಕ. ಅಯೋಡಿನ್‌ ಡೆಫಿಶಿಯೆನ್ಸಿ ಅಯೋಡಿನ್‌ ಅಂಶದ ಕೊರತೆಯಾಗಿದೆ. ಅದು ನಮ್ಮ ಡಯೆಟ್‌ನ ಮುಖ್ಯ ಪೋಷಕಾಂಶವಾಗಿದೆ. ಅಯೋಡಿನ್‌ ಕೊರತೆಯಿಂದ ಹೈಪೋ ಥೈರಾಯ್ಡಿಸಂ ಉಂಟಾಗುತ್ತದೆ. ಒಂದು ವೇಳೆ ಸಕಾಲಕ್ಕೆ ಇದಕ್ಕೆ ಚಿಕಿತ್ಸೆ ಪಡೆಯದೇ ಇದ್ದಲ್ಲಿ ಗರ್ಭಧಾರಣೆ ಸಮಸ್ಯೆ, ಬಂಜೆತನ, ನವಜಾತ ಶಿಶುವಿನ ನರಮಂಡಲದ ಅವ್ಯವಸ್ಥೆಯ ಅಪಾಯಗಳು ಉಂಟಾಗಬಹುದು.

ಒಂದು ವೇಳೆ ಥೈರಾಯ್ಡ್ ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದರೆ, ಮಹಿಳೆಯ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಹೈಪೋ ಥೈರಾಯ್ಡಿಸಂ ಮಹಿಳೆಯ ಬಂಜೆತನಕ್ಕೆ ಬೇರೆ ಯಾವುದೇ ಕಾರಣಗಳಿಗಿಂತ ಅತ್ಯಂತ ಸಾಮಾನ್ಯ ಕಾರಣವಾಗಿದೆ. ಒಂದು ವೇಳೆ ಥೈರಾಯ್ಡ್ ಗ್ರಂಥಿಯಿಂದ ಸಾಕಷ್ಟು ಪ್ರಮಾಣದಲ್ಲಿ ಹಾರ್ಮೋನ್‌ ಬಿಡುಗಡೆ ಆಗದೇ ಇದ್ದರೆ ಅಂಡಕೋಶದಿಂದ ಅಂಡ ಬಿಡುಗಡೆಗೆ ತೊಂದರೆಯಾಗುತ್ತದೆ. ಅದರಿಂದಾಗಿ ಸಂತಾನೋತ್ಪತ್ತಿ ಸಾಮರ್ಥ್ಯವೇ ಅಯೋಮಯವಾಗುತ್ತದೆ. ನಿಮ್ಮ ಕೂದಲು ಮತ್ತು ತ್ವಚೆ ಶುಷ್ಕ ಮತ್ತು ಒರಟು ಒರಟಾಗಿದ್ದರೆ, ತಂಪು ವಾತಾವರಣ ಬಗ್ಗೆ ತಾವು ಹೆಚ್ಚು ಸಂವೇದನಾಶೀಲರಾಗಿದ್ದರೆ, ಮುಟ್ಟಿನಲ್ಲಿ ಏರುಪೇರಾಗುತ್ತದೆ. ಇಲ್ಲಿ, ಮುಟ್ಟು ಅತಿಯಾಗಿ ಆಗುತ್ತದೆ.

ಉಬ್ಬಿದ ಟಿಶ್ಯೂಗಳು, ಕಾರಣವಿಲ್ಲದೆ ತೂಕದಲ್ಲಿ ಹೆಚ್ಚಳ, ಖಿನ್ನತೆ, ಮಾಂಸಖಂಡಗಳಲ್ಲಿ ಎಳೆತ, ಹೃದಯ ಬಡಿತ ಸಾಮಾನ್ಯಕ್ಕಿಂತ ಕಡಿಮೆಯಾಗುವುದು, ಬಂಜೆತನ, ಮಲಬದ್ಧತೆ, ಮಾನಸಿಕ ಆಲಸ್ಯತನ ಗಂಟಲಿನ ಕೆಳಭಾಗದಲ್ಲಿರುವ ಥೈರಾಯ್ಡ್ ನಲ್ಲಿ ಊತ ಮತ್ತು ಲೈಂಗಿಕ ಇಚ್ಛೆ ಕಡಿಮೆ. ಇವೆಲ್ಲ ಅದರ ಪ್ರಭಾವದಿಂದ ಆಗುತ್ತವೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಥೈರಾಯ್ಡ್ ಗೆ ಸಂಬಂಧಪಟ್ಟ ಸಮಸ್ಯೆಗಳುಂಟಾಗುವುದು ಸಾಮಾನ್ಯ ಸಂಗತಿ. ಶೇ.25ರಷ್ಟು ಮಹಿಳೆಯರಿಗೆ ಗರ್ಭಾವಸ್ಥೆಯ 6ನೇ ವಾರದಲ್ಲಿ ಹೈಪೊ ಥೈರಾಯ್ಡಿಸಂ ಉಂಟಾಗುತ್ತದೆ. ಗರ್ಭನಾಳ ಹಾಗೂ ಭ್ರೂಣದ ಬೆಳವಣಿಗೆಗೆ ಥೈರಾಯ್ಡ್ ಹಾರ್ಮೋನಿನ ಸ್ರಾವ ಅತ್ಯವಶ್ಯ. ಗರ್ಭಾವಸ್ಥೆಯ ಸಂದರ್ಭದಲ್ಲಿ  ತಾಯಿ ಹಾಗೂ ಭ್ರೂಣದ ಹೆಚ್ಚುವರಿ ಚಯಾಪಚಯ ಅವಶ್ಯಕತೆಗಳ ಪೂರೈಕೆಗೆ ಸ್ರಾವದ ಮಟ್ಟ ಶೇ.50ರಷ್ಟು ಹೆಚ್ಚುವದು ಅತ್ಯವಶ್ಯ. ಯಾವಾಗ ತಾಯಿಯ ದೇಹ ಅವಶ್ಯಕತೆಗನುಗುಣವಾಗಿ ಸಾಕಷ್ಟು ಪ್ರಮಾಣದಲ್ಲಿ ಹಾರ್ಮೋನು ಸ್ರಾವ ಮಾಡುವುದಿಲ್ಲವೋ ಆಗ ಗರ್ಭದಂತೆ, ಅಕಾಲಿಕ ಹೆರಿಗೆ, ಕಡಿಮೆ ತೂಕದ ಮಗುವಿನ ಜನನ ಮುಂತಾದ ಸಮಸ್ಯೆಗಳ ಅಪಾಯ ಹೆಚ್ಚುತ್ತದೆ.

ಲಕ್ಷಣಗಳು

ಕೆಲವು ಮಹಿಳೆಯರಿಗೆ ಅಯೋಡಿನ್‌ನ ಕೊರತೆಯಾದರೂ ಸಹ ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ. ಹೈಪೋ ಥೈರಾಯ್ಡಿಸಂ ಆಗಿರುವ ಲಕ್ಷಣಗಳನ್ನು ಕೆಳಗಿನಂತೆ ಪಟ್ಟಿ ಮಾಡಬಹುದು :

– ದಣಿವು ಮತ್ತು ನಿದ್ರೆಮಂಪರು

– ಮಾಂಸಖಂಡಗಳಲ್ಲಿ ದುರ್ಬಲತೆ

– ಗಮನ ಕೇಂದ್ರೀಕರಿಸಲು ಸಮಸ್ಯೆ

– ಸ್ಮರಣಶಕ್ತಿ ಕಡಿಮೆಯಾಗುವಿಕೆ

– ಅಸಾಮಾನ್ಯ ತೂಕ ಹೆಚ್ಚಳ

– ಖಿನ್ನತೆ

– ಕೂದಲು ಉದುರುವುದು

– ತ್ವಚೆ ಶುಷ್ಕಗೊಳ್ಳುವಿಕೆ

– ಹೃದಯ ಬಡಿತ ಕಡಿಮೆಯಾಗುವಿಕೆ

ಅಯೋಡಿನ್‌ ಕೊರತೆಯಿಂದ ಬಂಜೆತನ

ಮಹಿಳೆಯರ ದೇಹದಲ್ಲಿ ಅಯೋಡಿನ್‌ನ ಕೊರತೆಗೂ ಅವರ ಸಂತಾನೊತ್ಪತ್ತಿ ಸಾಮರ್ಥ್ಯಕ್ಕೂ ನೇರ ಸಂಬಂಧವಿದೆ. ಹೈಪೋ ಥೈರಾಯ್ಡಿಸಂ ಬಂಜೆತನ ಮತ್ತು ಗರ್ಭಪಾತಕ್ಕೆ ಒಂದು ಮುಖ್ಯ ಕಾರಣವಾಗಿದೆ. ಯಾವಾಗ ಥೈರಾಯ್ಡ್ ಗ್ರಂಥಿಯ ಕಾರ್ಯ ಸಾಮರ್ಥ್ಯ ಮಂದಗೊಳ್ಳುತ್ತದೊ ಆಗ ಇದು ಸಾಕಷ್ಟು ಪ್ರಮಾಣದಲ್ಲಿ ಹಾರ್ಮೋನು ಉತ್ಪತ್ತಿ ಮಾಡುವುದಿಲ್ಲ. ಇದರಿಂದಾಗಿ ಅಂಡಾಶಯದಿಂದ ಅಂಡ ಬಿಡುಗಡೆ ಪ್ರಕ್ರಿಯೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಅದೇ ಬಂಜೆತನಕ್ಕೂ ಕಾರಣವಾಗುತ್ತದೆ. ಯಾವ ಮಹಿಳೆಯರು ಹೈಪೋ ಥೈರಾಯ್ಡಿಸಂಗೆ ತುತ್ತಾಗುತ್ತಾರೊ, ಅವರಿಗೆ ಲೈಂಗಿಕ ಅನಾಸಕ್ತಿ, ಮುಟ್ಟಿಗೆ ಸಂಬಂಧಪಟ್ಟ ತೊಂದರೆಗಳು, ಗರ್ಭಧಾರಣೆ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ.  ಒಂದು ವೇಳೆ ಅವರು ಗರ್ಭಧರಿಸಿದರೂ ಗರ್ಭದ ಬೆಳವಣಿಗೆಯ ಮೇಲೆ ಪ್ರಭಾವ ಉಂಟಾಗುತ್ತದೆ.

ಹೈಪೋ ಥೈರಾಯ್ಡಿಸಂ ತಡೆ ಹೇಗೆ?

ಧೂಮಪಾನ ನಿಲ್ಲಿಸಿ : ಧೂಮಪಾನ ಥೈರಾಯ್ಡ್ ಜೊತೆಗೆ ನೇರ ಸಂಬಂಧ ಹೊಂದಿದೆ. ಅದರ ಜೊತೆಗೆ ನಿಕೋಟಿನ್‌ ದೇಹದಿಂದ ಅಯೋಡಿನ್‌ನ್ನು ಹೀರಿಕೊಳ್ಳುತ್ತದೆ. ಅದರಿಂದ ಹಾರ್ಮೋನು ಸ್ರಾವದ ಮೇಲೆ ನೇರ ಪ್ರಭಾವ ಉಂಟಾಗುತ್ತದೆ. ಅದು ಬಂಜೆತನದ ಸಮಸ್ಯೆಗೆ ಕಾರಣವಾಗುತ್ತದೆ.

ಬಾಟಲ್ ನೀರು ಕುಡಿಯುವುದು : ಬಾಟಲ್ ನೀರಿನಲ್ಲಿರುವ ಫ್ಲೋರೈಡ್‌ ಮತ್ತು ಪರ್‌ಕ್ಲೋರೆಟ್‌ ಹೈಪೋ ಥೈರಾಯ್ಡಿಸಂನ್ನು ಉದ್ದೀಪಿಸುತ್ತವೆ. ಇಲ್ಲಿ ಥೈರಾಯ್ಡ್ ಗೆ ಸಂಬಂಧಪಟ್ಟ ಬೇರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ನಿಗದಿತ ಪ್ರಮಾಣದಲ್ಲಿ ಅಯೋಡಿನ್‌ ಸೇವನೆ : ಅಯೋಡಿನ್‌ನ್ನು ಯಾವಾಗಲೂ ನಿಗದಿತ ಪ್ರಮಾಣದಲ್ಲಿಯೇ ಸೇವಿಸಬೇಕು. ಬಹಳ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಅಯೋಡಿನ್‌ ಸೇವನೆಯು ಅಯೋಡಿನ್‌ಗೆ ಸಂಬಂಧಪಟ್ಟ ತೊಂದರೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಒತ್ತಡ ಕಡಿಮೆ ಮಾಡಿಕೊಳ್ಳಿ : ನಿಯಮಿತವಾಗಿ ವ್ಯಾಯಾಮ ಮಾಡಿ. ಅದರಿಂದ ಮಾನಸಿಕ ನೆಮ್ಮದಿ ಇರುತ್ತದೆ. ಅದು ಥೈರಾಯ್ಡ್ ನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸೋಯಾ ಉತ್ಪನ್ನಗಳನ್ನು ಅತಿಯಾಗಿ ಸೇವಿಸಬೇಡಿ : ಇವುಗಳ ಅತಿಯಾದ ಬಳಕೆ ಹೈಪೋ ಥೈರಾಯ್ಡಿಸಂನ್ನು ಉತ್ತೇಜಿಸುತ್ತದೆ. ಸೋಯಾ ಪೌಡರ್‌ ಮತ್ತು ಸಪ್ಲಿಮೆಂಟ್ಸ್ ನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ. ದಿನವೊಂದರಲ್ಲಿ ಸೋಯಾಬೀನ್‌ನ ಒಂದು ಡಿಶ್‌ನ್ನಷ್ಟೇ ಸೇವಿಸಿ. ಅದೂ ಕೂಡ ಕಡಿಮೆ ಪ್ರಮಾಣದಲ್ಲಿ.

ಪುಟ್ಟ ಮಕ್ಕಳಿಗೆ ಸೋಯಾಯುಕ್ತ ಆಹಾರ ಕೊಡಬೇಡಿ : ಯಾವ ಮಕ್ಕಳಿಗೆ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಸೋಯಾ ಮಿಶ್ರಿತ ಆಹಾರ ಕೊಡಲಾಗುತ್ತದೋ ಅವರಿಗೆ ದೊಡ್ಡವರಾದ ಬಳಿಕ ಥೈರಾಯ್ಡ್ ಅಸಮತೋಲನದ ಅಪಾಯ ಹೆಚ್ಚುತ್ತದೆ.

ಬಂಜೆತನಕ್ಕೆ ಚಿಕಿತ್ಸೆ : ಬಂಜೆತನದ ಚಿಕಿತ್ಸೆ ಪ್ರಯತ್ನಗಳಲ್ಲಿ ಹೈಪೋ ಥೈರಾಯ್ಡಿಸಂಗೂ ಕೂಡ ಚಿಕಿತ್ಸೆ ನೀಡಲಾಗುತ್ತದೆ. ಹೈಪೋ ಥೈರಾಯ್ಡಿಸಂಗೆ ಚಿಕಿತ್ಸೆ ನೀಡಿದ ಬಳಿಕ ಬಂಜೆತನದ ಸಮಸ್ಯೆ ಹಾಗೆಯೇ ಮುಂದುವರಿದಲ್ಲಿ ಬೇರೆ ಚಿಕಿತ್ಸೆಗಳ ಅವಶ್ಯಕತೆ ಉಂಟಾಗಬಹುದು.

ಗರ್ಭಿಣಿಯರು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಥೈರಾಯ್ಡ್ ನ ಅಸಾಮಾನ್ಯ ಮಟ್ಟಕ್ಕೆ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ಥೈರಾಯ್ಡ್ ಗೆ ಸಂಬಂಧಪಟ್ಟ ಸಮಸ್ಯೆ ಇರುವುದು ಪತ್ತೆಯಾದರೆ ಸುರಕ್ಷಿತ ಗರ್ಭಾವಸ್ಥೆ, ಗರ್ಭಸ್ಥ ಶಿಶುವಿನ ಆರೋಗ್ಯ ಹಾಗೂ ಹೆರಿಗೆಗೆ ಸಂಬಂಧಪಟ್ಟ ಚಿಕಿತ್ಸೆ ಪಡೆಯಬೇಕು.

– ಡಾ. ಅನುಪಮಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ