ಈ ಬೇಸಿಗೆಯ ದಿನಗಳಲ್ಲಿ ಕಾಟನ್‌ ಉಡುಗೆಗಳಿಂದ ಸುಂದರವಾಗಿ ಕಂಗೊಳಿಸುವ ನೀವು, ಸ್ಟೈಲ್‌ ಮತ್ತು ಲುಕ್ಸ್ ದೃಷ್ಟಿಯಿಂದಲೂ ಹೆಚ್ಚು ಶೋಭಿಸುವಂತಾಗಬೇಕು. ಬಿಸಿಲಿನ ಝಳದ ಪರಿಣಾಮ ಕೇವಲ ಸ್ಟೈಲಿಶ್‌ ಡ್ರೆಸ್‌ ಮೇಲೆ ಮಾತ್ರವಲ್ಲ, ಬದಲಿಗೆ ಹೇರ್‌ಸ್ಟೈಲ್ ಮೇಲೂ ಆಗುತ್ತದೆ. ಬಿಸಿಲಿನ ಝಳ ತಡೆಯಲು ಕ್ಯಾಪ್ಸ್ ಅಥವಾ ಸ್ಕಾರ್ಫ್‌ ಬೇಕಾಗುತ್ತದೆ, ಆದರೆ ಅದು ನಿಮ್ಮ ಹೇರ್‌ಸ್ಟೈಲ್‌ನ್ನು ಪೂರ್ತಿ ಮುಚ್ಚಿ ಹಾಕುವಂತಿರಬಾರದು.

ನೀವು ಸಹ ಇಂಥದೇ ಗೊಂದಲಕ್ಕೆ ಸಿಲುಕಿ ನಿಮ್ಮ ಸ್ಟೈಲಿಶ್‌ ಲುಕ್ಸ್ ಮಿಸ್‌ ಮಾಡಿಕೊಳ್ಳುತ್ತಿದ್ದರೆ, ಇಲ್ಲಿನ 6 ಬಗೆಯ ಹೇರ್‌ಸ್ಟೈಲ್ ನಿಮಗೆ ಸಮ್ಮರ್‌ನಲ್ಲಿ ನೀಡಲಿವೆ ಬೆಟರ್‌ ಕೂಲ್‌ ಲುಕ್ಸ್ :

- ಪ್ರಮೀಳಾ ಕುಮಾರ್‌

ಲೇಯರ್ಡ್‌ ಲುಕ್ಸ್

ಬೇಸಿಗೆಯಲ್ಲಿ ಈ ಬಗೆಯ ಲೇಯರ್ಡ್‌ ಹೇರ್‌ ಸ್ಟೈಲ್ ಉತ್ತಮ ಆಪ್ಶನ್‌ ಆಗಿದೆ. ನಿಮ್ಮ ಹೇರ್‌ಕಟ್‌  ಲೇಯರ್ಡ್‌ ಆಗಿದ್ದರೆ, ನಿಮ್ಮ ಫ್ರಿಂಗ್ಸ್ ಗೆ ಬಹಳಷ್ಟು ವೇರಿಯೇಶನ್ಸ್ ಒದಗಿಸಬಹುದು. ಬಯಸಿದರೆ ನೀವು ಒಂದು ಇನ್‌ಸ್ಟೈಲರ್‌ ಸಹ ಬಳಸಬಹುದು. ಕೂದಲನ್ನು ಪಾರ್ಟ್‌ ಮಾಡಿ ಒಂದು ಬದಿಗೆ ಸರಿಸಿ. ಇದಾದ ಮೇಲೆ ನೀವು ನಿಮ್ಮ ಕೂದಲನ್ನು ಸೆಕ್ಷನ್‌ ಮಾಡಿ, ಬ್ಯಾಕ್‌ ಬ್ರಶ್‌ ಮಾಡಿ. ಈ ಹೇರ್‌ಸ್ಟೈಲ್ ಗುಂಡಗಿನ ಮುಖಕ್ಕೆ ಚೆನ್ನಾಗಿ ಒಪ್ಪುತ್ತದೆ.

ಬಾಕ್ಸರ್‌ ಬ್ರೆಡ್‌

ನೋಡಲು ಬಲು ಬ್ಯೂಟಿಫುಲ್ ಹಾಗೂ ಆಕರ್ಷಕ ಎನಿಸುವ ಈ ಸ್ಟೈಲ್ ಬಾಲಿವುಡ್‌ ನಟಿಯರ ಅಚ್ಚುಮೆಚ್ಚು. ಈ ಹೇರ್‌ಸ್ಟೈಲ್‌ಗಾಗಿ, ನಿಮ್ಮ ಕೂದಲನ್ನು 2 ವಿಭಾಗವಾಗಿ ವಿಂಗಡಿಸಿ, ಮಧ್ಯದಿಂದ ಬೈತಲೆ ತೆಗೆದುಕೊಳ್ಳಿ. ಕೂದಲನ್ನು ತುದಿಯಿಂದ ತೆಗೆದುಕೊಂಡು 2 ಬಾಕ್ಸರ್‌ ಬ್ರೆಡ್‌ ಮಾಡಿ. ಅಗತ್ಯವೆನಿಸಿದರೆ,  ಈ ಹೇರ್‌ಸ್ಟೈಲ್‌ಗೆ ನೀವು ಬ್ಯೂಟಿಫುಲ್ ಪಿಕ್‌ನಿಕ್‌ ಹ್ಯಾಟ್‌ ಕೂಡ ಧರಿಸಬಹುದು.

ಹಾಫ್‌ ಅಪ್‌ ಹಾಫ್‌ ಡೌನ್‌

ಈ ಹೇರ್‌ಸ್ಟೈಲ್‌ ಮಾಡಿಕೊಳ್ಳಲು, ಕೂದಲನ್ನು 2 ಭಾಗವಾಗಿ ವಿಂಗಡಿಸಿ, ಓಪನ್‌ ಆಗಿ ಬಿಡಿ. ಈಗ ಮೇಲ್ಭಾಗದ ಕೂದಲನ್ನು ತೆಗೆದುಕೊಂಡು ರೋಲ್‌ ಮಾಡುತ್ತಾ ಬ್ರೆಡ್‌ ಮಾಡಿ ಗಂಟು ಹಾಕಿ. ನೀವು ನಿಮ್ಮ ಹಾಫ್‌ ಬನ್‌ನ್ನು ಮೆಸಿ ಮಾಡಲು ಬಯಸಿದರೆ, ಈಗ ಬ್ಯಾಕ್‌ ಕೂಂಬ್‌ ಮಾಡಿಕೊಳ್ಳಬಹುದು. ಕೂದಲಿನ ಉತ್ತಮ ಟೆಕ್ಸ್ ಚರ್‌ಗಾಗಿ, ನೀವು ಶೈನ್‌ ಸ್ಪ್ರೇ ಸಹ ಬಳಸಬಹುದು. ಕ್ಯೂಟ್‌ ಲುಕ್ಸ್ ಗಾಗಿ, ನೀವು ಬನ್‌ ಹಿಂದೆ, ಬೋ ಸಹ ಸಿಗಿಸಬಹುದು.

ಕರ್ಲ್ ಲುಕ್ಸ್

ಯಾರಿಗೆ ಕರ್ಲಿ ಹೇರ್‌ ಇದೆಯೋ, ಅವರು ಕೃತಕವಾಗಿ ಕೂದಲನ್ನು ಕರ್ಲ್ ಮಾಡಿಸಬೇಕಾದ ಅಗತ್ಯವಿಲ್ಲ. ಆದರೆ ಯಾರಿಗೆ ಸ್ಟ್ರೇಟ್‌ ಕೂದಲು ಇರುತ್ತದೋ ಅವರು ಕೂದಲನ್ನು ಕರ್ಲ್ ಮಾಡಿಸಿ, ಗ್ಲಾಮರಸ್‌ ಸ್ಟೈಲಿಶ್‌ ಲುಕ್ಸ್ ಪಡೆಯಬಹುದು. ಸಿನಿಮಾ ನಟಿಯರು ಹಲವು ಚಿತ್ರಗಳಲ್ಲಿ ಇದನ್ನು ಅನುಸರಿಸಿದ್ದಾರೆ. ಇಂಥ ರಫ್‌ ಶ್ಯಾಬಿ ಹೇರ್‌ಸ್ಟೈಲ್‌ ಈಗ ಹೆಚ್ಚು ಪ್ರಚಲಿತ. ಸಾಫ್ಟ್ ಕರ್ಲ್ಸ್ ಜೊತೆಗೆ ಹಾರ್ಡ್‌ ಕರ್ಲ್ಸ್, ಔಟರ್‌ ಕರ್ಲ್ಸ್ ಬಹು ಚೆನ್ನಾಗಿ ಒಪ್ಪುತ್ತದೆ. ನೀವು ಮ್ಯಾಗಿ ಕರ್ಲ್ಸ್ ನ್ನು ಪರ್ಮನೆಂಟ್‌ ಯಾ ಟೆಂಪರರಿ ಸಹ ಮಾಡಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ