26 ವರ್ಷದ ಅನುಶ್ರೀಗೆ ಪ್ರೆಗ್ನೆನ್ಸಿಯ 9ನೇ ತಿಂಗಳಲ್ಲಿ ಇದ್ದಕ್ಕಿದ್ದಂತೆ ತೊಡೆಗಳಲ್ಲಿ ನೋವುಂಟಾಯಿತು. ನೋವಿದ್ದ ಕಡೆ ಊತ ಕಂಡುಬಂದಿತ್ತು. ನಂತರ 7 ವರ್ಷಗಳಲ್ಲಿ ಆ ಊತ ತೊಂದರೆ ಉಂಟು ಮಾಡುವ ವೆರಿಕೋಸ್‌ ವೇನ್ಸ್ ರೂಪ ಪಡೆಯಿತು. ನಿಧಾನವಾಗಿ ಕಾಲಿನ ನಾಡಿಗಳ ಮಧ್ಯದಿಂದ ಹೊರಟು ಹಿಮ್ಮಡಿಯವರೆಗೆ ತಲುಪಿತು. ಇದರಿಂದ ಅನುಶ್ರೀಗೆ ನಡೆಯುವುದೂ ಕಷ್ಟವಾಯಿತು.

50 ವರ್ಷದ ಗೀತಾ ಯಾವಾಗಲೂ ಚೂಟಿಯಾಗಿರುತ್ತಿದ್ದರು. ಅವರು ಮ್ಯಾರಥಾನ್‌ ಓಟದಲ್ಲೂ ಪಾಲ್ಗೊಂಡಿದ್ದರು. ಅವರಿಗೆ ಧಿಡೀರನೆ ನಡೆಯಲು ತೊಂದರೆಯಾಯಿತು. ಅದಕ್ಕೆ ಕಾರಣ ಕೆಲವು ವರ್ಷಗಳಿಂದ ವೆರಿಕೋಸ್‌ ವೇನ್ಸ್ ದೇಹದ ಮೇಲೆ ಉಬ್ಬಿ ಎದ್ದು ಕಾಣುತ್ತಿತ್ತು.

40 ವರ್ಷದ ರಾಧಾ ಒಂದು ಗ್ರಾಸರಿ ಶಾಪ್‌ ಇಟ್ಟುಕೊಂಡಿದ್ದಾರೆ.  ಅದರಲ್ಲಿ ಸುಮಾರು 14 ಗಂಟೆ ಅವರು ನಿಂತಿರಬೇಕಾಗುತ್ತದೆ. ಅದರಿಂದ ಅವರ ಎರಡೂ ಕಾಲುಗಳಲ್ಲಿ ಊತ ಇರುತ್ತಿತ್ತು. ಅವರ ಹಿಮ್ಮಡಿಗಳಲ್ಲಿ ಗಂಟಾಯಿತು. ಬಹಳಷ್ಟು ಚಿಕಿತ್ಸೆ ಮಾಡಿಸಿದ ಮೇಲೂ ಊತ ಹಾಗೂ ಗಂಟು ಸರಿಹೋಗಲಿಲ್ಲ. ಆಗ ವೆರಿಕೋಸ್‌ ವೇನ್ಸ್ ಸಮಸ್ಯೆ ಇದೆಯೆಂದು ತಿಳಿಯಿತು.

ವೆರಿಕೋಸ್ವೇನ್ಸ್ ಅಂದರೇನು?

ವೆರಿಕೋಸ್‌ ವೇನ್ಸ್ ಉದ್ದನೆಯ ದೊಡ್ಡ ನಾಡಿಯಾಗಿದೆ. ಅದು ಊದಿದ್ದು ತ್ವಚೆಯ ಮೇಲ್ಮೈನಲ್ಲಿ  ಉಬ್ಬಿಕೊಂಡಿರುತ್ತದೆ. ಅವುಗಳ ಬಣ್ಣ ಗಾಢ ಬದನೆಯ ಬಣ್ಣ ಅಥವಾ ನೀಲಿ ಆಗಿರಬಹುದು. ನೋಡಲು ತಿರುಗಿದ್ದು ಉಬ್ಬಿರುತ್ತದೆ. ಈ ನಾಡಿಗಳು ಸಾಮಾನ್ಯವಾಗಿ ಮೊಣಕಾಲು ಹಾಗೂ ಹಿಮ್ಮಡಿಯ ಮಧ್ಯದಲ್ಲಿ ಮತ್ತು ಕಾಲಿನ ಹಿಂದೆ ಅಥವಾ ಒಳಭಾಗದಲ್ಲಿ ಇರುತ್ತದೆ. ನಾಡಿಗಳಲ್ಲಿನ ವಾಲ್ವ್ ‌ನಿಂದ ರಕ್ತ ಹೃದಯದಲ್ಲಿ ಹರಿಯುತ್ತದೆ. ಅವು ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಅದರಿಂದ ನಾಡಿಗಳಲ್ಲಿ ರಕ್ತ ಒಂದೆಡೆ ಕೂಡಿಕೊಳ್ಳುತ್ತದೆ. ಅವು ಉಬ್ಬಿ ದೊಡ್ಡದಾಗುತ್ತವೆ. ಮಹಿಳೆಯರಲ್ಲಿ ಈ ಸಮಸ್ಯೆ ಅಧಿಕ.

ಫೋರ್ಟಿಸ್‌ ಎಸ್ಕಾರ್ಟ್‌ ಹಾರ್ಟ್‌ ಇನ್‌ಸ್ಟಿಟ್ಯೂಟ್‌ನ ಸೀನಿಯರ್‌ ಕನ್ಸಲ್ಟೆಂಟ್‌ ವ್ಯಾಸ್ಕುಲಾರ್‌ ಸರ್ಜನ್‌ ಡಾ. ಸುಹೇಲ್ ‌ಪ್ರಕಾರ, ವೆರಿಕೋಸ್‌ ವೇನ್ಸ್ ಅಸಾಮಾನ್ಯವಾದ, ಅಗಲವಾದ ರಕ್ತವಾಹಕಗಳಾಗಿವೆ. ಹೊರಪದರ ಬಲಹೀನವಾದಾಗ ಅವು ಉಂಟಾಗುತ್ತವೆ. ಅನೇಕ ಬಾರಿ ಇವು ತೆಳ್ಳಗಿನ ಕೆಂಪು ನಳಿಕೆಗಳಿಂದ ಸುತ್ತುವರಿದಿರುತ್ತವೆ. ಅದನ್ನು ಸ್ಪೈಡರ್‌ ವೇನ್ಸ್ ಎಂದು ಕರೆಯುತ್ತಾರೆ. ಈ ವೇನ್ಸ್ ಹೆಚ್ಚಾಗಿ ಕಾಲುಗಳು ಮತ್ತು ಪೆಲ್ವಿಕ್‌ ಕ್ಷೇತ್ರಗಳಿಂದ ಹೊರಬರುತ್ತವೆ. ಅದರಿಂದಾಗಿ ತ್ವಚೆಯಲ್ಲಿ ಊತ ಬರುತ್ತದೆ. ಅವು ಗಡುಸಾಗಿ, ಗಾಢ ಬಣ್ಣದ್ದಾಗಿರುತ್ತವೆ. ಇದರಿಂದಾಗಿ ಮಾಂಸಖಂಡಗಳಲ್ಲಿ ಎಳೆತ ಇರುತ್ತದೆ. ಕಾಲುಗಳಲ್ಲಿ ತೂಕ ಹೆಚ್ಚಾದಂತೆ ನೋವು ಇರುತ್ತದೆ.

ಮಂಡಿಗಳಲ್ಲಿ ನೋವು ಇರುವುದರಿಂದ ನಡೆಯಲು ತೊಂದರೆಯಾಗುತ್ತದೆ. ಈ ನಾಡಿಗಳ ಸುತ್ತಮುತ್ತ ನವೆಯಾಗುತ್ತದೆ. ಬಹಳ ಹೊತ್ತು ನಿಂತಿದ್ದರೆ ಅಥವಾ ಕುಳಿತಿದ್ದರೆ ತೊಂದರೆ ಇನ್ನಷ್ಟು ಹೆಚ್ಚಾಗುತ್ತದೆ. ಮಹಿಳೆಯರಲ್ಲಿ ಪ್ರೆಗ್ನೆನ್ಸಿ ಮತ್ತು ಪೀರಿಯಡ್ಸ್ ಸಂದರ್ಭದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ವಯಸ್ಸು ಹೆಚ್ಚಾದಂತೆ ವೆರಿಕೋಸ್‌ ವೇನ್ಸ್ ಹೆಚ್ಚು ಹರಡತೊಡಗುತ್ತದೆ. ನಡೆಯುವಾಗ, ಏಳಲು ಕೂರಲು ಬಹಳ ತೊಂದರೆಯಾಗುತ್ತದೆ.

ಏಕೆ ಹೀಗಾಗುತ್ತದೆ?

ಆನುವಂಶಿಕತೆಯ ಜೊತೆಗೆ ವೆರಿಕೋಸ್‌ ವೇನ್ಸ್ ವಿಕಸಿತಗೊಳ್ಳಲು ಇತರ ಕಾರಣಗಳೂ ಇವೆ. ಹೆಚ್ಚುತ್ತಿರುವ ವಯಸ್ಸು, ಹೆಚ್ಚು ಸಮಯದವರೆಗೆ ಒಂದೇ ಕಡೆ ನಿಂತಿರುವುದು, ತೂಕ ಹೆಚ್ಚಾಗುವುದು, ಪ್ರೆಗ್ನೆಸ್ಸಿ ಸಂದರ್ಭದಲ್ಲಿ ಉಂಟಾಗುವ ಹಾರ್ಮೋನ್‌ ಬದಲಾವಣೆ, ಬರ್ಥ್‌ ಕಂಟ್ರೋಲ್ ಪಿಲ್ಸ್ ಉಪಯೋಗ, ಹಾರ್ಮೋನ್‌ ರೀಪ್ಲೇಸ್‌ಮೆಂಟ್‌ ಥೆರಪಿ ಪಡೆಯುವುದು, ಚಕ್ಕಂಬಟ್ಟಲು ಹಾಕಿಕೊಂಡು ಬಹಳ ಹೊತ್ತು ಕೂಡುವುದು, ಟೈಟ್‌ ಅಂಡರ್‌ ಗಾರ್ಮೆಂಟ್‌ ಧರಿಸುವುದು, ನಾಡಿಗಳಿಗೆ ಏಟು ಬೀಳುವುದು ಇತ್ಯಾದಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ