ಯಾವುದೇ ಯುವತಿಯ ಬದುಕಿನಲ್ಲಿ ಮದುವೆಯ ದಿನ ಅತ್ಯಂತ ವಿಶೇಷ ದಿನವಾಗಿರುತ್ತದೆ. ಅಂದು ಅವಳು ಎಲ್ಲರ ಆಕರ್ಷಣೆಯ ಕೇಂದ್ರವಾಗಿರುತ್ತಾಳೆ. ಎಲ್ಲರ ದೃಷ್ಟಿ ಅವಳ ಮೇಲೇ ಇರುತ್ತದೆ. ಹೀಗಾಗಿ ಆ ವಿಶೇಷ ದಿನ ಅವಳು ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಇಚ್ಛಿಸುತ್ತಾಳೆ.
ತ್ವಚೆಯ ಕಾಂತಿ ಇದ್ದಕ್ಕಿದ್ದಂತೆ ಉಂಟಾಗುವುದಿಲ್ಲ. ಮುಖದ ಕಾಂತಿ ಒಳ್ಳೆಯ ಆರೋಗ್ಯದ ಜೊತೆಜೊತೆಗೆ ತ್ವಚೆಯನ್ನು ಚೆನ್ನಾಗಿ ಗಮನಿಸಿಕೊಳ್ಳುವುದರಿಂದ ಉಂಟಾಗುತ್ತದೆ. ಅದು ನಿಮ್ಮ ಬೌದ್ಧಿಕ ಸ್ಥಿತಿಗತಿ, ಆಹಾರ, ತ್ವಚೆಯ ರಚನೆ, ಹೈಡ್ರೇಶನ್ (ಆರ್ದ್ರತೆ), ಖುಷಿ ಮತ್ತು ಒಳ್ಳೆಯ ನಿದ್ದೆ ಎಲ್ಲದರ ಒಟ್ಟು ಕೊಡುಗೆಯಾಗಿದೆ. ಇದಲ್ಲದೆ ಒಳ್ಳೆಯ ಆಹಾರ ಮತ್ತು ಒತ್ತಡ ರಹಿತರಾಗಿ ಇರುವುದೂ ಸಹ ಸೌಂದರ್ಯಪೂರ್ಣ ಕಾಂತಿಯ ಮೊಟ್ಟ ಮೊದಲ ಅಗತ್ಯವಾಗಿದೆ.
ಹಾಗಾದರೆ ಕಲೆಗಳಿಲ್ಲದ ಹಾಗೂ ಹೊಳೆಯುವ ತ್ವಚೆ ಪಡೆಯಲು ಈ ವಿಧಾನಗಳನ್ನು ಅನುಸರಿಸೋಣ :
ಗಂಧದ ಲೇಪನ
ಇದರಿಂದ ನಿಮ್ಮ ತ್ವಚೆಯಲ್ಲಿ ಬಿಗುವು ಬರುತ್ತದೆ. ತ್ವಚೆಯಲ್ಲಿ ಬಿಗುವು ಇದ್ದಷ್ಟೂ ಅದರ ತೆರೆದ ರೋಮರಂಧ್ರಗಳು ಅಷ್ಟೇ ಕಡಿಮೆ ಇರುತ್ತವೆ. ಅದರಿಂದ ತ್ವಚೆ ಹೊಳೆಯುತ್ತಿರುತ್ತದೆ. ತ್ವಚೆಯ ಕಲೆಗಳು ಮಾಯವಾಗುತ್ತವೆ. ಅದರ ಕೋಮಲತೆಯೂ ಸದೃಢವಾಗಿರುತ್ತದೆ. ಗಂಧವನ್ನು ನಿಯಮಿತವಾಗಿ ಲೇಪಿಸಿದರೆ ತ್ವಚೆಯಲ್ಲಿ ನವೆ ಮತ್ತು ದದ್ದುಗಳಾಗುವಿಕೆ ನಿಧಾನವಾಗಿ ನಿಲ್ಲುತ್ತದೆ.
ನಿಂಬೆ ಮತ್ತು ಜೇನುತುಪ್ಪ
ತ್ವಚೆಗೆ ಹೊಳಪನ್ನು ತರಲು ನಿಂಬೆ ಮತ್ತು ಜೇನುತುಪ್ಪದ ಮಿಶ್ರಣವನ್ನು ಉಪಯೋಗಿಸಬಹುದು. ಆ ಮಿಶ್ರಣವನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿ. 10-15 ನಿಮಿಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.
ತ್ವಚೆಯ ಮೇಲಿನ ಪದರದ ಸ್ವಚ್ಛತೆ
ಸಕ್ಕರೆ ಮತ್ತು ಕಿತ್ತಳೆಯ ತಿರುಳಿನ ಮಿಶ್ರಣವನ್ನು ಮುಖ ಹಾಗೂ ಕೈಗಳ ತ್ವಚೆಯ ಮೇಲಿನ ಪದರನ್ನು ತೆಗೆಯಲು ಉಪಯೋಗಿಸಲಾಗುತ್ತದೆ. ಈ ಮಿಶ್ರಣವನ್ನು ಕೈಗಳಿಂದ ಹಗುರವಾಗಿ ಶರೀರದ ಮೇಲೆ ಹಚ್ಚಿ. ನಿಮ್ಮ ತ್ವಚೆಯ ಮೃತಕೋಶಗಳು ದೂರವಾಗುತ್ತವೆ. ಅವುಗಳ ಕಾಂತಿ ವಾಪಸ್ಸಾಗುತ್ತದೆ.
ತ್ವಚೆಯ ಹೊಳಪಿಗೆ ಆಧುನಿಕ ವಿಧಾನ
ವಿಜ್ಞಾನ ಎಲ್ಲಿಯವರೆಗೆ ಮುಂದುವರಿದಿದೆ ಎಂದರೆ ನಾವು ಸೌಂದರ್ಯ ಚಿಕಿತ್ಸೆಗಳಿಂದ ಕೂಡಲೇ ನಮ್ಮ ತ್ವಚೆಗೆ ಕಾಂತಿ ತಂದುಕೊಳ್ಳಬಹುದು. ಕೆಲವು ಒಳ್ಳೆ ಪೀಲ್ಸ್ ಗಳಿಂದ ತ್ವಚೆಯ ಮೃತಕೋಶಗಳನ್ನು ನಿವಾರಿಸಬಹುದು. ಲುಕ್‌ನ್ನು ತಾಜಾತನದಿಂದ ಕೂಡಿರುವಂತೆ ಆಕರ್ಷಕಗೊಳಿಸಬಹುದು. ಲೇಸರ್ ಟೋನಿಂಗ್ ಕೂಡ ತ್ವಚೆಯ ರಚನೆ ಹಾಗೂ ಕಾಂತಿಯಲ್ಲಿ ಸುಧಾರಣೆ ತರುತ್ತದೆ. ಒಬ್ಬ ವ್ಯಕ್ತಿಗೆ ಹೊಸತನ ಹಾಗೂ ತಾಜಾತನ ತುಂಬಿದ ಆಕರ್ಷಕ ಲುಕ್ ಕೊಡಲು ಜೂಲೆಡರ್ಮ್ ನಂತಹ ಫಿಲರ್ಸ್ ಉಪಯೋಗಿಸಿ ಒಳ್ಳೆಯ ಪರಿಣಾಮ ಪಡೆಯಬಹುದು. ಜೂಲೆಡರ್ಮ್ ನ್ನು ಕಣ್ಣುಗಳ ಕೆಳಗಿನ ಕಪ್ಪು ವರ್ತುಲವನ್ನು ತುಂಬಲು ಉಪಯೋಗಿಸಲಾಗುತ್ತದೆ. ಆ ವರ್ತುಲಗಳು ಕೆಲಸದ ಒತ್ತಡದಿಂದ ಕೂಡಿರುವ ಮಹಿಳೆಯರಿಗೆ ಹೆಚ್ಚು ಆಯಾಸದ ಲುಕ್ ಕೊಡುತ್ತವೆ. ಈ ಹೊಸ ಪದ್ಧತಿಯ ಆಚರಣೆಯಿಂದ ತಾಜಾತನ ಹಾಗೂ ಸಂತಸದ ಲುಕ್ ಬರುತ್ತದೆ.
ಆಧುನಿಕ ವಧುಗಳು ಬೊಟಾಕ್ಸ್ ನಿಂದ ಹಿಡಿದು ಡೀ ಟೋನಿಂಗ್ ಮತ್ತು ಲೈಪೋಸಕ್ಷನ್‌ವರೆಗೆ ಎಲ್ಲ ರೀತಿಯ ಆಧುನಿಕ ಸೌಂದರ್ಯ ಚಿಕಿತ್ಸೆಗಳನ್ನು ಪಡೆಯಬಹುದು. ಬನ್ನಿ, ಈಗ ಕೆಲವು ನಾನ್ ಇನ್‌ವೇಸಿವ್ ಅಂದರೆ ಕೊಯ್ಯುವುದು, ಸೀಳುವುದು ಇಲ್ಲದ ಸೌಂದರ್ಯ ಚಿಕಿತ್ಸಾ ಪದ್ಧತಿಗಳತ್ತ ಗಮನಹರಿಸೋಣ. ಅವುಗಳಿಂದ ಜಾದುವಿನಂತಹ ಪರಿಣಾಮ ಉಂಟಾಗುತ್ತದೆ. ಲಿಪ್‌ಆ್ಯಗ್ಮೆಂಟೇಶನ್ ಹ್ಯಾಲುರೋಸಿಕ್ ಆ್ಯಸಿಡ್ ಆಧರಿಸಿದ ಫಿಲರ್ಸ್‌ನ ಇಂಜೆಕ್ಷನ್ ನೀಡುವುದರಿಂದ ಸೌಂದರ್ಯದ ಬೇರೆ ಬೇರೆ ಪರಿಣಾಮಗಳು ಉಂಟಾಗುತ್ತವೆ. ತ್ವಚೆಯಲ್ಲಿ ಹೊಸ ಕಾಂತಿ ತರಲು ಇದನ್ನು ಉಪಯೋಗಿಸಲಾಗುತ್ತದೆ.