ಅತಿ ಹಿಂದಿನ ಕಾಲದ ಮಾತುಗಳಲ್ಲಿ 40ರ ನಂತರ ಜೀವನವೇ ಮುಗಿದುಹೋಯಿತು, ಇನ್ನೇನಿದ್ದರೂ ವೈರಾಗ್ಯವಷ್ಟೆ ಎನ್ನುತ್ತಿದ್ದರು. ಆದರೆ ಈಗಿನ ಹೊಸ ಯುಗದ ಜೀವನದಲ್ಲಿ ನವನವೀನ  ವೈದ್ಯಕೀಯ ಕ್ರಾಂತಿಗಳಿಂದಾಗಿ 40+ ಈಗ  20 + ಆಗಿ ಪರಿಣಮಿಸಿದೆ. 40ರ ಘಟ್ಟ ಸಮೀಪಿಸುತ್ತಿದ್ದಂತೆ ಹೆಂಗಸರಿಗೆ, ಮುಖ್ಯವಾಗಿ ಆರೋಗ್ಯದ ವಿಷಯದಲ್ಲಿ ತೊಂದರೆಗಳೇ ಹೆಚ್ಚು.

ಆದರೆ ಈಗ 40+ನ  ಮಹಿಳೆಯರು ವೈದ್ಯಕೀಯ ಕ್ರಾಂತಿಯಿಂದಾಗಿ, ಯಾವುದೇ ಟೆನ್ಶನ್‌ಗಳಿಲ್ಲದೆ ಹಾಯಾಗಿ ದಿನಗಳನ್ನು ಮುಂದೂಡುತ್ತಿದ್ದಾರೆ. ಅದೇ ಸಮಯದಲ್ಲಿ ಕಿರಿ ವಯಸ್ಸಿನ ತರುಣಿಯರು ತಾವು ತಮ್ಮ ಕೆರಿಯರ್‌ ರೂಪಿಸಿಕೊಳ್ಳುತ್ತಾ, 40+ನ್ನು ಮೈಲಿಗಲ್ಲಾಗಿ ಗುರುತಿಸಿಕೊಂಡು, ತಮ್ಮ ಶಕ್ತಿಸಾಮರ್ಥ್ಯ ನಿರೂಪಿಸುತ್ತಾ, ಜೀವನದ ಮೌಲ್ಯಗಳಿಗೆ ಹೊಸ ಅರ್ಥ ಕಲ್ಪಿಸುತ್ತಾ, ಯಾವುದೇ ಅಳುಕು ಅಂಜಿಕೆ ಇಲ್ಲದೆ, ಸಾಮಾಜಿಕ ಪಿಡುಗುಗಳನ್ನು  ದಿಟ್ಟವಾಗಿ ಎದುರಿಸುತ್ತಾ, ತಮ್ಮ ಸಂತೋಷಕ್ಕೆ ತಡೆ ಇಲ್ಲದಂತೆ ಮಾಡಿಕೊಳ್ಳುತ್ತಿದ್ದಾರೆ.

Dr.-Hrishikesh-Pai

ಇಂದಿನ ಸೆಲೆಬ್ರಿಟಿ ಮಾಮ್ಸ್ ನೋಡಿ, ಮುಖದಲ್ಲಿ ಸುಕ್ಕುಗಳಿಲ್ಲದೆ ನಳನಳಿಸುತ್ತಾ, ತಮ್ಮ ಜೈವಿಕ ಗಡಿಯಾರವನ್ನೂ ಸರಿದೂಗಿಸಿಕೊಳ್ಳುತ್ತಿದ್ದಾರೆ. ಹಾಗಿದ್ದರೆ 40+ ಈಗಿನ 20+ ಆಗುತ್ತಿರುವುದು ನಿಜವೇ? ಈ ಖ್ಯಾತನಾಮರನ್ನೇ ಗಮನಿಸಿ....

ಹ್ಯಾಲಿಬೆರಿ (42 ಹಾಗೂ 47ರಲ್ಲಿ  ತಾಯಿ ಆದವರು), ಮೆಡೋನಾ (42ರಲ್ಲಿ), ಜೆನಿಫರ್‌ ಲೋಪೇಸ್‌ (39ರಲ್ಲಿ ಅವಳಿಗಳು), ಸ್ಮಾಲ್ ಹೇಕ್‌ (41), ಉಮಾ ತುರ್ಮನ್‌ (41). ಮರಿಯಾಜ್‌ ಕೇರಿ ಹಾಗೂ ಜೀನ್‌ಸೇಮರ್‌ ತಮ್ಮ 52 ಹಾಗೂ 45ರಲ್ಲಿ ಅವಳಿಗಳನ್ನು ಪಡೆದರು! ಖ್ಯಾತ ಪಾಪ್‌ಸಿಂಗರ್‌ ನಟಿ ರಾಗೇಶ್ವರಿ ಲೂಂಬಾ ಸಹ ತಮ್ಮ 40ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮವಿತ್ತರು.

ಈ ಪಟ್ಟಿಗೆ ಹೊಸ ಸೇರ್ಪಡೆ ಎಂದರೆ 1997ರ ಮಿಸ್‌ ವರ್ಲ್ಡ್ ಡಯಾನಾ ಹೇಡನ್‌. 42ರಲ್ಲಿ ಈ ವರ್ಷದ ಆರಂಭದಲ್ಲಿ ಸುಂದರ ಹೆಣ್ಣುಮಗು ಆರ್ಯಾಳಿಗೆ ಜನ್ಮವಿತ್ತರು. ಡಯಾನಾ 2013ರಲ್ಲಿ ಲಾಸ್‌ವೆಗಾಸ್‌ನ ಕೋಲಿನ್‌ ಡಿಕ್‌ರನ್ನು ಮದುವೆಯಾಗಿದ್ದರು. ಕೋಲಿನ್‌ ಮುಂಬೈನಲ್ಲಿ ಒಂದು ಅಂತಾರಾಷ್ಟ್ರೀಯ ಕಂಪನಿಗಾಗಿ ಕೆಲಸ ಮಾಡುತ್ತಿದ್ದರು. ಇದರಲ್ಲಿ ಕುತೂಹಲದ ವಿಷಯ ಅಂದಿರಾ? 8 ವರ್ಷಕ್ಕೆ ಮೊದಲೇ ಹೇಡನ್‌ ತಮ್ಮ ಎಗ್‌ ಪ್ರಿಸರ್ವ್ ಮಾಡಿಸಿದ್ದರು, ಅದರಿಂದ ಹುಟ್ಟಿದ್ದೇ ಈ ಮಗು! ಆಕೆಯನ್ನು ಟ್ರೀಟ್‌ ಮಾಡಿದ ಮುಂಬೈನ ವೈದ್ಯರಾದ ಡಾ. ನಂದಿತಾ ಪಾಲ್‌ಶೇಖರ್‌ ಹಾಗೂ ಡಾ. ಹೃಷಿಕೇಶ್‌ ಪೈ ನಡುವೆ ನಡೆದ ಎಗ್‌ ಫ್ರೀಝಿಂಗ್‌ ಟೆಕ್ನಾಲಜಿ ಹಾಗೂ ಪ್ರಸ್ತುತ ಮಹಿಳೆಗೆ ಅದೆಷ್ಟು ಮಹತ್ತರವಾದುದು ಎಂಬುದರ ಸಂವಾದದ ಮುಖ್ಯಾಂಶಗಳು :

health

ಡಯಾನಾ ಜೊತೆಗಿನ ಸಂಭಾಷಣೆ

ನಾನು ಮೊದಲಿನಿಂದಲೂ ವೈದ್ಯಕೀಯ ಲೇಖನಗಳನ್ನು ನಿರಂತರಾಗಿ ಓದಿ, ಗಮನಿಸುವವಳು. ಎಗ್‌ ಫ್ರೀಝಿಂಗ್‌ ಕುರಿತಾಗಿ  10 ವರ್ಷದ ಹಿಂದೆ ವಿವರಗಳನ್ನು ಸಂಗ್ರಹಿಸಿದ್ದೆ. ಇದನ್ನು ಅಮೆರಿಕಾ, ಆಸ್ಟ್ರೇಲಿಯಾಗಳಲ್ಲಿ ಮುಖ್ಯವಾಗಿ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬಳಸುತ್ತಿದ್ದರು. ರೋಗಿ ಆ ಕಾಯಿಲೆಯಿಂದ ಹೊರಬಂದ ನಂತರ ಮಗು ಪಡೆಯಲು ಇದೊಂದು ವರದಾನವಾಗಿತ್ತು.

ನಾನು ಅದರ ಬಗ್ಗೆ ಹೆಚ್ಚು  ವಿವರಗಳನ್ನು ಸಂಗ್ರಹಿಸಿದಷ್ಟೂ, ನಾನು ನನ್ನ ಎಗ್ಸ್ ಪ್ರಿಸರ್ವ್ ಮಾಡಿ ಮುಂದೆ ನನ್ನ ಭವಿಷ್ಯದಲ್ಲಿ ಸೂಕ್ತ ಸಂಗಾತಿ ದೊರಕಿದ ನಂತರ, ತಾಯಿಯಾಗಲು ಸೂಕ್ತ ಸಮಯಾವಕಾಶ ದೊರೆತಾಗ ಅದನ್ನು ಬಳಸಿಕೊಳ್ಳಬೇಕೆಂದು ನಿರ್ಧರಿಸಿದೆ. ನನಗೆ ವಯಸ್ಸಾಗಿ ಆ ಸಂದರ್ಭದಲ್ಲಿ ನೈಸರ್ಗಿಕವಾಗಿ ಹೆರಿಗೆ ಆಗದಿದ್ದಾಗ, ಈ ವಿಧಾನ ನಿಜಕ್ಕೂ ಒಂದು ಪವಾಡ ಆಗಲಿತ್ತು. ಈ ಟೆಕ್ನಿಕ್‌ ಈಗಾಗಲೇ ನಮ್ಮ ಭಾರತಕ್ಕೆ  ಬಂದಿದ್ದು,  ಮುಂಬೈನಲ್ಲಿ ಲಭ್ಯವಿರುವ ವಿವರಗಳು ಗೊತ್ತಿರಲಿಲ್ಲ. ನನ್ನ ಫ್ರೆಂಡ್‌ ಒಬ್ಬಳ ಮುಖಾಂತರ ಈ ವೈದ್ಯರನ್ನು ಸಂಪರ್ಕಿಸಿ, ಅವರು ಸುದೀರ್ಘ ಚರ್ಚೆಯ ನಂತರ ನನ್ನ ಸಂದೇಹಗಳೆಲ್ಲವನ್ನೂ ನಿವಾರಿಸಿದಾಗ,

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ