ನೀವು ಇಷ್ಟಪಡುವವರಿಗೆ ನಿಮ್ಮ ಫೀಲಿಂಗ್ಸ್ ತಲುಪಿಸುವ ಅತ್ಯಂತ ಉತ್ತಮ ಮಾಧ್ಯಮ ಉಡುಗೊರೆ. ಹಾಗೆ ನೋಡಿದರೆ ಇಡೀ ವರ್ಷ ಅವನ್ನು ಕೊಡುವುದು, ಸ್ವೀಕರಿಸುವುದು ನಡೆದೇ ಇರುತ್ತದೆ. ಆದರೆ ವರ್ಷದ ಅತ್ಯಂತ ದೊಡ್ಡ ಹಬ್ಬ ದೀಪಾವಳಿ ಬಂದಾಗ ಎಲ್ಲ ಕಡೆ ಬೆಳಕು ಜಗಮಗಿಸುತ್ತದೆ. ಹೀಗಿರುವಾಗ ನಿಮ್ಮ ಜೀವನ ಸಂಗಾತಿಗೆ ವಿಶೇಷ ಉಡುಗೊರೆ ಕೊಡಬೇಕು. ಏಕೆಂದರೆ ಈ ಸಂದರ್ಭದಲ್ಲಿ ಉಡುಗೊರೆಯ ಮಹತ್ವ ಇನ್ನಷ್ಟು ಹೆಚ್ಚು. ವರ್ಷವಿಡೀ ನಿಮ್ಮ ಕುಟುಂಬದವರನ್ನು ಗಮನಿಸಿಕೊಂಡು ಪ್ರೀತಿ ಸಿಂಪಡಿಸುವ ಪತ್ನಿಗೆ ಕೃತಜ್ಞತೆ ವ್ಯಕ್ತಪಡಿಸುವ ಅವಕಾಶ ದೀಪಾವಳಿಗಿಂತ ಉತ್ತಮವಾದದ್ದು ಯಾವುದಿದೆ?

ಈ ದೀಪಾವಳಿಯಲ್ಲಿ ನಿಮ್ಮ ಬೆಟರ್‌ಹಾಫ್‌ಗೆ ಜ್ಯೂವೆಲರಿ ಗಿಫ್ಟ್ ಕೊಟ್ಟು ಹೇಗೆ ಒಂದು ದೀಪದ ರೂಪ ಕೊಡಬಹುದೆಂದು ತಿಳಿಯೋಣ. ನೀವು ತಂದುಕೊಟ್ಟ ಒಡವೆಗಳ ಉಡುಗೊರೆಯನ್ನು ಧರಿಸಿ ಆಕೆ ದೀಪಾವಳಿಯ ಪಾರ್ಟಿಯಲ್ಲಿ ಸೆಂಟರ್‌ ಆಫ್‌ ಅಟ್ರಾಕ್ಷನ್‌ ಆಗುತ್ತಾರೆ. ಅಲ್ಲದೆ ನಿಮ್ಮ ಉಡುಗೊರೆ ನಿಮ್ಮ ಸಂಬಂಧವನ್ನು ಇನ್ನಷ್ಟು ಸದೃಡಗೊಳಿಸುತ್ತದೆ.

ಜ್ಯೂವೆಲರಿಯೇ ಬೆಟರ್ಗಿಫ್ಟ್

ಆಭರಣಗಳೆಂದರೆ ಮಹಿಳೆಯರಿಗೆ ವಿಶೇಷ ಒಲವೆಂದು ಎಲ್ಲರಿಗೂ ಗೊತ್ತು. ಆಭರಣಗಳೊಂದಿಗೆ ಅವರು ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಏಕೆಂದರೆ ಆಭರಣಗಳು ಅವರನ್ನು ಸುಂದರವಾಗಿ ಕಾಣಿಸುವ ಜೊತೆಗೆ ಆರ್ಥಿಕವಾಗಿಯೂ ಸಂಪನ್ನರಾಗಿಸುವ ಅನುಭವ ಉಂಟುಮಾಡುತ್ತದೆ. ಆದ್ದರಿಂದ ಆಭರಣಕ್ಕಿಂತಲೂ ಉತ್ತಮವಾದ ಉಡುಗೊರೆ ಬೇರೆ ಯಾವುದಿದೆ?

ಬೆಟರ್ಹಾಫ್ಗೆ ಜ್ಯೂವೆಲರಿ ಗಿಫ್ಟಿಂಗ್ಆಪ್ಶನ್‌ : ದೀಪಾವಳಿಯ ಪಾರ್ಟಿಯಲ್ಲಿ ನಿಮ್ಮ ಪತ್ನಿ ದೀಪದಂತೆ ಕಾಣಿಸಬೇಕು ಹಾಗೂ ಎಲ್ಲರ ದೃಷ್ಟಿ ಅವರ ಮೇಲೆ ಇರಬೇಕು ಅನ್ನಿಸಿದರೆ ಈ ದೀಪಾವಳಿಯಲ್ಲಿ ಇಬ್ಬರಿಗೂ ಸ್ಪೆಷಲ್ ಅನ್ನಿಸುವಂತಹ ಜ್ಯೂವೆಲರಿ ಗಿಫ್ಟ್ ನ್ನು ಪತ್ನಿಗೆ ಕೊಡಿ.

ಟ್ರೈಬಲ್ ಜೂವೆಲರಿ : ಒಂದು ವೇಳೆ ನಿಮ್ಮ  ಪತ್ನಿಗೆ ಗೋಲ್ಡ್ ಮತ್ತು ಡೈಮಂಡ್‌ ಜ್ಯೂವೆಲರಿಗಿಂತ ಡಿಫರೆಂಟ್‌ ಆಗಿರುವ ಗಿಫ್ಟ್ ಕೊಡುವ ಇಚ್ಛೆಯಿದ್ದರೆ ಟ್ರೈಬಲ್ ಜ್ಯೂವೆಲರಿ ಬೆಸ್ಟ್ ಆಪ್ಶನ್‌ ಆಗಿರುತ್ತದೆ. ಜ್ಯೂವೆಲರಿ ಡಿಸೈನರ್‌ ಜಾನಕಿ ಹೀಗೆ ಹೇಳುತ್ತಾರೆ, ``ಟ್ರೈಬಲ್ ಜ್ಯೂವೆಲರಿ ಹೆಚ್ಚು ಎಕ್ಸ್ ಪೆನ್ಸಿವ್ ‌ಅಲ್ಲ. ಸ್ಟೈಲ್‌ನ ವಿಷಯದಲ್ಲಿ ಇದಕ್ಕೆ ಯಾವುದೂ ಸರಿಸಾಟಿಯಿಲ್ಲ. ಇದು ಹೈ ಸೊಸೈಟಿಯ ಮಹಿಳೆಯರಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಹೀಗಾಗಿ ಇದು ದೀಪಾವಳಿ ಗಿಫ್ಟ್ ಆಗಿ ಉತ್ತಮ ಆಪ್ಶನ್‌ ಆಗಿದೆ. ಗೋಲ್ಡ್ ಮತ್ತು ಡೈಮಂಡ್‌ ಜ್ಯೂವೆಲರಿಯನ್ನು ದಿನ ಕ್ಯಾರಿ ಮಾಡುವುದು ಸುಲಭವಲ್ಲ. ಹೀಗಿರುವಾಗ ಜ್ಯೂವೆಲರಿಯಲ್ಲಿ ಸಿಲ್ವರ್‌, ಕಾಪರ್‌, ವುಡನ್‌, ಆನೆ ದಂತ, ಸ್ಟೋನ್ಸ್, ಕಲರ್‌ಫುಲ್ ಶೇಡ್ಸ್ ಗಳ ಸ್ಮಾರ್ಟ್‌ ಜ್ಯೂವೆಲರಿ ಲುಕ್ಸ್ ನ್ನು ಕಂಪ್ಲೀಟ್‌ ಮಾಡುತ್ತದೆ ಮತ್ತು ಸ್ಮಾರ್ಟ್‌ ಲುಕ್‌ ಕೊಡುತ್ತದೆ. ಗಮನಿಸಬೇಕಾದ ವಿಷಯವೇನೆಂದರೆ  ಟ್ರೈಬಲ್ ಜ್ಯೂವೆಲರಿ ಈಗ ಫ್ಯಾಷನ್‌ನಲ್ಲಿದೆ. ಸಿಲ್ವರ್ ಕಾಯಿನ್‌ಗಳ ವಿಕ್ಟೋರಿಯನ್‌ ಸ್ಟೈಲ್‌ನ ಜ್ಯೂವೆಲರಿ ಗಿಫ್ಟ್ ಮಾಡಿ ಈ ದೀಪಾವಳಿಯಲ್ಲಿ ಗಂಡಂದಿರು ತಮ್ಮ ತಮ್ಮ ಪತ್ನಿಯರ ಹೃದಯ ಗೆಲ್ಲಬಹುದು. ಸೂರ್ಯ, ಚಂದ್ರ, ನಕ್ಷತ್ರ, ಜಾಮಿಟ್ರಿಕ್‌ ಡಿಸೈನ್ಸ್ ಮತ್ತು ಅನಿಮಲ್ ಮೋಟಿಫ್ಸ್ ಇರುವ ಜ್ಯೂವೆಲರಿ ವೆಸ್ಟರ್ನ್‌ ವೇರ್‌ನ ಜೊತೆ ಜೊತೆಗೆ ಇಂಡಿಯನ್‌ ವೇರ್‌ನೊಂದಿಗೂ ಟ್ರೆಂಡಿ ಮತ್ತು ಕೂಲ್ ಲುಕ್‌ ಕೊಡುತ್ತದೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ