ಹಬ್ಬಗಳ ಸಂದರ್ಭದಲ್ಲಿ ಮನೆಯ ಅಲಂಕಾರ ಮಾಡುವುದು ಪ್ರತಿ ಮಹಿಳೆಗೆ ಒಂದು ಸವಾಲಿನ ಕೆಲಸವಾಗಿದೆ. ಅದಕ್ಕಾಗಿ ಬಜೆಟ್ ಹಾಗೂ ಸಮಯ ಎರಡನ್ನೂ ಗಮನಿಸಬೇಕಾಗುತ್ತದೆ.  ನಗರಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಜಾಗದ  ಕೊರತೆಯಿಂದಾಗಿ ಮನೆ, ಫ್ಲ್ಯಾಟ್‌ಗಳನ್ನು ಅಲಂಕರಿಸುವುದು ಸುಲಭವಲ್ಲ. ಅಲಂಕಾರಕ್ಕೆ ಎಷ್ಟು ಖರ್ಚು ಮಾಡಲು ಬಯಸುತ್ತೀರಿ ಎಂದು ಮೊದಲು ನಿರ್ಧರಿಸುವುದು ಅಗತ್ಯ.

ಬಣ್ಣ ಬಣ್ಣದ ಗೋಡೆಗಳಿಂದಲೇ ಮನೆ ಸುಂದರವಾಗಿ ಕಾಣುವುದಿಲ್ಲ. ಮನೆಯಲ್ಲಿರುವ ಪದಾರ್ಥಗಳಿಂದಲೇ ಅದರ ಸೌಂದರ್ಯ ಹೊಳೆಯುತ್ತದೆ. ಕೋಣೆಯ ಬಣ್ಣ ಅಥವಾ ಫರ್ನೀಚರ್‌ನ ಜಾಗ ಬದಲಿಸಿಯೂ ಮನೆಯ ಲುಕ್‌ನಲ್ಲಿ ಬದಲಾವಣೆ ತರಬಹುದು. ಇಂದಿನ ಟ್ರೆಂಡ್‌ ಪಾರಂಪರಿಕವಾಗಿರುವ ಜೊತೆ ಜೊತೆಗೆ ಆಧುನಿಕ ಆಗಿದೆ. ಅದನ್ನು ಪ್ಯಾಷನ್‌ ಎನ್ನುತ್ತಾರೆ. ಅದನ್ನು ಎಲ್ಲ ವಯಸ್ಸಿನವರೂ ಇಷ್ಟಪಡುತ್ತಾರೆ.

ಮನೆಯ ಅಲಂಕಾರಕ್ಕೆ ಸಂಬಂಧಿಸಿದಂತೆ ಇಂಟೀರಿಯರ್‌ ಡಿಸೈನರ್‌ ಕಾಂಚನಾ ಹೀಗೆ ಹೇಳುತ್ತಾರೆ, ಈಗ ಜನ ಮನೆಯ ಡೆಕೋರೇಶನ್‌ಗೆ ಹೆಚ್ಚು ಹಣ ಖರ್ಚು ಮಾಡಲು ಇಚ್ಛಿಸುತ್ತಾರೆ. ಮಧ್ಯಮ ವರ್ಗದ ಜನರೂ ಇದಕ್ಕೆ ಹಣ ಖರ್ಚು ಮಾಡಲು ಹಿಂಜರಿಯುವುದಿಲ್ಲ.

ಮನೆಗೆ ಹೊಸ ಹಾಗೂ ಫ್ರೆಶ್‌ ಲುಕ್‌ ಕೊಡಲು ಈಗ 3 ವಿಧಾನಗಳ ಅಲಂಕಾರ ಫ್ಯಾಷನ್‌ನಲ್ಲಿದೆ.

ಡ್ರೈ ಡೆಕೋರೇಶನ್‌ : ಇದರಲ್ಲಿ ಹೂಗಳು, ಬ್ಯಾಂಬೋ ಟ್ರೀಸ್‌, ಸ್ಟೋನ್ಸ್, ಡೆಕೋರೇಶನ್‌ ವಸ್ತುಗಳು ಇತ್ಯಾದಿಗಳನ್ನು ಉಪಯೋಗಿಸಿ ಅಲಂಕರಿಸಲಾಗುತ್ತದೆ. ನೀರನ್ನು ಉಪಯೋಗಿಸದೆ ಇದನ್ನು ಮಾಡಲಾಗುತ್ತದೆ. ಯಾವುದೇ ಹಬ್ಬಕ್ಕೆ 3-4 ದಿನ ಮೊದಲೇ ಇದನ್ನು ಪ್ರಯೋಗಿಸುವುದು ಸರಿಯಾದ ಕ್ರಮ.

ಇಕೋ ಫ್ರೆಂಡ್ಲಿ ಅಲಂಕಾರ : ಈಗ ಇದು ಹೆಚ್ಚು ಚಾಲನೆಯಲ್ಲಿದೆ. ಇದರಲ್ಲಿ ಕಾಗದ, ಥರ್ಮೋಕಾಲ್‌, ಪ್ಲ್ಯಾಸ್ಟಿಕ್‌, ಬಾಟಲ್ ಹಾಗೂ ಗಾಜಿನ ಭರಣಿ ಇತ್ಯಾದಿಗಳಿಂದ ಅಲಂಕಾರ ಮಾಡುತ್ತಾರೆ.

ಇದಲ್ಲದೆ, ಮನೆ ದೊಡ್ಡದಾಗಿದ್ದರೆ ದೊಡ್ಡ ದೊಡ್ಡ ವಾಲ್ ‌ಹ್ಯಾಂಗಿಂಗ್ಸ್, ಫ್ಲವರ್‌ ಪಾಟ್ಸ್ ಮತ್ತು ಲೈಟ್ಸ್ ಮೂಲಕ ಅಲಂಕರಿಸಲಾಗುತ್ತದೆ. ವಿಭಿನ್ನ ಪ್ರಕಾರದ ಲ್ಯಾಂಪ್‌ ಶೇಡ್ಸ್, ಮೇಣದ ಬತ್ತಿಗಳು ಇತ್ಯಾದಿಗಳನ್ನು ಇಟ್ಟು ಮನೆಯ ಫರ್ನೀಚರ್ ಗಮನದಲ್ಲಿಟ್ಟುಕೊಂಡು ಮಾಡುವ ಮಿಕ್ಸ್ ಅಂಡ್‌ ಮ್ಯಾಚ್‌ ಥೀಮ್ ಕೂಡ ಬಹಳ ಜನಪ್ರಿಯವಾಗಿದೆ.

ಬೆಂಗಳೂರಿನಂಥ ಮಹಾನಗರಗಳಲ್ಲಿ ಹೆಚ್ಚಿನ ಜನ ಡ್ರೈ ಥೀಮ್ ಮತ್ತು ಇಕೋ ಫ್ರೆಂಡ್ಲಿ ಥೀಮ್ ಆಧರಿಸಿದ ಅಲಂಕಾರವನ್ನು ಇಚ್ಛಿಸುತ್ತಾರೆ. ಈ ಅಲಂಕಾರ ಮನೆಗಳಲ್ಲಷ್ಟೇ ಅಲ್ಲ, ಆಫೀಸ್‌ಗಳಲ್ಲೂ ಇಷ್ಟಪಡಲಾಗುತ್ತದೆ. ಅದಕ್ಕೆ ಕಾರಣ ಅದರ ನ್ಯಾಚುರಲ್ ಲುಕ್‌.

ಇಂದು ನೆಲಹಾಸಿನ ಲುಕ್ಸ್ ನಲ್ಲೂ ಬದಲಾವಣೆ ಬಂದಿದೆ ಎಂದು ಕಾಂಚನಾ ಹೇಳುತ್ತಾರೆ. ಇಪಾಕ್ಸಿ ಫ್ಲೋರಿಂಗ್‌ ಟ್ರೆಂಡ್‌ನಲ್ಲಿದೆ. ಅಂತಹ ನೆಲದಲ್ಲಿ ಯಾವುದೇ ರೀತಿಯ ಅಲಂಕಾರ ಚೆನ್ನಾಗಿ ಕಾಣುತ್ತದೆ. ಇದಲ್ಲದೆ, ಕೆಲವರು ಕಲರ್‌ ಥೀಮ್ ನ್ನು ಇಷ್ಟಪಡುತ್ತಾರೆ. ಇದರಲ್ಲಿ ಯಾವುದಾದರೂ ಒಂದು ಬಣ್ಣದಿಂದ ಇಡೀ ಮನೆಯನ್ನು ಅಲಂಕರಿಸಬಹುದು. ಸಮುದ್ರದ ಥೀಮ್ ಕೂಡ ಸಾಕಷ್ಟು ಜನಪ್ರಿಯವಾಗಿದೆ. ಅದರಲ್ಲಿ ನೀವು ಮನೆಯಲ್ಲಿ ಕುಳಿತೇ ಸಮುದ್ರತೀರದ ಅನುಭವ ಪಡೆಯಬಹುದು.

ನಿಮಗೆ ಬಜೆಟ್‌ ಹಾಗೂ ಕೋಣೆಯ ಆಧಾರದಲ್ಲಿ 1 ವಾರದ ಮೊದಲಿನಿಂದ ಅಲಂಕಾರಕ್ಕೆ ಸಿದ್ಧತೆ ನಡೆಸಬೇಕು. ಹಬ್ಬದ ದಿನ ಅಲಂಕಾರ ಫ್ರೆಶ್‌ ಆಗಿ ಕಾಣಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ