ನೀವು ಧರಿಸುವ ಆಭರಣಗಳು ಯಾವುದೇ ಲೋಹದಿಂದ ಮಾಡಿದ್ದರೂ, ನಿಯಮಿತ ಉಪಯೋಗ ಹಾಗೂ ಬೆವರಿನ ಕಾರಣದಿಂದ ಅವುಗಳಲ್ಲಿ ಕೊಳಕು ಸೇರಿಕೊಳ್ಳುವುದು ಸಹಜವೇ! ಈ ಕಾರಣದಿಂದ ಅವುಗಳ ಹೊಳಪು ಕಡಿಮೆಯಾಗುತ್ತದೆ. ಅವು ಹಳೆಯದೆಂಬಂತೆ ಗೋಚರಿಸುತ್ತವೆ.

ಇಂತಹ ಸ್ಥಿತಿಯಲ್ಲಿ ಆಭರಣಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ಅವುಗಳ ಹೊಳಪು ಖಾಯಂ ಆಗಿರಬೇಕು. ಅವನ್ನು ನೀವು ಚಿನಿವಾರನ ಬಳಿ ತೆಗೆದುಕೊಂಡು ಹೋಗಬಹುದು. ಆತ ಕೆಮಿಕಲ್‌ನಿಂದ ಅವುಗಳನ್ನು ಸ್ವಚ್ಛಗೊಳಿಸುತ್ತಾನೆ. ಆದರೆ ಮೇಲಿಂದ ಮೇಲೆ ಈ ರೀತಿ ಮಾಡುವುದರಿಂದ ಆಭರಣಗಳ ತೂಕ ಕಡಿಮೆಯಾಗುತ್ತದೆ. ಹಾಗಾಗಿ ಮನೆಯಲ್ಲಿಯೇ ಅತ್ಯುತ್ತಮ ರೀತಿಯಲ್ಲಿ ಸ್ವಚ್ಛತೆ ಕೈಗೊಳ್ಳಬಹುದು.

ಚಿನ್ನ ಹಾಗೂ ಪ್ಲಾಟಿನಂ ಆಭರಣಗಳ ಬಗ್ಗೆ ವಿಶೇಷ ಗಮನಹರಿಸಬೇಕಾದ ಅಗತ್ಯವಿಲ್ಲ. ಆದರೆ ನಿಯಮಿತ ಬಳಕೆ ಮಾಡುವ ಇತರೆ ಆಭರಣಗಳ ಬಗ್ಗೆ ಸ್ವಲ್ಪ ಗಮನಕೊಡಬೇಕು. ಬೆಳ್ಳಿಯ ಆಭರಣಗಳ ಮೇಲೆ ಹೆಚ್ಚು ಪ್ರಭಾವ ಉಂಟಾಗುತ್ತದೆ. ಆಭರಣಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಆಕಾಶ್‌ ಹೀಗೆ ಹೇಳುತ್ತಾರೆ.

ಆಭರಣಗಳನ್ನು ಮನೆಯಲ್ಲೇ ಸ್ವಚ್ಛಗೊಳಿಸಿ

ಚಿನ್ನಾಭರಣಗಳು : ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸುವ ಮುಂಚೆ ಅವನ್ನು  ಸ್ವಚ್ಛ ಬಟ್ಟೆಯಿಂದ ಒರೆಸಿ. ನಂತರ ಒಂದು ಚಿಟಕಿಯಷ್ಟು ಅರಿಶಿನ ಪುಡಿಯನ್ನು ಲೇಪಿಸಿ ಮೃದು ಬಟ್ಟೆಯಿಂದ ಒರೆಸಿ.

ಡಿಪ್‌ ಸೋಪ್‌ನಿಂದ ಸ್ವಚ್ಛತೆ : ಒಂದು ಕಪ್‌ನಲ್ಲಿ ಸ್ವಲ್ಪ ಬಿಸಿನೀರು ಹಾಕಿಕೊಂಡು, ಅದರಲ್ಲಿ ಕೆಲವು ಹನಿ ಲಿಕ್ವಿಡ್‌ ಡಿಜರ್ಜೆಂಟ್‌ಮಿಶ್ರಣ ಮಾಡಿಕೊಳ್ಳಿ ಅಥವಾ ಕ್ಲಬ್‌ ಸೋಡಾವನ್ನು ಉಪಯೋಗಿಸಬಹುದು. ಆಭರಣ ಸ್ವಚ್ಛಗೊಳಿಸುವಾಗ ಅತಿಯಾದ ಬಿಸಿನೀರನ್ನು ಉಪಯೋಗಿಸಬೇಡಿ. ಅದು ಸೂಕ್ಷ್ಮ ಹಾಗೂ ಬೆಲೆಬಾಳುವ ಮುತ್ತು ರತ್ನಗಳನ್ನು ಅಳವಡಿಸಿರುವ ಆಭರಣಗಳಿಗೆ ಹಾನಿಯುಂಟು ಮಾಡಬಹುದು. ಆಭರಣಗಳನ್ನು 15 ನಿಮಿಷಗಳ ಕಾಲ ಸೋಡಿಯಂ ನೀರಿನಲ್ಲಿ ಮುಳುಗಿಸಿಡಿ. ಬಿಸಿಯಿಂದ ಕೂಡಿದ ಡಿಟರ್ಜೆಂಟ್‌ ನೀರು ಆಭರಣದ ಮೂಲೆ ಮೂಲೆಗೂ ಹೋಗಿ ಕೊಳೆಯನ್ನು ಹೊರಹಾಕುತ್ತದೆ. ಬಳಿಕ ಮೃದುವಾದ ಟೂಥ್ ಬ್ರಶ್‌ನಿಂದ ಆಭರಣವನ್ನು ನಿಧಾನವಾಗಿ ಉಜ್ಜಿ. ಗೋಲ್ಡ್  ಕ್ಲೀನಿಂಗ್‌ ಲಿಕ್ವಿಡ್‌ ಕೂಡ ಈಗ ಲಭ್ಯವಾಗುತ್ತಿದ್ದು, ಅದನ್ನೂ ಉಪಯೋಗಿಸಬಹುದು.

ಬೆಳ್ಳಿಯ ಆಭರಣಗಳು : ಬೆಳ್ಳಿಯ ಆಭರಣಗಳನ್ನು ಮುಕ್ತವಾಗಿ ಇಡದೆ, ಡಬ್ಬದಲ್ಲಿ  ಮುಚ್ಚಿಡಿ. ಗಾಳಿ ಅಥವಾ ತೇವಾಂಶದಿಂದ ಅವು ಕಪ್ಪಾಗುವ ಸಾಧ್ಯತೆ ಇರುತ್ತದೆ. ನಿಯಮಿತವಾಗಿ ಉಪಯೋಗಿಸುವ ಬೆಳ್ಳಿ ಆಭರಣಗಳ ಮೇಲೆ ಒಂದಿಷ್ಟು ಟೂಥ್‌ ಪೇಸ್ಟ್ ಲೇಪಿಸಿ ನಿಧಾನವಾಗಿ ಉಜ್ಜಿ ಬಳಿಕ ಮೆತ್ತನೆಯ ಬಟ್ಟೆಯಿಂದ ಒರೆಸಿ ಅಥವಾ ಟಿಶ್ಯೂ ಪೇಪರ್‌ನಿಂದ ಸ್ಕ್ರಬ್‌ ಮಾಡಿ.

ಒಂದು ಕಪ್‌ ಬಿಸಿ ನೀರಿಗೆ 1 ಚಮಚ ಬೇಕಿಂಗ್‌ ಸೋಡಾ ಹಾಕಿ 5 ನಿಮಿಷ ಹಾಗೆಯೇ ಬಿಡಿ. ಅದರಲ್ಲಿ ಬೆಳ್ಳಿ ಆಭರಣಗಳನ್ನು ಮುಳುಗಿಸಿ, ಮೃದು ಬಟ್ಟೆಯಿಂದ ಒರೆಸಿ.

ನಾನ್‌ ಬ್ಲೀಚ್‌ ಡಿಟರ್ಜೆಂಟ್‌ ಪೌಡರ್‌ನಿಂದಲೂ ಬೆಳ್ಳಿಯ ಆಭರಣಗಳನ್ನು ಸ್ವಚ್ಛಗೊಳಿಸಬಹುದು. ಒಂದು ಕಪ್‌ ನೀರಿಗೆ ಡಿಟರ್ಜೆಂಟ್‌ ಮಿಶ್ರಣ ಮಾಡಿ. ಅದರಲ್ಲಿ ಬೆಳ್ಳಿಯ ಆಭರಣಗಳನ್ನು ಮುಳುಗಿಸಿ 10 ನಿಮಿಷ ಹಾಗೆಯೇ ಬಿಡಿ. ಬಳಿಕ ಹೊರತೆಗೆದು ಮೃದುಬಟ್ಟೆಯಿಂದ ಒರೆಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ