ಬಣ್ಣಗಳು ನಮ್ಮ ವಿಚಾರ, ಭಾವನೆ, ಬೌದ್ಧಿಕತೆಗಳನ್ನು ವಿಕಾಸಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಅತ್ಯಧಿಕ ಆಕರ್ಷಕ, ಸುಲಭವಾಗಿ ಗೋಚರಿಸುವಂಥ, ವೈವಿಧ್ಯತೆ ತುಂಬಿರುವ ಬಣ್ಣಗಳಲ್ಲಿ ಕೆಲವು ಸ್ಪೆಷಲ್ ಶಕ್ತಿ ಗಳಿಸಿಕೊಡುವ ಸಾಮರ್ಥ್ಯ ತುಂಬಿರುತ್ತದೆ. ಗೃಹಾಲಂಕಾರಕ್ಕೆ ಬೇಕಾದ ವಿವಿಧ ವಸ್ತುಗಳು ಅಂದರೆ ಪೇಂಟಿಂಗ್‌, ಲ್ಯಾಂಪ್‌, ಹೂದಾನಿ, ವಾಲ್‌ಪೇಪರ್‌ಇತ್ಯಾದಿಗಳನ್ನು ಬೆರೆಸಿ ವಿಭಿನ್ನ ಬಣ್ಣಗಳನ್ನು ಮೇಳೈಸಬಹುದು. ಇದರ ಜೊತೆಯಲ್ಲೇ ಮನೆಯ ಅಂದಚೆಂದ ಹೆಚ್ಚಿಸುವ ಅಲಂಕಾರಿಕ ಸಾಮಗ್ರಿಗಳು, ಬಣ್ಣದ ಮೇಣದ ಬತ್ತಿಗಳಿಂದ ಹಿಡಿದು ಸಾಫ್ಟ್ ಫರ್ನಿಶಿಂಗ್‌ಗಳಾದ ಪರದೆ, ಡ್ರೇಪ್‌, ಡೆಕೋರೇಟಿವ್‌ಮೆಟೀರಿಯಲ್, ರನ್ನರ್‌ಗಳನ್ನೂ ಸೇರಿಸಿ ಬಣ್ಣಗಳ ಗಾಢ ಪ್ರಭಾವ ಗಮನಿಸಬಹುದು. ಜೊತೆಗೆ ಕಿಚನ್‌ ವೇರ್‌ಇತ್ಯಾದಿಗಳೂ ಸಹ ಬಣ್ಣಗಳ ಪ್ರಾಬಲ್ಯ ಎತ್ತಿ ಹಿಡಿಯುನಲ್ಲಿ ಪೂರಕ. ಇಡೀ ವಿಶ್ವವೇ ಕಲೆಯ ವಿವಿಧ ಪ್ರಕಾರಗಳ ಬಣ್ಣಗಳಿಂದ ತುಂಬಿ ತುಳುಕುತ್ತಿದೆ. ಇವನ್ನು ಮನೆಗೆ ತಂದು ನೀಟಾಗಿ ಜೋಡಿಸಿ, ಅವನ್ನು ಬಹು ಆಯಾಮೀ, ಸುಂದರ, ಅತ್ಯಾಕರ್ಷಕಗೊಳಿಸಬಹುದಾಗಿದೆ.

ಟ್ರೆಂಡಿ ಶೇಡ್ಸ್, ಪ್ಯಾಟರ್ನ್‌ಪ್ರಿಂಟ್‌ಗಳಲ್ಲಿ ಲಭ್ಯವಿರುವ ಈ ಇಂಟೀರಿಯರ್‌ ಫ್ಯಾಬ್ರಿಕ್‌ ವೇರ್‌ಮನೆಯ ಒಳಾಲಂಕಾರದಲ್ಲಿ ಬಹು ದೊಡ್ಡ ಬದಲಾವಣೆ ತರುವ ಸಾಧ್ಯತೆಗಳಿವೆ. ಅದೂ ಲಾಭಕರ ಬೆಲೆಗಳಲ್ಲಿ ಹಾಗೂ ಹೆಚ್ಚಿನ ನಿರ್ವಹಣೆಯ ಖರ್ಚಿಲ್ಲದೇ ಕಲಾ ವಿಭಾಗ ನಿಜಕ್ಕೂ ಕ್ಲಿಷ್ಟಕರವಾದುದು, ಆದ್ದರಿಂದಲೇ ಸರಿಯಾದ ವಸ್ತುವನ್ನು ಸರಿಯಾದ ಪ್ರಮಾಣದಲ್ಲಿ ಆರಿಸಿ. ಇದಕ್ಕಾಗಿ ಎಕ್ಸ್ ಪರ್ಟ್ಸ್ ಅಭಿಪ್ರಾಯವನ್ನೂ ಪಡೆಯಿರಿ. ಬಣ್ಣಗಳ ಕುರಿತಾಗಿ ಚೆನ್ನಾಗಿ ಅರ್ಥೈಸಿಕೊಂಡು, ಯಾವುದು ಸರಿ, ಯಾವುದನ್ನು ಎಷ್ಟು ಬಳಸಬೇಕು ನೋಡಿಕೊಳ್ಳಿ. ಅದರ ಸಾಮರ್ಥ್ಯವೆಷ್ಟು, ಪ್ರಭಾವವೆಷ್ಟು ಇತ್ಯಾದಿ ಎಲ್ಲಾ ವಿವರ ಸಂಗ್ರಹಿಸಿ. ಈ ಬಣ್ಣಗಳ ಆಯ್ಕೆ ನಿಮ್ಮ ವ್ಯಕ್ತಿತ್ವವನ್ನು ಅರಿಯಲು ಪೂರಕ.

ಕೆಂಪು : ಇದು ಪ್ರಗತಿಪರ, ಉತ್ಸಾಹ, ದೃಢ ಸಂಕಲ್ಪವುಳ್ಳವರ ಆಯ್ಕೆ. ಈ ಬಣ್ಣ ಬಲು ಫಾಸ್ಟ್. ಆಧುನಿಕ ಸಂದರ್ಭಗಳಲ್ಲಿ ಇದರ ಅರ್ಥ ಶಕ್ತಿಶಾಲಿ ಹಾಗೂ ಪ್ರಭಾವಪೂರ್ಣ. ಈ ಬಣ್ಣ ಹಿಟ್ಲರ್‌ಗಿರಿ, ತಕ್ಷಣ ಕೋಪಗೊಳ್ಳುವ ಹಾಗೂ ನಿರ್ಭೀತ ಸ್ವಭಾವದ ಪ್ರತೀಕ. ಕೆಂಪು ಬಣ್ಣ ಎಷ್ಟು ಸುಂದರವೋ ಇದನ್ನು ಬಯಸುವವರೂ ಸಹ ಅಷ್ಟೇ ಉತ್ಸಾಹಿ, ಆತ್ಮವಿಶ್ವಾಸಿ, ಪ್ರಮುಖರಾಗಿರುತ್ತಾರೆ.

ನೀಲಿ : ಈ ಬಣ್ಣ ವಿಶ್ವಾಸ, ಪ್ರಾಮಾಣಿಕತೆ, ನಿಷ್ಠೆ, ಸುವ್ಯವಸ್ಥೆ, ಶಾಂತಿ, ಧೈರ್ಯಗಳ ಪ್ರತೀಕ. ಯಾರಿಗೆ ನೀಲಿ ಬಣ್ಣ ಇಷ್ಟವೋ ಅವರು ದಯಾಳು, ಆಶಾವಾದಿ, ತುಸು ಸಂದೇಹ ಸ್ವಭಾವದ, ಒಬ್ಬಂಟಿ ಇರಬಯಸುವ, ಕ್ಷಮಾಗುಣ ಉಳ್ಳವರಾಗಿರುತ್ತಾರೆ.

ಹಸಿರು :  ಹಸಿರು ಸದಾ ತಂಪು, ಸಮೃದ್ಧಿಯ ಸಂಕೇತ. ಯಾರಿಗೆ ಈ ಬಣ್ಣ ಇಷ್ಟವೋ ಅವರು ಮನಸ್ಸು, ಬುದ್ಧಿಗಳ ಸಮತೋಲನ ಸಾಧಿಸುತ್ತಾರೆ. ಅವರು ಸದಾ ಪ್ರಕೃತಿಪ್ರೇಮಿ, ಸಂವೇದನಾಶೀಲರು, ಅನುಕರಣೀಯರು, ವ್ಯವಹಾರ ಕುಶಲರು ಹಾಗೂ ಕುಟುಂಬಕ್ಕಾಗಿ ಸದಾ ಸಮರ್ಪಿತರಾಗಿರುತ್ತಾರೆ.

ಹಳದಿ : ಇದು ಸಕಾರಾತ್ಮಕ ಹಾಗೂ ನಕಾರಾತ್ಮಕ ಎರಡರ ಮಿಶ್ರಿತ ಸಂಕೇತ ಎನಿಸುತ್ತದೆ. ಈ ಬಣ್ಣ ಆಶಾವಾದಿ, ಉತ್ಸಾಹ, ಬುದ್ಧಿವಂತಿಕೆ, ತಾರ್ಕಿಕತೆಗಳನ್ನು ಪರಿಚಯಿಸುತ್ತದೆ. ಜೊತೆಗೆ ಇದು ತನ್ನನ್ನು ಬಯಸುವ ವ್ಯಕ್ತಿಯನ್ನು ವಿಶ್ಲೇಷಣಾತ್ಮಕ, ತುಸು ಭಯಭೀತ, ಅಹಂಕಾರಿಯನ್ನಾಗಿಯೂ ಮಾಡಬಲ್ಲದಂತೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ