ಪ್ರಜ್ಞಾ ಜೆಮ್ಸ್ ಜೈಪುರದ ಪವನ್‌ ಶರ್ಮಾ ಎಂತಹ ಆ್ಯಂಟಿಕ್‌ ಜ್ಯೂವೆಲರಿ ತಯಾರಿಸುತ್ತಿದ್ದಾರೆಂದರೆ, ಅವರಿಗೆ ಕೇವಲ ರಾಜಾಸ್ಥಾನದಿಂದ ಅಷ್ಟೇ ಅಲ್ಲ, ಬೇರೆ ಬೇರೆ ರಾಜ್ಯಗಳಿಂದಲೂ ಭಾರಿ ಬೇಡಿಕೆ ಬರುತ್ತಿದೆ.

ಪವನ್‌ ಶರ್ಮ ಅವರ ಪ್ರಕಾರ, ಮಹಿಳೆಯರು ಯಾವಾಗಲೂ ತಮ್ಮ ಬಳಿ ಪಾರಂಪರಿಕ ಚಿನ್ನಾಭರಣಗಳ ಜೊತೆಗೆ, ತಾವು ವಿಭಿನ್ನವಾಗಿ ಕಾಣುವಂತಹ ಆಭರಣಗಳು ಇರಬೇಕೆಂದು ಅಪೇಕ್ಷಿಸುತ್ತಾರೆ. ಅಂತಹ ಆಭರಣಗಳೇ `ಆ್ಯಂಟಿಕ್‌ ಜ್ಯೂವೆಲರಿ' ಎಂದು ಕರೆಯಿಸಿಕೊಳ್ಳುತ್ತವೆ.

ಜ್ಯೂವೆಲರಿ ಡಿಸೈನರ್

ರಾಧಿಕಾ ಪ್ರಕಾರ, ಆ್ಯಂಟಿಕ್‌ ಜ್ಯೂವೆಲರಿ ಭಾರತೀಯ ಪರಂಪರೆಯ ಜೊತೆಗೆ ನಮ್ಮ ನಾಗರಿಕತೆಯನ್ನು ಬಿಂಬಿಸುತ್ತವೆ. ಸಿಂಧೂ ನಾಗರಿಕತೆ, ಮೊಘಲ್ ಕಾಲದ ಆಭರಣಗಳ ಮಾತೇ ಬೇರೆ. ಬಹುಶಃ ಈಗಲೂ 20ರಲ್ಲಿ 19 ಜನರಿಗೆ ಆ್ಯಂಟಿಕ್‌ ಜ್ಯೂವೆಲರಿಗಳು ಇಷ್ಟವಾಗುತ್ತವೆ.

ಪವನ್‌ ಶರ್ಮ ಪ್ರಕಾರ, ಹಬ್ಬಗಳು, ಪಾರ್ಟಿ ಮತ್ತು ಮದುವೆಗಳಲ್ಲಿ ಈಗಲೂ ರಾಜವೈಭೋಗದ ಲುಕ್‌ಗಾಗಿ ಹೆಚ್ಚಿನ ಮಹಿಳೆಯರು ಆ್ಯಂಟಿಕ್‌ ಜ್ಯೂವೆಲರಿ ಧರಿಸಲು ಇಷ್ಟಪಡುತ್ತಾರೆ. ಆ್ಯಂಟಿಕ್‌ ಜ್ಯೂವೆಲರಿಗಳಲ್ಲಿ ರತ್ನಗಳನ್ನು ಅಳವಡಿಸಲಾಗಿರುತ್ತದೆ. ಬೆಲೆ ಬಾಳುವ ಲೋಹಗಳೆಂದರೆ ಚಿನ್ನ, ಬೆಳ್ಳಿ, ಪ್ಲಾಟಿನಂ ಮುಂತಾದ. ಕಡಿಮೆ ಬೆಲೆಯ ಲೋಹಗಳೆಂದರೆ ಕಬ್ಬಿಣ, ತಾಮ್ರ, ಅಲ್ಯುಮಿನಿಯಂ ಮುಂತಾದವು. ಇವುಗಳಲ್ಲಿ ಅಳವಡಿಸುವ ಬೆಲೆ ಬಾಳುವ ಹರಳುಗಳೆಂದರೆ ವಜ್ರ, ವೈಢೂರ್ಯ, ಮಾಣಿಕ್ಯ, ನೀಲ, ಮುತ್ತು. ಸಾಧಾರಣ ಬೆಲೆ ಬಾಳುವ ಹರಳುಗಳಲ್ಲಿ ಗೋಮೇಧಿಕಾ, ಹಸ್ತಿದಂತ, ಆ್ಯಂಬರ್‌, ಮೂಂಗಾ, ಅಮೆರಿಕನ್ ಡೈಮಂಡ್‌ ಮುಂತಾದವು ಸೇರಿವೆ.

ಸುಧಾ ಅವರಿಗೆ ಆರಂಭದಿಂದಲೇ ಆ್ಯಂಟಿಕ್‌ ಜ್ಯೂವೆಲರಿ ಇಷ್ಟ. ಆ್ಯಂಟಿಕ್‌ ಜ್ಯೂವೆಲರಿ ಧರಿಸುವುದರಿಂದ ರಾಜಕಳೆ ಬರುತ್ತದೆ. ಆ್ಯಂಟಿಕ್‌ ಜ್ಯೂವೆಲರಿ ಪರಂಪರೆ ಈಗಲೂ ಮುಂದುವರೆದಿದೆ.

ಪ್ರಜ್ಞಾ ಅವರಿಗೆ ವಜ್ರ, ಮುತ್ತು, ಮೂನ್‌ ಸ್ಟೋನ್‌ ಹಾಗೂ ಪ್ಲಾಟಿನಂ ಇಷ್ಟ. ಅವರು ತಮ್ಮ ಮದುವೆಯ ಸಂದರ್ಭದಲ್ಲಿ ವಜ್ರ, ಮಾಣಿಕ್ಯ, ಮುತ್ತು, ಮೂನ್‌ ಸ್ಟೋನ್‌ನ ಪಾರಂಪರಿಕ ಆಭರಣಗಳನ್ನು ಧರಿಸಿದರು. ಅವರು ಈಗಲೂ ರಾಜವೈಭದ ಡಿಸೈನ್‌ಗಳ ಆಭರಣಗಳನ್ನೇ ಧರಿಸುತ್ತಾರೆ.

ಈಗ ಆ್ಯಂಟಿಕ್‌ ಜ್ಯೂವೆಲರಿಗಳನ್ನು ಸುಲಭವಾಗಿ ಖರೀದಿಸಬಹುದಾಗಿದೆ ಹಾಗೂ ನಿಮಗೆ ಬೇಕಾದ ಡಿಸೈನ್‌ಗಳಲ್ಲಿ ತಯಾರಿಸಿಕೊಳ್ಳಲೂಬಹುದು. ಆ್ಯಂಟಿಕ್‌ ಜ್ಯೂವೆಲರಿಗಳನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಅಂತಹ ಜ್ಯೂವೆಲರಿಗಳ ಬಗ್ಗೆ  ತಿಳಿಯೋಣ.

ಆರ್ಟ್ನೋವ್

ಈ ಜ್ಯೂವೆಲರಿಗಳು ಭಾರಿ ಪ್ರಮಾಣದಲ್ಲಿ ಸಿದ್ಧವಾದವು. ಈ ಡಿಸೈನ್‌ಗಳಲ್ಲಿ ಪಾತರಗಿತ್ತಿಗಳು ಮತ್ತು ಡ್ರ್ಯಾಗನ್‌ಗಳು ವಿಶಿಷ್ಟವಾಗಿದ್ದವು. ಆದರೆ ಈ ಕಲೆ ಮಹಾಯುದ್ಧದ ಸಂದರ್ಭದಲ್ಲಿ ಹೆಚ್ಚು ಕಡಿಮೆ ನಶಿಸಿ ಹೋಯಿತು. ಆ ಸಮಯದಲ್ಲಿ ಓಪ್‌ ಮತ್ತು ಮೂನ್‌ ಸ್ಟೋನ್‌ ಸಾಕಷ್ಟು ಜನಪ್ರಿಯವಾಗಿದ್ದ. ಪೆಂಡೆಂಟ್‌, ಹಾರ ಹಾಗೂ ಕೂದಲಿಗಾಗಿ ಕ್ಲಿಪ್‌ ಜ್ಯೂವೆಲರಿಯ ರೂಪದಲ್ಲಿ ಅವುಗಳನ್ನು ಬಳಸಲಾಗುತ್ತಿತ್ತು. ಅವು ಈಗಲೂ ಚಾಲ್ತಿಯಲ್ಲಿ ಇವೆ.

ಬೀಡ್ಅಂದರೆ ಮುತ್ತು

ಸಿಂಧೂ ನಾಗರಿಕತೆಯ ಕಾಲದಿಂದಲೇ ಮುತ್ತಿನ ಆಭರಣಗಳು ಮಹಿಳೆಯರನ್ನು ಆಕರ್ಷಿಸುತ್ತಲೇ ಬಂದಿವೆ. ಮುತ್ತುಗಳನ್ನು ಹಲವು ಲೋಹಗಳೊಂದಿಗೆ ಅಂದರೆ ಚಿನ್ನ, ಬೆಳ್ಳಿ, ತಾಮ್ರ ಹಾಗೂ ಆನೆ ದಂತಗಳೊಂದಿಗೆ ಉಪಯೋಗಿಸುವುದರ ಜೊತೆ ಜೊತೆಗೆ ಭಾರಿ ಜ್ಯೂವೆಲರಿಗಳನ್ನು ಕೂಡ ಮುತ್ತುಗಳಿಂದ ಅಲಂಕೃತಗೊಳಿಸಲಾಗುತ್ತದೆ. ಇಂದಿಗೂ ಮಹಿಳೆಯರು ಮುತ್ತುಗಳಿಂದ ತಯಾರಾದ ತಮ್ಮ ಮೆಚ್ಚಿನ ಜ್ಯೂವೆಲರಿಗಳನ್ನು ಆರಿಸುತ್ತಾರೆ. ಹೊಸ ಡಿಸೈನುಗಳಲ್ಲಿ ಹೈದರಾಬಾದಿ ಮುತ್ತಿನ ಚಂದನಹಾರ ಮತ್ತು ರಾಣಿಹಾರಗಳಿಗೆ ಯಾವುದೇ ಸರಿಸಾಟಿಯಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ