ಭಾರತ ಹಬ್ಬಗಳಿಗೆ ತವರೂರು ಎಂದರೆ ಉತ್ಪ್ರೇಕ್ಷೆಯಲ್ಲ. ನಮ್ಮ ದೇಶದಲ್ಲಿ ಹಬ್ಬಗಳ ಆಚರಣೆ ಅನಾದಿ ಕಾಲದಿಂದಲೂ ನಡೆದು ಬಂದಿದೆ. ನಮ್ಮಲ್ಲಿ ಲೆಕ್ಕವಿಲ್ಲದಷ್ಟು ಹಬ್ಬಗಳಿವೆಯಾದರೂ ದೀಪಾವಳಿ, ನವರಾತ್ರಿ, ಗೌರಿ, ಗಣೇಶ, ಯುಗಾದಿ ಹಾಗೂ ಸಂಕ್ರಾಂತಿ ಪ್ರಮುಖ್ಯವಾದವು.

ದೀಪಾವಳಿ ದೀಪಗಳನ್ನು ಬೆಳಗುವ ಹಬ್ಬವಾಗಿರುವಂತೆ, ಸಂಕ್ರಾಂತಿ ಬೆಳೆ ಪೈರಿನ, ಕಾಳು ಕಡ್ಡಿ, ದವಸ ಧಾನ್ಯಗಳ ಸಮೃದ್ಧಿಯ ಹಬ್ಬವಾಗಿದೆ. ದೀಪಾವಳಿ ಪೇಟೆ ಮಂದಿಯ ಹಬ್ಬ ಎನಿಸಿದರೆ, ಸಂಕ್ರಾಂತಿ ರೈತಾಪಿ ಜನರ, ಹಳ್ಳಿಯ ಹೆಂಗಸರ ಪ್ರಮುಖ ಹಬ್ಬವಾಗಿದೆ. ಎಲ್ಲೆಲ್ಲೂ ಕೊಯ್ಲಿಗೆ ಸಿದ್ಧವಾಗಿ ನಿಂತಿರುವ ಹೊಲಗದ್ದೆಗಳು, ತುಂಬಿ ತುಳುಕುವ ಕಂಗು ತೆಂಗಿನ ಸಾಲುಗಳು, ಬಾಳೆ ಕಬ್ಬಿನ ರಮ್ಯ ತೋಟಗಳು, ಆಲೆಮನೆಯ ಚೇತೋಹಾರಿ ಬೆಲ್ಲದ ಗಡಿಗೆಗಳು, ಸಿಂಗಾರ ಮಾಡಿಕೊಂಡಿರುವ ಕಮಾನುಗಳು, ಗೆಜ್ಜೆ ಕಟ್ಟಿದ ಎತ್ತು ಹಸುಗಳ ಗೊರಸಿನ ನಿನಾದ, ಕಡಲೆಕಾಯಿ, ಎಲಚಿಹಣ್ಣಿನ ರಾಶಿ ಚೆಲ್ಲಾಟವಾಡಿಕೊಂಡು ಆಡುವ ಮಕ್ಕಳು, ಹೊಸ ದಾವಣಿ ಉಟ್ಟು ರಂಗೋಲಿ ಇಡುತ್ತಾ ಸೋಬಾನೆ ಹಾಡುವ ತರುಣಿಯರು, ಅವರ ಮನ ಗೆಲ್ಲಲೆಂದು ಹುರಿ ಮೀಸೆ ತಿರುವುತ್ತ ಹೊಸ ಪಂಚೆ ಕಟ್ಟಿರುವ ಹಳ್ಳಿಹೈದರು, ವಾಹ್‌ ಸಂಕ್ರಾಂತಿಯ ಸುಗ್ಗಿಯನ್ನು ಹಳ್ಳಿಯಲ್ಲಿ ಸವಿಯುವುದೇ ಚೆನ್ನ!

ಸಾಧಾರಣವಾಗಿ ಜನವರಿ ತಿಂಗಳ 14 ರಂದು ಸಂಕ್ರಾಂತಿ ಬರುತ್ತದೆ. `ಭೋಗಿಯೊಂದಿಗೆ ಶುರುವಾಗುವ ಸಂಕ್ರಾಂತಿ ಮಾರನೆಯ ದಿನ ಮುಂದುವರಿದು, ಊರ ಹಬ್ಬದೊಂದಿಗೆ ಮುಗಿಯುತ್ತದೆ. ಉತ್ತರಾಯಣ ಪುಣ್ಯಕಾಲದ ಈ ದಿನದಂದು, ಸೂರ್ಯ ದಿಕ್ಕು ಬದಾಯಿಸುತ್ತಾನೆ ಎಂಬುದು ಪ್ರತೀತಿ. ಚಿರಂಜೀವಿಗಳಾದ ಭೀಷ್ಮರು ಈ ದಿನಕ್ಕಾಗಿಯೇ ಕಾದಿದ್ದು ಆನಂತರ ಇಹಲೋಕ ತ್ಯಜಿಸಿದರು ಎಂಬುದನ್ನು ವ್ಯಾಸರ ಮಹಾಭಾರತದಲ್ಲಿ ಗುಮನಿಸುತ್ತೇವೆ.

ವರ್ಷವೆಲ್ಲಾ ಕಷ್ಟಪಟ್ಟು ಬೆವರು ಸುರಿಸಿ, ಹೊಲವನ್ನು ಉತ್ತು, ಬೆಳೆ ಬೆಳೆಯುವ ರೈತಾಪಿ ಜನ, ಈ ದಿನ ಕೊಯ್ಲು ಮಾಡಿ ನಂತರ ಧಾನ್ಯಲಕ್ಷ್ಮಿಗೆ ಪೂಜೆ ಸಲ್ಲಿಸುತ್ತಾರೆ. ಮಾರನೆಯ ದಿನ ತಮ್ಮೊದಿಗೆ ಜೀವಿತಾಂತ್ಯ ಜೊತೆ ಜೊತೆಯಾಗಿ ದುಡಿಯುವ ಎತ್ತು ಹಸುಗಳನ್ನು ಆದರಣೀಯವಾಗಿ ಕಾಣಬೇಕೆಂದು, ಅವುಗಳನ್ನು ಶುಭ್ರವಾಗಿ ತೊಳೆದು, ಕೊಂಬುಗಳಿಗೆ ಬಣ್ಣ ಬಳಿದು, ಸಿಂಗಾರ ಮಾಡಿ ಸಾಯಂಕಾಲ `ಬೆಂಕಿ ಹೊಂಡ' ದಾಟಿಸುವ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ. ವ್ಯವಸಾಯದಲ್ಲಿ ಸದಾ ನೆರವಾಗುವ ಈ ಮೂಕಜೀವಿಗಳು ಈ ದಿನದಂದು ಎಲ್ಲಿಲ್ಲದ ಪ್ರಾಮುಖ್ಯತೆ ಗಳಿಸಿಕೊಳ್ಳುತ್ತವೆ.

ಭೋಗಿ ಸಮೃದ್ಧಿಯ ಸಂಕೇತ

ಭೋಗಿ ಹಬ್ಬ ಸಮೃದ್ಧಿಯ ಸಂಕೇತವಾಗಿದೆ. ವರ್ಷವೆಲ್ಲಾ ಕಷ್ಟಪಟ್ಟು ಬೆಳೆದ ಬೆಳೆಯನ್ನು ತಮ್ಮ ಮನೆಯ ದೊಡ್ಡ ದೊಡ್ಡ ಕಣಜಗಳಲ್ಲಿ ತುಂಬಿಟ್ಟು, `ಮನೆ ಸದಾ ಸಮೃದ್ಧಿಯಿಂದ ತುಂಬಿರಲಿ' ಎಂದು ಪರಸ್ಪರ ಶುಭ ಕೋರಿ, ಆನಂದದಿಂದ ಹಬ್ಬ ಆಚರಿಸುತ್ತಾರೆ.

ಹಬ್ಬಕ್ಕೆ ಇನ್ನೂ ಕೆಲವು ದಿನಗಳಿವೆ ಎನ್ನುವಾಗಲೇ ಮನೆಯ ಮಾಡು ಸರಿಪಡಿಸಿ, ಹೊಸ ಹೆಂಚು ಹೊದಿಸಿ, ಸಾರಣೆ ಪಾರಣೆ ಮಾಡಿ, ಮನೆಗೆ ಸುಣ್ಣ ಬಣ್ಣಗಳ ಮೆರುಗು ಕೊಟ್ಟು, ಹೊಸ ಎತ್ತಿನ ಗಾಡಿಗಳನ್ನು ಕೊಂಡು ಹಬ್ಬದ ತಯಾರಿ ನಡೆಸುತ್ತಾರೆ. ಹಳ್ಳಿಯ ಪರಿಸರವೇ ಆಗಲಿ, ನಗರದ ಬೀದಿಗಳೇ ಆಗಲಿ, ಸಂಕ್ರಾಂತಿಯ ದಿನದಂದು ಎಲ್ಲೆಲ್ಲೂ ಹೊಚ್ಚ ಹೊಸತನ ತುಂಬಿಕೊಂಡು ಕಳೆಕಳೆಯಾಗಿ ಇರುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ