ಸಾಮಾನ್ಯವಾಗಿ ಹೆಂಗಸರು ಹೊರಗಿನ ಸಮಾರಂಭಕ್ಕೆ ಸಿದ್ಧವಾಗುವಾಗೆಲ್ಲ, ಹೊರಗೆ ಧರಿಸಲು ಸೂಕ್ತವಾಗುವ ಯಾವ ಡ್ರೆಸ್ಸೂ ಇಲ್ಲ ಎಂದು ಗೊಣಗುವುದು ಎಲ್ಲರಿಗೂ ಗೊತ್ತು. ಆದರೆ ಅಂಥವರ ವಾರ್ಡ್‌ ರೋಬ್‌ ಸದಾ ತುಂಬಿರುತ್ತದೆ ಎಂಬುದು ವಾಸ್ತವ ಸಂಗತಿ. ಅಸಲಿಗೆ ಮುಂದಿನ ಎಷ್ಟೋ ದಿನಗಳಿಗೆ ಅವರಿಗೆ ಹೊಸ ಬಟ್ಟೆ ಖರೀದಿಸುವ ಅಗತ್ಯವೇ ಇರುವುದಿಲ್ಲ. ನೀವು ಬೇರೆ ತರಹ ಆ್ಯಕ್ಸೆಸರೀಸ್‌ ಬಳಸುವುದಾದರೆ, ಜೀನ್ಸ್  ಟೀಶರ್ಟ್ಸ್ ನ ಜೊತೆ ಬ್ಯಾಗ್ಸ್ ಬಳಸಿ ಹಾಗೂ ಇನ್ನೊಮ್ಮೆ ತುಸು ಹೆವಿ ಜ್ಯೂವೆಲರಿ ಬಳಸಿರಿ. ನಿಮ್ಮ ವಾರ್ಡ್‌ರೋಬ್‌ಗೆ ತಕ್ಕಂಥ ವಿಭಿನ್ನ ಆ್ಯಕ್ಸೆಸರೀಸ್‌ ಬಳಸಿದರೆ ಪ್ರತಿದಿನ ಫ್ರೆಶ್‌ ಲುಕ್ಸ್ ಗಳಿಸುವಿರಿ.

ಜ್ಯೂವೆಲರಿ ಕೇವಲ ಒಂದು ಪ್ರಮುಖ ಆಭರಣ ಬಳಸಿಯೇ ನಿಮ್ಮ ಉಡುಗೆಗಳನ್ನು ಆಕರ್ಷಕವಾಗಿ ತೋರ್ಪಡಿಸಬಹುದು. ನಿಮ್ಮ ಉಡುಗೆಗಳ ಲುಕ್ಸ್ ನ್ನು ಪರಿಪೂರ್ಣಗೊಳಿಸಲು ಜ್ಯೂವೆಲರಿಯ ನೆರವು ಪಡೆಯಿರಿ. ನೀವು ಬಯಸಿದರೆ ಜೋಡಿ ಸ್ಟಡ್ಸ್, ಇಯರ್ ಕಫ್‌ ಹಾಗೂ ಡ್ಯಾಂಗ್ಲರ್ಸ್‌ಬಳಸಬಹುದು. ಕುತ್ತಿಗೆಗೆ ಬಳಸುವ ಜ್ಯೂವೆಲರಿ ಬ್ರೇಸ್‌ಲೆಟ್‌ ಅಥವಾ ಬೆರಳಿಗೆ ಉತ್ತಮ ವಿನ್ಯಾಸದ ಉಂಗುರ ಧರಿಸುವುದರಿಂದ ಅದ್ಭುತ ಆಕರ್ಷಣೆ ಗಳಿಸಬಹುದು. ವಾಚ್‌ ಯಾ ರಿಸ್ಟ್ ವಾಚ್‌ ನಿಮಗೆ ಚೆನ್ನಾಗಿ ಹೊಂದುತ್ತದೆ ಎಂದು ಗಮನಿಸಿಕೊಳ್ಳಿ. ನಿಮ್ಮ ವಾಚ್‌ ನಿಮ್ಮ ಸ್ಟೈಲ್‌ಗೆ ಕೈಗನ್ನಡಿ. ಮೆಟಲ್‌ನ ತೆಳು ಚೇನ್‌ವುಳ್ಳ ಗಡಿಯಾರ ಉತ್ತಮ ಎನಿಸುತ್ತದೆ. ದೊಡ್ಡ ಡಯೆಲ್‌ನ ಬಣ್ಣದ ವಾಚ್‌ ಸಹ ನಿಮ್ಮ ಲುಕ್ಸ್ ಸುಧಾರಿಸುತ್ತದೆ.

ತಂಪು ಕನ್ನಡಕ

ಇದು ನಿಮ್ಮ ಸ್ಟೈಲ್‌‌ನ್ನು ಸುಧಾರಿಸುವುದಲ್ಲದೆ, ನಿಮ್ಮ ಕಂಗಳನ್ನು ಸೂರ್ಯನ ಪ್ರಖರ ಕಿರಣಗಳಿಂದಲೂ ರಕ್ಷಿಸುತ್ತದೆ. ದಿ ಬೆಸ್ಟ್ ಲುಕ್ಸ್ ಗಾಗಿ ಕ್ಯಾಟ್‌ ಐಡ್‌ ಮೋನೋ ಕ್ರೋಂ ಶೇಡ್‌ನ ಗ್ಲಾಸಸ್‌ ಬಳಸಬಹುದು. ಬೈಕ್‌ನಲ್ಲಿ ಆಕರ್ಷಕವಾಗಿ ಕಾಣಿಸಲು ಸಿಂಪಲ್ ಗೋಲ್ಡನ್‌ ರಿವ್ಸ್‌ ಬ್ಲ್ಯಾಕ್‌ ಏವಿಯೇಟರ್ಸ್‌ನ್ನು ಬಳಸಬಹುದು.

ಬೆಲ್ಟ್

ಸುಂದರ ಬೆಲ್ಟ್ ಇಲ್ಲದೆ ಯಾವುದೇ ಪಾಶ್ಚಾತ್ಯ ಪೋಷಾಕು ಪೂರ್ಣ ಎನಿಸುವುದಿಲ್ಲ. ನಿಮ್ಮ ಬೀರುವಿನಲ್ಲಿ ವಿಭಿನ್ನ ಮಾದರಿಯ ಅಗಲದ ಬೆಲ್ಟ್ ಗಳು ಇರಬೇಕು, ಅವು ನಿಮಗೆ ಫಿಟ್‌ ಆಗುವಂತಿರಲಿ. ಮುಖ್ಯವಾಗಿ ತೆಳ್ಳಗಿನ ತರುಣಿಯರು ತಮ್ಮ ಡ್ರೆಸ್‌ ಮೇಲೆ ಹೊಳೆಹೊಳೆಯುವ ಮೆಟ್ಯಾಲಿಕ್‌ ಲುಕ್‌ವುಳ್ಳ ಬೆಲ್ಟ್ ಬಳಸಬೇಕು. ಸಾಧಾರಣ ಎತ್ತರ, ಮೈಕಟ್ಟಿನ ಮಹಿಳೆಯರು ದೊಡ್ಡ ಹಾಗೂ ಅಗಲದ ಬೆಲ್ಟ್ ಧರಿಸಬೇಕು. ಜೀನ್ಸ್ ಟೀಶರ್ಟ್‌ ಜೊತೆ ಮಧ್ಯಮ ಆಕಾರದ ಫನ್‌ಬಕ್‌ ಬೆಲ್ಟ್ ಧರಿಸಬೇಕು.

ಸ್ಯಾಂಡಲ್ಸ್ ಹ್ಯಾಂಡ್ಬ್ಯಾಗ್

ನಿಮ್ಮ ಎತ್ತರ, ಗಾತ್ರ, ಮೈಕಟ್ಟಿಗೆ ಮೋಸ್ಟ್ ಸೂಟ್‌ ಆಗುವಂಥ ಹ್ಯಾಂಡ್‌ ಬ್ಯಾಗ್ಸ್ ನ್ನೇ ಆರಿಸಿ. ಇದಕ್ಕಾಗಿ ಅನೇಕ ಆಯ್ಕೆಗಳಿವೆ. ಟೋಟಲ್ಸ್ ಸ್ಯಾಚೆಲೆಸ್, ಮೆಸೆಂಜರ್‌ ಬ್ಯಾಗ್ಸ್, ಕ್ರಾಸ್‌ ಬಾಡಿ, ಸಿಂಗಲ್ಸ್, ಕ್ಲೆಚಸ್‌ಇತ್ಯಾದಿ. ಸ್ಯಾಂಡಲ್ಸ್, ಶೂ, ಚಪ್ಪಲಿ ಬೇಕಾದಾಗ ಅವು ಹೆಚ್ಚು ಆರಾಮದಾಯಕ ಆಗಿರಬೇಕು, ನಿಮ್ಮ ಡ್ರೆಸ್‌ಗೂ ಹೊಂದುವಂತಿರಬೇಕು. ನೀವು ಹೋಗುತ್ತಿರುವ ಪಾರ್ಟಿ ಅಥವಾ ಸಮಾರಂಭಕ್ಕೆ ಪೂರಕವಾಗುವಂತೆ ಬಣ್ಣಗಳಿರಲಿ. ಉದಾ : ನ್ಯೂಟ್ರಲ್ ಕಲರ್‌ ಬ್ಯಾಗ್‌ ಹಾಗೂ ಮಾನೋಕ್ರೋಮ್ ಶೂಸ್ ಪ್ರೊಫೆಶನ್‌ ಲುಕ್ಸ್ ಕೊಡತ್ತವೆ. ಪಾಪ್‌ ಕಲರ್ಡ್‌ ಟೈ ಅಪ್‌ ಸ್ಟಿಲೆಟೋಸ್‌ ಜೊತೆ ಹೊಳೆಹೊಳೆಯುವ ಬ್ಯಾಗ್‌, ನಿಮ್ಮ ಬೋರಿಂಗ್‌ಎಡಿಗೆ ಹೊಸ ರೂಪ ಕೊಡುವುದಲ್ಲದೆ, ನಿಮ್ಮ ಹಾಟ್‌ನೆಸ್‌ ಕೋಶೆಂಟ್‌ಗೂ ಆ್ಯಡ್‌ ಆನ್‌ ಆಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ