ಮದುವೆಯ ನಂತರದ ದೀಪಾವಳಿ ಬರುತ್ತಿದ್ದು, ನೀವು ಕುಟುಂಬದವರಿಂದ ಬಹುದೂರ ಪತಿಯ ಜೊತೆಗೆ ಇರುತ್ತಿದ್ದರೆ, ಅವರಿಗೆ ಕುಟುಂಬದವರಿಂದ ದೂರ ಇದ್ದೇವೆ ಎಂಬ ಅನುಭೂತಿ ಬರದಂತೆ ನೋಡಿಕೊಳ್ಳಿ.

ಕುಟುಂಬದವರು ಹಾಗೂ ಸಂಬಂಧಿಕರೊಂದಿಗೆ ಹಬ್ಬ ಆಚರಿಸುವುದು ನೈತಿಕ ಜವಾಬ್ದಾರಿಯಷ್ಟೇ ಅಲ್ಲ, ಪರಂಪರೆಯೂ ಆಗಿದೆ. ಒಂದು ವೇಳೆ ಹೀಗಾಗದಿದ್ದರೆ ವ್ಯಕ್ತಿ ಉದಾಸನಾಗುತ್ತಾನೆ.

ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುವ ಅನುರಾಧಾ ಹೀಗೆ ಹೇಳುತ್ತಾರೆ, ``ನನ್ನ ಗಂಡನ ನೌಕರಿಯ ಒಂದು ವಿಶೇಷ ಕಾರಣದಿಂದ ನಮ್ಮ ಮೊದಲ ದೀಪಾವಳಿಯನ್ನು ಬೇರೊಂದು ನಗರದಲ್ಲಿ ಕಳೆಯಬೇಕಾಗಿ ಬಂತು. ನಾನು ಅವರ ಜೊತೆಗೇ ಇದ್ದೆ. ಅವರನ್ನು ಹೇಗೆ ಖುಷಿಪಡಿಸುವುದು ಎಂದು ನಾನು ವಿಚಾರದಲ್ಲಿ ಮುಳುಗಿದ್ದೆ. ಆಗ ನನ್ನ ಗೆಳತಿಯೊಬ್ಬಳು ಕೆಲವು ಟಿಪ್ಸ್ ಕೊಟ್ಟಳು.

ಗಂಡನೊಂದಿಗೆ ಹೊರಗಡೆ ಇದ್ದಾಗ ದೀಪಾವಳಿಯನ್ನು ಹೇಗೆ ಖುಷಿಯಿಂದ ಆಚರಿಸಬೇಕು ಎನ್ನುವುದನ್ನು ತಿಳಿದುಕೊಳ್ಳಿ :

ಸಂಗಾತಿಗಾಗಿ ಸಿಂಗರಿಸಿಕೊಳ್ಳಿ

ಹಬ್ಬಗಳು ಬಂದಾಗ ಮನಸ್ಸಿನಲ್ಲಿ ಖುಷಿಯ ಸಿಂಚನವಾಗುತ್ತದೆ. ಚೆನ್ನಾಗಿ ಅಲಂಕರಿಸಿಕೊಳ್ಳುವುದು ಹಾಗೂ ಒಳ್ಳೆಯ ಡಿಸೈನಿನ ಬಟ್ಟೆಗಳನ್ನು ಧರಿಸುವ ನಿಮ್ಮ ಹವ್ಯಾಸವನ್ನು ಈ ಸಂದರ್ಭದಲ್ಲಿ ಪೂರೈಸಿಕೊಳ್ಳಬಹುದು. ಪತಿಗೆ ಇಷ್ಟವಾಗುವ ಬಟ್ಟೆಗಳನ್ನು ಧರಿಸಬೇಕೆಂಬ ಆಲೋಚನೆ ನಿಮಗಿರಬೇಕು. ಜೊತೆಗೆ ಎಕ್ಸ್ ಪರ್ಟ್‌ ಗಳ ಸಲಹೆ ಕೂಡ ಕೇಳಬಹುದು.

ಹಬ್ಬದ ದಿನ ಸಂಜೆ ನೀವು ಅಲಂಕರಿಸಿಕೊಳ್ಳಲು ತಯಾರಾದರೆ, ಆಗ ಪತಿಯ ನೆರವು ಕೇಳಬಹುದು. ನಿಮ್ಮ ಕೂದಲಿಗೆ ಕ್ಲಿಪ್‌ ಹಾಕಿ ಎಂದು ಹೇಳಿ, ಕೈಗಳಿಗೆ ಮೃದುವಾಗಿ ಬಳೆ ತೊಡಿಸಿ ಎಂದು ವಿನಂತಿಸಿಕೊಳ್ಳಿ. ನಿಮ್ಮದು ಬ್ಯಾಕ್‌ ಬಟನ್‌ ಬ್ಲೌಸ್‌ ಆಗಿದ್ದರೆ, ಗಂಡನಿಗೆ ಬಟನ್‌ ಹಾಕಿ ಎಂದು ಹೇಳಿ. ನೇಲ್ ‌ಪೇಂಟ್‌ ಹಾಕಿಸಿಕೊಳ್ಳಲು, ಸೀರೆ ಉಟ್ಟುಕೊಳ್ಳಲು ಅವರ ನೆರವು ಪಡೆದುಕೊಳ್ಳಬಹುದು. ನಿಮ್ಮ ಈ ರೀತಿಯ ಕೋರಿಕೆ ಅವರ ಮನಸ್ಸಿನಲ್ಲಿ ಪ್ರೀತಿಯ ಹುಚ್ಚು ಹೊಳೆಯನ್ನೇ ಹರಿಸಬಹುದು. ಅಂದಿನ ರಾತ್ರಿ ಸುಮಧುರ ರಾತ್ರಿಯಾಗುವುದರಲ್ಲಿ ಸಂದೇಹವೇ ಇಲ್ಲ. ಬಾಡಿ ಲ್ಯಾಂಯಾಂಗ್ವೇಜ್‌ ಬಗ್ಗೆ ಗಮನ ಕೊಡಿ ಡ್ರೆಸ್‌ ನ ಜೊತೆ ಜೊತೆಗೆ ನಿಮ್ಮ ನಡಿಗೆಯ ಬಗೆಗೂ ಪರಿಪೂರ್ಣ ಗಮನ ಕೊಡಿ. ಹೆಜ್ಜೆ ಹಾಕುವಾಗ ಯಾವಾಗಲೂ ಚಿಕ್ಕಚಿಕ್ಕ ಹೆಜ್ಜೆಗಳನ್ನಿಡಿ. ನಿಮ್ಮ ಚಪ್ಪಲಿಯ ಹೀಲ್ ‌ಎಷ್ಟಿರಬೇಕೆಂದರೆ, ನೀವು ನಿರಾಳವಾಗಿ ನಡೆದಾಡಲು ಸುಲಭವಾಗಬೇಕು.

ಸಮರ್ಪಣೆಯ ಭಾವ ಇರಲಿ

ನಿಮ್ಮ ಸಮರ್ಪಣೆ ಪತಿಗೆ ಈ ಹಬ್ಬ ಎಂದೂ ಮರೆಯದ ನೆನಪಾಗುತ್ತದೆ. ರಾತ್ರಿಯ ಮೆರುಗು ದೀಪಗಳ ನಡುವೆ ಪತಿಯ ಜೊತೆಗೆ ಮುಕ್ತವಾಗಿ ಸಮಾಗಮ ನಡೆಸಿ. ನಿಮ್ಮ ಪ್ರೀತಿ ಅವರನ್ನು ಖುಷಿಪಡಿಸುತ್ತದೆ. ಈ ಮಾತುಗಳಂತೂ ಮನೆಯ ಹೊರಗಿರುವವರದ್ದಾಯಿತು. ಮನೆಯಲ್ಲಿಯೇ ಇದ್ದರೆ ಹಬ್ಬವನ್ನು ಹೀಗೆ ಆಚರಿಸಬೇಕು.

ಮನೆಯನ್ನು ಬೆಳಗಿಸಿ

ದೀಪಾವಳಿಯ ಹಬ್ಬದಲ್ಲಿ ಬೆಳಕಿನ ವಿಷಯ ಇಲ್ಲ ಎಂದರೆ ಹೇಗಾಗುತ್ತದೆ? ಇಂಟೀರಿಯರ್‌ ಡಿಸೈನರ್‌ ರಾಜೇಶ್‌ ಹೀಗೆ ಹೇಳುತ್ತಾರೆ, ``ದೀಪಾವಳಿಯ ಹಬ್ಬದಲ್ಲಿ ಗಂಡನನ್ನು ಖುಷಿಪಡಿಸಲು ಹಾಗೂ ಪ್ರೀತಿಯನ್ನು ವ್ಯಕ್ತಪಡಿಸಲು ದೀಪಗಳ ಹೊರತಾಗಿ ಸುಗಂಧ ಪಸರಿಸುವ ಕ್ಯಾಂಡಲ್ ಗಳನ್ನು ಹಚ್ಚಿ. ವಾತಾವರಣ ಮತ್ತಷ್ಟು ಮಧುರವಾಗುತ್ತದೆ. ಫ್ಲೋಟಿಂಗ್‌ ಕ್ಯಾಂಡಲ್ ನ್ನು ಉಪಯೋಗಿಸಿ. ನೀರಿನಿಂದ ತುಂಬಿದ ಅಗಲವಾದ ಪಾತ್ರೆಯಲ್ಲಿ ಹೂಗಳ ಪಕಳೆಗಳ ನಡುವೆ ತೇಲಾಡುವ ಕ್ಯಾಂಡಲ್ ಗಳು ಮನಸ್ಸನ್ನು ಆಕರ್ಷಿಸುತ್ತವೆ ಹಾಗೂ ವಾತಾವರಣವನ್ನು ರೊಮ್ಯಾಂಟಿಕ್‌ ಗೊಳಿಸುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ