ಮಹಿಳೆಯರಿಗಂತೂ ಡೇಲಿ ಯೂಸ್‌ಗಾಗಿ ಸರಿಯಾದ ಒಡವೆಗಳ ಆಯ್ಕೆ ಕಷ್ಟಕರ ಎನಿಸುತ್ತದೆ. ಏಕೆಂದರೆ ಹೆಚ್ಚು ವೈಭವ ಪ್ರದರ್ಶಿಸದ, ತಮ್ಮ ಕಾರ್ಯಸ್ಥಳಕ್ಕೆ ಹೊಂದುವಂಥ ಒಡವೆ ಬೇಕಾಗುತ್ತದೆ. ಕೆಳಗಿನ ಸಲಹೆ ಅನುಸರಿಸಿ ನಿಮಗೆ ಹೊಂದುವಂಥ ಸಮರ್ಪಕ ಜ್ಯೂವೆಲರಿ ಆರಿಸಿಕೊಳ್ಳಿ…..

ಮನೆ, ಹೊರಗೆ, ಕಾರ್ಪೊರೇಟ್‌ ಜಗತ್ತೇ ಇರಲಿ ಮಹಿಳೆಯರು ಆಭರಣಗಳಿಲ್ಲದೆ ಕಾಣಿಸುವುದೇ ಇಲ್ಲ. ಕಛೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗಂತೂ ಡೇಲಿ ಯೂಸ್‌ಗಾಗಿ ಸರಿಯಾದ ಒಡವೆಗಳ ಆಯ್ಕೆ ಕಷ್ಟಕರ ಎನಿಸುತ್ತದೆ. ಏಕೆಂದರೆ ಹೆಚ್ಚು ವೈಭವ ಪ್ರದರ್ಶಿಸದ, ತಮ್ಮ ಕಾರ್ಯಸ್ಥಳಕ್ಕೆ ಹೊಂದುವಂಥ ಒಡವೆ ಬೇಕಾಗುತ್ತದೆ. ಕೆಳಗಿನ ಸಲಹೆ ಅನುಸರಿಸಿ ನಿಮಗೆ ಹೊಂದುವಂಥ ಸಮರ್ಪಕ ಜ್ಯೂವೆಲರಿ ಆರಿಸಿಕೊಳ್ಳಿ.

ಥಳುಕು ಬಳುಕಿನವು ಬೇಡ : ಡ್ರೆಸ್‌ ಮೆಟೀರಿಯಲ್ ತರಹ ಆಭರಣಗಳೂ ಸಹ ಬಲು ಥಳುಕು ಬಳುಕಿನವು ಆಗಿರಬಾರದು. ಕೆಲವು ಆಫೀಸ್‌ಗಳಲ್ಲಂತೂ ಹೆಚ್ಚು ಒಡವೆಗಳನ್ನು ಧರಿಸಲು ಅನುಮತಿ ಇರುವುದಿಲ್ಲ. ಹೀಗಾಗಿ ಇಂಥ ಆಫೀಸ್‌ಗಳಿಗೆ ಹೋಗುವ ಹೆಣ್ಣುಮಕ್ಕಳು ಅತಿ ಎಚ್ಚರಿಕೆಯಿಂದ ತಮಗೆ ಸೂಕ್ತವಾಗುವ ಒಡವೆ ಆರಿಸಬೇಕು. ನಿಮ್ಮ ಉಡುಗೆ ತೊಡುಗೆ ನಿಮ್ಮ ವ್ಯಕ್ತಿತ್ವದ ಕನ್ನಡಿ ಎನಿಸುತ್ತದೆ.

ತ್ವಚೆ/ ಉಡುಗೆಯ ಬಣ್ಣ ಗಮನಿಸಿಕೊಂಡೇ ಆಭರಣ ಆರಿಸಿ : ಆಭರಣಗಳು ಎಂದಿಗೂ ನಿಮ್ಮ ಚರ್ಮದ ಬಣ್ಣ ಮತ್ತು ಉಡುಗೆಗೆ ತಕ್ಕಂತೆ ಇರಬೇಕು. ಮೆಟಲ್ ಜೆಮ್ ಸ್ಟೋನ್‌ ತ್ವಚೆಗೆ ಹೊಳಪು ನೀಡುತ್ತವೆ. ಇವುಗಳ ಬಣ್ಣ ಸ್ಪೆಕ್ಟ್ರಂ ಗೋಲ್ಡ್, ಸಿಲ್ವರ್‌, ರೋಸ್‌ಗೋಲ್ಡ್, ಟರ್ಕಾಯಿಸ್‌, ಅಮೆಥಿಲ್ಟ್ ಇತ್ಯಾದಿ.

ಆಭರಣ ದೇಹಕ್ಕೆ ಅನುರೂಪವಾಗಿರಲಿ : ಆಭರಣಗಳ ಆಕಾರ ಬಹು ಮಹತ್ವ ಪಡೆದಿವೆ. ಅವನ್ನು ಆರಿಸುವ ಮೊದಲು ನಿಮ್ಮ ದೇಹದ ಕಡೆ ನಿಗಾ ಇರಲಿ. ಉದಾ: ನೆಕ್‌ಲೇಸ್‌ ಯಾ ರಿಂಗ್ಸ್ ಆಕಾರ  ನಿಮ್ಮ ಸಹೋದ್ಯೋಗಿಗಳ ಕ್ಲೈಂಟ್ಸ್ ಅಥವಾ ಗಮನಸೆಳೆಯದಿರಲಿ.

ಜ್ಯಾಮಿತೀಯ ರಚನೆ ಆರಿಸಿ : ಆಭರಣಗಳ ಡಿಸೈನ್‌ ಸಾದಾ, ವೃತ್ತ, ಆಯಾತಾಕಾರ ಅಥವಾ ಜ್ಯಾಮಿತೀಯ ಆಗಿದ್ದು, ಜೊತೆಗೆ ಸಭ್ಯವಾಗಿದ್ದು ಸಹೋದ್ಯೋಗಿಗಳನ್ನು ಅನಗತ್ಯವಾಗಿ ಆಕರ್ಷಿಸದೆ ಇರಲಿ. ಈ ಡಿಸೈನ್‌ ನಿಮ್ಮ ಉಡುಗೆಗಳಿಗೂ ಹೊಂದುವಂತಿರಲಿ. ಮುಖ್ಯವಾಗಿ ಕಾರ್ಪೊರೇಟ್‌ ಮಹಿಳೆಯರು ಗೋಲ್ಡ್ ಡೈಮಂಡ್‌ ಇಯರ್‌ ರಿಂಗ್ಸ್, ಸಣ್ಣ ಪೆಂಡೆಂಟ್‌ ಹಾಗೂ ವೈಟ್‌ ಡೈಮಂಡ್‌ ಬ್ಯಾಂಡ್‌ ಧರಿಸಬಹುದು.

ಒಂದು ಬೋಲ್ಡ್ ಪೀಸ್‌: ಎಲ್ಲಾ ಆಭರಣಗಳನ್ನೂ ಬಹಳ ಕಡಿಮೆ ಮಾಡಿದ್ದ ಪಕ್ಷದಲ್ಲಿ, ನೀವು ಒಂದು ದೊಡ್ಡ, ಬೋಲ್ಡ್ ಪೀಸ್‌ ಆರಿಸಿ. ನೀವು ಕ್ಲಾಸಿ ಇಯರ್‌ ರಿಂಗ್ಸ್ ಯಾ ಸ್ಟೇಟ್‌ಮೆಂಟ್‌ ರಿಂಗ್‌ ಧರಿಸಿರಿ. ಆಫೀಸ್‌ ಶರ್ಟ್‌ ಜೊತೆ ನೆಕ್‌ಪೀಸ್‌ ಮ್ಯಾಚ್‌ ಆಗುತ್ತದೆ ಯಾ ಪರ್ಲ್ ಸ್ಟ್ರಿಂಗ್‌ ಜೊತೆ ಸೈಡ್‌ ಬ್ರೋಚ್‌ ಸಹ ಬಳಸಬಹುದು. ನಿಮ್ಮ ಶರ್ಟ್‌ ಮೇಲೆ ಕಟ್‌ವರ್ಕ್‌ ನೆಕ್‌ಲೇಸ್‌ ಗೋಲ್ಡ್ ಇಟಾಲಿಯನ್‌ ಚೇನ್‌ ಜೊತೆ ಜೆಮ್ ಸ್ಟೋನ್‌ ಪೆಂಡೆಂಟ್‌ ಧರಿಸಬಹುದು.

ಎಲ್ಲಾ ಉಡುಗೆಗಳಿಗೂ ಹೊಂದುವ ಮುತ್ತು : ಕಾರ್ಪೊರೇಟ್‌ ಜಗತ್ತಿನ ಅತಿ ಉತ್ಕೃಷ್ಟ ಆಭರಣ ಎಂದರೆ ಮುತ್ತು. ಇದು ಯಾವ ಬಗೆಯ ಕಾರ್ಪೊರೇಟ್‌ ಉಡುಗೆಗೂ ಹೊಂದುತ್ತದೆ. ಕಿವಿಗಳಲ್ಲಿ ಮುತ್ತಿನ ಸ್ಟಡ್ಸ್, ಮುತ್ತಿನ ಬ್ರೇಸ್‌ಲೆಟ್‌, ಉಂಗುರ ಧರಿಸಬಹುದು. ಬ್ರೇಸ್‌ಲೆಟ್‌ ಬೇಡ ಎನಿಸಿದರೆ ಮುತ್ತಿನ ಹಾರ ಇದ್ದೇ ಇದೆ!

– ಅನುಷ್ಕಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ