ನೀವು ಹೊಸ ಡ್ರೆಸ್ಗಳ ಡಿಸೈನಿಂಗ್ಮಾಡುವಲ್ಲಿ ವಿಶೇಷ ಪ್ರತಿಭೆ ಉಳ್ಳವರಾದರೆ, ಬುಟಿಕ್ಬಿಸ್ನೆಸ್ಆರಂಭಿಸಿ ಉತ್ತಮ ಆದಾಯ ಗಳಿಸಬಹುದು. ಹೇಗೆ.....?

ದೊಡ್ಡ ಪಾರ್ಟಿಗಾಗಿ ನೀವು ಕೇವಲ 5 ಸಾವಿರ ಬಜೆಟ್‌ ನಲ್ಲಿ ನಿಮ್ಮನ್ನು ನೀವು ರೆಡಿ ಮಾಡಿಕೊಳ್ಳಬಲ್ಲಿರಾ? ನಿಮ್ಮ ಉತ್ತರ ಹ್ಞೂಂ ಅಂದ್ರೆ ನೀವು ಕ್ರಿಯೇಟಿವ್ ‌ಅಂತ. ಫ್ಯಾಷನ್ನಿನ ಅರ್ಥ ನೀವು ಡ್ರೆಸ್‌ ನ್ನು ಎಷ್ಟು ದುಬಾರಿ ಆಗಿ ರೆಡಿ ಮಾಡಿದಿರಿ ಅಂತಲ್ಲ. ಸರಿಯಾದ ಅರ್ಥದಲ್ಲಿ ಡಿಸೈನಿಂಗ್‌ ಅಂದ್ರೆ ನಿಮ್ಮ ಕ್ರಿಯೇಟಿವಿಟಿಯಿಂದ, ಕಡಿಮೆ ಬಜೆಟ್‌ ನಲ್ಲಿ ಎಂಥ ಆಕರ್ಷಕ ಡ್ರೆಸ್‌ ರೆಡಿ ಮಾಡಬಹುದು ಅಂತ.ಹೀಗಾಗಿ ಬುಟಿಕ್‌ ಬಿಸ್‌ ನೆಸ್‌ ಗೆ ಬರುವ ಮೊದಲು ನಿಮ್ಮ ಮೇಲೆಯೇ ಈ ಪ್ರಯೋಗ ಮಾಡಿಕೊಳ್ಳಿ. ಉದಾ : ನಿಮ್ಮ  ಹಳೆ ಸೀರೆಯಿಂದ ಹೊಸ ಡಿಸೈನರ್‌ ಸೂಟ್‌ ಮಾಡಬಹುದು. ಸಾಮಾನ್ಯವಾಗಿ ಹೆಂಗಸರು ತಮ್ಮ ದುಬಾರಿ ಬ್ರೈಡಲ್ ಡ್ರೆಸ್‌ ನ್ನು ಅತಿ ಕಡಿಮೆ ಬಳಸುತ್ತಾ ಜೀವಮಾನವಿಡೀ ಹಾಗೇ ಇಟ್ಟುಕೊಳ್ಳುತ್ತಾರೆ. ನಿಮ್ಮ ಕ್ರಿಯೇಟಿವಿಟಿಯಿಂದ ಇದನ್ನು ಆಕರ್ಷಕ ಡ್ರೆಸ್‌ ಆಗಿಸಬಹುದು. ಇದರ ಜೊತೆಯಲ್ಲೇ ಬಿಸ್‌ ನೆಸ್‌ ಆರಂಭಿಸುವ ಮುನ್ನ ಎಕ್ಸ್ ಪರ್ಟ್ಸ್ ನೀಡಿರುವ ಸಲಹೆ ಗಮನಿಸಿ:

ಮೂಲಭೂತ ಅಗತ್ಯಗಳು : ಬುಟಿಕ್‌ ಆರಂಭಿಸುವ ಮೊದಲು, ಕೆಲವು ಮಹತ್ವಪೂರ್ಣ ಅಗತ್ಯಗಳನ್ನು ಪೂರೈಸುವುದು ಅವಶ್ಯಕ. ಇದರ ಮೊದಲ ಹಂತವೇ ಬುಟಿಕ್‌ ಗಾಗಿ ಜಾಗ. ಆರಂಭದಲ್ಲಿ ಇದು ಚಿಕ್ಕ ಜಾಗವಾದರೂ ನಡೆಯುತ್ತದೆ. ಪಾರ್ಲರ್‌ ಜೊತೆ, ಮನೆಯ ಕೋಣೆ, ಗ್ಯಾರೇಜ್‌..... ಒಟ್ಟಿನಲ್ಲಿ ಲುಕ್ಸ್ ಆಕರ್ಷಕ ಆಗಿರಲಿ. ಸಣ್ಣ ಅಂಗಡಿ ಬಾಡಿಗೆಗೆ ಹಿಡಿದು, ಇದನ್ನು ಆರಂಭಿಸಬಹುದು.

ಬುಟಿಕ್‌ ಗಾಗಿ ಅತಿ ಎಚ್ಚರಿಕೆಯಿಂದ ಟೇಲರ್‌ ಮಾಸ್ಟರ್‌ ಆಯ್ಕೆ ಮಾಡಬೇಕು, ನೀವೇ ಮಾಡುವುದಾದರೆ ಆಗ ಜವಾಬ್ದಾರಿ ಹೆಚ್ಚುತ್ತದೆ. ಟೆಕ್ನಿಕಲಿ ಅವರು ಎಲ್ಲಾ ವಿಭಾಗ ನಿಭಾಯಿಸುವಂತಿರಬೇಕು, ಅಂದ್ರೆ ಗುಂಡಿ ಖಾಜಾ ಇತ್ಯಾದಿ. ಇಲ್ಲದಿದ್ದರೆ ಇನ್ನೊಬ್ಬರ ನೆರವು ಬೇಕಾದೀತು. ನಿಮ್ಮ ಬುಟಿಕ್‌ ನಲ್ಲಿ ಓವರ್‌ ಲಾಕ್‌ ಇರುವಂಥ ಉತ್ತಮ ಕಂಪನಿಯ ಹೊಲಿಗೆ ಮೆಶೀನ್‌ ಇರಲಿ. ಇದಕ್ಕಾಗಿ ನೀವೇ ಬಂಡವಾಳ ಹೂಡಬೇಕಾಗಿ ಬರಬಹುದು. ಹಾಗೆಯೇ ಉತ್ತಮ ಗುಣಮಟ್ಟದ ಅಳತೆಯ ಟೇಪ್‌, ಕತ್ತರಿ, ಟ್ರೇಸಿಂಗ್‌ ವೀಲ್‌, ಸೂಜಿ, ಪ್ಯಾಟರ್ನ್‌ ಮೇಕಿಂಗ್‌ ಟೂಲ್ಸ್‌, ಕಟಿಂಗ್‌ ಪ್ಯಾಡ್‌/ ಟೇಬಲ್, ಬುಟಿಕ್‌ ಗಾಗಿ ಉತ್ತಮ ಬೆಳಕಿನ ವ್ಯವಸ್ಥೆ.... ಇತ್ಯಾದಿ ಎಲ್ಲವನ್ನೂ ಗಮನಿಸಿಕೊಳ್ಳಬೇಕು.

ಆರಂಭದ ಹಂತ : ನಿಮ್ಮ ವ್ಯಾಪಾರದ ಆರಂಭದಲ್ಲಿ ಮಾರುಕಟ್ಟೆಯಿಂದ ಕಡಿಮೆ ಬೆಲೆಯ ಡ್ರೆಸ್‌ ಮೆಟೀರಿಯಲ್ಸ್ ನ್ನೇ ಕೊಳ್ಳಿರಿ. ಜೊತೆಗೆ ಬುಟಿಕ್‌ ಜನಪ್ರಿಯಗೊಳ್ಳಲು, ತುಸು ಅಗ್ಗದ ಉಪಾಯಗಳನ್ನೇ ಅನುಸರಿಸಿ. ಉದಾ : ಬ್ಯಾಗ್ಸ್ ಮೇಲೆ ನಿಮ್ಮ ಬುಟಿಕ್ ಹೆಸರು, ಬುಟಿಕ್‌ ಗೆ ಉತ್ತಮ `ಲೋಗೋ' ಇರಲಿ, ಇದನ್ನು ನೀವೇ ಡಿಸೈನ್‌ ಮಾಡಿ. ವಿಸಿಟಿಂಗ್‌ ಕಾರ್ಡ್ಸ್ ಪ್ರಿಂಟ್‌ ಹಾಕಿಸಿ, ನಿಮ್ಮ ಲೋಕಲ್ ನ್ಯೂಸ್‌ ಪೇಪರ್‌ ನಲ್ಲಿ ಸಣ್ಣದಾಗಿ ಜಾಹೀರಾತು ಕೊಡಿ. ಬುಟಿಕ್‌ ಹೆಸರಲ್ಲಿ ಪಾಂಪ್ಲೆಟ್ಸ್ ಮುದ್ರಿಸಿ, ಪೇಪರ್‌ ಜೊತೆ ಅದು ಎಲ್ಲರಿಗೂ ಸಿಗುವಂತೆ ಹಂಚಿಸಿ. ಅಲ್ಲಲ್ಲಿ ಬ್ಯಾನರ್‌ ಹಾಕಿಸಿ. ನಿಮ್ಮ ಗ್ರಾಹಕರ ಡಿಮ್ಯಾಂಡ್‌, ಬುಟಿಕ್‌ ಜಾಗ, ಬಜೆಟ್‌ನೋಡಿ ಅದಕ್ಕೆ ತಕ್ಕಂತೆ ಹೊಲಿಗೆ, ಬೆಲೆ ನಿರ್ಧರಿಸಿ. ವಾಟ್ಸ್ ಆ್ಯಪ್‌ ಮೆಸೇಜ್‌, FB‌, ಟ್ವಿಟರ್‌, ಇನ್‌ ಸ್ಟಾಗ್ರಾಂ ಇತ್ಯಾದಿಗಳ ಮೂಲಕ ಹೆಚ್ಚು ಗ್ರಾಹಕರನ್ನು ಸಂಪರ್ಕಿಸಲು ಯತ್ನಿಸಿ. ಅಲ್ಲೆಲ್ಲ ನಿಮ್ಮ ಡಿಸೈನಿಂಗ್‌ ಫೋಟೋ ರಾರಾಜಿಸಲಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ