ಬಹಳಷ್ಟು ಮಹಿಳೆಯರು ಬಟ್ಟೆ ಒಗೆಯುವಾಗ ಸರಿಯಾದ ವಿಧಾನ ಅನುಸರಿಸುವುದಿಲ್ಲ. ಅವರು ಬಟ್ಟೆ ದುಬಾರಿಯಾಗಿರಲಿ ಅಥವಾ ಅಗ್ಗವಾಗಿರಲಿ ಎಲ್ಲವನ್ನೂ ಒಂದೇ ರೀತಿ ಒಗೆಯುತ್ತಾರೆ. ಅದರಿಂದ  ಬಟ್ಟೆಗಳು ಬೇಗ ಹಾಳಾಗುತ್ತವೆ, ಅವುಗಳ ಬಣ್ಣ ಬಹಳ ಬೇಗ ಫೇಡ್‌ ಆಗುತ್ತವೆ. ಹೀಗೆ ಮಾಡುವುದರಿಂದ ನೀವು ಹಣ ಹೆಚ್ಚು ಖರ್ಚು ಮಾಡಿ ಡ್ರೆಸ್‌ ತಂದಿದ್ದರೂ ಹೆಚ್ಚು ಬಾರಿ ಅದನ್ನು ಧರಿಸಲು ಆಗುವುದಿಲ್ಲ.

ಹೀಗೆ ಮಾಡುವುದರ ಹಿಂದಿನ ವಿಶೇಷ ಕಾರಣವೇನೆಂದರೆ ಲಾಂಡ್ರಿಯಲ್ಲಿ ದುಬಾರಿ ಬಟ್ಟೆಗಳನ್ನು ಒಗೆಸಿದರೆ ಹೆಚ್ಚು ಹಣ ಖರ್ಚಾಗುತ್ತದೆ. ಆದ್ದರಿಂದ ನೀವು ಮನೆಯಲ್ಲಿಯೇ ನಿಮ್ಮ ದುಬಾರಿ ಉಡುಪುಗಳನ್ನು ಸರಿಯಾದ ಹಾಗೂ ಸುರಕ್ಷಿತ ವಿಧಾನದಲ್ಲಿ ಒಗೆಯಬಹುದು. ಅದರಿಂದ ನಿಮ್ಮ ಬಟ್ಟೆಗಳು ಚೆನ್ನಾಗಿ ಸ್ವಚ್ಛವಾಗುತ್ತವೆ ಮತ್ತು ಹೆಚ್ಚು ಕಾಲ ಅವನ್ನು ಉಪಯೋಗಿಸಬಹುದು.

ದುಬಾರಿ ಉಡುಪುಗಳನ್ನು ಹೇಗೆ ಸ್ವಚ್ಛಗೊಳಿಸುವುದೆಂದು ತಿಳಿಯೋಣ ಬನ್ನಿ :

ಬೇರೆ ಬೇರೆ ಪೆಟ್ಟಿಗೆಯಲ್ಲಿಡಿ

ದುಬಾರಿ ಬಟ್ಟೆಗಳನ್ನು ದಿನನಿತ್ಯದ ಬಟ್ಟೆಗಳನ್ನಿಡುವ ಪೆಟ್ಟಿಗೆಯಲ್ಲಿ ಇಡಬೇಡಿ. ಅವುಗಳ ಪೆಟ್ಟಿಗೆಗಳು ಬೇರೆ ಇರಬೇಕು.

ದುಬಾರಿ ಬಟ್ಟೆಗಳನ್ನು ಹೆಚ್ಚು ದಿನ ಪೆಟ್ಟಿಗೆಯಲ್ಲಿ ಒಂದೇ ಸ್ಥಿತಿಯಲ್ಲಿಡಬೇಡಿ. ಹೀಗೆ ಮಾಡಿದರೆ ಅವುಗಳಲ್ಲಿ ಶಾಶ್ವತವಾಗಿ ಗೆರೆ ಬೀಳುತ್ತದೆ.

ಪೆಟ್ಟಿಗೆಯನ್ನು ಕಲೆ ಅಥವಾ ಗುರುತು ಬೀಳದಂತೆ ಸ್ವಚ್ಛ ಜಾಗದಲ್ಲಿಡಿ.

ಒಂದು ವೇಳೆ ಪೆಟ್ಟಿಗೆಯಲ್ಲಿ 2 ಬೇರೆ ಬೇರೆ ರೀತಿಯ ಫ್ಯಾಬ್ರಿಕ್‌ನ ಬಟ್ಟೆಗಳನ್ನು ಹಾಕುತ್ತಿದ್ದರೆ ಅವುಗಳ ಮಧ್ಯೆ ಅಗತ್ಯವಾಗಿ ಪೇಪರ್‌ ಪಾರ್ಟಿಶನ್‌ ಮಾಡಿ.

ಲೇಬಲ್ ಅಗತ್ಯವಾಗಿ ಕೊಡಿ.

ಪ್ರತಿ ಬ್ರ್ಯಾಂಡೆಡ್‌ ಔಟ್‌ಫಿಟ್‌ನಲ್ಲಿ ಒಂದು ಲೇಬಲ್ ಹಾಕಲಾಗಿದ್ದು, ಅದರ ಮೇಲೆ ಅದನ್ನು ಸ್ಟೋರ್‌ ಮಾಡುವ ಮತ್ತು ಸ್ವಚ್ಛಗೊಳಿಸುವ ಬಗ್ಗೆ ನಿರ್ದೇಶನಗಳನ್ನು ಕೊಟ್ಟಿದೆ. ಅದನ್ನು ಅಗತ್ಯವಾಗಿ ಓದಿ.

ಒಂದುವೇಳೆ ನಿಮ್ಮ ಬಟ್ಟೆಗಳನ್ನು ಕೆಲಸದಾಳಿನಿಂದ ಒಗೆಸುತ್ತಿದ್ದರೆ ಅವಳಿಗೆ ಆ ಲೇಬಲ್ ಓದಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವೇ ಬಟ್ಟೆಯನ್ನು ಸ್ವಚ್ಛಗೊಳಿಸಿ ಅಥವಾ ನಿಮ್ಮ ಆಳಿಗೆ ಅರ್ಥವಾಗುವಂತೆ ಹೇಳಿ.

ಲೇಬಲ್‌ನಲ್ಲಿ ಒಮ್ಮೊಮ್ಮೆ ಅಕ್ಷರಗಳ ಜಾಗದಲ್ಲಿ ಚಿಹ್ನೆಗಳನ್ನು ಕೊಡಲಾಗಿರುತ್ತದೆ. ಅವನ್ನು ತಿಳಿದುಕೊಳ್ಳಲು ಪ್ರಯತ್ನಿಸಿ ಅಥವಾ ಯಾವುದಾದರೂ ಲಾಂಡ್ರಿಗೆ ಹೋಗಿ ಆ ಚಿಹ್ನೆಯ ಅರ್ಥ ತಿಳಿದುಕೊಳ್ಳಿ.

ಲೇಬಲ್‌ನಲ್ಲಿರುವ () ಚಿಹ್ನೆಯ ಅರ್ಥವೇನೆಂದರೆ ಸಂಬಂಧಿಸಿದ ಔಟ್‌ಫಿಟ್‌ನ್ನು ಸ್ವಚ್ಛಗೊಳಿಸುವ ಈ ವಿಧಾನ ತಪ್ಪು ಎಂದು.

ಸ್ವಚ್ಛಗೊಳಿಸುವ ವಿಧಾನ

ಕೆಲವು ಬಟ್ಟೆಗಳು ಬಹಳ ಡೆಲಿಕೇಟ್‌ ಆಗಿರುತ್ತವೆ. ಅಂತಹ ಬಟ್ಟೆಗಳನ್ನು ಮೆಶಿನ್‌ ಬದಲು ಕೈಗಳಿಂದಲೇ ಸ್ವಚ್ಛಗೊಳಿಸಬೇಕು.

ಈ ಬಟ್ಟೆಗಳನ್ನು ಬಹಳ ತಣ್ಣಗಿನ ಅಥವಾ ಬಹಳ ಬಿಸಿ ಇರುವ ನೀರಿನಲ್ಲಿ ಸ್ವಚ್ಛಗೊಳಿಸಬೇಡಿ. ಉಗುರು ಬೆಚ್ಚಗಿನ ನೀರಿನಲ್ಲಿ ಅವನ್ನು ಸ್ವಚ್ಛಗೊಳಿಸಿ.

ಬಟ್ಟೆಗಳನ್ನು ಒಗೆಯುವಾಗ ನೊರೆ ಬರುವವರೆಗೆ ಡಿಟರ್ಜೆಂಟ್‌ ಹಚ್ಚುತ್ತಲೇ ಇರಬೇಕೆನ್ನುವುದು ತಪ್ಪು. ಡಿಟರ್ಜೆಂಟ್‌ ಎಷ್ಟು ಕಡಿಮೆ ಉಪಯೋಗಿಸಿದರೆ ಅಷ್ಟು ಕಡಿಮೆ ಕೆಮಿಕಲ್ಸ್ ಬಟ್ಟೆಗಳಿಗೆ ಹೋಗುತ್ತದೆ.

ಬಟ್ಟೆಗಳನ್ನು ಯಾವ ಟಬ್‌ನಲ್ಲಿ ಸ್ವಚ್ಛಗೊಳಿಸುತ್ತೀರೋ ಅದೂ ಸಹ ಸ್ವಚ್ಛವಾಗಿರಬೇಕು. ನೀರೂ ಸಹ ಸ್ವಚ್ಛವಾಗಿರಬೇಕು.

ಪದೇ ಪದೇ ಅದೇ ನೀರಿನಿಂದ ಬಟ್ಟೆಯನ್ನು ಸ್ವಚ್ಛಗೊಳಿಸಬೇಡಿ. ಬಟ್ಟೆ ಸಂಪೂರ್ಣವಾಗಿ ಸ್ವಚ್ಛವಾಗಲು 3 ರಿಂದ 4 ಬಾರಿ ಸ್ವಚ್ಛ ನೀರಿನಿಂದ ಜಾಲಿಸುವುದು ಅಗತ್ಯ.

ಬಟ್ಟೆಯಿಂದ ಡಿಟರ್ಜೆಂಟ್‌ ಸಂಪೂರ್ಣವಾಗಿ ತೆಗೆಯುವುದು ಅಗತ್ಯ. ಇಲ್ಲದಿದ್ದರೆ ಫ್ಯಾಬ್ರಿಕ್‌ ಹಾಳಾಗುತ್ತದೆ.

ದುಬಾರಿ ಬಟ್ಟೆಗಳನ್ನು ಎಂದೂ ಬ್ರಶ್‌ನಿಂದ ಉಜ್ಜಬೇಡಿ. ಅದು ಫ್ಯಾಬ್ರಿಕ್‌ನ್ನು ಹಾಳುಮಾಡುತ್ತದೆ.

ಇನ್ನರ್‌ವೇರ್‌ನ್ನು ಒಗೆಯುವಾಗ ಅದರ ಹೈಜೀನ್‌ ಬಗ್ಗೆಯೂ ಗಮನಿಸಿ. ವಾರದಲ್ಲಿ ಕನಿಷ್ಠ 2 ಬಾರಿ ಅವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಸಾಫ್ಟ್ ಡಿಟರ್ಜೆಂಟ್‌ ಬೆರೆಸಿ 15 ನಿಮಿಷ ಇಡಿ. ನಂತರ ನೀರಿನಲ್ಲಿ ಒಗೆದು ಒಣಗಿಸಿ.

ಕಲೆಗೆ ಪ್ರೀ ಟ್ರೀಟ್ಮೆಂಟ್ಕೊಡಿ

ನಿಮ್ಮ ದುಬಾರಿ ಬಟ್ಟೆಯ ಮೇಲೆ ಆಹಾರ ಅಥವಾ ಬೇರಾವುದೋ ಪದಾರ್ಥಗಳು ಬಿದ್ದು ಕಲೆ ಉಂಟಾಗದಂತೆ ಅದಕ್ಕೆ ಪ್ರೀ ಟ್ರೀಟ್‌ಮೆಂಟ್‌ ಅಗತ್ಯವಾಗಿ ಕೊಡಿ.

ಕೆಲವರು ಬಟ್ಟೆಗಳನ್ನು ಬೇಗನೆ ಒಣಗಿಸಲು ಅವನ್ನು ಗಟ್ಟಿಯಾಗಿ ಹಿಂಡತೊಡಗುತ್ತಾರೆ. ಅದು ತಪ್ಪು. ಹಿಂಡುವುದರಿಂದ ಬಟ್ಟೆಯ ಎಳೆಗಳು ಕತ್ತರಿಸಿ ಬಟ್ಟೆ ದುರ್ಬಲಗೊಳ್ಳುತ್ತದೆ.

ಕೆಲವರು ಬಟ್ಟೆಗಳನ್ನು ವಿಂಡೋ ಎ.ಸಿ.ಯ ಹಿಂದೆ ಒಣಗಿಹಾಕುತ್ತಾರೆ. ಆದರೆ ಎ.ಸಿ.ಯಿಂದ ಹೊರಬರುವ ಗ್ಯಾಸ್‌ ನಿಮ್ಮ ಬಟ್ಟೆಗಳಲ್ಲದೆ ನಿಮ್ಮ ತ್ವಚೆಗೂ ಹಾನಿಕರ ಎಂದು ನಿಮಗೆ ಗೊತ್ತೆ?

ಒಗೆದ ಬಟ್ಟೆಯನ್ನು ಯಾವಾಗಲೂ ನೇರ ಬಿಲಿಸಿಲಗೊಡ್ಡದೆ ನೆರಳಿನಲ್ಲಿ ಒಣಗಿಸಿ. ನೆರಳಲ್ಲಿ ಒಣಗಿಸಿ ಎಂದರೆ ಬಟ್ಟೆಗಳನ್ನು ಮುಚ್ಚಿದ ಕೋಣೆಯಲ್ಲಿ ಒಣಗಿಸಿ ಎಂದಲ್ಲ. ಹಾಗೆ ಮಾಡಿದರೆ ಬಟ್ಟೆಗಳಲ್ಲಿ ವಾಸನೆ ಬರುತ್ತದೆ, ಪೂರ್ತಿ ಒಣಗಿರುವುದೂ ಇಲ್ಲ.

ಬಟ್ಟೆ ಒಣಗಿಸುವಾಗ ಸುತ್ತಮುತ್ತ ವಿದ್ಯುತ್‌ ತಂತಿ ಹಾದು ಹೋಗಿಲ್ಲವೇ ಎಂದು ಅಗತ್ಯವಾಗಿ ಗಮನಿಸಿ. ಕೆಲಸದ ಜೊತೆಗೆ ಇದರ ಬಗ್ಗೆ ಜಾಗೃತರಾಗಿರಬೇಕು.

ಬಟ್ಟೆಗಳು ಎಷ್ಟೇ ದುಬಾರಿಯಾಗಿದ್ದರೂ ನಿಮ್ಮ ಕೈಗಳಿಂದಲೇ ಒಗೆದರೆ ಅವು ಸುರಕ್ಷಿತ ವಿಧಾನದಿಂದ ಸ್ವಚ್ಛವಾಗುತ್ತವೆ ಮತ್ತು ನಿಮ್ಮ ಹಣ ಉಳಿಯುತ್ತದೆ. ಹಣ ಉಳಿದರೆ ಇನ್ನೊಂದು ಹೊಸ ಡ್ರೆಸ್‌ ಖರೀದಿಸಬಹುದು.

ಸುಧಾ ಮೂರ್ತಿ

ಕೆಲವು ವಿಶೇಷ ಟಿಪ್ಸ್

ಒಂದು ವೇಳೆ ನಿಮ್ಮ ಬಟ್ಟೆಯ ಮೇಲೆ ಆಹಾರ ಪದಾರ್ಥ ಬಿದ್ದರೆ ಅಥವಾ ಯಾವುದಾದರೂ ಕಲೆಯುಂಟಾದರೆ ಅದನ್ನು ಬರಿಯ ನೀರಿನಿಂದ ಸ್ವಚ್ಛಗೊಳಿಸಬೇಡಿ. ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಿಯೇ ವಾರ್ಡ್‌ರೋಬ್‌ನಲ್ಲಿಡಿ. ಏಕೆಂದರೆ ಕೊಳೆ ಬಟ್ಟೆಗಳಿಂದ ದುರ್ವಾಸನೆ ಬರತೊಡಗುತ್ತದೆ. ಈ ದುರ್ವಾಸನೆಯಿಂದ ಬಟ್ಟೆಗಳಲ್ಲಿ ಕ್ರಿಮಿಕೀಟಗಳು ಸೇರುತ್ತವೆ.

ಒಂದುವೇಳೆ ನೀವು ಬಟ್ಟೆಗಳನ್ನು ಮನೆಯಲ್ಲೇ ಸ್ವಚ್ಛಗೊಳಿಸಿದರೆ ಅದಕ್ಕೆ ಸರಿಯಾದ ಮತ್ತು ಸ್ವಚ್ಛವಾದ ಜಾಗವನ್ನು ಆಯ್ಕೆ ಮಾಡಿ. ಮಹಿಳೆಯರು ನೆಲದ ಮೇಲೆಯೇ ಬಟ್ಟೆಗಳನ್ನು ವಾಶ್‌ ಮಾಡಿಬಿಡುತ್ತಾರೆ. ಅದು ತಪ್ಪು. ನೆಲ ಕೊಳೆಯಾಗಿದ್ದರೆ ಬಟ್ಟೆಯೂ ಕೊಳೆಯಾಗುತ್ತದೆ. ವಿಶೇಷವಾಗಿ ನೀವು ಡಿಸೈನರ್‌ ಬಟ್ಟೆಗಳನ್ನು ಮನೆಯಲ್ಲೇ ಒಗೆದರೆ ಅವನ್ನು ಒಗೆಯುವ ವಿಧಾನ ನಿಮಗೆ ತಿಳಿದಿರಬೇಕು. ಜರಿ ವರ್ಕ್‌, ಸ್ಟೋನ್‌ ವರ್ಕ್‌ ಅಥವಾ ಗ್ಲಾಸ್‌ ವರ್ಕ್‌ನ ಡಿಸೈನರ್‌ ಉಡುಪಿನ ಸ್ವಚ್ಛತೆ ಮಾಡುವಾಗ ನೀವು ವರ್ಕ್

ಇರುವ ಭಾಗವನ್ನು ಬಿಟ್ಟು ಫ್ಯಾಬ್ರಿಕ್‌ನ್ನು ಸ್ವಚ್ಛಗೊಳಿಸಬೇಕು.

ಬಣ್ಣದ ಬಟ್ಟೆಗಳನ್ನು ಬೇರೆಯಾಗಿ ಒಗೆಯಬೇಕು. ಈ ವಿಷಯ ಬಹಳಷ್ಟು ಮಹಿಳೆಯರಿಗೆ ತಿಳಿದಿರುತ್ತದೆ. ಆದರೆ ಗಾಢ ಬಣ್ಣದ ಬಟ್ಟೆಗಳನ್ನು ಸಾಫ್ಟ್ ಡಿಟರ್ಜೆಂಟ್‌ ಮತ್ತು ತೆಳುಬಣ್ಣದ ಬಟ್ಟೆಗಳನ್ನು ಸಾಧಾರಣ ಡಿಟರ್ಜೆಂಟ್‌ನಿಂದ ಸ್ವಚ್ಛಗೊಳಿಸಬೇಕು. ಈಗಂತೂ ಮಾರುಕಟ್ಟೆಯಲ್ಲಿ ಅನೇಕ ಬ್ರ್ಯಾಂಡ್‌ನ ಸಾಫ್ಟ್ ಡಿಟರ್ಜೆಂಟ್ಸ್ ಇವೆ.

ಬಟ್ಟೆಗಳ ಸ್ವಚ್ಛತೆ ಬರೀ ಒಳ್ಳೆಯ ಡಿಟರ್ಜೆಂಟ್‌ನಿಂದ ಒಗೆಯುವವರೆಗೆ ಮಾತ್ರ ಸೀಮಿತವಾಗಿಲ್ಲ. ಬಟ್ಟೆಗಳಿಗೆ ಒಳ್ಳೆಯ ಫಿನಿಶಿಂಗ್ ಕೊಡಲು ಅವನ್ನು ಚೆನ್ನಾಗಿ ಪ್ರೆಸ್‌ ಮಾಡಬೇಕು. ದುಬಾರಿ ಬಟ್ಟೆಗಳನ್ನು ಯಾವಾಗಲೂ ಸ್ಟೀಮ್ ಐರನ್‌ನಿಂದಲೇ ಪ್ರೆಸ್‌ ಮಾಡಿ. ಅದರಿಂದ ಅವನ್ನು ಪ್ರೆಸ್‌ ಮಾಡಿದಾಗ ಕಲೆಗಳು ಉಂಟಾಗುವುದಿಲ್ಲ.

Tags:
COMMENT