ಜಗತ್ತಿನ ಅತ್ಯಂತ ಶ್ರೀಮಂತನ ಹೆಸರು ಬಿಲ್‌ಗೇಟ್ಸ್. ಅವರ ಮನೆ ಇ-ಹೋಮ್ಸ್ ಗೊಂದು ಸೂಕ್ತ ಉದಾಹರಣೆ. ಕೇವಲ ಬಿಲ್‌ಗೇಟ್ಸ್ ಅಷ್ಟೇ ಅಲ್ಲ, ನೀವು ಕೂಡ ನಿಮ್ಮ ಮನೆಯನ್ನು ` ಇ-ಹೋಮ್' ಎಂದು ಪರಿವರ್ತಿಸಿಕೊಳ್ಳಬಹುದು. ಅಂದರೆ ನಿಮ್ಮ ಆ ಮನೆ ವೈರ್‌ಲೆಸ್‌ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರಬೇಕು ಹಾಗೂ ಮನೆಯ ಎಲ್ಲ ಗ್ಯಾಜೆಟ್ಸ್ ಈ ವೈರ್‌ಲೆಸ್‌ ನೆಟ್‌ವರ್ಕ್‌ಗೆ ಜೋಡಣೆಗೊಂಡಿರಬೇಕು.

ಇಂತಹ ಮನೆಯನ್ನು ನೀವು 50,000 ರೂ.ಗಳಲ್ಲೇ ರೂಪಿಸಲು ಸಾಧ್ಯವಿದೆ. ಆದರೆ ಮನೆಯ ಕೋಣೆಗಳ ಸಂಖ್ಯೆ ಹಾಗೂ ಇತರೆ ಕಾರಣಗಳಿಂದ ಇ-ಹೋಮ್ ಮಾಡುವ ಖರ್ಚು ಹೆಚ್ಚಲೂಬಹುದು. ಇಂಟೀರಿಯರ್‌ ಡಿಸೈನರ್‌ ಮಧುಪ್ರಿಯಾ ಪ್ರಕಾರ, ಮನೆಯಲ್ಲಿ ತಂತಾನೇ ಸಂಚಾಲಿತಗೊಳ್ಳುವ ಸೌಲಭ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡರೆ ಇದಕ್ಕೆ ತಗಲುವ ಖರ್ಚು ಏನೇನೂ ಅಲ್ಲ ಎಂದೇ ಹೇಳಬಹುದು.

ಮೈಕ್ರೋಸಾಫ್ಟ್ ಕಂಪನಿ ಬಿಲ್‌ಗೇಟ್‌ ಕಂಪನಿ `ಜೀಯೋಸ್‌ ಇಂಟರ್‌ ನ್ಯಾಷನಲ್' ಕಂಪನಿ ಜೊತೆಗೆ ಸೇರಿಕೊಂಡು ದೆಹಲಿ, ಮುಂಬೈ, ಹೈದರಾಬಾದ್‌, ಬೆಂಗಳೂರು, ಚೆನ್ನೈ, ಸೂರತ್‌ ಮುಂತಾದ ನಗರಗಳಲ್ಲಿ ` ಇ-ಹೋಮ್' ರೂಪಿಸುತ್ತದೆ. ಬಳಿಕ ಇತರೆ 22 ನಗರಗಳಲ್ಲಿ ಈ ಸೌಲಭ್ಯ ನೀಡುವ ಯೋಜನೆ ಇದೆ.

ರಿಮೋಟ್‌ನಿಂದ ಪರದೆ ಎತ್ತುವುದರಿಂದ ಹಿಡಿದು, ನಿಮಗಿಷ್ಟವಾಗುವ ಸಿನಿಮಾ ನೋಡುವುದು ಹಾಗೂ ಸುರಕ್ಷಿತ ಉಪಾಯ ನೀಡುವ ಮೈಕ್ರೋಸಾಫ್ಟ್ ಕಂಪನಿಯ ಎಲ್ಲ ಉತ್ಪಾದನೆಗಳು ಇ-ಹೋಮ್ ನಲ್ಲಿ ಉಪಯೋಗಕ್ಕೆ ಬರುತ್ತವೆ. ಮೈಕ್ರೋಸಾಫ್ಟ್ ಸ್ಯಾಮ್ ಸಂಗ್‌, ಐರಿವರ್‌, ಜೀಯೋಸ್‌ ಇತರೆ ಕಂಪನಿಗಳ ಸಹಾಯದಿಂದ ನೀವು ಮನೆಯನ್ನು `ಇ-ಹೋವ್‌'

ಮಾಡಿಕೊಳ್ಳಬಹುದು.

ಇ-ಹೋಮ್ ವಿಂಡೋಸ್‌ ಆಧಾರಿತವಾಗಿದೆ. ವಿಂಡೋಸ್‌ ಮೀಡಿಯಾ ಸೆಂಟರ್‌ ಪ್ಲ್ಯಾಟ್‌ ಫಾರ್ಮ್ ಮೇಲೆ ಸಂಗೀತಕ್ಕಾಗಿ ಉಪಕರಣ (ಐಪಾಡ್‌ಗೆ ಪರ್ಯಾಯ) ಗೇಮ್ ಬಾಕ್ಸ್, ಗೇಮ್ ಬಾಕ್ಸ್ (ಗೇಮ್ ಸ್ಟೇಷನ್‌), ಎಂಎಸ್‌ಎನ್‌ ಹಾಗೂ ವಿಂಡೋಸ್ ಮೊಬೈಲ್ ಪರಸ್ಪರ ಸಂಪರ್ಕಿಸಲಾಗುತ್ತದೆ.

ನಿಮ್ಮ ಇ-ಹೋಮ್ ನಲ್ಲಿ ಯಾರಾದರೂ ಪ್ರವೇಶ ಮಾಡುತ್ತಿದ್ದಂತೆಯೇ ನಿಮ್ಮ ಮೊಬೈಲ್‌ನಲ್ಲಿ ಈ ಕುರಿತಂತೆ ಸೂಚನೆ ದೊರೆಯುತ್ತದೆ. ನೀವು ಅಳವಡಿಸಿದ ಪ್ರೋಗ್ರಾಮ್ ಗೆ ಅನುಗುಣವಾಗಿ ಯಾರಾದರೂ ಮನೆಗೆ ಬಂದರೆ ಅಲಾರ್ಮ್ ಆಗಲಾರಂಭಿಸುತ್ತದೆ. ಮನೆಯಲ್ಲಿ ಅಳವಡಿಸಿದ ಕ್ಯಾಮೆರಾ ಹಾಗೂ ಆ ವ್ಯಕ್ತಿಯ ಎಲ್ಲ ಆಗುಹೋಗುಗಳ ಬಗ್ಗೆ ಫೋಟೋ ಕ್ಲಿಕ್ ಮಾಡಲಾರಂಭಿಸುತ್ತದೆ. ನಿಮ್ಮ ಮನೆಗೆ ಯಾರು ಬಂದಿದ್ದಾರೆ ಮತ್ತು ಆ ವ್ಯಕ್ತಿ ಏನು ಮಾಡುತ್ತಿದ್ದಾನೆ ಎಂಬುದರ ಬಗ್ಗೆ ನಿಮ್ಮ ಮೊಬೈಲ್‌ಗೂ ಮಾಹಿತಿ ಲಭಿಸತೊಡಗುತ್ತದೆ. ನಿಮ್ಮ ಮನೆಯ ಸೆಕ್ಯುರಿಟಿ ಸರ್ವೀಸ್‌ ಪೊಲೀಸ್‌ ಠಾಣೆಗೂ ಕೂಡ ಇದರ ಬಗೆಗೆ ಮಾಹಿತಿ ನೀಡುತ್ತದೆ.

ಮನೆಯಲ್ಲಿ ಹೆಂಡತಿ, ಮಕ್ಕಳು ಏನು ಮಾಡುತ್ತಿದ್ದಾರೆ ಇದರ ಬಗೆಗೂ ಕ್ಷಣಕ್ಷಣಕ್ಕೆ ಮಾಹಿತಿ ನಿಮ್ಮ ಮೊಬೈಲ್‌‌ಗೆ ಲಭಿಸುತ್ತಿರುತ್ತದೆ. ಮನೆ ಕೆಲಸದವರು ನೀವು ಹೇಳಿದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಎಂಬುದು ಕೂಡ ನಿಮಗೆ ತಿಳಿಯುತ್ತಿರುತ್ತದೆ.

ಹಗಲು ಹೊತ್ತಿನಲ್ಲಿ ನಿಮ್ಮ ಮನೆಯ ಎಲ್ಲ ಕಿಟಕಿಗಳು ತೆರೆದಿರುತ್ತವೆ. ರಾತ್ರಿಯಾಗುತ್ತಿದ್ದಂತೆ ಅವು ತಂತಾನೇ ಲಾಕ್‌ ಆಗಿಬಿಡುತ್ತವೆ. ಇ-ಹೋಮ್ ಮುಖಾಂತರ ನೀವು ಆಫೀಸಿನಲ್ಲೇ ಕುಳಿತುಕೊಂಡು ನಿಮಗಿಷ್ಟ ಬಂದಂತೆ ಮನೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ