ದಕ್ಷಿಣ ಭಾರತದ ಅತ್ಯಂತ ವಿಶ್ವಾಸಾರ್ಹ ಜ್ಯೂವೆಲರ್‌ ಆಗಿರುವ ಜಿಆರ್‌ಟಿ ಜ್ಯೂವೆಲರ್ಸ್‌ ಇದನ್ನು ಸಾಧಿಸಲು ಖಂಡಿತವಾಗಿಯೂ ಸಹಕರಿಸುತ್ತದೆ.

ಕೆಲವು ಸಂದರ್ಭಗಳನ್ನು ಜೀವನ ಪೂರ್ತಿ ನೆನಪಿನಲ್ಲಿ ಇಟ್ಟುಕೊಳ್ಳುವಂತಹದ್ದಾಗಿರುತ್ತವೆ. ಎಂದೆಂದಿಗೂ ಚಿರನೂತನವಾಗಿ ಕಂಗೊಳಿಸುವ ಸಂದರ್ಭಗಳಿರುತ್ತವೆ. ಹಾಗೆಯೇ ಆ ಸಂದರ್ಭಗಳು ಸಂತೋಷ, ಸಂಭ್ರಮ, ಸಂತೃಪ್ತಿ ಇತ್ಯಾದಿಗಳಿಂದ ಕೂಡಿದ ವಿಶೇಷ ಪ್ರೀತಿಯ ಪ್ರತೀಕವಾಗಿರುತ್ತವೆ. ನಿಮ್ಮ ಆ ಪ್ರೀತಿಗೆ ಸರಿಹೊಂದುವ ಪ್ರತೀಕವಾಗಿ ಜಿಆರ್‌ಟಿ ಜ್ಯೂವೆಲರ್ಸ್‌ನ ಹೊಸ ವಜ್ರಗಳ ಸಂಗ್ರಹ ವಿಶೇಷವಾಗಿ ರಚನಗೊಂಡಿರುತ್ತದೆ. ಇವುಗಳ ಮೂಲಕ ಆ ಸಂದರ್ಭಗಳನ್ನು ಗೌರವದಿಂದ ಸಂಭ್ರಮಿಸಿ. ನಿಮ್ಮ ಪ್ರೀತಿಯನ್ನು ಸದಾ ನೆನಪಿಸುವಂತೆ ಅಭಿವ್ಯಕ್ತಪಡಿಸಲು ವಜ್ರಗಳ ಸಂಗ್ರಹ (ಡೈಮಂಡ್‌ ಕಲೆಕ್ಷನ್‌) ಸಹಕರಿಸುತ್ತದೆ.

ಆಕರ್ಷಕ ನೆಕ್ಲೇಸ್‌, ಕಿವಿಯೋಲೆ (ಇಯರ್‌ ರಿಂಗ್ಸ್), ಬ್ರೇಸ್ಲೆಟ್, ಬಳೆಗಳು, ಉಂಗುರಗಳು, ಲೋಲಾಕುಗಳು, ಪದಕಗಳು ಇನ್ನೂ ಹಲವು ಆಭರಣಗಳ ಅದ್ಭುತ ಶ್ರೇಣಿಯ ಪ್ರತಿಯೊಂದು ತುಣುಕೂ ಸಹ ಅತ್ಯುತ್ತಮ ಗುಣಮಟ್ಟದ ವಜ್ರಗಳನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ.

Press-02

ಜಿಆರ್‌ಟಿ ವಜ್ರಗಳ ಸಂಗ್ರಹ ಪ್ರತಿಯೊಬ್ಬರಿಗೂ, ಪ್ರತಿಯೊಂದು ಭಾವನೆಗಳಿಗೂ ಒಂದೊಂದನ್ನು ನೀಡುತ್ತದೆ.

ಹೊಸ ಸಂಬಂಧದ ಬೆಸುಗೆಯಿಂದ ಹಿಡಿದು ಜೀವನ ಪರ್ಯಂತದ ಬಂಧಕ್ಕೆ ಮೆರುಗುಗೊಳಿಸುವರೆಗಿನ ಪ್ರತಿಯೊಂದು ಪ್ರೀತಿಯ ವಿಶೇಷ ಸಂದರ್ಭವನ್ನು ಅಭಿವ್ಯಕ್ತಪಡಿಸಲು ಜಿಆರ್‌ಟಿ ವಜ್ರಗಳ ಸಂಗ್ರಹ ನಿಮಗೆ ಸಹಕರಿಸುತ್ತದೆ.

ಜಿಆರ್‌ಟಿ ಜ್ಯೂವೆಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್‌. ಅನಂತಪದ್ಮನಾಭನ್‌, ಹೊಸ ಸಂಗ್ರಹಗಳನ್ನು ಪ್ರಕಟಪಡಿಸುತ್ತಾ ಮಾತನಾಡಿ, “ಜಿಆರ್‌ಟಿಯು ಸದಾ ಗ್ರಾಹಕರ ಅಭಿರುಚಿಗೆ ತಕ್ಕಂತೆ ಆಭರಣಗಳನ್ನು ವಿನ್ಯಾಸಗೊಳಿಸುತ್ತಾ ಬಂದಿರುತ್ತದೆ. ನಮ್ಮ ಗ್ರಾಹಕರಿಗೆ ಆಭರಣಗಳು ಧರಿಸುವುದಕ್ಕಿಂತ ಹೆಚ್ಚಿನದು ಎಂದು ನಾವು ತಿಳಿದಿದ್ದೇವೆ. ಅದರಲ್ಲಿ ಅವರು ಅಪಾರ ಪ್ರೀತಿ, ಭಾವನಾತ್ಮಕ ಮೌಲ್ಯವನ್ನು ಬೆರೆಸಿರುತ್ತಾರೆ. ವಜ್ರಗಳ ಸಂಗ್ರಹ ಕೇವಲ ಅವರಿಗಾಗಿಯೇ ರಚಿಸಲಾಗಿದೆ. ಶಾಸ್ತ್ರೀಯ ಹಾಗೂ ಅತ್ಯಾಧುನಿಕ ಶೈಲಿಯ ಆಭರಣಗಳ ಸಮ್ಮಿಲನ ಗ್ರಾಹಕರ ಪ್ರೀತಿಯನ್ನು ಪರಿಪೂರ್ಣವಾಗಿ ಸೆಳೆಯುತ್ತದೆ,” ಎಂದು ಹೇಳಿದರು.

ಜಿಆರ್‌ಟಿ ವಜ್ರಗಳ ಸಂಗ್ರಹದ ವೈಶಿಷ್ಟ್ಯತೆಯು ಹೀಗಿದೆ. ಆಕರ್ಷಕ ವಜ್ರಗಳು ಪ್ರತಿಯೊಂದನ್ನೂ ಜಾಗರೂಕತೆಯಿಂದ ಆಯ್ದುಕೊಳ್ಳಲಾಗುತ್ತದೆ. ನಾಜೂಕಾಗಿ ಕತ್ತರಿಸಲ್ಪಟ್ಟಿರುತ್ತದೆ, ಮೆರುಗುಗೊಳಿಸಲಾಗಿರುತ್ತದೆ ಹಾಗೂ ಇಂತಹ ವಜ್ರದ ತುಣುಕನ್ನು ಅದ್ಭುತ ವಿನ್ಯಾಸದ ಆಭರಣಗಳಲ್ಲಿ ಅಳವಡಿಸಲಾಗುತ್ತದೆ. ನಾಜೂಕಿನಿಂದ ಗಟ್ಟಿಮುಟ್ಟಾದ, ಸರಳತೆಯಿಂದ ಕ್ಲಿಷ್ಟಕರವಾದ ಆಭರಣ ವಿನ್ಯಾಸಗಳವರೆಗೆ, ಪ್ರತಿಯೊಂದೂ ಸಹ ನಿಮ್ಮ ಪ್ರೀತಿಪಾತ್ರರ ಕಣ್ಣುಗಳು ಹೊಳೆಯುವಂತೆ ಮಾಡುತ್ತವೆ.

ಹಾಗೆಯೇ ಹೊಸ ವಜ್ರಗಳ ಸಂಗ್ರಹ ವಿಶಿಷ್ಟವಾದ ಸಾಲಿಟೇರ್‌ ವಿನ್ಯಾಸಗಳ ಶ್ರೇಣಿಯಾಗಿದೆ. ಅದರದ್ದೇ ಆದ ಅಸಾಧಾರಣ ಸೌಂದರ್ಯಕ್ಕೆ ಹೆಸರಾದ ಸಾಲಿಟೇರ್‌ ಒಂದು ಅಪರೂಪದ ವಜ್ರಗಳ ತುಣುಕಾಗಿದ್ದು, ಅತ್ಯಂತ ನಾಜೂಕು, ನೈಪುಣ್ಯತೆಯಿಂದ ಕತ್ತರಿಸಲ್ಪಟ್ಟು ಮೆರುಗುಗೊಳಿಸಿ ಕರಕುಶಲಗೊಂಡಿರುತ್ತದೆ.

“ಗ್ರಾಹಕರ ಸಂತೃಪ್ತಿಯೇ ಸದಾ ನಮ್ಮ ಮೊದಲ ಆದ್ಯತೆ. ಈ ಬಾರಿ ಕೇವಲ ಗ್ರಾಹಕರನ್ನು ಸಂತುಷ್ಟಗೊಳಿಸುವುದನ್ನಷ್ಟೇ ಮಾಡಲಿಲ್ಲ. ನಾವು ಅವರಿಗೆ ಪ್ರೀತಿಯನ್ನು ಅಭಿವ್ಯಕ್ತಪಡಿಸುವ ಸಾಮರ್ಥ್ಯವನ್ನು ನೀಡಲು ಬಯಸಿದ್ದೇವೆ. ನಮ್ಮ ಇತ್ತೀಚಿನ ವಜ್ರಾಭರಣಗಳ ಸಂಗ್ರಹ ಅದನ್ನೇ ಒದಗಿಸುತ್ತದೆ,” ಎಂದು ಅನಂತ ಪದ್ಮನಾಭನ್‌ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸಮಕಾಲೀನ ಹಾಗೂ ನೈಜ ಕಲಾತ್ಮಕ ವಿನ್ಯಾಸಗಳೊಂದಿಗೆ ಶಾಸ್ತ್ರೀಯ ಮತ್ತು ಸಾಂಪ್ರದಾಯಿಕ ವಿನ್ಯಾಸಗಳ ಸಮ್ಮಿಲನ ಈ ನೂತನ ಶ್ರೇಣಿಯನ್ನು ವಿಶೇಷವಾಗಿ ಗಮನಾರ್ಹಗೊಳಿಸಿದೆ. ಎಲ್ಲ ಜಿಆರ್‌ಟಿ ಟ್ರೇಡ್‌ ಮಾರ್ಕ್‌ನ ಸೂಚನೆಯ ಅಂಶಗಳಿಗೆ ಸರಿಹೊಂದುವಂತೆ ರಚಿಸಲಾಗಿದೆ.

Press-03

ಈ ವಿನೂತನ ವಜ್ರಗಳ ಸಂಗ್ರಹ  ಜಿಆರ್‌ಟಿಯ ಎಲ್ಲಾ ಮಳಿಗೆಗಳಲ್ಲೂ ಲಭ್ಯವಿದೆ. ವಿಶೇಷವಾಗಿ ಚೆನ್ನೈನ ಕೋರ್ಟ್ಸ್ ರಸ್ತೆ, ಉಸ್ಮಾನ್‌ ರಸ್ತೆ, ಟಿ. ನಗರಗಳಲ್ಲಿನ ಫ್ಲಾಗ್‌ ಶಿಪ್‌ ಮಳಿಗೆಗಳಲ್ಲಿ ಸಜ್ಜುಗೊಳಿಸಿರುವ ಪ್ರತ್ಯೇಕ ಲಾಂಜ್‌ಗಳಲ್ಲಿ ದೊರೆಯುತ್ತವೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : ಜಯನಗರ  26651515  ಮಲ್ಲೇಶ್ವರಂ  22921515

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ