ಬದಲಾಗುತ್ತಿರುವ ಸಮಯದೊಂದಿಗೆ ನಮ್ಮ ಬದುಕಿನಲ್ಲಿ ಸುವಾಸನೆಯು ಹಲವು ರೀತಿಗಳಲ್ಲಿ ಪ್ರವೇಶಿಸಿದೆ. ಹಿಂದೆ ಪೂಜೆಗೆ ಮಾತ್ರ ಅಗರಬತ್ತಿ ಉಪಯೋಗಿಸುತ್ತಿದ್ದ ಕಾಲ ಹೋಯಿತು. ಪಾಶ್ಚಿಮಾತ್ಯ ಅನುಕರಣೆ ನಮ್ಮ ಬದುಕನ್ನು ಎಷ್ಟು ಪ್ರಭಾವಿತಗೊಳಿಸಿದೆ ಎಂದರೆ, ಈಗ ನಾವು ಅಗರಬತ್ತಿಗಳನ್ನು ಮನೆಗಳನ್ನು ಸುವಾಸಿತಗೊಳಿಸಲು ಬಳಸುತ್ತಿದ್ದೇವೆ. ಅದರಿಂದ ನಮ್ಮ ಸುತ್ತಲಿನ ಪರಿಸರ ಸುಖದಾಯಕವಾಗಿರುತ್ತದೆ.

ಸುವಾಸನೆ ನಮ್ಮ ಬದುಕಿನಲ್ಲಿ ಅತ್ಯಂತ ಮಹತ್ವಪೂರ್ಣ ಪಾತ್ರ ವಹಿಸುತ್ತದೆ ಎಂದು ಕಲೆ ಹಾಗೂ ವಿಜ್ಞಾನ ಹೇಳುತ್ತಲೇ. ಅದು ನಮ್ಮ ಜ್ಞಾನೇಂದ್ರಿಯಗಳನ್ನು ಉತ್ತೇಜಿಸುತ್ತದೆ. ನಮ್ಮ ವರ್ತನೆ ಹಾಗೂ ಕೆಲಸಗಳಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತದೆ. ನಿಯಮಿತವಾಗಿ ಸುಗಂಧವನ್ನು ಉಪಯೋಗಿಸುವವರು ಅದನ್ನು ಉಪಯೋಗಿಸದವರಿಗೆ ಹೋಲಿಸಿದರೆ ಬದುಕಿನ ಬಗ್ಗೆ ಅವರ ದೃಷ್ಟಿಕೋನ ಹೆಚ್ಚು ಸಕಾರಾತ್ಮಕವಾಗಿರುತ್ತದೆ. ಅವರು ಸಾಮಾಜಿಕ ರೂಪದಲ್ಲಿ ಹೆಚ್ಚು ಕುಶಲರಾಗಿರುತ್ತಾರೆ. ಭಾರತದಲ್ಲಿ ಸುಗಂಧ ಉದ್ಯೋಗದ ಬಗ್ಗೆ ಹೇಳುವುದಾದರೆ ಅಂತಾರಾಷ್ಟ್ರೀಯ ಮಾನದಂಡಕ್ಕೆ ಹೋಲಿಸಿದರೆ ಇದು ಇನ್ನೂ ಆರಂಭಿಕ ಅವಸ್ಥೆಯಲ್ಲಿದೆ. ಆದರೂ ಇದು ವಿಭಿನ್ನ ಕ್ಷೇತ್ರಗಳಲ್ಲಿ ಸಫಲತಾಪೂರ್ವಕ ತನ್ನ ಉಪಸ್ಥಿತಿಯನ್ನು ಸಾರಿದೆ. ಇವುಗಳಲ್ಲಿ ಹೋಮ್ ಕೇರ್‌ ಸೆಗ್ಮೆಂಟ್‌, ಕಾರ್‌ ಫ್ರೆಶನರ್‌, ಪರ್ಸನಲ್ ಕೇರ್‌ನಂತಹ ವಲಯಗಳು ಸೇರಿವೆ. ಇದು ಉದ್ಯೋಗ ಒದಗಿಸುವ ಟ್ರೆಂಡ್‌ನೊಂದಿಗೆ ಸತತವಾಗಿ ವೃದ್ಧಿಯಾಗುತ್ತಿದೆ. ಆಧುನಿಕ ಸುಗಂಧದ ಉತ್ಪಾದನೆಯಲ್ಲಿ ಈ ವಿಧಾನಕ್ಕಿಂತ ಸಾಕಷ್ಟು ಮುಂದೆ ಹೋಗಲಾಗಿದೆ.

ಪರ್ಫ್ಯೂಮ್ ಅಥವಾ ಸುಗಂಧದ ನಿರ್ಮಾಣದ ಹಿಂದಿನ ವಿಜ್ಞಾನ ಬಹಳಷ್ಟು ವಿಸ್ತೃತವಾಗಿದೆ. ಈಗ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಸುಗಂಧವನ್ನು ತಯಾರಿಸಲಾಗುತ್ತಿದೆ. ಇದರಲ್ಲಿ ವಯಸ್ಸು, ವಲಯ, ಪ್ರಾಥಮಿಕತೆ ಮತ್ತು ಸಾಂಸ್ಕೃತಿಕ ಸೇರ್ಪಡೆಯಂತಹ ವಿಭಿನ್ನ ವಿಷಯಗಳ ಬಗ್ಗೆ ಗಮನ ಕೊಡಲಾಗುತ್ತದೆ. ನಂತರ ಅವನ್ನು ಗರಿಷ್ಠ ಸುಗಂಧಿತವಾಗಿ ಮಾಡಲು ಪ್ರಾಕೃತಿಕ ಆ್ಯರೋಮ್ಯಾಟಿಕ್‌ ಕೆಮಿಕಲ್ಸ್ ಸೇರಿಸಲಾಗುತ್ತದೆ.

ಸುಗಂಧಗಳಿಂದ ಬುದ್ಧಿ, ಮನಸ್ಸು ಹಾಗೂ ವರ್ತನೆಗಳ ಮೇಲೆ ನೇರ ಪರಿಣಾಮ ಉಂಟಾಗುತ್ತದೆ. ಅಂತಹ ಜನಪ್ರಿಯ ಸುಗಂಧಗಳ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ ಬನ್ನಿ.

ಲ್ಯಾವೆಂಡರ್

ಲ್ಯಾವೆಂಡರ್‌ನ ತಾಜಾ ಸುಗಂಧ ಶರೀರವನ್ನು ಉತ್ತೇಜಿಸುವ ಜೊತೆಗೆ ಅದಕ್ಕೆ ವಿಶ್ರಾಂತಿಯನ್ನೂ ಕೊಡುತ್ತದೆ. ಜೊತೆಗೆ ಇದು ಆವೇಶವನ್ನು ತಗ್ಗಿಸಿ ಉತ್ಸಾಹ ನೀಡುತ್ತದೆ. ಲ್ಯಾವೆಂಡರ್‌ನ ಸುವಾಸನೆ ಶಾಂತಿ ಪ್ರದಾನ ಮಾಡಿ ನಿರಾಶೆ, ಸಿಡಿಮಿಡಿ, ಪ್ಯಾನಿಕ್ ಹಿಸ್ಟೀರಿಯಾ ಮತ್ತು ಅನಿದ್ರೆಯಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಮಲ್ಲಿಗೆ (ಜ್ಯಾಸ್ಮಿನ್‌)

ಮಲ್ಲಿಗೆಯ ಸುಗಂಧ, ಶಾಂತಿಯೊಂದಿಗೆ ಶಕ್ತಿ ಹಾಗೂ ಸಮತೋಲನ ಕೊಡುತ್ತದೆ. ಮಲ್ಲಿಗೆಯ ಸುಗಂಧ ವ್ಯಕ್ತಿಯಲ್ಲಿ ಭರವಸೆ ಹಾಗೂ ಆತ್ಮವಿಶ್ವಾಸ ತಂದುಕೊಡುತ್ತದೆ.

ಶ್ರೀಗಂಧ

ಶ್ರೀಗಂಧದ ಪರಿಮಳ ವ್ಯಕ್ತಿಗೆ ಶಾಂತಿ ಕೊಟ್ಟು ಭಯದ ಸಂದರ್ಭದಲ್ಲಿ ಸಹಾಯ ಮಾಡುತ್ತದೆ.

ತುಳಸಿ (ಬೆಸಿಲ್‌)

ಭಾರತದಲ್ಲಿ ತುಳಸಿಯನ್ನು ಬಹಳ ಪವಿತ್ರವಾದ ಗಿಡವೊಂದು ತಿಳಿಯಲಾಗಿದೆ. ಅದರ ಸುಗಂಧ ಮನಸ್ಸನ್ನು ಅರಳಿಸುವ ಜೊತೆಗೆ ಮೆದುಳನ್ನು ಸಮತೋಲನದಲ್ಲಿಡುತ್ತದೆ. ಅದು ಅರಳಿಸುವ ಜೊತೆಗೆ ಮೆದುಳನ್ನು ಸಮತೋಲನದಲ್ಲಿಡುತ್ತದೆ. ಅದು ಭಾವನೆಗಳ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ನಾವು ದುಃಖದಲ್ಲಿ ಮುಳುಗಿದ್ದಾಗ ಇದು ಸಧೃಢತನ ಕೊಡುತ್ತದೆ.

ಒಳ್ಳೆಯ ಸುಗಂಧ ಆರಿಸಿಕೊಳ್ಳುವಾಗ ಯಾರೇ ಆಗಲಿ ಪರೀಕ್ಷಿಸುವಾಗ ಒಂದಾದ ಮೇಲೊಂದು ಪರ್ಫ್ಯೂಮ್ ವಾಸನೆ ಹೀರುತ್ತಾರೆ. ಹೀಗೆ ಮಾಡಿದಾಗ ಮೂಗು ಆ ಸುಗಂಧಗಳ ನಡುವಿನ ವ್ಯತ್ಯಾಸ ತಿಳಿಯುವುದಿಲ್ಲ. ಆದ್ದರಿಂದ ಒಮ್ಮೆಗೆ 5-6 ಸುಗಂಧಗಳ ಪರೀಕ್ಷೆ ಮಾಡಬಾರದು. ಇದಲ್ಲದೆ ತ್ವಚೆಗೆ ತಕ್ಕಂತೆ ಹಾಗೂ ಶರೀರದ ಕೆಮಿಕಲ್ಸ್ ಗೆ ತಕ್ಕಂತೆ ಪರ್ಫ್ಯೂಮ್ ನ ಸುಗಂಧ ಬೇರೆ ಬೇರೆ ಇರುತ್ತದೆ. ಒತ್ತಡ, ಹಾರ್ಮೋನ್‌ ಬದಲಾವಣೆ, ಆಹಾರ ಅಥವಾ ಮೆಡಿಟೇಶನ್‌ ಕೂಡ ಪರ್ಫ್ಯೂಮ್ ನ ಸುಗಂಧವನ್ನು ಪ್ರಭಾವಿತಗೊಳಿಸುತ್ತವೆ. ಏಕೆಂದರೆ ಆ ಸಂದರ್ಭದಲ್ಲಿ ವ್ಯಕ್ತಿಯ ಶರೀರದ ಪ್ರಾಕೃತಿಕ ಸುಗಂಧ ಬದಲಾಗುತ್ತಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ