ಇಂಟೀರಿಯರ್‌ ಡೆಕೋದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಇದರ ಬೇಡಿಕೆಯಿಂದಾಗಿ ಇದು ಒಂದು ಸ್ಟ್ರಾಂಗ್‌ ಇಂಟೀರಿಯರ್‌ ಡಿಸೈನರ್‌ ಟೂಲ್‌ ಆಗುತ್ತಿದೆ.

ಕನ್ನಡಿಯನ್ನು ಸಮರ್ಪಕವಾಗಿ ಬಳಸಿದಾಗ ಮಾತ್ರ ಸಣ್ಣ ಜಾಗ ದೊಡ್ಡದಾಗಿ ಕಾಣಬಲ್ಲದು. ಬೋರಿಂಗ್‌ ಜಾಗದಲ್ಲಿ ಜೀವಕಳೆ ಮೂಡುತ್ತದೆ ಹಾಗೂ ಕತ್ತಲೆ ತುಂಬಿದ ಕೋಣೆಗೆ ತಂತಾನೇ ಬೆಳಕು ಬರುತ್ತದೆ. ಅಂದ್ರೆ ಮನೆಯ ಅಲಂಕಾರದಲ್ಲಿ ಕನ್ನಡಿಗಳ ಬಳಕೆ ಇಡೀ ಜಾಗದ ಲುಕ್‌ ಬದಲಾಯಿಸಿ ಬಿಡುತ್ತದೆ.

ಮಿರರ್‌ ಥೀಮ್

ಹಿಂದಿನ ಕಾಲದಿಂದಲೂ ಮನೆಗಳು, ಭಾರಿ ಬಂಗಲೆಗಳಲ್ಲಿ ಕನ್ನಡಿಯನ್ನು ಅಲಂಕಾರಿಕ ಸಾಮಗ್ರಿಯಾಗಿ ಬಳಸಿಕೊಳ್ಳಲಾಗುತ್ತಿತ್ತು. ಹೀಗಾಗಿ ಮತ್ತೊಮ್ಮೆ ಮಿರರ್‌ ಥೀಮ್ ಚಾಲನೆಗೆ ಬಂದಿದೆ. ಕನ್ನಡಿ ಈಗ ಕೇವಲ ಡ್ರೆಸ್ಸಿಂಗ್‌ ಟೇಬಲ್‌ನ ಭಾಗವಾಗಿ ಉಳಿದಿಲ್ಲ, ಬದಲಿಗೆ ಹೋಮ್ ಡೆಕೋದ ಮುಖ್ಯ ಭಾಗವಾಗುತ್ತಿದೆ. ಆಫೀಸ್‌ ಮತ್ತು ಮನೆಗಳ ಇಂಟೀರಿಯರ್‌ ಡಿಸೈನಿಂಗ್‌ನಲ್ಲಿ ಇದನ್ನು ಆರ್ಟ್‌ ಪೀಸ್‌ ರೂಪದಲ್ಲಿ ಬಳಸಲಾಗುತ್ತಿದೆ.

ಕನ್ನಡಿಯ ಬಳಕೆ ಕೇವಲ ಮನೆಯ ಒಳಗಷ್ಟೇ ಅಲ್ಲದೆ, ಮನೆಯ ಹೊರಭಾಗದಲ್ಲಿ ಅಂದ್ರೆ ಗಾರ್ಡನ್‌, ವೆರಾಂಡಾ, ಕಾಂಪೌಂಡ್‌, ಟೆರೇಸ್‌ನಲ್ಲೂ ಬಳಸಲಾಗುತ್ತದೆ. ಯಾವ ಜಾಗವನ್ನು ಸಿಂಗರಿಸಬೇಕು ಎಂಬುದರ ಮೇಲೆ ವಿಭಿನ್ನ ಸೈಜ್‌ ಫ್ರೇಮ್ ವುಳ್ಳ ಕನ್ನಡಿ ಆರಿಸಿ.

ಗೋಡೆಗಳ ಮೇಲೆ : ನೀವು ಕನ್ನಡಿಯನ್ನು ಗೋಡೆಗೆ ಅಳವಡಿಸಿದರೆ, ಆಗ ನಿಮ್ಮ ಕೋಣೆ ದೊಡ್ಡದಾಗಿ ಕಾಣಿಸುವುದಲ್ಲದೆ, ಅದರ ಆಕರ್ಷಣೆಯೂ ಹೆಚ್ಚುತ್ತದೆ. ಕೋಣೆಗಳಿಗೆ ಸದಾ ದೊಡ್ಡ ಕನ್ನಡಿಗಳನ್ನೇ ಬಳಸಬೇಕು, ಅದರ ಎತ್ತರ ಗೋಡೆಯಷ್ಟೇ ಇರಬೇಕು. ಕನ್ನಡಿ ಯಾವಾಗಲೂ ಬಾಗಿಲಿನ ಎದುರಿನ ಗೋಡೆ ಮೇಲೇ ಇರಬೇಕು. ಆಗ ಹೊರಗಿನ ಪೂರ್ತಿ ಪ್ರತಿಬಿಂಬ ಒಳಬರಲು ಸಾಧ್ಯ.

ಸೋಫಾ ಬಳಿ : ಸೋಫಾದ ಹಿಂಬದಿಯ ಗೋಡೆಯಲ್ಲಿ ಇರುವ ಖಾಲಿ ಜಾಗದಲ್ಲಿ, ಫ್ರೇಮ್ಡ್ ಮಿರರ್‌ ಹಾಕಬೇಕು. ನೀವು ಬಯಸಿದರೆ ಇದನ್ನು ಬೇರೆ ಗೋಡೆಗಳಿಗೂ ಹಾಕಬಹುದು. ಈ ಫ್ರೇಮುಗಳ ಸೈಜ್‌ ಸ್ಟೈಲ್‌ ಗೋಡೆಯ ಗಾತ್ರ, ಫರ್ನೀಚರ್‌ ಮತ್ತು ಪರದೆಗೆ ಹೊಂದುವಂತಿರಬೇಕು.

ಕಿಚನ್‌ : ಅಡುಗೆಮನೆಯಲ್ಲೂ ಕನ್ನಡಿಗೆ ಕೆಲಸ ಬಂದಿದೆ! ಇದನ್ನು ನೀವು ಕಬೋರ್ಡ್‌ ಬಳಿ ಬಳಸಿಕೊಳ್ಳಬಹುದು ಅಥವಾ ಫ್ರಿಜ್‌ ಬಳಿ ಡೆಕೋಪೀಸ್‌ ಆಗಿಯೂ ಸಹ.

ಸಾಮಾನ್ಯವಾಗಿ ಕಿಚನ್‌ನಲ್ಲಿ ಕಿಟಕಿಯ ಕೆಳಗೆ ಸಿಂಕ್‌ ಅಳವಡಿಸುತ್ತಾರೆ. ಅಕಸ್ಮಾತ್‌ ಹೀಗಾಗಲು ಸಾಧ್ಯವಾಗದಿದ್ದರೆ, ಆಗ ಸಿಂಕ್‌ನ ಮೇಲ್ಭಾಗದಲ್ಲಿ ಕನ್ನಡಿ ಹಾಕಿಸಬಹುದು. ಆಗ ಅದು ಕಿಟಕಿ ಇಲ್ಲದ ಕೊರತೆ ನೀಗಿಸುತ್ತದೆ. ಕನ್ನಡಿಯ ನೆರವಿನಿಂದ ಕಿಚನ್‌ನಲ್ಲಿ ಹೆಚ್ಚು ಬೆಳಕು, ಆಳ ಹಾಗೂ ಗಾಢತೆಯ ಅರಿವಾಗುತ್ತದೆ. ಮಿರರ್‌ ಟೈಲ್ಸ್ ಸಹ ಅಡುಗೆಮನೆಯ ಅಂದ ಹೆಚ್ಚಿಸಬಲ್ಲದು.

ಲಿವಿಂಗ್‌ ರೂಮ್ : ಬ್ಯೂಟಿಫುಲ್ ಫ್ರೇಮಿನಲ್ಲಿ ಹುದುಗಿಸಲ್ಪಟ್ಟ ಕನ್ನಡಿ ಲಿವಿಂಗ್‌ ರೂಮಿನ ಕಳೆ ಹೆಚ್ಚಿಸುತ್ತದೆ. ಕನ್ನಡಿ ಮುಂದೆ ಯಾವುದೇ ಆರ್ಟ್‌ವರ್ಕ್‌, ಸೀನರಿ ಇತ್ಯಾದಿಗಳಿದ್ದರೆ ಅದು ಎದುರುಗೋಡೆಯ ಮೇಲೆ ಅಂದವಾಗಿ ಪ್ರತಿಫಲಿಸುತ್ತದೆ. ಇದರಿಂದಾಗಿ ಆ ಕೋಣೆ ಇನ್ನಷ್ಟು ವಿಶಾಲವಾಗಿ ಕಾಣಿಸುತ್ತದೆ. ಕಿಟಕಿಯ ಎದುರಿನಲ್ಲಿನ ಕನ್ನಡಿ ಬೆಳಕನ್ನು ಪ್ರತಿಫಲಿಸುತ್ತಾ, ಆ ಕೋಣೆಗೆ ಹೆಚ್ಚಿನ ಜೀವಂತಿಕೆ ತಂದುಕೊಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ