ದಸರಾ ದೀಪಾಳಿಯ ಆಗಮನದ ಮುಂಚೆಯೇ ಮನೆಗೆ ಬಣ್ಣ ಹಚ್ಚುವ ಪ್ರಕ್ರಿಯೆ ಶುರುವಾಗುತ್ತದೆ. ಪೇಂಟ್ ಶುರು ಮಾಡುವ ಮುಂಚೆ ಯಾವ ಯಾವ ಸಂಗತಿಗಳ ಬಗ್ಗೆ ಗಮನ ಕೊಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು.
ಮನೆಯನ್ನು ದುರಸ್ತಿ ಮಾಡಿಸಿಕೊಳ್ಳಿ
ಎಲ್ಲಕ್ಕೂ ಮುಂಚೆ ನಿಮ್ಮ ಮನೆಯ ಪ್ರತಿಯೊಂದು ಗೋಡೆಗಳನ್ನು ಪರಿಶೀಲಿಸಿ ನೋಡಿ. ಗೋಡೆಯ ಭಾಗದಲ್ಲಿ ಕಬ್ಬಿಣವನ್ನು ಅಳವಡಿಸಿರಬಹುದು ಅಥವಾ ಡನ್ ಇರಬಹುದು. ಒಂದು ವೇಳೆ ಡನ್ ಅಥವಾ ಕಬ್ಬಿಣದ ಭಾಗದಲ್ಲಿ ಏನಾದರೂ ಕಿತ್ತುಹೋಗಿದ್ದರೆ, ಮೊದಲು ಅದನ್ನು ದುರಸ್ತಿ ಮಾಡಿಕೊಳ್ಳಿ. ಕಬ್ಬಿಣದ ವಸ್ತುವಿನ ಮೇಲೆ ತುಕ್ಕು ಹಿಡಿಯುತ್ತದೆ. ಪೇಂಟ್ ಮಾಡಿದ ಬಳಿಕ ಅದು ಹಾಗೆಯೇ ಕಂಡುಬರುತ್ತದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ತುಕ್ಕು ಅಥವಾ ಕಲೆ ನಿವಾರಕ ಉತ್ಪನ್ನಗಳು ಸಾಕಷ್ಟು ಲಭ್ಯವಿವೆ.
ಕಟ್ಟಿಗೆಯ ಮೇಲೆ ಎಲ್ಲಿಯಾದರೂ ಬಿರುಕು ಅಥವಾ ರಂಧ್ರ ಇದ್ದರೆ ಅದನ್ನು ಡನ್ ಫಿಲ್ಲಿಂಗ್‌ನಿಂದ ತುಂಬಬಹುದು. ಅಡುಗೆಮನೆ ಅಥವಾ ಸ್ನಾನದ ಮನೆಯ ಮಾರ್ಬಲ್‌ನಲ್ಲಿ ಕ್ರ್ಯಾಕ್ ಉಂಟಾಗುತ್ತದೆ. ಅದನ್ನು ಮೊದಲು ಸರಿಪಡಿಸಿಕೊಳ್ಳಿ. ಮನೆಯಲ್ಲಿ ಒಮ್ಮೊಮ್ಮೆ ಸೀಪೇಜ್‌ನ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಪೇಂಟ್ ಮಾಡುವ ಮುನ್ನ ಅದನ್ನು ಸರಿಪಡಿಸಿಕೊಳ್ಳಿ. ಅದು ಚೆನ್ನಾಗಿ ಒಣಗಿದ ಬಳಿಕವೇ ಪೇಂಟ್ ಮಾಡಿಸಿ. ಎಲ್ಲಕ್ಕೂ ಮಹತ್ವದ ಸಂಗತಿಯೆಂದರೆ, ಮನೆಯ ಬಾಗಿಲು ಹಾಗೂ ಗೋಡೆಗಳಲ್ಲಿ ಎಲ್ಲಿಯಾದರೂ ಗೆದ್ದಲು ಹಿಡಿದಿದೆಯಾ ನೋಡಿ. ಅಲ್ಲಿ ಮೊದಲೇ ಆ್ಯಂಟಿಡರ್ಮೈಟ್‌ನ್ನು ಸಿಂಪಡಿಸಿ. ಗೋಡೆಯ ಮೇಲೆ ಉಂಟಾದ ಯಾವುದೇ ಬಗೆಯ ಕಲೆಗಳನ್ನು ನಿವಾರಿಸಬಹುದು. ಸಮತಟ್ಟಾದ ಭಾಗದಲ್ಲಿ ಮಾತ್ರ ಪೇಂಟ್‌ನ್ನು ಸರಿಯಾದ ರೀತಿಯಲ್ಲಿ ಹೊಡೆಯಬಹುದಾಗಿದೆ. ಗೋಡೆಯ ಮೇಲಿನ ಹಳೆಯ ಪೇಂಟ್ ಕಿತ್ತು ಹೋಗುತ್ತಿದ್ದರೆ, ಪ್ಲಾಸ್ಟರ್ ಬಿಟ್ಟುಕೊಳ್ಳುತ್ತಿದ್ದರೆ, ಅದನ್ನು ಪ್ರೆಶರ್ ವಾಶ್‌ನಿಂದ ಸಮತಟ್ಟುಗೊಳಿಸಬಹುದು. ಗೋಡೆಯ ಭಾಗದಲ್ಲಿ ತೇವಾಂಶ ಸಂಪೂರ್ಣವಾಗಿ ಶುಷ್ಕಗೊಂಡಾಗ ಮಾತ್ರ ಪೇಂಟ್ ಹೊಡೆಸಿ.
ಕೆಲವೊಮ್ಮೆ ಪ್ರೈಮರ್ ಹೊಡೆಸುವುದು ಕೂಡ ಸೂಕ್ತ ಎನಿಸುತ್ತದೆ. ಪ್ರೈಮರ್‌ನ ಆಯ್ಕೆ ನೀವು ಯಾವ ರೀತಿಯ ಪೇಂಟ್ ಮಾಡುತ್ತಿದ್ದೀರಿ ಎನ್ನುವುದನ್ನು ಅವಲಂಬಿಸಿರುತ್ತದೆ. ಲೇಟೆಕ್ಸ್ ಪೇಂಟ್‌ಗೆ ಲೇಟೆಕ್ಸ್ ಪ್ರೈಮರ್ ಹಾಗೂ ಸಾಲ್‌ವಿಂಟ್ ಥಿನ್ಡ್ ಪೇಂಟ್‌ಗೆ ಸಾಲ್‌ವಿಂಟ್ ಬೇಸ್ಡ್ ಪ್ರೈಮರ್‌ನ್ನು ಆಯ್ಕೆ ಮಾಡಿಕೊಳ್ಳಿ.
ಪೇಂಟ್‌ನ ಆಯ್ಕೆ
ಆಡಿಟ್ವಿಸ್ ಬಳಸುವುದರ ಮೂಲಕ ಪೇಂಟ್ ಮಾಡುವುದು ಒಂದು ಹೊಸ ಟ್ರೆಂಡ್ ಆಗಿದೆ. ಇದರಿಂದ ಬಹಳಷ್ಟು ಲಾಭಗಳಿವೆ. ಇದು ಸ್ಟ್ರಾಂಗ್ ಬೇಸ್ ಆಗುತ್ತದೆ. ಬಣ್ಣಗಳು ಹರಡುವ ಭಯ ಇರುವುದಿಲ್ಲ. ಆದರೆ ಪೇಂಟ್‌ನ್ನು ಆಯ್ಕೆ ಮಾಡುವುದು ಎಲ್ಲಕ್ಕೂ ಮಹತ್ವದ್ದು. ಸಾಮಾನ್ಯವಾಗಿ ಬಣ್ಣಗಳಲ್ಲಿ ಎರಡು ಪ್ರಕಾರ, ವಾಟರ್ ಬೇಸ್ಡ್ ಮತ್ತು ಆಯಿಲ್ ಬೇಸ್ಡ್. ಇದರಲ್ಲೂ ಕೂಡ ಬಹಳಷ್ಟು ಪ್ರಕಾರಗಳು ಲಭ್ಯವಿವೆ. ಗೋಡೆಗಳು ಹಾಗೂ ಸೀಲಿಂಗ್‌ಗೆ ವಾಟರ್ ಬೇಸ್ಡ್ ಅಥವಾ ಎಮಲ್ಶನ್ ಪೇಂಟ್‌ನ್ನು ಪ್ಲಾಸ್ಟಿಕ್ ಪೇಂಟ್ ಹೆಸರಿನಿಂದ ಕರೆಯಲಾಗುತ್ತದೆ. ವಾಶೆಬಿಲಿಟಿಯ ಆಧಾರದ ಮೇಲೆ ಬಣ್ಣಗಳನ್ನು ಆಯ್ಕೆ ಮಾಡಬಹುದಾಗಿದೆ. ಲೋಹದ ಮೇಲ್ಮೈಗಾಗಿ ಎನಾಮೆಲ್ ಪೇಂಟ್ಸ್ ಬಳಸಲು ಸಲಹೆ ನೀಡಲಾಗುತ್ತದೆ. ಅವುಗಳ ಹೊಳಪೇ ಅವುಗಳ ಹೆಗ್ಗುರುತಾಗಿರುತ್ತದೆ. ಬಣ್ಣಗಳ ಆಯ್ಕೆಯನ್ನು ನಿಮ್ಮ ಮನೆಯ ಪ್ರತಿಯೊಂದು ಕೋಣೆಯನ್ನೂ ಗಮನದಲ್ಲಿಟ್ಟುಕೊಂಡು ಮಾಡಬೇಕು.